ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಜ್ಞಾತವಾಸ ಬರಿ ಪಾಂಡವರಿಗಲ್ಲ!

ಸಂತೆಬೆನ್ನೂರು ಫೈಜ್ನಟ್ರಾಜ್

ದಿಂಬಿಗೆ ತಲೆ ಕೊಟ್ಟಿದ್ದು
ನಿದ್ದೆಗಾಗಿ
ಬರಿ ಅತ್ಯಾಚಾರದ ಸುದ್ದಿ ಕಿವಿಗೆ ಕಾದ ಸೀಸ!
ಹೊಳೆಗೆ ಹೋಗಿದ್ದು ಈಜಲು
ಯಾರೋ ಬಿಟ್ಟು ಹೋದ ಗಾಣಕ್ಕೆ
ಸಿಕ್ಕಿದ್ದ ಎರೆಹುಳುವಿಗೆ ಮೀನು ಬಾಯಿ ಹಾಕಿತ್ತು!

ಸಂತೆ ಎಂದರೆ ಇದ್ದದ್ದೇ ಗದ್ದಲ
ಹೂ ಮಾರುವವಳ ನಗೆಯ ಕವಿತೆ ಯಾರೂ ಓದಲಿಲ್ಲ!
ನಾನೂ ಒಬ್ಬನೇ ಅಂತ ಅನ್ನಿಸಿದ್ದು
ನಿಮ್ಮಂತೆಎಲ್ಲರೊಡನೆ ಜಗಳವಾಡಿದಾಗ!
ಬರೆದಿದ್ದೆಲ್ಲಾ ಕವಿತೆ ಅಂದವರ
ಸುಟ್ಟು ಹಾಕಬೇಕು;ರದ್ದಿ ಅಂಗಡಿವನ ಕನಸೇ ನಿಜ!
ಎದೆ ಮೇಲೆ ಕೈಯಿಟ್ಟು ಆಣೆ ಮಾಡು
ಬಿಟ್ಟ ನಿಟ್ಟುಸಿರು ರಕ್ತದ ಮಡುವಲ್ಲಿ ಬಿದ್ದ ತಂಗಿಗಾಗಿ ಎಂದು!
ಅಜ್ಞಾತವಾಸ ಬರಿ ಪಾಂಡವರಿಗಲ್ಲ;
ನಮಗೂ ನಿಮಗೂ ಊರ ಉಸಾಬರಿ ಬೇಡ ಎಂದ
ಹಲಾಲುಕೋರ ಮನಸುಗಳಿಗೂ!!
 
 

‍ಲೇಖಕರು G

4 August, 2014

4 Comments

  1. Shreepad Hegde

    Very good poem.

  2. Anonymous

    Cheennagide kavite

  3. Prabhakar M. Nimbargi

    A very touchy poem indeed. Let there be a ajnatavasa for all the perverted minds for a pretty long period, why pretty long period, for ever!

  4. mmshaik

    prastuta..very nice poem..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading