ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅದು ಏನಾಯಿತೆಂದರೆ..

ನಿನ್ನೆ ರಾತ್ರಿ ಕವಿತೆ ಪುಸ್ತಕದಿಂದ ಹೊಡೆದು ಜಿರಳೆ ಸಾಯಿಸಿದೆ!
ಫೀಲಿಂಗ್ ಪಶ್ಚಾತ್ತಾಪ 🙁

apara

ರಘು ಅಪಾರ 

ಅದು ಏನಾಯಿತೆಂದರೆ..

ಇನ್ನೂ ರಾತ್ರಿ ಎಂಟೂವರೆಯೂ ಆಗಿರದ ಹೊತ್ತಲ್ಲಿ, ಟ್ಯೂಬ್ ಲೈಟಿನ ಪ್ರಖರ ಬೆಳಕಿಗೂ ಕೇರು ಮಾಡದೆ ದೊಡ್ಡ ಜಿರಳೆಯೊಂದು ಮೀಸೆ ಅಲ್ಲಾಡಿಸುತ್ತಾ ಪ್ರತ್ಯಕ್ಷವಾದಾಗ ತುಂಬಾ ಕೋಪ ಬಂದಿದ್ದು ನಿಜ.

cockroachಮೊದಲು ಹೊರಗೆ ಓಡಿಸಲು ಪ್ರಯತ್ನಿಸಿದರೆ ಬಾಗಿಲ ಕಡೆ ಹೋಗದೆ ಅಲ್ಲೇ ನನ್ನ ಸಿಪಿಯು ಸಂದಿಯಲ್ಲಿ ತೂರಿಕೊಂಡಿದ್ದು ನನಗೆ ವಿಚಿತ್ರ ಟೆನ್ಶನ್ ಆಯ್ತು.

ಇನ್ನು ಅದು ಅಲ್ಲೇ ಸೇರಿಕೊಂಡು ಫ್ಯಾಮಿಲಿ ದೊಡ್ಡದು ಮಾಡಿಕೊಂಡು ಒಂದು ದಿನ ನಾನು ಲೈಟ್ ಆಫ್ ಮಾಡಿ ಮಲ್ಕೊಂಡ ಮೇಲೆ ಮೆಲ್ಲಕ್ಕೆ ಸಕುಟುಂಬ ಸಮೇತವಾಗಿ ಮಂಚಾರೋಹಣ ಮಾಡಿ ಸದ್ದಾಗದಂತೆ ನನ್ನ ಎತ್ತಿ ಕೆಳಗೆ ಮಲಗಿಸಿ, ಬೆಳಗ್ಗೆ ನಾನೆದ್ದು ನೋಡಲು ಈ ನಾಲ್ಕು ಸದಸ್ಯರ ಜಿರಳೆ ಕುಟುಂಬ ನನ್ನ ಮಂಚದ ಮೇಲೆ ನನ್ನ ಬೆಡ್ ಶೀಟ್ ಹೊದ್ದುಕೊಂಡು ಗೊರಕೆ ಹೊಡೆಯುತ್ತ ಇರುವಂತೆ ಕನಸಾಯಿತು.

ಮರುದಿನ ಮತ್ತೆ ಅದೇ ಜಿರಳೆ ಕಂಡಾಗ ಕಾಲಿನಿಂದ ತುಳಿಯಲು ಧೈರ್ಯವಾಗದೆ ಬರೀ ಬಾಗಿಲ ಕಡೆಗೆ ದೂಡಿದೆ. ಅದು ಅಂಗಾತ ಬಿದ್ದು ಚಲಿಸಲಾಗದೆ ಕೈಕಾಲು ಬಡಿಯತೊಡಗಿತು.

(ಮುಂದೆ ಹಿಂಸಾತ್ಮಕ ದೃಶ್ಯಗಳಿದ್ದು ೧೮ ವರ್ಷ ಕೆಳಗಿನ ಮಕ್ಕಳು ಹಾಗು ಕನ್ನಡ ಕವಿಗಳು ಓದಬಾರದಾಗಿ ವಿನಂತಿ. )

ಯಾವುದೇ ಕ್ಷಣದಲ್ಲಿ ಸರಿಯಾದ ಪೊಸಿಶನ್ ಗೆ ಮರಳಿ ಓಡಿ ತಪ್ಪಿಸಿಕೊಳ್ಳಬಹುದಾದ ಅದನ್ನು ಬಡಿಯಲು ಏನಾದರು ಸಿಗುತ್ತಾ ಅಂತ ಬೇಗ ಬೇಗ ತಡಕಾಡಿದೆ. ಮಂಚದ ಕೆಳಗೆ ಪುಸ್ತಕ ಬಿಟ್ಟರೆ ಬೇರೇನೂ ಇರಲಿಲ್ಲ.

ಜಿರಳೆ ಯಾವುದೇ ಕ್ಷಣ ತಪ್ಪಿಸಿಕೊಳ್ಳುವ ಆತಂಕದಲ್ಲಿ ಯಾವ ಪುಸ್ತಕದಿಂದ ಅದನ್ನು ಹೊಡೆಯುವುದು ಎಂದು ಚಿಂತೆಯಾಯಿತು. ಯಾವುದೇ ಇಸಮು, ಸ್ನೇಹ, ನವೋದಯ, ನವ್ಯ ಬೇಧಭಾವವಿಲ್ಲದೆ ನಾನು ಅರೆ ಕ್ಷಣ ಅತ್ಯಂತ ಪ್ರಾಮಾಣಿಕವಾದ ವಿಮರ್ಶೆಯ ಪ್ರಜ್ಞೆಯಿಂದ ಯೋಚಿಸಿದೆ. ಇಷ್ಟು ನಿಷ್ಪಕ್ಸಪಾತ ನನಗೆ ಹಿಂದೆಂದೂ ಸಾಧ್ಯವಾಗಿರಲಿಲ್ಲ. ಬಹುಶ ಯಾವ ವಿಮರ್ಶಕನಿಗೂ ಆಗಿರಲಿಕ್ಕಿಲ್ಲ.

ಆ ಅರೆ ಕ್ಷಣದಲ್ಲಿ ಕವಿ, ಕವಿತೆಯ ಗುಣಮಟ್ಟ , ಪುಸ್ತಕದ ಮುಖಪುಟದ ಚೆಂದ ಎಲ್ಲದರ ಯೋಗ್ಯತೆಯನ್ನು ಅಳೆದು ಸುರಿದು ಕೊನೆಗೊಂದನ್ನು ಎತ್ತಿಕೊಂಡು ಜಿರೆಲೆಯನ್ನು ಬಾರಿಸಿದೆ.

ಯಾವ ಪುಸ್ತಕವೆಂದು ಕೇಳಿ ಮೊದಲೇ ಬೇಸರದಲ್ಲಿರುವ ನನ್ನನ್ನು ಇನ್ನಷ್ಟು ನೋಯಿಸಬೇಡಿ.

‍ಲೇಖಕರು Admin

10 June, 2016

4 Comments

  1. Shyamala Madhav

    ಕುಡಿಯರ ತುಕ್ರ,ಹೆಂಡತಿಯನ್ನುಳಿಸಲು ಕರಡಿಯನ್ನೇ ಹೊಡೆದು ಕೊಂಡುದನ್ನು ಓದುತ್ತಿದ್ದೇನೆ.ಇದೋ ಯಕಶ್ಚಿತ್ ಜಿರಳೆ! ಆದರೆ ಪುಸ್ತಕ ಹೊಲಸಾಗಲಿಲ್ಲವೇ , ರಘು ? ಮತ್ತೆ ಜಿರಳೆಯಂತೂ ….1

    • shama nandibetta

      Shyamala Mam,

      Sooooper question

  2. ಗುಡ್ಡಪ್ಪ

    ನಿಮ್ಮ ಲೇಖನದ ನಡುವಿನ ವಾರ್ನಿಂಗ್ ಓದಿ ನೀವು 18ವರ್ಷದ ಕೆಳಗಿನ ಮಕ್ಕಳು ಮತ್ತು ಕನ್ನಡ ಕವಿಗಳು ಸಮ ಅಂತ ಹೇಳಲಿಕ್ಕೆ ಬಯಸುತ್ತೀರಿ ಅಂತ ನನಗ ಅನಸುತ್ತಾ ಇದೆ………:) :))))))

  3. ಆದಿವಾಲ ಗಂಗಮ್ಮ

    ಸೀತಾಪಹರಣ ಗೊತ್ತಿತ್ತು,ದ್ರೌಪದಿ ವಸ್ತ್ರಾಪಹರಣ ಗೊತ್ತಿತ್ತು ಆದರೆ ಜಿರಲೆಯ ಪ್ರಾಣಹರಣ ಗೊತ್ತಿರಲಿಲ್ಲ,ಥ್ಯಾಂಕ್ಸ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading