ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಕ್ಕ ತೆರೆದ ಬಾಗಿಲಲೇ-ಜಾನ್ ಸುಂಟಿಕೊಪ್ಪ

ಕೊಂಕಣಿ ಮೂಲ: ಜೊ.ಸಿ.ಸಿದ್ದಕಟ್ಟೆ
john suntikoppa
                                                                                    ಕನ್ನಡಕ್ಕೆ: ಜಾನ್ ಸುಂಟಿಕೊಪ್ಪ
ಹೊಸ ವರುಷದ ದಿನ
ಮನೆಗೆ ಅಕ್ಕ ಬಂದಾಗಿತ್ತು
ಸೂಟುಕೇಸಿನೊಂದಿಗೇ…!
snake folk2ಮುಳ್ಳು ಬೇಲಿಯ ಉಬ್ಬುತಗ್ಗುಗಳನ್ನು
ಸವರುತ್ತಾ ಹತ್ತಿದ ಹಾವು
ಪೊರೆ ಕಳಚುತ್ತಿತ್ತು…
ಧಾವಂತದಿಂದ ನಾನು ಓಡಿದ್ದೇ ಓಡಿದ್ದು,
ಅರ್ಧ ಪೊರೆಯೊಂದಿಗೇ ಹಾವು ಮರೆಯಾಯಿತು,
ಬೇಲಿಗೆ ಅಡರಿದ ಉಳಿದ ಪೊರೆಗೆ ಕೈ ಚಾಚಿದೆ-
‘ದೂರ ಹೋಗೋ..ಮುಟ್ಟಬ್ಯಾಡ,,,’
ಅಕ್ಕ ಅರಚಿದಳು,
ಅವಳ ಬಾಲವನ್ನೇ ಮೆಟ್ಟಿದ್ದೇನೆಂಬಂತೆ!
ಪಂಜರದಲ್ಲಿನ ಆ ಹಕ್ಕಿ ಪಿರಿಪಿರಿಗುಟ್ಟುತ್ತಿದೆ,
ಅಕ್ಕನ ಆಲಾಪವೂ ಪೊರೆ ಕಳಚುವಂತಿದೆ,
ಇಬ್ಬರದೂ ಎಂತಹ ಸಂಧಾನವೋ ಕಾಣೆ
ಅಕ್ಕ ತೆರೆದ ಬಾಗಿಲಲೇ
ಹಕ್ಕಿ ತೇಲಿ ಅನಂತತೆಯಲಿ ಲೀನವಾಯಿತು.
ನೆತ್ತಿಗೇರಿದ ಪಿತ್ತದೊಂದಿಗೇ
ಅಕ್ಕಳ ಹುಡುಕಿದೆ
ಅವಳು ವಯ್ಯಾರದಿಂದ ಪುಸ್ತಕದಲ್ಲಿ ಮುಳುಗಿದ್ದಳು,
‘ಹಕ್ಕಿಯಂತೆ ಹಾರುವುದು ಹೇಗೆ!?

‍ಲೇಖಕರು admin

3 August, 2016

4 Comments

  1. smitha

    Nice..

    • John suntikoppa

      Thank you madam

  2. ಶೀಲಾ ಹಾಲ್ಕುರಿಕೆ

    ಹಲೋ ಜಾನ್ ಸುಂಟಿಕೊಪ್ಪ. ನಾನು ಶೀಲಾ ಸುಂಟಿಕೊಪ್ಪ ಈಗ ಶೀಲಾ ಹಾಲ್ಕುರಿಕೆ. ನಿಮ್ಮದು ಯಾವ ಸುಂಟಿಕೊಪ್ಪ.
    ನಿಮ್ಮ ಕವನ ನನಗೆ ತುಂಬಾ ಹಿಡಿಸಿತು. ಅಕ್ಕ ಹಕ್ಕಿಯಂತೆ ಹಾರಲು ಪೊರೆ ಕಳಚಿದ್ದಾಳೆ. ತುಂಬಾ ಸಂತೋಷದ ವಿಷಯ.

    • John suntikoppa

      Thanks madam, nannadu kodagina Suntikoppa. Tumba santoshada vishaya .navu yellige hodaru Suntikoppa nammanna bidalla.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading