ಪನ್ – fun!
ಪ್ರತಿಮಾ ಶಾನ್ ಭಾಗ್
ನನಗೆ ಹಿಡಿದಿರೋ ಪನ್ ಬಿಡಿಸೋ ಹುಚ್ಚನ್ನು ಸಲ್ಪ ನನ್ನ ಮಗಳಿಗೂ ಅಂಟಿಸೋಣವೆಂದೆನಿಸಿತು. ಪನ್,ಅದರ ಡೆಫೆನೀಶನ್ ಎಲ್ಲವನ್ನೂ ವಿವರಿಸಲು ಅವಳಿನ್ನೂಚಿಕ್ಕವಳು ಎಂದೆನಿಸಿತು.ಉದಾಹರಣೆಯೊದಿಗೆ ವಿವರಿಸಿದರೆ ಸುಲಭವಾಗಬಹುದೆಂದು ಕರೆದು ಪಕ್ಕಕ್ಕೆ ಕೂರಿಸಿಕೊಂಡೆ. ನಾವು ಚಿಕ್ಕೋರಿದ್ದಾಗ ಬಿಡಿಸಿದ ಮೊದಲ ಒಗಟನ್ನು ಅವಳಿಗೆ ಕೇಳಿದೆ,
“ನೋಡೂ , ಒಬ್ರು ಅಂಕಲ್ಲು ಮನೆ ಅಂಗಳದಲ್ಲಿ ಪೇಪರ್ ಓದುತ್ತಾ ಕುಳಿತಿರ್ತಾರೆ, ಆಗ ಪಕ್ಕದ ಮನೆಯವರು ಕೇಳ್ತಾರೆ “ಎನ್ರೀ ಇವತ್ತು ಆಫೀಸಿಗೆ ಹೋಗಿಲ್ವಾ?”
ಅಷ್ಟರಲ್ಲಿ ಆ ಅಂಕಲ್ಲಿನ ಆಂಟಿ ಬಂದು “ಒಲೆ ಮೇಲೆ ಏನ್ ಇಡಲೀ” ಅಂತಾರೆ
ಎರಡಕ್ಕೂ ಒಂದೇ ಉತ್ತರ, ಏನು ಹೇಳು ನೋಡೋಣ ಅಂದೆ.
ಪಾಪ ಹುಡುಗಿ ಅಂದಾಜಲ್ಲಿ ಎನೇನೋ ತಪ್ಪು ಉತ್ತರಗಳನ್ನು ಕೊಟ್ಟಳು , ಆಮೇಲೆ “ನಾನೇ ಹೇಳ್ತೀನಿ ಇರು” ಅಂತ ಉತ್ತರ “ಹಾಲಿಡೇ”, ಆಫೀಸಿರಲ್ಲ ಅಂಕಲ್ಲಿಗೆ ಅದಕ್ಕೆ ಅವರು ಹಾಲಿಡೇ ಅಂತಾರೆ, ಇನ್ನು ಒಲೆ ಮೇಲೆ ಹಾಲು ಇಡೆ ಅಂತ ಆಂಟಿಗೆಕೂಡ ಹಾಲಿಡೇ ಅಂತಾರೆ ” ಎಂದು ಮನದಟ್ಟು ಮಾಡಿಸಿದೆ,
ಕಾಡಿಗೆ,ನೇಲ್ ಇಂತಹ ಉತ್ತರಗಳು ಬರುವಂತಹ ಇನ್ನೆರಡು ಒಗಟುಗಳನ್ನು ಕೇಳಿದೆ.
“ಅಮ್ಮ, ಈಗ ನನ್ನ ಟರ್ನ್” ಅಂದಳು.
“ಸರಿ ಕೇಳು” ಅಂದೆ.
ಒಬ್ರು ಆಂಟಿ ಹೊರಗಡೆ ಕೂತಿರ್ತಾರೆ, ಆಗ ಅವ್ರ ಮಗ ಬಂದು” ಅಮ್ಮಾ ನನ್ನ ಬುಕ್ ನೋಡಿದೀಯ” ಅಂತೆ ಕೇಳ್ತಾನೆ, ಆಮೇಲೆ ಆ ಆಂಟಿ ಅಂಕಲ್ಲು ಬಂದು ” ಹೊಸಾ ಪಿಕ್ಚರ್ ಬಂದಿದೆ, ಹೆಸ್ರೇನು ಹೇಳು ನೋಡೋಣ “ಅಂತಾರೆ, ಎರಡಕ್ಕೂ ಒಂದೇ ಉತ್ತರ, ಏನದು ಅಂದ್ಲು.
ನಾನು ತಲೆ ಹನ್ನೆರಡಾಣೆ ಮಾಡಿಕೊಂಡು ಅವಳಿಗೆ ಗೊತ್ತಿರೋ ಇರೋಬರೋ ಆನಿಮೇಟೆಡ್ ಫಿಲಮ್ ಹೆಸರುಗಳನ್ನು ಹೇಳಿದೆ.
ಯಾವುದೂ ಸರಿ ಅಲ್ಲ ಅಂದ್ಲು,
“ಸರಿ.. ಸೋತೆ ನಾನು, ನೀನೇ ಹೇಳು” ಅಂದೆ
“ಅಮ್ಮ ಆಂಟಿ ಅಡುಗೆ ಮಾಡ್ತಿರ್ತಾರೆ, ಪಾಪ ಅವ್ರಿಗೇನು ಗೊತ್ತು, ಬುಕ್ ಎಲ್ಲಿ ಅಂತ, ಹೊಸಾ ಪಿಕ್ಚರ್ ಬಗ್ಗೆನೂ ಗೆಸ್ ಮಾಡ ಕ್ಕಾಗ್ದೇ ಇಬ್ರಿಗೂ ಒಂದೆ ಉತ್ತರ ಕೊಡ್ತಾರೆ ಆ ಆಂಟಿ ” ಗೊತ್ತಿಲ್ಲ” ಅಂತ !!!






ನಿಜವಾಗಿಯೂ ಹಾಸ್ಯಮಯ ಘಟನೆ.