ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Thank you ಅವಧಿ..

ಸವಿತಾ ರವಿಶಂಕರ್ 

ಅದೊಂದು ಸುಂದರವಾದ ದಿನ. ಅವಧಿ ಬಳಗ ಏರ್ಪಡಿಸಿದ ರಂಗೋತ್ಸವದ ಮಧ್ಯಾಹ್ನದ ಶೋಗೆ ಹಿರಿಯ ಜೀವದೊಂದಿಗೆ Fb ಸ್ನೇಹಿತರ ಬಳಗ ಭೇಟಿಯಾಗಲು ನಾಟಕ ನೋಡಲು ಕುತೂಹಲದಲ್ಲೇ ಹೊರಟೆ.

ಸಂಧ್ಯಾ ರಾಣಿ ನಗುತ್ತಲೇ ಮನೆಯವಳಂತೆ ಮಾತಾಡಿಸಿ ಇದ್ದ ಅಲ್ಪಸ್ವಲ್ಪ ಅಳಕು ಸಡಿಲಗೊಂಡಿತು. ಅಳುಕಾಟ ಮುಂದೆ ಸರಿಯಿತು.

ವಾಗರ್ಥದ ಶಿವಪಾರ್ವತಿಯರಂತೆ ಎದುರಾದ ವಿಮರ್ಶಕ ದಿನಕರ ದಂಪತಿಗಳು ಮತ್ತೆ ಮನೆಯವಳಂತೆ ಮಾತಾಡಿಸುತ್ತ ನನ್ನ ಒಳಗಿನ ಅಳಕನ್ನು ಮುಂದೆ ದೂಡಿದರು. ಅಷ್ಟರಲ್ಲೇ ನಲ್ಲತಂಬಿ ಸರ್ ಸಿಕ್ಕರು. ಅಳಕು ಮರೆಯಾಗಿ ಗಟ್ಟಿತನ ಇಣಕಿಹಾಕಿತು.

ಇನ್ನು ರಂಗಶಂಕರ ಅದ್ಬುತವಾದ AC ಇರುವ ರಂಗಸ್ಥಳ.

ಗೀತ ನೃತ್ಯ ರೂಪಕದಂತ “ಚಿತ್ರ”ಎಂಬ ರವೀಂದ್ರ ನಾಥ ಠಾಕೂರ ವಿರಚಿತ ನಾಟಕ.
ಇಡೀ ನಾಟಕ ಓಟದೊಂದಿಗೆ ಆರಂಭ ಗೊಂಡು ನೋಡುಗರನ್ನ ಕುಣಿಸುತ್ತ “ಬೇಟೆ ಬೇಟಗಳ” ಕಾವ್ಯಾತ್ಮಕ ಶಕ್ತಿಯ ಅನಾವರಣ ಮಾಡುತ್ತ ಓಡುತ್ತಲೇ ಮುಗಿದು ಹೋಗಿದ್ದೇ ತಿಳಿಯದಂತೆ ನಮ್ಮನ್ನು ತನ್ನೊಳಗು ಮಾಡಿಕೊಳ್ಳುತ್ತ ನಿಂತಾಗ ಓ ಮುಗಿದೇ ಹೋಯಿತೆ ಎಂದು ಅನಿಸುತ್ತದೆ. ಈ ಓಟ ಏಕೆ ನಿಂತಿತು.

ಈಗ ನನ್ನ ಸರದಿ ಓಡುವುದು. ಆ ಓಟದೊಂದಿಗೆ ನಿಮ್ಮ ಮುಂದಿರುವೆ.

ನಾಟಕ ಚರ್ಚೆ ಮಾಡುವುದು “ಪ್ರೀತಿಯೆಂದರೆ ದೇಹದ ಬಯಕೆಯೋ, ಮನಸ್ಸಿನ ಹೊಂದಾಣಿಕೆಯೊ ಎಂಬುದರೊಂದಿಗೆ ಶುರುವಾಗಿ” ಅದು ದೇಹ ಮನಸಿನ ಕನವರಿಕೆ, ಅಪರೂಪದ ಹೊಂದಾಣಿಕೆಯಾಗಿ ಅವತರಿಸಿ ವ್ಯಕ್ತಿಯನ್ನು ಸಂಧಿಸಿದಾಗ ಮಾತ್ರ ಅಮೋಘ ಬಂಧಬಂಧುರ ವಾಗುತ್ತದೆ ಎಂದು ಧ್ವನಿಸುತ್ತದೆ.

ಶಬ್ದಾರ್ಥ ಎಂಬುದೆ ಶಿವೆಶಿವರಾದರೆ ದೇಹಮನಸುಗಳ ಒಪ್ಪಿಗೆ ಮಾತ್ರ ಒಲವು ಎಂಬುದನ್ನು ಸಾಬೀತು ಮಾಡುತ್ತದೆ. ನೃತ್ಯನಾಟಕ ತನ್ನ ತಂತ್ರಗಾರಿಕೆಗಳಿಂದ ಮನಸ್ಸೆಳೆಯುತ್ತದೆ. ಬಿಲ್ವಿದ್ಯಾಚತುರೆ, ಅಮೋಘ ಸುಂದರಿ ಒಬ್ಬಳೆ ಆಗಿರುವ “ಚಿತ್ರ” ಭಿನ್ನ ವೇಷಗಳೊಂದಿಗಿನ ಭಿನ್ನ ಹುಡುಗಿಯರು ನೋಡುಗರಿಗೆ ಒಬ್ಬಳೆ ಆಗಿಬಿಡುತ್ತಾಳೆ. ಈ ಚಲನೆ ನಿಜವಾಗಲು ಮನಸೆಳೆಯಿತು.

ಮನ್ಮಥ ಹಾಗು ವಸಂತ ಒಬ್ಬರಿಗೊಬ್ಬರು ಪ್ರತಿಸ್ಪರ್ಧಿಗಳಂತೆ ನಟಿಸಿದರು. ನಾಲ್ಕನೆ ತರಗತಿಯ ಹುಡುಗಿ ಹಾಗು ಪ್ರೌಢ ಹೆಣ್ಣುಮಗಳು ಮಾನಸಿ ಸುಧೀರ್ ಸುಂದರವಾಗಿ ನಟಿಸಿದರು. ಇನ್ನು ಚಿತ್ರಳ ಸಖಿಯರು ಅವರ ವೇಷ ಭೂಷಣ ನಟನೆ ಅದೆಂಥ ಹೊಂದಾಣಿಕೆ ಅವರಲ್ಲಿ ಎಂಥ ಒಗ್ಗಟ್ಟಾದ, ಫರ್ಫೆಕ್ಟ ಆದ ಅಭಿನಯ. ಕಣ್ಣು ಮನಸ್ಸಲ್ಲಿ ಹಾಗೆ ನಿಂತು ಬಿಡುತ್ತವೆ.
ಓಟ ನಿಲ್ಲುತ್ತಿದೆ.

ನಾಟಕ ಸಾರ್ಥಕವಾಗಿ ಎಲ್ಲರ ಮನಮುಟ್ಟಿದೆ ಎಂದೇ ನನ್ನ ಭಾವನೆ.

Thank you ಅವಧಿ.

‍ಲೇಖಕರು avadhi

21 June, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading