”ಮಗಳೇ..”

”ಮಗಳೇ..”
ಅಂತ ಕರೆದಾಗ ಇಡೀ ಸಭೆಯೇ ಸ್ತಬ್ಧವಾಗಿ ಹೋಯಿತು.
ಎಲ್ಲರ ಹುಬ್ಬುಗಳೂ ಮೇಲೇರಿದವು
ಇದೇನಪ್ಪಾ ಹೀಗೆ, ಅದೂ ಈ ಕಾರ್ಯಕ್ರಮದಲ್ಲಿ.. ಎಂದು ಗುಸು ಗುಸು ಆರಂಭವಾಯಿತು.
ಆಗ ಸಿ ಆರ್ ಸಿಂಹ ಕೇಳಿದರು – Alieda, you are my daughter u know, can i take the privilege of calling you as daughter?? ಅಂತ ಕೇಳಿದರು
ವೇದಿಕೆಯ ಮೇಲಿದ್ದ ದೂರ ದೇಶದ ಹಕ್ಕಿ ಅಲೀಡಾಗೂ, ವೇದಿಕೆಯ ಮುಂದಿದ್ದ ಸಭಿಕರಿಗೂ ತಲೆಬುಡ ಅರ್ಥವಾಗಲಿಲ್ಲ

ಆಗ ಆಗ ಸಿ ಆರ್ ಸಿಂಹ ಹೇಳಿದರು
”ಮಗೂ ನಾನು ಚೆ ಗೆವಾರ ನಾಟಕದಲ್ಲಿ ಚೆ ಗೆವಾರನ ಪಾತ್ರ ಮಾಡಿದವನಮ್ಮ, ಚೆಗೆವಾರ ಅಂದಿನಿಂದ ನನ್ನನ್ನು ಆವರಿಸಿಕೊಂಡು ಬಿಟ್ಟಿದ್ದಾನೆ.
ನೀನು ನನ್ನ ಮಗಳಲ್ಲದೆ ಇನ್ನೇನು?”

ಆಗ ನೋಡಬೇಕಿತ್ತು ಚಪ್ಪಾಳೆಯ ಸುರಿಮಳೆ.
ವೇದಿಕೆಯ ಮೇಲೆ ಕುಳಿತಿದ್ದ ಅಲೀಡಾ ಅಲ್ಲಿಂದ ಎದ್ದು ಬಂದವರೇ ತನ್ನ ಅಪ್ಪ ಸಿ ಆರ್ ಸಿಂಹ ಅಲಿಯಾಸ್ ಚೆಗೆವಾರನನ್ನು ಅಪ್ಪಿಕೊಂಡರು
ಇದು ನಡೆದದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ

C R Simha as che

೧೯೯೮ ಇರಬೇಕು
ಚೆ ಗೆವಾರನ ಮಗಳು ಅಲೀಡಾಗೆ ಕ್ಯೂಬಾವನ್ನು, ಚೆಗೆವಾರನನ್ನು ಇನ್ನಿಲ್ಲದಂತೆ ಪ್ರೀತಿಸಿದ ಭಾರತಕ್ಕೆ ಭೇಟಿ ನೀಡಬೇಕು ಎನ್ನುವ ಆಸೆ ಇತ್ತು
ಅದು ನನಸಾಯಿತು. ಕ್ಯೂಬಾದ ರಾಯಭಾರಿಯ ಜೊತೆ ಬೆಂಗಳೂರಿಗೂ ಬಂದಿಳಿದರು

ಬೆಂಗಳೂರಿಗೆ ಬರುತ್ತಾರೆ ಎಂದು ಗೊತ್ತಾಗಿದ್ದು ಹಿಂದಿನ ದಿನವಷ್ಟೇ ಆಗ ಮೊಬೈಲ್ ಇಲ್ಲದ ಕಾಲ
ವಿಷಯ ತಿಳಿಸಲು ಪ್ರಜಾವಾಣಿ, ಕನ್ನಡಪ್ರಭದ ‘ನಗರದಲ್ಲಿ ಇಂದು’ ಕಾಲಂ ಮಾತ್ರವೇ ಆಧಾರ
ಕೇವಲ ಎರಡು ಸಾಲಿನ ನಗರದಲ್ಲಿ ಇಂದು ಹೇಗೆ ಕೆಲಸ ಮಾಡಿತೆಂದರೆ ಸಭಾಂಗಣದ ಹೊಟ್ಟೆ ಬಿರಿದು ಹೋಯಿತು
ಆಗ ಮುಖ್ಯಮಂತ್ರಿ ಆಗಿದ್ದ ಎಸ್ ಎಂ ಕೃಷ್ಣರೇ ನಗರದಲ್ಲಿ ಇಂದು ನೋಡಿ ಸೀದಾ ಬಂದು ಸೆನೆಟ್ ಹಾಲ್ ಸೇರಿಕೊಂಡರು

ಆಗಲೇ ಈ ಘಟನೆ ನಡೆದದ್ದು
ಬಿ ವಿ ಕಾರಂತ್ ಕನ್ನಡ ಹವ್ಯಾಸಿ ರಂಗಭೂಮಿ ಇನ್ನೂ ಕಣ್ಣು ಬಿಡುವಾಗಲೇ ಚೆ ಗೆವಾರ ನಾಟಕ ನಿರ್ದೇಶಿಸಿದ್ದರು

ಆಗ ಚೆಗೆವಾರನ ಪಾತ್ರ ಮಾಡಿದ್ದು ಸಿ ಆರ್ ಸಿಂಹ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಲೀಡಾ ಚೆ ಗೆವಾರಾಗೆ ಸ್ವಾಗತ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಲೀಡಾ ಚೆ ಗೆವಾರಾಗೆ ಸ್ವಾಗತ

ಇದೆಲ್ಲಾ ಆಗಿ ವರ್ಷಗಳು ಸರಿದು ಹೋಗಿದ್ದವು
ಬ್ರಿಗೆಡ್ ರೋಡ್ ನ ಪರಮೇಶ್ ಸ್ಟುಡಿಯೋದಲ್ಲಿ ನನ್ನ ಕವಿತೆಗಳ ರೆಕಾರ್ಡಿಂಗ್ ನಡೆಯುತ್ತಿತ್ತು.
ಸಿ ಆರ್ ಸಿಂಹ ನನ್ನ ‘ಜಕ್ಕಿಣಿಯರ ಮುಂದೆ ಮ್ಯಾಕ್ಬೆತ್’ ಕವಿತೆ ವಾಚಿಸುವವರಿದ್ದರು
ನಾನು ಅವರೂ ಮೊದಲ ಬಾರಿಗೆ ಭೇಟಿಯಾಗುತ್ತಿದ್ದೆವು
ನಾನು ಅವರನ್ನು ನೋಡಿದೊಡನೆ ‘ಗುಡ್ ಮಾರ್ನಿಂಗ್ ಚೆ ಗೆವಾರ’ ಎಂದೆ
ಅಷ್ಟೇ ಆ ಪಾಸ್ ವರ್ಡ್ ಇನ್ನಿಲ್ಲದಂತೆ ಕೆಲಸ ಮಾಡಿತು
ಚೆ ಗೆವಾರ ಎನ್ನುವ ಹೆಸರು ನಮ್ಮಿಬ್ಬರ ನಡುವೆ ಎಷ್ಟು ಅನ್ಯೋನ್ಯತೆ ಉಂಟು ಮಾಡಿತೆಂದರೆ ನಾನು ಅವರೂ ಕ್ಯೂಬಾ, ಚೆ, ಕ್ಯಾಸ್ಟ್ರೋ ಬಗ್ಗೆ ಮಾತನಾಡಿಕೊಂಡದ್ದು ಅದೆಷ್ಟು ಬಾರಿಯೋ..
ನಡೀರಿ ಕ್ಯೂಬಾಗೆ ಹೋಗಿ ಬರೋಣ ಎಂದು ನನಗೆ ಬಲವಂತ ಮಾಡುತ್ತಿದ್ದರು

alieda che guevara

alieda che castro

ಇದೆಲ್ಲಾ ನೆನಪಾಯಿತು
ಸಿ ಆರ್ ಸಿಂಹ ನಮ್ಮೊಂದಿಗೆ ಇಲ್ಲ.
ಅವರ ನೆನಪಿಗೆ ಮಗ ಋತ್ವಿಕ್ ಸಿಂಹ ರಂಗ ಉತ್ಸವ ಹಮ್ಮಿಕೊಂಡಿದ್ದಾರೆ
ಆಹ್ವಾನ ಪತ್ರಿಕೆಯಲ್ಲಿ ಸಿಂಹದ ಮುಖ ಕಂಡೊಡನೆ ಈ ಎಲ್ಲವೂ ಸುರುಳಿ ಬಿಚ್ಚಿಕೊಳ್ಳುತ್ತಾ ಹೋಯಿತು

ಅದಿರಲಿ ‘ಸಂಚಯ’ದ ಗಣೇಶ್ ಗೊತ್ತಲ್ಲಾ
ಅವರು ನನ್ನ ಬೆನ್ನು ಹತ್ತಿದ್ದಾರೆ
ಚೆ ಗೆವಾರ ನಾಟಕ ಬರೆದುಕೊಡಿ ಅಂತ
ಎಸ್ , ನಾನೂ ಮನಸ್ಸು ಮಾಡಿದ್ದೇನೆ

‍ಲೇಖಕರು Admin

June 10, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Mala Shylesh

    Sir, Tumbaa Chennagi bardideera……All the Best for “Che Guevara” Play….

    ಪ್ರತಿಕ್ರಿಯೆ
  2. shama nandibetta

    Modala Nakshathra sooooper..

    avarannu Che aavarisidare nannannu ee baraha !!!

    ಪ್ರತಿಕ್ರಿಯೆ
  3. S.p.vijaya Lakshmi

    S.P.Vijaya lakshmi…..Nanage ‘Chegevaara’ gotthaagidde Avadhiyinda….Thank u sir….Simha nenapina ee baraha thumbaa chennaagide……

    ಪ್ರತಿಕ್ರಿಯೆ
  4. chi.na. halli kirana

    Che ge aatmaķku khushiyaguttàde !!
    bega baredu bidi sir,we are waiting

    ,,,

    ಪ್ರತಿಕ್ರಿಯೆ
  5. vimala.k.s

    ಆ ದಿನವನ್ನು ಬದುಕಿನಲ್ಲಿ ಎಂದೂ ಮರೆಯಲಾರೆ. ಕಿಕ್ಕಿರಿದು ತುಂಬಿದ ಸೆನೆಟ್ ಹಾಲ್…ಕಾರ್ಯಕ್ರಮ ನಡೆಸಿಕೊಡುವಾಗ ನಾನು ಅನುಭವಿಸಿದ ಸಂಭ್ರಮ ಈಗ ತಾನೇ..ತಾಜಾ ತಾಜಾ…ಅನಿಸುವಂಥಹ ಸಂಭ್ರಮವದು. ಚೇ…ನಮ್ಮೊಳಗಿನ ಆರದ ಬೆಳಕು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: