ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Self Service ಪುಸ್ತಕ ಮಾರಾಟ..

ರಾಹುಲ್ ಬೆಳಗಲಿ

ಸುಮಾರು ೨೦ ವರ್ಷದ ಹಿಂದಿನ ಮಾತು. ಹುಬ್ಬಳ್ಳಿಯ ದುರ್ಗದಬಯಲಿನಲ್ಲಿ ಒಂದು ಪ್ರಯೋಗ ನಡೆದಿತ್ತಂತೆ. ಪತ್ರಿಕೆಗಳನ್ನು ಮಾರಾಟಗಾರರಿಂದ ಕೊಳ್ಳುವ ಬದಲು ಓದುಗರೇ ಸ್ವಯಂಪ್ರೇರಣೆಯಿಂದ ಖರೀದಿಸಬೇಕು ಎಂಬ ಉದ್ದೇಶ

ಬೆಳಂಬೆಳಿಗ್ಗೇನೆ ಎಲ್ಲ ದಿನಪತ್ರಿಕೆಗಳನ್ನು ಒಂದೆಡೆ ಜೋಡಿಸಲಾಯಿತು. ಜೊತೆಗೆ ಫಲಕವೊಂದು ಇಡಲಾಯಿತು. ‘ಪತ್ರಿಕೆಗಳನ್ನು ತೆಗೆದುಕೊಂಡು ಅದರ ಬೆಲೆಯಿದ್ದಷ್ಟು ಹಣವನ್ನು ಡಬ್ಬಿಯೊಳಗೆ ಹಾಕಿ. ಚಿಲ್ಲರೆಯನ್ನು ಡಬ್ಬಿಯಿಂದ ಪಡೆಯಬಹುದು’ ಎಂದು ಕೋರಲಾಯಿತು.

ಒಂದೆರಡು ಗಂಟೆ ನಿರೀಕ್ಷೆಯಂತೆ ನಡೆಯಿತು. ಆದರೆ ನೋಡುನೋಡುತ್ತ ಇದ್ದಂತೆ ಅನಿರೀಕ್ಷಿತ ಬೆಳವಣಿಗೆ ಆಯಿತು. ಯಾರೋ ಒಬ್ಬರು ಬಂದವರು ಪತ್ರಿಕೆ ನೋಡಿದಂತೆ ನಟಿಸಿ, ಹಣದ ಡಬ್ಬಿ ಒಯ್ದು ಬಿಟ್ಟರು. ಮತ್ತೊಬ್ಬರು ಹಣ ಪಾವತಿಸದೇ ಪತ್ರಿಕೆಯನ್ನು ಅಲ್ಲಿಯೇ ಓದಿ, ಅಲ್ಲಿಯೇ ಇಟ್ಟು ಹೋದರು.

ಇದೆಲ್ಲವೂ ಎಷ್ಟು ನಿಜವೋ, ಸುಳ್ಳವೋ ಗೊತ್ತಿಲ್ಲ. ಆದರೆ ಈ‌ ಮಾತು ನೆನಪಾಗಿದ್ದು ಧಾರವಾಡದ ಮೇ ಸಾಹಿತ್ಯ ಮೇಳದಲ್ಲಿ ‘self service ಪುಸ್ತಕ ಮಾರಾಟ ಕಂಡಾಗ’. ವಿಶೇಷವೆಂದರೆ, ಇಲ್ಲಿ ಪುಸ್ತಕಗಳು ಇವೆ. ಡಬ್ಬಿಯಲ್ಲಿ ಹಣ ಇದೆ. ಪುಸ್ತಕ ಕೊಳ್ಳುವ ಓದುಗರು ಇದ್ದಾರೆ

‍ಲೇಖಕರು admin

12 May, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading