
ಟಿ ವಿ 9 ಮಾರಾಟವಾಗಲಿದೆಯೇ??
ಆ ಮೂಲಕ ಟಿ ವಿ 9 ಪರೋಕ್ಷವಾಗಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಬುಟ್ಟಿಗೆ ಬೀಳಲಿದೆಯೇ..??
‘ಹೌದು’ ಎನ್ನುತ್ತದೆ ಇತ್ತೀಚಿನ ದಿನಗಳಲ್ಲಿ ನಡೆದಿರುವ ವಿದ್ಯಮಾನ.
ಟಿ ವಿ 9 ಕೊಳ್ಳಲು ‘ಮೈ ಹೋಂ ಗ್ರೂಪ್’ ನ ಜೂಪಲ್ಲಿ ರಾಮೇಶ್ವರ ರಾವ್ ಆಸಕ್ತಿ ತೋರಿಸಿದ್ದು ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆದಿದೆ.
ಜೂಪಲ್ಲಿ ರಾಮೇಶ್ವರ ರಾವ್ ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರ ನಿಕಟ ವಲಯದಲ್ಲಿದ್ದಾರೆ
ಹಾಗನ್ನುತ್ತದೆ ಎಕನಾಮಿಕ್ ಟೈಮ್ಸ್ ವರದಿ
ಟಿ ವಿ 9 ಬಗ್ಗೆ ಗೊತ್ತಿಲ್ಲದವರಿಗೆ ಒಂದಷ್ಟು ಮಾಹಿತಿ
ಶ್ರೀನಿ ರಾಜು, ಮುಖ್ಯಸ್ಥರು, ಟಿ ವಿ 9
ಟಿ ವಿ 9 ಸಮೂಹ ಕನ್ನಡ, ತೆಲುಗು, ಮರಾಟಿ, ಗುಜರಾತಿ ಸೇರಿದಂತೆ 6 ನ್ಯೂಸ್ ಚಾನಲ್ ಗಳನ್ನು ಹೊಂದಿದೆ
ನ್ಯೂಸ್ 9 ಎಂಬ ಇಂಗ್ಲಿಶ್ ಚಾನಲ್ ಸಹಾ ಹೊಂದಿದೆ
ಇದು ಅಸೋಸಿಯೇಟೆಡ್ ಬ್ರಾಡ್ ಕ್ಯಾಸ್ಟಿಂಗ್ ಕಂಪನಿ ಪ್ರೈ. ಲಿಮಿಟೆಡ್ (ABCPL) ಸಂಸ್ಥೆಯ ಕುಡಿಗಳು
ಇದು ವೆಂಚರ್ ಕ್ಯಾಪಿಟಲಿಸ್ಟ್ ಶ್ರೀನಿ ರಾಜು ಅವರ ನಿಯಂತ್ರಣದಲ್ಲಿದೆ
ಇದರ ಸಿ ಇ ಓ ರವಿಪ್ರಕಾಶ್. ಇವರು ಸಂಸ್ಥೆಯಲ್ಲಿ ಶೇಖಡಾ 10 ಶೇರು ಹೊಂದಿದ್ದಾರೆ
ಸಂಸ್ಥೆಯ ಇತರ ಪ್ರಮುಖ ಉದ್ಯೋಗಿಗಳು ಶೇಖಡಾ 10 ಶೇರು ಹೊಂದಿದ್ದು, ಉಳಿದ ಹತ್ತಿರತ್ತಿರ 80 ಶೇರುಗಳು ಶ್ರೀನಿ ರಾಜು ಅವರ ಬಳಿ ಇದೆ
ಈ ಮಾತುಕತೆಯ ಬಗ್ಗೆ ಮಾಹಿತಿ ಹೊಂದಿರುವವರ ಪ್ರಕಾರ ಜೂಪಲ್ಲಿ ರಾಮೇಶ್ವರ ರಾವ್ ಅವರ ಪರವಾಗಿ ‘ಮೈ ಹೋಂ ಗ್ರೂಪ್’ ನ ನಿಯೋಗ ABCPL ನ ಅತ್ಯುನ್ನತ ಪ್ರತಿನಿಧಿಗಳನ್ನು ಭೇಟಿಯಾಗಿ ನ್ಯೂಸ್ 9 ಸೇರಿದಂತೆ ಎಲ್ಲಾ ಚಾನಲ್ ಗಳನ್ನೂ ಕೊಳ್ಳುವ ಬಗ್ಗೆ ಮಾತುಕತೆ ನಡೆಸಿದೆ. ಹಾಗನ್ನುತ್ತದೆ ‘ಎಕನಾಮಿಕ್ ಟೈಮ್ಸ್’.
ABCPL ಸಂಸ್ಥೆ ಕೆಲವು ವರ್ಷಗಳ ಹಿಂದೆಯೇ ಮಾರಾಟದ ಬಗ್ಗೆ ಆಲೋಚಿಸಿದ್ದು ಸೂಕ್ತ ಕೊಳ್ಳುಗರನ್ನು ಹುಡುಕಲು ತನ್ನ ಹೂಡಿಕೆ ಬ್ಯಾಂಕರ್ ಗಳಿಗೆ ಹಸಿರು ನಿಶಾನೆ ತೋರಿಸಿತ್ತು. 500 ರಿಂದ 600 ಕೋಟಿ ಅದು ನಿರೀಕ್ಷಿಸಿದ್ದ ಮೊತ್ತ. ಯಾವಾಗ ಟಿ ವಿ 9 ಸಮೂಹ ಮಾರಾಟಕ್ಕೆ ಸಜ್ಜಾಯಿತೋ ಆಗ ಪ್ರಖ್ಯಾತ ಮಾಧ್ಯಮ ಸಂಸ್ಥೆಗಳೂ ಸೇರಿ ಹಲವರು ಆಸಕ್ತಿ ತೋರಿಸಿ ಮೊದಲ ಸುತ್ತಿನ ಮಾತುಕತೆಯನ್ನೂ ನಡೆಸಿದ್ದವು. ಆದರೂ ಅದು ನಿರ್ಣಾಯಕ ಹಂತ ಮುಟ್ಟಿರಲಿಲ್ಲ

ಜೂಪಲ್ಲಿ ರಾಮೇಶ್ವರ ರಾವ್ , ಮುಖ್ಯಸ್ಥರು. ಮಹಾ ಸೀಮೆಂಟ್ ಹಾಗೂ ಮೈ ಹೋಂ ಗ್ರೂಪ್
ಈ ಮಧ್ಯೆ ಆದಾಯ ಮತ್ತು ಲಾಭದಲ್ಲಿ ಕುಸಿತ ಕಂಡಿದ್ದ ಟಿ ವಿ 9 ಮತ್ತೆ ಚೇತರಿಕೆ ಕಂಡು ಲಾಭವನ್ನು ಹೆಚ್ಚಿಸಿಕೊಳ್ಳುವತ್ತ ಹೆಜ್ಜೆ ಹಾಕಿದೆ. ಇದು ಮಾತುಕತೆಯ ಮೇಲೂ ಸಹಜವಾಗಿ ಪರಿಣಾಮ ಬೀರುತ್ತಿದೆ.
2014 ರ ಆರ್ಥಿಕ ವರ್ಷದಲ್ಲಿ 159 ಕೋಟಿ ಇದ್ದ operting income 2015ರ ವರ್ಷಕ್ಕೆ 157.07 ಕೋಟಿಗೆ ಇಳಿದಿತ್ತು. ಆದರೆ ತೆರಿಗೆ ನಂತರದ ಲಾಭ 2.52 ಕೋಟಿ ಯಿಂದ 4.99 ಕ್ಕೆ ಏರಿಕೆ ಕಂಡಿದೆ. 2016 ರ 10 ತಿಂಗಳಲ್ಲಿ ಆದಾಯ 157.85 ಕೋಟಿಗೆ ಏರಿದ್ದು ನಿವ್ವಳ ಲಾಭ 18.09 ಕೋಟಿಗೆ ಏರಿದೆ ಎಂದು ಇದೇ ಮಾರ್ಚ್ 14 ರಂದು ಬಿಡುಗಡೆ ಮಾಡಲಾದ ‘ಕೇರ್ ರೇಟಿಂಗ್’ ಸಂಸ್ಥೆಯ ವರದಿ ತಿಳಿಸಿದೆ.
‘ಇದು ಟಿ ವಿ 9 ಸಂಸ್ಥೆಯ ವಿಶ್ವಾಸವನ್ನು ಸಾಕಷ್ಟು ಹೆಚ್ಚಿಸಿದೆ. ಬರುವ ವರ್ಷಗಳಲ್ಲಿ ಇನ್ನೂ ಹೆಚ್ಚು ಲಾಭ ನಿರೀಕ್ಷೆ ಮಾಡಿದೆ. ಇದರಿಂದಾಗಿ ಮಾರಾಟದ ಮಾತುಕತೆಯ ಮೇಲೂ ಇದು ಪರಿಣಾಮ ಬೀರಿದೆ’ ಎಂದು ಈ ಮಾರಾಟದ ಬಗ್ಗೆ ಗೊತ್ತಿರುವ ಮೂಲಗಳು ತಿಳಿಸಿವೆ. ಈಗಿನ ಎಲ್ಲಾ ಪರಿಸ್ಥತಿ ನೋಡಿದರೆ ‘ಮೈ ಹೋಂ’ ಸಂಸ್ಥೆ ಈ ವ್ಯವಹಾರದಲ್ಲಿ ಮುಂದೆ ಹೋಗುವುದಿಲ್ಲ ಎಂದು ಆ ಸಂಸ್ಥೆಯ ವಕ್ತಾರರೊಬ್ಬರು ತಿಳಿಸಿದ್ದಾರೆ.
ಆದರೂ ಈ ಮಾತುಕತೆಯ ಬಗ್ಗೆ ಮಾಹಿತಿ ಇರುವವರೊಬ್ಬರ ಪ್ರಕಾರ ‘ಮಾತುಕತೆ ಮುಗಿದು ಹೋಗಿಲ್ಲ. ಇನ್ನೂ ಜಾರಿಯಲ್ಲಿದೆ’. ಈ ಮಧ್ಯೆ ‘ಎಕನಾಮಿಕ್ ಟೈಮ್ಸ್’ ಮಾರಾಟದ ಬಗ್ಗೆ ಮಾಹಿತಿ ಪಡೆಯಲು ನೇರವಾಗಿ ಶ್ರೀನಿ ರಾಜು ಹಾಗೂ ರವಿ ಪ್ರಕಾಶ್ ಅವರಿಗೆ ಮೆಸೇಜ್ ಕಳಿಸಿದ್ದರೂ ಅವರಿಂದ ಯಾವುದೇ ಉತ್ತರ ಬಂದಿಲ್ಲ.






0 Comments