ಕೇಳಬೇಕಿದೆ…ಕ್ಷಮೆಯನ್ನು
ಪ್ರಸನ್ನ ಚಲಂ
ಸರ ಸರ ಸರ
ಹರಿದಾಡುವ ಹಾವುಗಳ
ಒಳಗಿಟ್ಟುಕೊಂಡವನು
ನಿನ್ನಲ್ಲಿ ಕನಿಷ್ಠ
ರೋಮಾಂಚನವನ್ನಾದರೂ ಹುಟ್ಟಿಸಬೇಕಿತ್ತು..
ಹಾಗಾದರೆ ಸೋತದ್ದೆಲ್ಲಿ
ಅಂತ ನೋಡಿದರೆ ಒಳಗಿದ್ದ
ತರ ತರ ತರನಾದ
ಹಾವುಗಳು ಸತ್ತು ನಾರುತ್ತಾ
ಅದೆಷ್ಟು ದಿನಗಳಾದವೋ..?
ಅಸಹ್ಯವನ್ನೂ ಪಡದ
ನಿನ್ನಲ್ಲಿ ಕ್ಷಮೆ ಕೇಳಬೇಕಿದೆ.
ಪ್ರೇಮಗೀತೆ ಬರೆಯಲಾರದವನೂ
ಪ್ರೀತಿಸುತ್ತಾನೆ
ಬರೆಯಹೊರಟ ನಾನು ಬರೆದದ್ದು
ಕೇವಲ ಪ್ರೀತಿಯ ಬಗ್ಗೆ ಪದಗಳನ್ನಷ್ಟೇ
ಬರೆಯದವನು ಪ್ರೀತಿಸಿದ
ನನ್ನವು ದಾಖಲಾದವು
ನೆನಪಿದೆ……ನಿನ್ನ ದೂಷಿಸಿದ ದಿನ
ಮಳೆಯಾಗಿತ್ತು
ಗುಡುಗು….ಸಿಡಿಲು ಅಬ್ಬಬ್ಬಾ
ನನ್ನ ಸಿಟ್ಟಿಗಲ್ಲಾ,ನಿನ್ನ ಅಸಹನೆಗೆ
ಅದೇ ನೋಡು ಈಗ
ದಿನಗಳನ್ನು ಕಳೆಯುತ್ತಿದ್ದೇನೆ
ಬಿರುಬೇಸಿಗೆಯ ದಿನಗಳಲ್ಲಿ
ಅದೆಲ್ಲೋ ಮಳೆಯಾಗಿದೆ
ಅಲ್ಲಿ ನೀನಿದ್ದೀಯ ಮತ್ತು
ದೂಷಣೆಯಿದೆ
ಆದರೂ ಒಮ್ಮೆ ನಕ್ಕುಬಿಡು
ಮಳೆ ಬಾರದ್ದಕ್ಕೆ
ನಿನ್ನಲ್ಲಿ ಕ್ಷಮೆ ಕೇಳಬೇಕಿದೆ.






nice..
ಅದೆಲ್ಲೋ ಮಳೆಯಾಗಿದೆ
ಅಲ್ಲಿ ನೀನಿದ್ದೀಯ ಮತ್ತು
ದೂಷಣೆಯಿದೆ..
PREETIYALLI SARVAKALIKA SATYA..
ನೈಸ್
ishtavaytu chalam avare … helalaagada eno bhavane eegaloo manassinolage …
ಆದರೂ ಒಮ್ಮೆ ನಕ್ಕುಬಿಡು
ಮಳೆ ಬಾರದ್ದಕ್ಕೆ
ನಿನ್ನಲ್ಲಿ ಕ್ಷಮೆ ಕೇಳಬೇಕಿದೆ.
very nice….
good one…