Vote for..

ವಿದ್ವಾಂಸ ಡಾ. ಗೌರೀಶ ಕಾಯ್ಕಿಣಿಯವರು ನಮ್ಮ ಮತದಾರರಿಗಾಗಿ ನೀಡಿದ ಹದಿನಾಲ್ಕು ಮಹತ್ವದ ಟಿಪ್ಸ್

ನಿಮ್ಮ ಅಭ್ಯರ್ಥಿ ಹೇಗಿರಬೇಕು?

1, ಅಭ್ಯರ್ಥಿ ಸಮಾಜವಾದಿಯಾಗಿರಲೇ ಬೇಕು, ಅಂದರೆ ಬಡವರ, ಕೂಲಿ ಕಾರ್ಮಿಕರ ಶೋಷಣೆ ಮಾಡಿ, ಅನ್ಯಾಯದ ಲಾಭ ಪಡೆದು ಮೆರೆಯುವವನಿ(ಳಿ)ರಬಾರದು

2, ನಿಮ್ಮ ಅಭ್ಯರ್ಥಿ ರಾಜಕೀಯವನ್ನು ಧರ್ಮದಿಂದ ಜಾತಿಯಿಂದ ಸಂಪ್ರದಾಯದಿಂದ ಖಾಸಗೀ ಬಾಳಿನಿಂದ ವಿಂಗಡಿಸಿ ನೋಡಬಲ್ಲವ(ಳಾ)ನಾಗಿರಬೇಕು

3, ಅಲ್ಪಸಂಖ್ಯಾತ ಸಮಾಜಗಳಿಗೆ ಯೋಗ್ಯ ನ್ಯಾಯ ಸಿಗುವಂತೆ ನೋಡಿಕೊಳ್ಳುವುದಲ್ಲದೇ ಸಾಮಾಜಿಕ ತಾರತಮ್ಯ ವೈಷಮ್ಯಗಳು ಅಭ್ಯರ್ಥಿಯ ಜೀವನದಲ್ಲಿ ಮನ್ನಿಸದಂತೆ ವರ್ತಿಸುವವನಿ(ಳಿ)ರಬೇಕು

4, ಸರಕಾರದ ಎಲ್ಲ ಕಾರ್ಯಕ್ರಮಗಳನ್ನೂ ಶೃದ್ಧೆಯಿಂದ ಪುರಸ್ಕರಿಸುವ ಆಧುನಿಕ ಪ್ರಗತಿಪರ ಮನೋವೃತ್ತಿ ಅಭ್ಯರ್ಥಿಯ ನಡೆ ನುಡಿಗಳಲ್ಲಿ ಕಂಡುಬರಬೇಕು

5, ತನ್ನ ಕುಟುಂಬ ಬಳಗ ಜಾತಿ ಜ್ಞಾತಿ ಇವುಗಳ ಸೆಳೆತದಿಂದ ದೂರವಿದ್ದು, ಜಾತ್ಯಾತೀತತೆ ಅವಳ(ನ) ನಿತ್ಯ ನಡಾವಳಿಯ ಲಕ್ಷಣವಾಗಬೇಕು

6, ತನ್ನ ಮತಕ್ಷೇತ್ರದ ಅಭಿಪ್ರಾಯವನ್ನು ಬೇಕು- ಬೇಡಿಕೆಗಳನ್ನು ಸ್ಪಷ್ಟವಾಗಿ ಮಂಡಿಸುವ ಮಟ್ಟಿಗೆ ವಾಗ್ಮಿತೆ, ಗಲಬೆ ಗುದ್ದಾಟ ಪುಂಡಾಟಗಳಿಂದ ದೂರವಿರುವ ಸಭ್ಯತೆ ಹಾಗೂ ಇತರರ ದುಃಖ ದೂರುಗಳನ್ನು ಅರಿಯುವ ತಾಳ್ಮೆ ಮತ್ತು ತತ್ಪರತೆ ಇರಬೇಕು

7, ಸಾರ್ವಜನಿಕ ಚಾರಿತ್ರ್ಯ ಅಂದರೆ ಭ್ರಷ್ಟಾಚಾರಕ್ಕೆ ಬಲಿ ಬೀಳುವ ಮನೋದೌರ್ಬಲ್ಯ ಆತನ(ಳ)ಲ್ಲಿ ಇರಲೇಕೂಡದು

8, ಸಂವಿಧಾನ ಕೊಡಮಾಡಿದ ಪ್ರಜಾಪ್ರಭುತ್ವದ ತತ್ವ-ತಂತ್ರಗಳಲ್ಲಿ ಶ್ರದ್ಧೆ ಮತ್ತು ಆಸ್ತೆ ಇರಬೇಕು

9, ಬಡ ಹಿಂದುಳಿದ ಜನರ ಸೇವೆಯಲ್ಲಿ ಪ್ರಾಮಾಣಿಕವಾದ ಕಳಕಳಿ ಇರುವುದಲ್ಲದೇ ತನ್ನ ಕ್ಷೇತ್ರದಲ್ಲಿ ಯಥಾಶಕ್ತಿ ಕೆಲಸ ಮಾಡಿರಬೇಕು

10, ಅವನಿ(ಳಿ)ಗೆ ಕಾಯಿದೆ ಜ್ಞಾನ ಮುಖ್ಯ

11, ಸುಶಿಕ್ಷಿತ , ಸುಸಂಸ್ಕೃತ ಮತ್ತು ಮತದಾರರ ಕಾರ್ಯಕರ್ತನಂತೆ ಆತ(ಕೆ) ಕೃತಜ್ಞನಾಗಿರಬೇಕು

12, ಬಂಡವಾಳದಾರರ ಕೈಗೊಂಬೆಯಂತೂ ಆಗಲೇಕೂಡದು

13, ಕಪ್ಪುಹಣದ ಪಟ್ಟಭದ್ರ ಸ್ವಾರ್ಥಗಳುಳ್ಳ ಮೇಲ್ವರ್ಗದ ಸ್ನೇಹಿತನಾಗಿರಲೇಕೂಡದು

14, ಧನಲೋಭ ದುಂದುಗಾರಿಗೆ ಭೋಗ ವಿಲಾಸಗಳ ಒಲವು ಯಾವುದೂ ಅಭ್ಯರ್ಥಿಯಲ್ಲಿ ಇರಕೂಡದು

(ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ ಸಂಪುಟ- 9 , 307 ನೇ ಪುಟ)

‍ಲೇಖಕರು avadhi

April 22, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: