Miss you Achutan..

 

 

 

ಎಚ್ ಎನ್ ಆರತಿ 

 

ದೂರದರ್ಶನದ ಸುದ್ದಿ ವಿಭಾಗ ಕಳೆಗಟ್ಟುತ್ತಿದ್ದರೆ, ಅಲ್ಲಿ ಖಾದ್ರಿ ಅಚ್ಯುತನ್ ಇದ್ದಾರೆಂದರ್ಥ. ಸಕಲ ಚರಾಚರಗಳ ಜವಾಬ್ದಾರಿ ಹೊತ್ತವರಂತೆ, ಚಟುವಟಿಕೆಯಿಂದ, ಲವಲವಿಕೆಯಿಂದ, ಅದೂ ಇದೂ ಒಗ್ಗರಣೆಯ ಮಾತುಗಳ ನಡುವೆ, ಹಾಸ್ಯಚಟಾಕಿ ಹಾರಿಸುತ್ತಾ ಇದ್ದ ಅಚ್ಯುತನ್ ಸರ್ ಗೆ ನಾನೆಂದರೆ ಬಲು ಪ್ರೀತಿ, ನನಗೂ ಅವರು ಅಚ್ಚುಮೆಚ್ಚು 💝

ನಾನು ಕೆಲವು ವರ್ಷ ಸುದ್ದಿವಿಭಾಗದಲ್ಲಿ ನಿರ್ಮಾಪಕಿಯಾಗಿದ್ದೆ. ಆಗ ಅಚ್ಯುತನ್ ಜೊತೆಯಲ್ಲಿ ಅದೆಷ್ಟೋ ನುಡಿಚಿತ್ರಗಳನ್ನು, soft storiesಗಳನ್ನು ನಿರ್ಮಾಣ ಮಾಡಿದ್ದೆ. ಯಾವುದೇ ವಿಶೇಷವಿದ್ದರೂ, ಧ್ವನಿ ನನ್ನದೇ ಇರಬೇಕು, ಅಷ್ಟು ಮಮತೆ, ಅವರು ನೀಡುತ್ತಿದ್ದ ಪ್ರೋತ್ಸಾಹ ಅಂತಹದು.
ಪತ್ರಿಕೋದ್ಯಮದಲ್ಲಿ ಅವರಿಗಿದ್ದ ಅನುಭವ, ಭಾಷಾಪಾಂಡಿತ್ಯ, ಕಾರ್ಯವ್ಯಾಪ್ತಿ, ಶ್ರದ್ಧೆ, ವೃತ್ತಿಪರತೆ ಇವೆಲ್ಲಾ ಒಂದು ಮಾದರಿ. ಅವರು ನೀಡುತ್ತಿದ್ದ ಪುಟ್ಟ, ಪ್ರಭಾವಶಾಲಿ ತಲೆಬರೆಹಗಳು ಅಚ್ಯುತನ್ ಟ್ರೇಡ್ ಮಾರ್ಕ್!

ಖ್ಯಾತ ಪತ್ರಕರ್ತ, ಖಾದ್ರಿ ಶಾಮಣ್ಣನವರ ತಮ್ಮನಾದರೂ, ಅಣ್ಣನ ನೆರಳಿನಲ್ಲಿ ಬೆಳೆಯದೇ ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಂಡವರು.
ಸರಳ ಜೀವನ ಶೈಲಿ, ಎಲ್ಲರೊಡನೆ ಎಗ್ಗಿಲ್ಲದೇ ಬೆರೆಯುವ ಮುಕ್ತ ಮನೋಸ್ಥಿತಿ, ಅಪಾರ ಉತ್ಸಾಹದ ಬುಗ್ಗೆಯಾಗಿದ್ದ ಅಚ್ಯುತನ್ ಸರ್, ನಿವೃತ್ತರಾಗಲೇ ಇಲ್ಲ. ಕೊನೆಯುಸಿರು ಇರುವ ತನಕ ಯಾವುದರಲ್ಲಾದರೂ ತೊಡಗಿಕೊಂಡೇ ಇದ್ದ ಜೀವ…

ನಿಮ್ಮನ್ನು ಕಳೆದುಕೊಂಡ ನೆನಪ ಮೂಟೆ ಹೊತ್ತ ನಾವು, ಕಂಗೆಡುವಂತಾಗಿದೆ. ನೀವು ನಿಮ್ಮ ಬೊಗಸೆ ಕೈಯಲ್ಲಿ ನನ್ನ ಕಣ್ಣೀರು ತೊಡೆದು, “ಹೇ ಹುಡುಗೀ, ಇದೆಲ್ಲಾ ಲೋಕ ನಿಯಮ, ಅಳು ನಿನಗೆ ಶೋಭಿಸುವುದಿಲ್ಲ, ನಗುತ್ತಿರು!” ಎಂದ ಹಾಗಾಗುತ್ತಿದೆ. ಯಾವಾಗಲೂ ಸಿಕ್ಕ ತಕ್ಷಣ ಅಪ್ಪಿಕೊಂಡು, ತಲೆ ನೇವರಿಸುತ್ತಿದ್ದ, ನಿಮ್ಮ ಅದೇ ನಗುಮುಖ ಕಣ್ಣ ಮಂಜಾಗಿಸುತ್ತದೆ!

Miss you Achutan 

 

‍ಲೇಖಕರು avadhi

October 30, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Lalitha siddabasavayya

    ಅಯ್ಯೋ ದೇವರೇ , ಅಚ್ಯುತನ್ ??? ತೀರಾ ಕೆಲವು ದಿನ ಕೆಳಗೆ ಪುತಿನ ಟ್ರಸ್ಟ್‌ ಕಾರ್ಯಕ್ರಮದಲ್ಲಿ ಭೇಟಿಯಾದಾಗ ಅದೆಷ್ಟು ಆತ್ಮೀಯವಾಗಿ ಮಾತನಾಡಿದ್ದರು,, ಅಂತಹ ಲವಲವಿಕೆಯ ಸದಾ ನಗುನಗುತ್ತಿದ್ದ ಅಚ್ಯುತನ್ ????

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: