ಗಣೇಶ್ ಅದ್ಯಪಾಡಿ / ಮಂಗಳೂರು
ಹುಣ್ಣಿಮೆಯ ದಿನವೇ
ಚಂದಿರನಿಗೆ ಗ್ರಹಣ
ಹಿಡಿಯುತ್ತದೆ ಅಂದ ಮೇಲೆ
ನಗಿಸುವ ನನ್ನಾಸೆಗಳಿಗೂ
ಕಣ್ಣೀರಿನ ಹನಿಗಳು
ತಣ್ಣೀರು ಎರಚುವುದರಲ್ಲಿ
ಆಶ್ಚರ್ಯವಿಲ್ಲ ಬಿಡು.!!!
ಪರಿಪೂರ್ಣವಾಗಿ
ಸೋತ ಈ ಹುಚ್ಚು ಹುಡುಗನ
ಹೃದಯಕ್ಕೆ ಲಗಾಮು
ಹಾಕುವುದಾದರೂ ಹೇಗೆ..?
ಪ್ರೀತಿಯ ಉತ್ಕಟತನಕ್ಕೆ
ಚುಚ್ಚುವ ನಿನ್ನ ಮುಳ್ಳಮಲ್ಲಿಗೆ
ನೀಡುವ ನೋವ
ಹೇಗೆ ವರ್ಣಿಸಲಿ ಹೇಳು..?

ಇನ್ಯಾರು ಇರದಂತೆ
ನಿನ್ನೆದೆಯಕಾಶದ ರವಿಯಾಗಬೇಕೆಂದಾಗ…
ನಿನ್ನ ಆಂತರ್ಯದ ಅಹಂ
ಮೋಡವಾಗಿ, ಕತ್ತಲು ಮಾತ್ರ
ಚೆಲ್ಲುವಾಗ ನಾನು
ಅಪರಾಧಿಯಾಗುತ್ತೇನೆ..!!
ಅದೆಷ್ಟು ಬಾರಿ
ನಿನ್ನ ಪಾದ ಕಮಲಗಳಿಗೆ
ತಲೆಯೊತ್ತಿ ಮಾಫಿ ಬೇಡಲಿ
ಮಾಡದ ತಪ್ಪುಗಳ ಹೊತ್ತು.
ಗಡಿಯಿರದ ಭಾವುಕತೆ
ಯುದ್ಧಕ್ಕೂ ಕಾರಣವಾಗುತ್ತದೆ
ಎಂದಾದರೆ ….
ಈ ಪಾಪಿ ಭಾವಜೀವಿಗೆ
ಗಲ್ಲಾದರು ಸಿಕ್ಕಿಬಿಡಲಿ..
ಈ ಫರ್ಮಾಯಿಶನ್ನಾದರು
ಅಲ್ಲಾಹ್ ಆಲಿಸಲಿ ಸಜನಿ ..!!






Nice