ಆಂಗ್ಲ ಕವಿ ಪಿ.ಬಿ.ಶೆಲ್ಲಿಯ “the love philosophy” ಆಂಗ್ಲ ಕವಿತೆಯ ಭಾವಾನುವಾದ….
ಪ್ರೇಮ ವೇದಾಂತ
ಚೈತ್ರ ಶಿವಯೋಗಿಮಠ
ಚಿಲುಮೆಯುಕ್ಕಿ ಹರಿಯೆ ಹೊನಲ ಸೇರುತ
ಹೊನಲು ಪ್ರವಹಿಸಿ, ಸೇರೆ ಸಾಗರ!
ತಿಣಿಯುತಿರಲು ಸಗ್ಗದ ಸುಮ್ಮಾನದ ಮಾರುತ
ಮಧುರ ಭಾವದಿ ನಿರಂತರ!
ಜಗದಲಿಲ್ಲವಿಲ್ಲ ಆವುದೂನೂ ಒಂಟಿ
ಸಕಲಚರಾಚರಕವನದೇನೆ ನಿಯಮ,
ನಭೋಮಂಡಲದೆ ಎಲ್ಲವೂನೂ ಜಂಟಿ.
ಹೊರತದೇಕೆ ಹೇಳು ನನ್ನ ನಿನ್ನ ಸಮಾಗಮ??

ಅಗೋ ಅಲ್ಲಿ ನಭವ ಚುಂಬಿತಿರ್ಪ ಆ ಗಿರಿ!
ಒಂದಕೊಂದು ಕೊಕ್ಕೆ ಹಾಕಿ ಬಿಗಿಯುತಿರ್ಪವು ತೆರೆ!
ಕ್ಷಮೆಯು ಇಲ್ಲವಿಲ್ಲ ಪೂವಿಗೆ. ಅಲ್ಲವಲ್ಲ ಅದು ಸರಿ,
ತನ್ನ ಒಡನಾಡಿ ಸುಮವ ತಾ ಜರೆ!
ಇಳೆಯ ಚುಂಬಿಸಿಹುದು, ಸೂರ್ಯಕಾಂತಿ ಪ್ರೇಮದಿ,
ಅಂಬುಧಿಯ ಚುಂಬಿಸಿದೆ ಶಶಿಯ ಶಾಂತ ಪ್ರಭೆ.
ಇರುವುದೇನ ಬೆಲೆಯು ಇದೆಲ್ಲವುಕೆ ಜಗದಿ
ಮುದ್ದುಗರೆಯದಿರೆ ನನ್ನ ನೀನು, ಓ ವಿಭೆ!






ಚೆನ್ನಾಗಿದೆ ಚೈತ್ರಾ
ಧನ್ಯವಾದಗಳು ಮ್ಯಾಮ್
ನವೋದಯದ ಪುನರಾಗಮನ
ಚೆನ್ನಾಗಿದೆ
ಧನ್ಯವಾದಗಳು ಸರ್