ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅದೆಲ್ಲವೂ ಬಿ ಕೆ ರವಿ ನೆಪದಲ್ಲಿ ನಿಮ್ಮ ಮುಂದೆ..

b k raviಬಿ ಕೆ ರವಿ ಪ್ರಜಾವಾಣಿಯಲ್ಲಿ ವರದಿಗಾರರಾಗಿದ್ದವರು. ಅದಕ್ಕಿಂತಲೂ ಹೆಚ್ಚಾಗಿ ತಾವು ಓದಿದ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗಕ್ಕೇ ಸೇರಿ ಅಧ್ಯಾಪನ ಮಾಡಿದವರು. ಮುಖ್ಯಸ್ಥರಾಗಿ ಆ ವಿಭಾಗವನ್ನು ಮುನ್ನಡೆಸಿದವರು.

ಸದಾ ಚಟುವಟಿಕೆಯ ರವಿ ಕೇವಲ ಪಾಠ ಮಾಡುವುದಷ್ಟೇ ಅಲ್ಲದೆ ವಿಧ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿಯನ್ನು ಬಿತ್ತುತ್ತಾರೆ. ನಾಲ್ಕು ಗೋಡೆಯ ಒಳಗೆ ಮಾತ್ರ ಕಲಿತರೆ ಅದು ವಿದ್ಯೆಯಲ್ಲ ಎನ್ನುತ್ತಾರೆ ಶಿಕ್ಷಣ ತಜ್ಞರು. ಅದು ಬಿ ಕೆ ರವಿಗೂ ಗೊತ್ತು. ಹಾಗಾಗಿಯೇ ನಾಲ್ಕು ಕೋಣೆಗಳಿಂದ ವಿಧ್ಯಾರ್ಥಿಗಳನ್ನು ಪಾರು ಮಾಡಿದ ಹೆಮ್ಮೆ ಇವರದ್ದು. ಸದಾ ಸಾಮಾಜಿಕ ಬದಲಾವಣೆಗಾಗಿ ತುಡಿಯುವ ರವಿ, ಹಿಂದುಳಿದ ವರ್ಗಗಳ ಆಯೋಗದಲ್ಲಿ ಮುಖ್ಯ ಜವಾಬ್ದಾರಿಗಳನ್ನು ನಿರ್ವಹಿಸಿದವರು.

ಘೋಷಣೆಗಳು ಮಾತ್ರ ಬದಲಾವಣೆ ತರುವುದಿಲ್ಲ ಬದಲಿಗೆ ಅರಿವನ್ನು ಹಂಚುವುದೂ ಮುಖ್ಯ ಎನ್ನುವುದು ಅವರಿಗೆ ಗೊತ್ತು. ಹಾಗಾಗಿಯೇ ಪತ್ರಿಕೋದ್ಯಮದಿಂದ ಹಿಡಿದು ಸಮಾಜದ ಅನೇಕ ಮುಖಗಳ ಬಗ್ಗೆ ಅವರು ಕೃತಿಗಳನ್ನು ರಚಿಸಿದ್ದಾರೆ. ಈ ಸಾಲಿಗೆ ಇತ್ತೀಚಿನ ಸೇರ್ಪಡೆ ಕನಕ ಕಾವ್ಯಾಂಜಲಿ. ಕನಕನ ಆಶಯಗಳನ್ನು ಬಲ್ಲವರಿಗೆ ಅತಿ ಆಪ್ತವಾಗುವ ಸಂಕಲನ ಇದು.

ಅದಿರಲಿ, ಬಿ ಕೆ ರವಿ ಕನಕದಾಸರ ಬಗ್ಗೆ ಕೃತಿ ತಂದಿದ್ದಾರೆ ಎಂದು ಹುಡುಕುತ್ತಾ ಹೋದಾಗ ನಮ್ಮನ್ನು ಅಷ್ಟೇ ಅದ್ವಿತೀಯವಾದ ಮೂರು ವಿಷಯಗಳು ತಡೆದು ನಿಲ್ಲಿಸಿದವು. ಅದು ಎಂ ಎಸ್ ಮೂರ್ತಿ ಅವರ ಕಲಾಕೃತಿ, ಇನ್ನೊಂದು ಸೂರ್ಯಾಸ್ತದ ಹಿನ್ನೆಲೆಯಲ್ಲಿ ಕನಕನ ಪ್ರತಿಎಯ ಚಿತ್ರ ಹಾಗೂ ವಾರ್ತಾ ಇಲಾಖೆಯ ಹೆಮ್ಮೆಯ ಕಾರ್ಯಕ್ರಮ ಮನುಷ್ಯ ಜಾತಿ ತಾನೊಂದೆ ವಲಂ ನ ಒಂದು ಮಾತು.

ಅದೆಲ್ಲವೂ ಬಿ ಕೆ ರವಿ ನೆಪದಲ್ಲಿ ನಿಮ್ಮ ಮುಂದೆ..  

kanaka kavyanjali cover b k ravi

ಮನುಷ್ಯ ಜಾತಿ ತಾನೊಂದೆ ವಲಂ ನಲ್ಲಿ ಒಂದು ಮಾತು ಬರುತ್ತದೆ ಕೃಷ್ಣನನ್ನು ದರ್ಶಿಸಲು ಕನಕ ಬಂದಿದ್ದಾನೆ. ಛೀ, ಎಂತಹವನು ಬಂದಿದ್ದಾನೆ ನಮ್ಮ ಕೃಷ್ಣನನ್ನು ನೋಡಲು ಎಂದು ಎಲ್ಲರೂ ಮೈ ಪರಚಿಕೊಳ್ಳುತ್ತಿದ್ದಾರೆ. ಕನಕನ ಜುಟ್ಟು ಹಿಡಿದು ಹೊರಗೆ ತಳ್ಳಿದ್ದಾರೆ. ಹೋಗೋ ದನ ಕಾಯುವವನೆ ಎಂದು ಅಬ್ಬರಿಸಿದ್ದಾರೆ. ಆಗ ಕನಕ ಶಾಂತನಾಗಿ ಹೇಳುತ್ತಾನೆ ಸ್ವಾಮಿ ಅಲ್ಲಿ ದೇವಸ್ಥಾನದ ಒಳಗಿದ್ದಾನಲ್ಲ ಆತ, ಅವನೂ ಅದೇ ಸ್ವಾಮಿ, ದನ ಕಾಯುವವನೆ.. ಎನ್ನುತ್ತಾನೆ

kanakadasa m s murthy painting

kanakadasa statue meet RP

Courtesy: M S Murthy. Meetrp.com

‍ಲೇಖಕರು admin

28 November, 2015

1 Comment

  1. ಮುಗಿಯದ ಮೌನ- GKN

    ಪ್ರೇಮದ ಮಹೋನ್ನತ ರೂಪವಾಗಿ ಭಕ್ತಿಯನ್ನು ಎತ್ತಿಹಿಡಿದವರು ದಾಸರು,,,,, ,,,,
    ಮತ್ತು ಆ ಭಕ್ತಿಗೆ ಒಲಿದ ಪರಮಾತ್ಮ,,,, ನೆನಪಿಸಿದ್ದಕ್ಕೆ ಧನ್ಯವಾದಗಳು,

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading