ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಅಂತರಂಗದ ತುಡಿತಕ್ಕೆ ಕವಿತೆಯಾಗುವ ನಿನ್ನ ಕನವರಿಕೆಗಳು’

ಕವಿತೆಗಳಿಗೆ ಶೀರ್ಷಿಕೆ ಕೊಟ್ಟು ಸೆಳೆದಂತೆ……

ವೀರಣ್ಣ ಮಂಠಾಳಕರ್

ಮನದ ಕದವನ್ನು ತೆರೆದಿರಲಿ ನಿನ್ನಾ ಕಣ್ಣ ಕನ್ನಡಿಯಲ್ಲಿ ನನ್ನದೇ ಪ್ರತಿಬಿಂಬ ಬಾರಿ ಬಾರಿ ಸೆಳೆದಂತೆ
ಹುಚ್ಚು ಪ್ರೀತಿಯ ಹೊಳೆಯಲ್ಲಿ ಈಜಾಡಬೇಕು ನೆನಪುಗಳೆಂಬ ಅಲೆಯಲ್ಲಿ ಸದ್ದಿಲ್ಲದೇ ನೀ ಸೆಳೆದಂತೆ
 
ಕೊಚ್ಚಿಕೊಂಡು ಹೋದರೂ ಚಿಂತೆವಿಲ್ಲ ನಿನ್ನನ್ನು ಪ್ರೀತಿಸುವ ಭರದಲ್ಲಿ ದಡ ಸೇರಬೇಕು ಸಖಿ
ಮನಸಿನ ದುಗುಡು, ದುಃಖ, ದುಮ್ಮಾನಕ್ಕೆ ತೆರೆದ ಪುಟವಾಗಬೇಕು ನೀನೆಂದಿಗೂ ನನ್ನ ಸೆಳೆದಂತೆ

ಅಂತರಂಗದ ತುಡಿತಕ್ಕೆ ಕವಿತೆಯಾಗುವ ನಿನ್ನ ಕನವರಿಕೆಗಳು ಜೊತೆಗೂಡಿರಲಿ ಸಾಕು ಸಖಿ
ಚಿಗುರುವ ಕನಸಲ್ಲಿ ಅರಳಿದ ಭಾವನೆ ಸ್ಫೂರ್ತಿಯಾಗಿರಲಿ ಹೊಸ ಕವಿತೆಯೊಂದು ಹೊಸೆದಂತೆ
 
ಮನಸಿನ ಅಂತರಂಗ ಚಿಲಕವಿಲ್ಲದ ಬಾಗಿಲು, ಬಂದು ಹೋಗುವವರ ಬೇಗುದಿ ಕೇಳು ಸಖಿ
ಭರವಸೆ ಹಿಡಿದಿಟ್ಟುಕೊಳ್ಳಲು ಆಗದಿದ್ದರೆ ಬಿಟ್ಟು ಕೊಡದಿರು ತುಟಿಸೋಕುವ ಮದಿರೆ ಸೆಳೆದಂತೆ
 
ನಿನ್ನಾ ತುಟಿಯ ಚುಂಬನಕ್ಕಾಗಿ ಕಾದು ಕುಳಿತ ನನ್ನೀ ಎದೆಯ ತಳಮಳಕ್ಕೆ ಮತ್ತೇರಿಸು ಬಾ ಸಖಿ
ಸ್ಪರ್ಶ-ಮಿಲನದಲ್ಲಿ ವಿರಹಗಳೆಲ್ಲ ಸುಟ್ಟುಬಿಡು ಸಂಭ್ರಮದಿ ತೇಲಾಡಬೇಕು ಮಧು ಬಟ್ಟಲು ಸೆಳೆದಂತೆ
ಕುಡಿಯದೇ ಇರುವವರು ಯಾರೂ ಇಲ್ಲ ಜಗದಲ್ಲಿ ನಶೆಯೊಂದಿರಲಿ ಸಾಕೆನ್ನುವವರೇ ಹೆಚ್ಚು ತಿಳಿದಿರಲಿ
ಮಧುಶಾಲೆಯನ್ನೇ ನೆಚ್ಚಿಕೊಂಡು ಕುಳಿತ ‘ವೀರ’ ಸಾಕಿ ಸುರಿವ ಮಧುವನ್ನೆಲ್ಲ ಕುಡಿದು ತೂರಾಡಿದಂತೆ
 
ಪ್ರೀತಿಯ ಹೊರತಾಗಿ ಏನಿಲ್ಲ ಇಲ್ಲಿ, ಹುಟ್ಟು ಸಾವು ನಡುವೆ ನಮ್ಮಿಬ್ಬರ ಮಿಲನವೊಂದೇ ಇರುವುದು ಸಾಕ್ಷಿ
ಉಳಿಸಿ ಹೋಗುವ ಕುರುಹುಗಳಿಗೆಲ್ಲ ಒಂದೊಂದು ಹೆಸರನ್ನಿಡಬೇಕು ಕವಿತೆಗಳಿಗೆ ಶೀರ್ಷಿಕೆ ಕೊಟ್ಟು ಸೆಳೆದಂತೆ
 

‍ಲೇಖಕರು G

17 June, 2015

2 Comments

  1. Nagarajyk kamble

    Channagide….

  2. Rohini Satya

    Bhaavanegala bhaavaprkatane sampannavaagiruva kavana chennaagide sir!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading