ಇವರಿಗಿಂತ ಬೆಸ್ಟ್ ಗುರು ಇನ್ನೊಬ್ಬರು ಸಿಗೋದು ಉಂಟಾ?
ಇಂಗ್ಲಿಷ್ ಪರೀಕ್ಷೆ ಬರೆದು, ಪಾಸಾದ್ರೆ ಸಾಕಪ್ಪ ಎನ್ನೋರ ಗುಂಪಲ್ಲಿ ನಾನೂ ಒಬ್ಬನಿದ್ದೆ. ಪಿಯುಸಿವರೆಗೆ ಕನ್ನಡ ಮೀಡಿಯಂನಲ್ಲಿ ಓದು. ಡಿಗ್ರಿಯಲ್ಲಿ ಸಾಹಿತ್ಯ ಇಂಗ್ಲಿಷ್ ಅಥವಾ ಐಚ್ಛಿಕ ಇಂಗ್ಲಿಷ್ ಆಯ್ಕೆ ಮಾಡಿದ್ದೆ ಎಂಬ ವಿಷಯ ಗೊತ್ತಾಗಿದ್ದೇ ತಿಂಗಳ ನಂತರ.
ಆಗ ಮೊದಲು ಪರಿಚಯವಾಗಿದ್ದೇ ನಿಮ್ಮ ಸಾಹಿತ್ಯ. ನಿಮ್ಮ ಸಾಹಿತ್ಯದಲ್ಲಿದ್ದ Thou, Thee, Thy, Thine, Ye ಅರ್ಥ ಆಗದೆ ಎರಡು ಸೆಮ್ ಫೇಲಾದೆ.
ಆಗಲೆ ನಿಮ್ಮ ಸಾಹಿತ್ಯದಲ್ಲೇನಿದೆ ಎಂಬ ಆಳ ಅಧ್ಯಯನಕ್ಕಿಳಿದದ್ದು. ಅರೆ ಗುರುಗಳೇ ಇಂಗ್ಲಿಷ್ ಸಾಹಿತ್ಯದ ಅಸಲಿ ಅನುಭವ ಆಗಿದ್ದು ನಿಮ್ಮಿಂದ. ಉರು ಹೊಡೆಯುವ ಗೊಡವೆ ಬಿಟ್ಟು ಸಾಹಿತ್ಯವನ್ನು ಅರ್ಥ ಮಾಡಿಕೊಂಡು ಫೇಲಾದರೂ ಪರವಾಗಿಲ್ಲ ಎಂಬ ಮನಸ್ಥಿತಿ ಬಂದದ್ದು ನಿಮ್ಮಿಂದ.
ಇವತ್ತು ಪ್ರತಿಷ್ಠಿತ ಪತ್ರಿಕೆಯಲ್ಲಿ ಇಂಗ್ಲಿಷ್ನಿಂದ ಕನ್ನಡಕ್ಕೆ ಭಾಷಾಂತರ ಮಾಡುತ್ತಿದ್ದೇನೆ ಅದಕ್ಕೆ ಕಾರಣ ನೀವೆ.
ಇವತ್ತಿಗೆ ಜಗತ್ತಿನಿಂದ ದೂರವಾಗಿ 400 ವರ್ಷ ಆಗಿದೆ. ನಮ್ಮಂಥವರಿಗೆ ನೀವೆ ಸ್ಫೂರ್ತಿ ಶೇಕ್ಸ್ಪಿಯರ್ ಸರ್
Olle anubhava!! Nanu kuda English literature vidyarthiyaddarinda aa thrupthi odina anubhava agide..Julies Ceaser,Othello.. Ishtavada dukkhanthagalu..
Super!
Great