ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಕ್ಕಾ ನಿನ್ನ ಕೂಸು ಭಿಕ್ಷಕ್ಕೆ ಬಂದಿತು..

ಸಿದ್ಧಗಂಗಾ ಶ್ರೀಗಳಿಗೆ ನಮನ

ಸವಿತಾ ನಾಗಭೂಷಣ

ಅಕ್ಕಾ ನಿನ್ನ ಕೂಸು ಭಿಕ್ಷಕ್ಕೆ ಬಂದಿತು
ಅಣ್ಣಾ ನಿನ್ನ ಕೂಸು ಭಿಕ್ಷಕ್ಕೆ ಬಂದಿತು
ಪ್ರಭು ನಿನ್ನ ಕೂಸು ಭಿಕ್ಷಕ್ಕೆ ಬಂದಿತು

ಇಗೋ… ಭಿಕ್ಷ… ತಗೋ ಭಿಕ್ಷ….
ಮಂದಿ ನೀಡಿದರು ಭಿಕ್ಷ
ತನು ಮನ ಧನದ ಭಿಕ್ಷ
ಕೆಲಸ ಬೊಗಸೆಯ ಭಿಕ್ಷ
ಪಡೆದು ಪಡೆದು ಗುಣವಂತನಾದನು
ನೀಡಿ ನೀಡಿ ಸಿರಿವಂತರಾದರು

ಭಿಕ್ಷ ಪಡೆದಾತ ಹಂಚಿದನು ಮೂಜಗಕೆ
ಉಣಿಸಿದನು ಅನ್ನವನು ತಿದ್ದಿಸಿ ಅಕ್ಕರವ
ಬೆಚ್ಚಗೆ ಹೊಚ್ಚಿ ತಟ್ಟಿ ಮಲಗಿಸಿ
ಕನಸೊಳಗೂ ಬಂದು ಬಿತ್ತಿದನು ಬೆಳಕ
ತಲೆ ಎತ್ತಿ ನಡೆವ ಬದುಕಿನ ಪುಳಕ

ಅಯ್ಯೋ ನಾಚಿ ಕಣ್ಣೀರಾಗಿದೆ ಮಾತು!
ಹೀಗೆ ಬಂದನವ್ವಾ ಹಾಗೆ ಹೋದನವ್ವಾ…
ತನ್ನ ತಾನರಿತು ಕೋಟಿ ಜೀವಗಳಲಿ ಬೆರೆತು…

‍ಲೇಖಕರು avadhi

22 January, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading