ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅದ್ಯಾವುದೋ ಘಝಲ್ ಗುನುಗಿದ್ದಳು..

ಧನಂಜಯ ಎನ್ ಆಚಾರ್ಯ

ಏರೋಪ್ಲೇನಿನ ಸದ್ದಿಗೆ ಸ್ಟ್ರೋಲರ್ ಒಳಗಿದ್ದ ಮಗು ,
ಬಾಗಿ ಬಾಗಿ ಪುಟ್ಟ ತಲೆಯನ್ನು ಹೊರ ಹಾಕುತ್ತಿತ್ತು.
ಮುಂಜಾನೆಯಿಂದ ಬೆಳಗಿ,ಕೆಲಸ ಮುಗಿಸಿದ್ದ ಸೂರ್ಯ
ಚಂದ್ರನ ಸುಪರ್ದಿಗೆ ತಾನಿದ್ದ ಜಾಗ ಕೊಡುತ್ತಲಿದ್ದ,
ನೈಟಿಯ ಮೇಲೆ ಟವಲ್ ಹಾಕಿದ್ದ ತಾಯಿ ಗಾಡಿ ತಳ್ಳುತ್ತಾ
ಅದ್ಯಾವುದೋ ಘಝಲ್ ಗುನುಗಿದ್ದಳು.
ಆಗಷ್ಟೇ ನೈಟ್ ಶಿಫ್ಟಿನ ವಾಚ್ಮೆನ್ನು ಕಟ್ಟು ಬೀಡಿಯ ಜೊತೆಗೆ ಒಂದು ಬೆಂಕಿಪಟ್ಟಣವನ್ನೂ ಜೇಬಿಗಿರಿಸಿ
ಹೆಂಡತಿ ಕೊಟ್ಟಿದ್ದ ಉಪ್ಪಿಟ್ಟನ್ನು ನೆನೆದು ಅದರಡಿಗೆ ಬಜ್ಜಿ ಬೇಕೋ ಬೋಂಡಾ ಬೇಕೋ ಎಂದು ತಲೆ ಕೆರೆದುಕೊಳ್ಳುತ್ತಾ ನೋಡುತ್ತಿರುವಾಗ……..

ಅಬ್ಬಕ್ಕಜ್ಜಿಯ ಎಲೆಯಡಿಕೆಯ ಚೀಲದಲ್ಲಿ ಕುಳಿತಿದ್ದದು ಒಂದು ಸುಣ್ಣದ ಡಬ್ಬಿ.
ನಾಲಿಗೆ ತುದಿಯಲ್ಲೇ ಸೆಟೆದು ಮಾತಾಡಿದ ಮಗನ ಒಗರು, ಬೆಳ್ಳನೆಯ ಸೊಸೆ ಕಾರಿದ ಖಾರ, ಹಸಿರುಗಟ್ಟುವಂತೆ ಹೊಡೆದ ಗಂಡನ ಗಡಸುತನ.
ಎಲ್ಲವೂ ಬೆರೆತ ನೆನಪಿನಡಿಕೆಗೆ, ಕೆಂಪು ಬರುವುದು ಇನ್ನೂ ಬಾಕಿಯಿದೆ.

ರವಿ ಮುಳುಗುವಾಗ ಬಾನಲ್ಲಿ ಬಣ್ಣದ ಹೊರತು, ಭಾವನೆ ಕಾಣುವುದು ಅದೆಷ್ಟು ಕಂಗಳಿಗೆ ತಾನೇ ಸಾಧ್ಯ. ?

 

*~*

 

 

 

‍ಲೇಖಕರು Avadhi GK

16 March, 2018

2 Comments

  1. nutana doshetty

    Belagannu hosatagi nodidantide

  2. Sangeeta Kalmane

    ವಾವ್!
    ಕೊನೆಯ ಸಾಲು ಬಹಳ ಇಷ್ಟವಾಯಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading