ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನು ಬರೆದ ಗುಬ್ಬಿ ಕವಿತೆ

ಅನು ಪಾವಂಜೆ ಕಲಾವಿದೆ. ಖ್ಯಾತ ಕಲಾವಿದ ಕುಟುಂಬ ಪಾವಂಜೆ ಮನೆತನದವರು. ಇವರ ಕಲಾಕೃತಿಗಳು ಇವರ ಕೌಶಲಕ್ಕೆ ಸಾಕ್ಷಿ, ಸ್ಟಾಂಪ್, ನಾಣ್ಯ ಸಂಗ್ರಹ ಸಹಾ ಇವರ ಅಭ್ಯಾಸ. ಅಷ್ಟೇ ಅಲ್ಲ ಸದ್ದಿಲ್ಲದೇ ತನಗೆ ತಾನೇ ಕವಿತೆ ಕತ್ತುವುದರಲ್ಲೂ..
ಅಭಯ ಬರೆದ ಗುಬ್ಬಿ ಲೇಖನ ಅನು ಅವರನ್ನು ಇನ್ನೊಂದು ಗುಬ್ಬಿ ಕವಿತೆಗೆ ಪ್ರೇರೇಪಿಸಿದೆ. ಓದಿ


ಚಿತ್ರ: ಚಿತ್ರಮಿತ್ರ


ಬೋಳು ಕಿಟಿಕಿಯ ಹೊರಗೆ
ಚೆಲ್ಲಿದ ಒ೦ದಷ್ಟು ಕಾಳುಗಳು
ಮು೦ಜಾನೆ ಕತ್ತಲು ಹರಿಯೋ ಮು೦ಚೆಯೇ
ಚಿಲಿಪಿಲಿಗುಟ್ಟಿ ನನ್ನ ಎಬ್ಬಿಸೋ ಗುಬ್ಬಚ್ಚಿಗಳು

ಕಾಳು ಹಾಕಲು ಮರೆತ ದಿನ
ನಾ ಮಲಗೋ ಕೋಣೆ ಕಿಟಿಕಿಯಲ್ಲಿ
ಬ೦ದು ಜೋರಾಗಿ ಕಿಚಗುಟ್ಟುತ್ತಾ
ನನ್ನನ್ನೆಬ್ಬಿಸುವ ಪಾಪಚ್ಚಿಗಳು
ಪೇಟೆ ಸದ್ದಿನ ಗಲಗಲದ ನಡುವೆಯೂ
ಕಿವಿಗಿ೦ಪಾಗಿ ಹಾಡುಕ್ಕಿಸೋ ನುಲಿವ ಗೆಜ್ಜೆಗಳು

ಉದ್ದುದ್ದ ಮಲಗಿದ ಖಾಲಿ ದಿನದ ತು೦ಬಾ
ನಿ೦ತಲ್ಲಿ ನಿಲದೆ ಕುಪ್ಪಳಿಸೋ ನಲಿವ ಹೆಜ್ಜೆಗಳು

ಪಯಣದ ಹಾದಿಯಲ್ಲಿ ಮೈ ತು೦ಬಾ ಹೊದ್ದುಕೊ೦ಡ
ಹಳೆಯ ಶಾಲಿನ ಕಚಗುಳಿ ಇಡೋ ಕುಚ್ಚುಗಳು

‍ಲೇಖಕರು avadhi

20 March, 2010

5 Comments

  1. H. Anandarama Shastry

    ಇದೊಂದು ಚಿತ್ರಕಾವ್ಯ!
    ಅನು ಅವರ ಭಾವಪ್ರಭೆ ವ್ಯಕ್ತವಾಗಿರುವ ಈ ಕವನವು ನನ್ನ ಭಾವಕ್ಕೂ ಹಿಡಿದ ಕನ್ನಡಿ.

  2. santhosh

    maneya maadina mele,frame haakitta photoda hinde,chellida kaalannu hekkalu baruthidda gubbigalelli hodavu.kandare thilisi.kavana odi gubbi nodabekenisuthide

  3. ಮುರಳೀಧರ ಸಜ್ಜನ.

    All the best…….ಅನುರವರೆ. ಕವನ ಚೆನ್ನಾಗಿ ಮೂಡಿದೆ. ನಿಮ್ಮ ಗುಬ್ಬಿ ಪ್ರೇಮ ಜಾಸ್ತಿಯಾಗಲಿ.

  4. Mahendra

    ಮುಂಜಾನೆಯಲಿ ಹರಿವುದು ಬೆಳಕಿನ ಉಬ್ಬು
    ಸಾಯಂಕಾಲದಲಿ ಸರಿವುದು ಸಂಜೆಯ ಮಬ್ಬು
    ಪ್ರತಃಕಾಲದಲೆಂದೂ ಕತ್ತಲು ಹರಿಯದು ಬಿತ್ತು
    ಮುಂಜಾವಿನಲಿ ತಿಮಿರ ಮುರಿವ ರವಿಯ ಹೊತ್ತು
    ಎಳೆಯ ಬೆಳದಿಂಗಳಲಿ ರವಿಕಿರಣಗಳ ಮುತ್ತು
    ಕಾಲಕಾಲದ ಪ್ರಕೃತಿ ನಿಯಮದ ಶಾಶ್ವತ ಗೊತ್ತು!
    *
    ಅ. ಅ. ’ಅನು’ ಮಿತ್ರ ಬಂಧು, ನನಗೂ ಗುಬ್ಬಚ್ಚಿ ಪ್ರೇಮ
    ’ಪಾಪಚ್ಚಿ’ ಎನುವುದು ಸೊಗಸು ಸವಿಗನ್ನಡ ಮುದ್ದು ನಾಮ!
    ಅವುಗಳ ’ಚಿಲಿಪಿಲಿ’ ನಾದ ಸಂಗೀತದಂತ ಇಂಪಿನ ವಿನೋದ
    ಅವುಗಳ ಹಾರಟ ಹಾರೈಕೆ ತರುವುದು ಮನದಿ ಪ್ರಮೋದ!
    *
    ಅ. ಅ. = ಅಪರಿಚಿತ ಅಂತರ್ಜಾಲದ
    ವಿ. ವಿ. = ವಿಶೇಶ ವಿನತಿ
    *
    ವಿ. ವಿ.:
    ಗೌರವಿತ ಮಿತ್ರ ’ಅನು’,
    ಯಾವ ಪಟ್ಟಣ ಅಥವ ನಗರದವರು ನೀವು?
    ಈ ಪ್ರಶ್ನೆಯ ಕಾರಣ …
    ಒಂದು ದಶಕದ ಹಿಂದೆ, ತಿಳಿಸಿದ್ದರೊಬ್ಬರು:
    ಬೆಂಗಳೂರಲ್ಲಿ ಎಲ್ಲೆಲ್ಲೂ ಮಾಯವಾಗಿ ಹೋಗಿದೆ ಗುಬ್ಬಚ್ಚಿಗಳ ಪ್ರದರ್ಶನ,
    ತಂತ್ರವಾಹಗಳ ಪ್ರವಾಹದ ಅವಾಂತರ ದಿನಂಪ್ರತಿಯ ನೂಕುನುಗ್ಗಾಟ,
    ಮರಗಿಡಗಳ ಬಯಲು ತೋಟಗಳ ಅವನತಿ ಅಳಿಸಿಕೆಯ ಕಾರ‍ಣ
    ಗುಬ್ಬಚ್ಚಿ ಇನ್ನಿತರೆಲ್ಲ ಪಕ್ಷಿ ಸಂಕುಲಕೆ ನಾಶ ಅಧರ್ಮ ಅನೀತಿ ಪ್ರಕರಣ.
    ನಿಮ್ಮ ಕಿಟಕಿ ಬಳಿ ”ಗುಬ್ಬಚ್ಚಿಗಳ’ ನಾದವೈಕರಿ ಇನಿಸುವ ಅದೃಷ್ಟಶಾಲಿ,
    ಅನಿಸಿತೆನಗೆ, ಇತರರೂ ಅನುಕರಿಸಲಿ ನಿಮ್ಮ ರೀತಿ ಪಕ್ಷಿ ಪ್ರೇಮ ಅಕ್ಕರೆಯಲಿ!!
    – ವಿಜಯಶೀಲ, ಬೆರ್ಲಿನ್, ೦೩.೦೫.೧೦

  5. prakash.b

    nimma gubbi kurit chitr kavite tumba chennagide.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading