ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅದ್ಕ ನಮ್ಮ ಭೂಮಿ ಕೊಡಬೇಕಂತ, ಅಷ್ಟೇ…'

ವೆಲ್ ಕಮ್ ಟು ಹಳ್ಳಿ

ನಾಗೇಶ ತಳವಾರ

ಅಸ್ಥಿಪಂಜರಂದಂತೆ ಕಾಣುವ ನನ್ನ ಹಳ್ಳಿಗೆ
ವೆಲ್ ಕಮ್
ನನ್ನಜ್ಜನ ಕಾಲದಲ್ಲಿ ಎಲ್ಲವೂ ಇತ್ತು
ಈಗಿಲ್ಲ
 
ಸಿಟಿಯಿಂದ ನಾಕು ಮೈಲಿ ನನ್ನ ಹಳ್ಳಿ
ಕಲ್ಲು ದಿಣ್ಣೆಗಳ ನಡುವೆ
ಕುಂಟುತ್ತಾ, ತೆವಳುತ್ತಾ
ಕೆಮ್ಮುತ್ತಾ
ಅಲ್ಲಲಲ್ಲಿ ದಣಿವಾರಿಸಿಕೊಳ್ಳುತ್ತಾ
ಬರುವ ಕೆಂಪು ಮೂತಿ ಬಸ್
ದಿನಕ್ಕೆ ಎರಡೇ ಬಾರಿ
ತನ್ನ ದರ್ಶನ ನೀಡುತ್ತೆ
 

ನನ್ನ ಹಳ್ಳಿಯಲ್ಲಿ
ಹಾಸ್ಪಿಟಲ್, ಸ್ಕೂಲ್ ಕಟ್ಟತಾರಂತ
ದಾಹ ತಣಿಸಲು
ಬೋರ್ವೆಲ್ಗೆ ಶಂಕುಸ್ಥಾಪನೆ
ಬೀದಿಗೊಂದು ಲೈಟ್ ಕಂಬ
ನಿಲ್ಲಿಸಿ, ಅರ್ಜೆಂಟಲ್ಲಿ ವಿದ್ಯುತ್ ತಂತಿ
ಎಳೆಯುವುದನ್ನ ಮರೆತವರೆ
 
ನನ್ನವ್ವ, ನನ್ನಪ್ಪನಿಗೆ
ಗಾಂಧಿ ತಾತನ ಹೆಸರಲ್ಲಿ ಕೆಲ್ಸ
ಕಲೆತು ಕುಳಿತ ನನ್ನ ಅಣ್ಣನಿಗೆ
ಫ್ಯಾಕ್ಟರಿಯಲ್ಲಿ ಕೆಲಸ
ಕೊಡತಾರಂತ
ಅದ್ಕ ನಮ್ಮ ಭೂಮಿ ಕೊಡಬೇಕಂತ
ಅಷ್ಟೇ…
 
ನಮ್ಮ ರೈತನಿಗೆ ಬಿತ್ತುವುದಕ್ಕ ಸಾಲ
ಕೊಡತಾರ
ಬೆಳೆ ಮಾತ್ರ ತಗೋದಿಲ್ಲ
ದಯವಿಟ್ಟು ಕ್ಷಮೀಸಿ,
ನೇಣು ಹಾಕಿಕೊಂಡು
ವಿಷ ಕುಡಿದ ಸತ್ತರೆ
ಲಕ್ಷ ಲಕ್ಷ ಪರಿಹಾರ
ಬದುಕುಳಿದರ ಕೇಸ್ ಹಾಕತಾರ
 
ಪಾಪ, ನಮಗಾಗಿ
ಕೆಲಸ ಮಾಡಿ ಸುಸ್ತಾಗ್ಯಾರ
ಅದ್ಕ ಫಾರೆನ್ ಟೂರ್
ಹೋಗ್ತಾರಂತ
ನೀವಿನ್ನ ಆರಮ ಇರ್ರಿ
ಅವರು ಬರುವುದಕ್ಕ
ಇನ್ನು ಐದ ವರ್ಷ ಆಗ್ತದ
ಅಲ್ಲಿವರೆಗೂ ನಾವು
ಮೂರು ಮುಚ್ಚಕೊಂಡು…
 

‍ಲೇಖಕರು G

10 June, 2014

1 Comment

  1. mmshaik

    vidambaneyinda kuudida kaayya chennaagide..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading