ನಾನು, ದೇವರು
sandwich ಮನೆ ಹಾಗೂ ಸ್ವಾಮಿ ಅಯ್ಯಪ್ಪೋ..

ನಮ್ಮ ಮನೆ ಎರಡು ಮನೆಗಳ ಮಧ್ಯ sandwich ನಂತಿದೆ. ಇವತ್ತು ಪಕ್ಕದ ಮನೆಯಲ್ಲಿ ಪೂಜೆ ಇತ್ತು. ಹೋಮ ಹವನದ ಹೊಗೆ, especially ಅಗ್ನಿಗೆ ತುಪ್ಪದ ಹವಿಸ್ಸು ಬಿದ್ದ ಪರಿಮಳ ಭರಿತ ಹೊಗೆ, ಪೂರ್ತಿ ನಮ್ಮನೆಯೊಳಗೆ. ಒಂದು ತರಹದ nice nice feeling!!ಅದನ್ನು ಅಘ್ರಾಣಿಸುತ್ತ ಸುಮಾರು ಹೊತ್ತು ಸಮಯ ಕಳೆದೆ. ಅಮ್ಮನ ಫೋನ್ ಬಂದಾಗ ಅಮ್ಮನಿಗೂ ಹೇಳಿದೆ. ಮತ್ತು ಇವತ್ತು ಗ್ಯಾರಂಟಿ ಸೊಳ್ಳೆ ಇರಲ್ಲ ಅಂತಲೂ ಸೇರಿಸಿದೆ. ಅದಕ್ಕೆ ಅಮ್ಮ’ ಇರಲಿ, ನಿನಗೆ ದೇವರು ಪೂಜೆ ಅಂತಹುದಲ್ಲೆಲ್ಲ ನಂಬಿಕೆ ಇಲ್ಲದಿದ್ದರೂ ನೋಡು, ದೇವರು ಮಾತ್ರ ನಿನ್ನನ್ನ ಬಿಡಲ್ಲ. ದೇವರ ಮನೆ, ದೀಪಗಳನ್ನು ಕ್ಲೀನ್ ಮಾಡುವುದು ಇಂತಹುದೆಲ್ಲ ಮಾಡುತ್ತೇನೆ. ದೇವರ ದೀಪ ಹಚ್ಚುವ, ಪೂಜೆ ಮಾಡುವ ಕೆಲಸ ಮಾತ್ರ ಶ್ರೀಕಾಂತ್ ದ್ದು.
–
ಆಶ್ಚರ್ಯ ಅಂದರೆ ನನ್ನ ತಂದೆ ತಾಯಿ ಮನೆಯಲ್ಲಿ, ಅಥವಾ ನಾನು ಬೆಳೆದ ಅಜ್ಜನ ಮನೆಯಲ್ಲಿ ದೇವರಲ್ಲಿ ಭಕ್ತಿ ತುಂಬ. ಆದರೂ ನಾನ್ಯಾಕೆ ಹಾಗಾದೆ ಎಂಬುದೇ ಅವರಿಗೆಲ್ಲ ಅಚ್ಚರಿ. ಮದುವೆಯಾದ ಮೇಲೆ ನೋಡಿದ್ರೆ ಶ್ರೀಕಾಂತ್ ಮನೆಯಲ್ಲಂತೂ ದೈವ ಭಕ್ತಿ ಸ್ವಲ್ಪ ಹೆಚ್ಚೆ.
–
ನಾವು ಬೆಂಗಳೂರಿಗೆ 2001 ನಲ್ಲಿ ಬಂದಾಗ ನಮ್ಮ ಮೊದಲ ಬಾಡಿಗೆ ಮನೆ (ಇದು ಮೂರನೆದು ಮತ್ತು hopefully last )ಇದ್ದದ್ದು ಮಹಾಲಕ್ಷ್ಮಿ ಲೇ ಔಟ್ ನಲ್ಲಿ. ಸ್ವಲ್ಪ ಎತ್ತರದ ಪ್ರದೇಶದಲ್ಲಿತ್ತು. ಎರಡನೇ ಮಹಡಿ. ಮನೆಗಿಂತ ಮನೆಯ ಎದುರಿಗಿದ್ದ ಬಿಸಿಲು ಮಚ್ಚು(terrace) ದೊಡ್ದದಾಗಿತ್ತು. ನನಗಂತು ಮಹಾ ಅನುಕೂಲ. ಯಾಕಂದ್ರೆ ನನ್ನ ಹತ್ತು ಹಲವು ಹೂವಿನ ಕುಂಡಗಳನ್ನಿಡಲು ಜಾಗ ಮಾತ್ರವಲ್ಲದೇ ಇನ್ನಷ್ಟು ಹೊಸ ಹೂ ಗಿಡ ಗಳನ್ನು ನಾನು ತಂದು ಸೇರಿಸಿದೆ.
ನನ್ನ ಝೂಲಾ ಗೂ ಒಳ್ಳೆ ಜಾಗ ಸಿಗ್ತು. ಬೆಳಿಗ್ಗೆ ನಾಲ್ಕು ಗಂಟೆ ನನ್ನ ಮೊದಲ ಚಹಾ ಸೇವನೆಗೆ ಪ್ರಶಸ್ತವಾಗಿತ್ತು. ನಾನು ಕೂತಲ್ಲಿಂದ ISKCON ದೇವಳದ ಗೋಪುರದ ತನಕ clear view ಸಿಗುತ್ತಿತ್ತು. ಮಳೆ ಚಳಿಗಾಲದಲ್ಲೆಲ್ಲ ಸಖತ್ enjoyment. ದೂರದ ಗಿಡಮರದೆಡೆಯಲ್ಲಿ ಕಣ್ಣು ಮುಚ್ಚಾಲೆಯಾಡುವ ಬೀದಿ ದೀಪಗಳು, ಮಳೆ ನೀರಿನ ತರಹಾವರಿ direction ಗಳು, ಡಿಸೆಂಬರ್ ನಿಂದ ಮಾರ್ಚ್ ವರೆಗಿನ ಕುಳಿರ್ಗಾಳಿ ಮತ್ತು ಮಂಜು. ನಿಧಾನವಾಗಿ ಬೆಳಗು ಮೂಡುವುದನ್ನು ನೋಡುವುದು ಅತ್ಯಂತ ಸಂತಸದ ಸಂಗತಿ. ಮುಂಬೈನಲ್ಲಿದ್ದಾಗ ನಮ್ಮ ಐದನೆ ಮಹಡಿ ಕಿಟಕಿಯಿಂದ ನನಗೆ ಸಮುದ್ರ ಕಾಣುತಿತ್ತು. ಸಂಜೆ ನಾನು ಮತ್ತು ನನ್ನ ಫ್ರೆಂಡ್ ನಿಲಿಮಾ terrace ಮೇಲಿಂದ ಸೂರ್ಯಾಸ್ತವನ್ನು ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಈಗ ಅವಳು ಬೆಂಗಳೂರಿನಲ್ಲಿದ್ದಾಳೆ.
ಬೆಂಗಳೂರಿಗೆ ಬಂದಾಗಲೆಲ ಅಮ್ಮನಿಗಂತೂ ತುಂಬ ಖುಶಿ..ಒಂದೊಂದು ದಿನ ಒಂದೊಂದು ದೇವಸ್ಥಾನ. ಮನೆಯ ಎದುರುಗಡೆ ರಾಘವೇಂದ್ರ ಸ್ವಾಮಿ ದೇವಸ್ಥಾನ, ಮನೆಯ ಹಿಂಭಾಗದಲ್ಲಿ ಸುಬ್ರಮಣ್ಯ ಸ್ವಾಮಿ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನ. (ಬಾತ್ ರೂಮ್ ನಿಂದ ಕಾಣುತಿತ್ತು). 🙂 ನಾವಿರುವ ಬೀದಿಯ entrance ನಲ್ಲಿ ,ಪಂಚಮುಖಿ ಗಣಪ, ವಾಸವಿ,ಬಸ್ ಸ್ಟಾಪ್ ಹತ್ತಿರ ಬಾಲಾಜಿ(ವೆಂಕಟರಮಣ)…ಇನ್ನು ಸ್ವಲ್ಪ ಮುಂದಕ್ಕೆ ಹೋದರೆ famous ಮಹಾಲಕ್ಷ್ಮಿ ಮತ್ತು ದೊಡ್ಡ ಹನುಮ….ಅಲ್ಲಿಂದ ಹತ್ತು ಹೆಜ್ಜೆ ನಡೆದರೆ ISKCON.
ನಮ್ಮ ಮನೆಗೆ ಬಂದಾಗ, ಅಮ್ಮ ಯಾರೋಂದಿಗೋ ಫೋನ್ ನಲ್ಲಿ ಮಾತಾಡ್ತಾ ’ನಮ್ಮ ಮಾಲತಿಗೆ ದೇವರಲ್ಲಿ ನಂಬಿಕೆ ಇಲ್ಲದಿದ್ದರೆ ಏನಾಯ್ತು. ಅವಳ ಸುತ್ತ ಮುತ್ತ ಮಾತ್ರ ತುಂಬಾ ದೇವರುಗಳು ಇದ್ದಾರೆ’ ಅಂತ
ಇನ್ನೊಂದು ವಿಚಿತ್ರ ಸಂಗತಿಯೆಂದರೆ ನಮ್ಮ ಮನೆಯ ಔನರ್ ಹೆಂಡತಿ, ಪ್ರತಿ ವರ್ಷ ವರಮಹಾಲಕ್ಷ್ಮೀ ವೃತ ಹಾಗೂ ನವರಾತ್ರಿಯಲ್ಲಿನ ಶುಕ್ರವಾರದಂದು ನನಗೆ ಬೆಳಿಗ್ಗೆ 5 ಗಂಟೆಯ ಪೂಜೆಗೆ ಕರೆಯುತ್ತಿದ್ದರು. ನಾನು ಹೇಗೂ ಬೇಗ ಏಳುವುದು ಅವರಿಗೆ ಗೊತ್ತು. breakfast ಮಾಡದೇ ಬನ್ನಿ ಅಂತ ಒಂದು request ಇರುತ್ತಿತ್ತು. ಅವರು first time ಪೂಜೆಗೆ ಕರೆದಾಗಲೇ ನನಗೆ ದೇವರಲ್ಲಿ ನಂಬಿಕೆ ಇರದಿದ್ದು ಹೇಳಿದ್ದೆ.
ಆದರೂ ಅವರು ಪೂಜೆಯ ದಿನ ನನ್ನ ಕಾಲು ತೊಳೆದು,ಕೆನ್ನೆಗೆ ಒಂದು 25 ಗ್ರಾ ಅರಿಶಿನ ಬಳಿದು. ಕುಂಕುಮ ಹಚ್ಚಿ, ಕೈಗೆ ಹಸಿರು ಕೆಂಪು ಗಾಜಿನ ಬಳೆ ತೊಡಿಸುತ್ತಿದ್ದರು. ಹಣ್ಣು ಹಂಪಲು ಕೊಟ್ಟು ಕಳಿಸುತ್ತಿದ್ದರು. ನನಗಂತೂ ಸಿಕ್ಕಾ ಪಟ್ಟೆ ಮುಜುಗರ. ನಾವಲ್ಲಿರುವ 5 ವರ್ಷವೂ ಈ ಪ್ರಸಂಗ ಹೀಗೆ ಮುಂದುವರೆಯಿತು.
ಮತ್ತೆ, ನಾವು ಈಗಿರುವ ಮನೆಗೆ ತುಂಬ ಹತ್ತಿರದಲ್ಲಿ ದೊಡ್ಡ ಶನಿ ದೇವಸ್ಥಾನ. ಈಗ ಇಲ್ಲಿ ಬಂದಾಗ ಅಮ್ಮ ಕುಣಿದಾಡುವುದೊಂದೇ ಬಾಕಿ..ಯಾಕೆಂದ್ರೆ ಮನೆಯ ಹಿಂಬಾಗಿಲು ತೆಗೆದ್ರೆ, ಎದುರಿಗಿರುವ ಗೋಡೆ ನೆ ಶ್ರೀ ರಾಮ ಮಂದಿರದ್ದು. ನಾನು ಬಟ್ಟೆ ಒಣಗಿಸಲಿಕ್ಕೆ ಹಾಕುವಾಗಲೆಲ್ಲ ನನ್ನ ಕೈ ಹಲವಾರು ಸಲ ಅಂತು ಗೋಡೆಗೆ ತಾಗುತ್ತೆ.
ಇತ್ತೀಚಿಗೆ ಅಮ್ಮ ನನ್ನ ಜಾತಕ ಯಾರಿಗೋ ತೋರಿಸಿದ್ದರು. ನನಗೀಗ ಏಳುವರೆ ಶನಿ ಕಾಟವಂತೆ. ಪ್ರತೀ ಶನಿವಾರ ಶನಿದೇವರಿಗೆ ಮೂರು ಪ್ರದಕ್ಷಿಣೆ ಹಾಕಬೇಕಂತೆ…. 🙂
]]>
ನಿಮಗೆ ಇವೂ ಇಷ್ಟವಾಗಬಹುದು…






ಪ್ರಿಯ ಮಾಲತಿ,
ಅರೆ, ಮಾಲತಿ ಬರೆದುಬಿಟ್ಟಿದಾರ? ಅಂತ ಮತ್ತೆ ಮತ್ತೆ ಕಣ್ಣುಜ್ಕೊಂಡ್ ನೋಡ್ದೆ. ಬೆಳಬೆಳಗ್ಗೇನೆ ಪ್ಲೆಸೆಂಟ್ ಸರ್ಪ್ರೈಜ್!! ಬರಹ ಬಹಳ ಆಪ್ತವಾಗಿದೆ. ನಿಮ್ಮ ಹತ್ತಿರವೆ ಕೂತು ಮಾತಾಡಿದ ಹಾಗೆ..ಬರಹದ ಕೊನೆಯಲ್ಲಿ ಮುಗಿದೇ ಹೋಯಿತೆ, ಇನ್ನೂ ಏನಾದರು ಇರಬೇಕಿತ್ತು ಅನ್ನಿಸಿತು. ಹೆಚ್ಚಿಗೆ ಬರೀರಿ ಮಾಲತಿ.
nimma anubhava chennagide. prastuta nambaloo aagade, bidaloo aagada stithiyallide.
ಟೀನಾ ಹೇಳಿದ ಹಾಗೆ ಇದು ಆಪ್ತ ಅಚ್ಚರಿಯೇ.
ಚೆನ್ನಾಗಿದೆ ನಿಮ್ಮ ಅನುಭವ.
ಮಾಲತಿ,
ಬರಹ ಬಹಳ ಆಪ್ತವಾಗಿದೆ. ನಿಮ್ಮ ಹಾಸ್ಯಪ್ರಜ್ಞೆ ಯಾವತ್ತಿನಂತೆ ಚೆನ್ನಾಗಿದೆ. ಹೀಗೇ ಬರೀತಾ ಇರಿ.
ವಸುಧೇಂದ್ರ
thumba estavada kaathe nemadu.egenaa makkalu eruvareethi yanna thoresedderi..
Malati…Very sweet 🙂
thanks everybody. Just now saw avadhi and was surprised to find my ramblings here.
🙂
malathi S
Dear Malathi
Nice write up . You can write in kannada as well as in English equally good .
Rgds
Sahana
Malathi,
Tumba chennagide.. neevu nijakkoo heegE bareeta irabeku..
Devaru annodu mattEnoo alla Malathi.. The Supreme Power which caused creation of this universe.. The power which caused “big bang”.. We’ve given our own “roopa” to it, thats all, only to invoke positive feelings within us and to feel secured and reassured that we’re protected by some unseen hands and thanking the same, by way of worshipping. Remember LIC logo.. two hands and a lamp! haage ashte..
As regards festivals, Varamahalakshmi habba antheevi.. apart from the positive “feel good” factor it causes, we call our friends and neighbours for the pooja.. a sort of small get together.. sambhrama.. sadagara.. beyond the routine.. allva? Idella nimage gottirode bidi.. sumne.. illi heLide ashte.. do keep up the good work..
Ayyappa, This article has different title in ‘Nenapina Sanchi’, But I like this title(Sandvich mane mattu swamy ayyappa) very much. Congratulations Madam for being appeared in Avadhi. Readers are waiting for Your next article. Very sweet right up.
Dear Savithri!!
this title is the courtesey of Avadhi. I am not very good at titles.thanks for commenting !
🙂
ms
Ayyappo!Lekhana thilihasyadinda koodidhu thumba chennagi moodi
bandhide Malathiyavare.”ಕೆನ್ನೆಗೆ ಒಂದು 25 ಗ್ರಾ ಅರಿಶಿನ ಬಳಿದು. ಕುಂಕುಮ ಹಚ್ಚಿ” intha prasangagalu nannanu mujugarkkeedumadive. Adru ellavu onthara enjoyable annodanna nimma baraha thorisothe.Heege bareyuthiri. shubavagali.
Veda