ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅತ್ರಿ ಬುಕ್ ಸೆ೦ಟರಿನಲ್ಲಿ ಎಸ್ ವಿ ಪಿ..

ಬಿ ಎ ವಿವೇಕ ರೈ ಅವರ ಲೇಖನಕ್ಕೆ ಪ್ರತಿಕ್ರಿಯೆ ಅತ್ರಿ ಬುಕ್ ಸೆಂಟರಿನಲ್ಲಿ ನನ್ನೆದುರಿನ ಅರೆ-ಸ್ಟೂಲಿನ ಮೇಲೆ (ಹೌದು,ಅವರ ಬಳಲಿದ ದೇಹ ಸ್ವಸ್ತ ಕೂರಲಾಗದಷ್ಟು ಸಣ್ಣದು) ಕೇವಲ ಮನುಷ್ಯ ಪ್ರೀತಿ, ಪುಸ್ತಕ ಪ್ರೀತಿ ಒಂದು ಪವಿತ್ರ ಕಾರ್ಯವೆನ್ನುವಂತೆ, ನಿತ್ಯ ಬಂದು ಕೂತಿದ್ದು ನಾಲ್ಕು ಮಾತಾಡಿ ಹೋಗುತ್ತಿದ್ದ, ಎಲ್ಲೂ ‘ಮುದಿ-ಹರಟೆಯಾಗದ’, ವ್ಯಾಪಾರಕ್ಕೆ ಅಡ್ಡಿಯಾಗದ ಎಸ್ವೀಪೀ ಔಚಿತ್ಯಪ್ರಜ್ಞೆ ನನ್ನ ನೆನಪಿನಕೋಶದಲ್ಲಿ ನವೀಕರಣಗೊಳಿಸಿದ್ದಕ್ಕೆ ಕೃತಜ್ಞ. ಅನಾರೋಗ್ಯ ತೀವ್ರವಾಗಿ ಕಾಡುತ್ತಿದ್ದಾಗಲೂ ಆ ನಿಮಿತ್ತ ಸಮ್ಮೇಳನಾಧ್ಯಕ್ಷತೆ ತಪ್ಪಿದಾಗಲೂ ಯಾವುದೇ ಮನಃಕಶಾಯವಿಟ್ಟುಕೊಳ್ಳದೆ ಸಮ್ಮೇಳನದ ವೇದಿಕೆಗೆ (ಹೊರಿಸಿಕೊಂಡು) ಬಂದು “ನಿಮ್ಮ ವಿಶ್ವಾಸವೇ ನನ್ನ ಶ್ವಾಸ” ಎಂದ ಎಸ್ವೀಪಿ ನಿಜಕ್ಕೂ ಅಮರ.

ಅಶೋಕವರ್ಧನ

]]>

‍ಲೇಖಕರು G

9 February, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading