ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮಾರಾಕಿ ಮೊದ್ಲು ಇದನ್ನ.. ಪೋಲಿ ಮೇಯಕೆ ಹೋಯ್ತಿತೆ..

ಕುರುಬೋಳಿ   ಹೆಚ್ ಆರ್ ಸುಜಾತಾ ಕೊಟ್ಟಿಗೆಯಲ್ಲಿ ಆವತ್ತು ಆಕ್ರಂದನವೋ ಆಕ್ರಂದನ. ಬೆಳಬೆಳಗ್ಗೆಲೆ ಇನ್ನೂ ಕೋಳಿ ಕೂಗೋ ಹೊತ್ತಿಗ್ ಮುಂಚೇಲೆ ಹೊಂಟು, ಕುರಬೋಳಿ ಹಸವ ಹೊಡ್ಕಬಂದ್ಬುಡು ಮಂಗ್ಳಾರ ಸಂತೀಗೆ ಅಂತ, ಅಪ್ಪ  ಆಳುಮಗ ಮೆಳ್ಳೆಗೆ ರಾತ್ರಿಲೆ ಹೇಳಿ ಹೋಗಿತ್ತು. ಮೆಳ್ಳೆ ಬೆಳಿಗ್ಗೆ ಬೆಳಿಗ್ಗೆನೆ ಕುರುಬೋಳಿಯ ನೆಲಕ್ಕೆ ಕೆಡಿಕಂದು...

read more
ಓ ನನ್ನ ಜನರೇ ಇದು ನನ್ನ ಕೊನೆಯ ಮಾತು..

ಆತ ಸಾಲ್ವಡೊರ್ ಅಲೆಂಡೆ ರಂಜಾನ್ ದರ್ಗಾ  ಮುಖಪುಟದ ಚಿತ್ರ- ಅಲೆಂಡೆ  ಅವರು ಹತ್ಯೆಗೊಳಗಾದಾಗ ಛಿದ್ರವಾದ ಅವರ ಕನ್ನಡಕ. ಈಗಲೂ ಅದನ್ನು ಅಲ್ಲಿಯ ಮಯೂಸಿಯಮ್ ನಲ್ಲಿ ಕಾಪಿಡಲಾಗಿದೆ ಚಿಲಿ ದೇಶದ ವಿಶ್ವವಿಖ್ಯಾತ ಕವಿ ಪಾಬ್ಲೊ ನೆರುದಾ, ರಾಜಧಾನಿ ಸ್ಯಾಂಟಿಯಾಗೊದಲ್ಲಿ 1973ನೇ ಸೆಪ್ಟೆಂಬರ್ 23ರಂದು ನಿಗೂಢವಾಗಿ ನಿಧನರಾದರು. ನೆರುದಾ...

read more
ಸುರಿದ ಮಳೆಯೆಲ್ಲ ಮುಂಗಾರು ಮಳೆಯಾಗೋದಿಲ್ಲ !

ಶಶಾಂಕ್ ನಿರ್ದೇಶನದ ಮುಂಗಾರುಮಳೆ-2 ಅಂತೂ ತೆರೆಕಂಡಿದೆ. ಈ ಚಿತ್ರದ ಅರ್ಧ ಹಾಡುಗಳು, ಆಹ್ ಅನ್ನಿಸುವಂತಿದ್ದ ದೃಷ್ಯಗಳನ್ನು ಕಂಡು ಮರುಳಾಗಿ ಚಿತ್ರಮಂದಿರಕ್ಕೆ ಹೋದ ಮಂದಿ ಫಸ್ಟ್ ಹಾಪ್ ಮುಗಿಯುವ ಹೊತ್ತಿಗೆಲ್ಲಾ ಭೀಕರ ಬರಗಾಲಕ್ಕೆ ಸಿಕ್ಕವರಂತೆ ಕಸಿವಿಸಿಗೊಂಡು, ಕುಂತಲ್ಲೇ ಕೊಸರಾಡುತ್ತಿದ್ದರು ! ಹೈಟೆಕ್ ಅಸಡ್ಡಾಳ ಕ್ಯಾರೆಕ್ಟರಿಗೆ...

read more
ಆರತಿ ಕಳೆದು ಹೋದಳು..

Moscow! ಟಾಲ್ಸ್ ಟಾಯ್ ಕಥೆಗಳನ್ನು ಶಾಲಾ ಬಾಲಕಿಯಾಗಿ ಓದುವಾಗಲಿಂದ, Russia ದೇಶದೊಂದಿಗೆ ಏನೋ ಬಾಂಧವ್ಯ, ಬೆಸುಗೆ. ಅದು ಬೆಳೆದು ಹೆಮ್ಮರವಾಗಲು ಆಮೇಲೆ ಹುಟ್ಟಿದ ಕಾರಣಗಳು ನೂರಾರು! ಮಾಸ್ಕೋ ನಗರ, ತುಂಬಾ stylish ಅನಿಸಿತು, busy city ಮತ್ತೆ ಚರಿತ್ರೆ ಹೆಜ್ಜೆ ಹೆಜ್ಜೆಗೂ ಕಾಡುವ, ಕಂಡದ್ದರೊಂದಿಗೆ ಮನ ಹಲವು ಘಟನೆಗಳನ್ನು...

read more
ಸಿಂಹ ಕಟಿಯ ನೀಲವೇಣಿ, ನಿಲ್ಲೆ!

ಫಲವತಿ!! ಇಂಗ್ಲೆಂಡ್ ನಿಂದ ಡಾ ಬಿ ಪ್ರೇಮಲತ  ಮುಡಿಯೇರಿದ ಮಣಿಯ ಬಿಲ್ಲೆ ಸಿಂಹ ಕಟಿಯ ನೀಲವೇಣಿ, ನಿಲ್ಲೆ! ನಿತಂಬ ಸೀಳಿ ಹರಿದ ನಾಗವೇಣಿ ಹೆಜ್ಜೆಯಿಡೆ ಗೆಜ್ಜೆ ಕುಣಿಸಿ, ಹರಿಣಿ!   ಕೈಲಿ ಹಿಡಿದ ಉರಿವ ಹಣತೆ ಯಾರಿಗೆಂದು ನೀ ಸಾಲಂಕ್ರುತೆ? ಜಗ್ಗಿ ಮುತ್ತಿಟ್ಟಿವೆ ಕರ್ಣ ಕುಂಡಲವು ಅಪ್ಪಿ ಶೋಡಶಿಯ ನುಣುಪು ಕದಪು!  ...

read more
ಇಂದು ಅಚಾನಕ್ 'ಚಾಮರಾಜ್' ಸಿಕ್ಕರು

ರಾಮಕೃಷ್ಣ ಸಿದ್ರಪಾಲ್ "ಆಕಾಶವಾಣಿ, ಪ್ರದೇಶ ಸಮಾಚಾರ...ಓದುತ್ತಿರುವವರು ಚಾಮರಾಜ್ " - ಇದು ಬಾಲ್ಯದಲ್ಲಿ ಅಂದರೆ ಪ್ರಾಥಮಿಕ, ಪ್ರೌಢಶಾಲೆ ಬಹುಶಃ ಪಿಯುವರೆಗೆ ಪ್ರತಿದಿನ ಬೆಳಿಗ್ಗೆ ರೆಡಿ ಆಗಿ ತಿಂಡಿ ತಿನ್ನುವ ಸಮಯದಲ್ಲಿ ರೇಡಿಯೊದಲ್ಲಿ ಕೇಳುತ್ತಿದ್ದ ಒಂದು ಧ್ವನಿ. ಈಗಲೂ ಕಿವಿಯಲ್ಲಿದೆ. ಆಕಾಶವಾಣಿ ಧಾರವಾಡ ಕೇಂದ್ರದಿಂದ ಬೆಳಿಗ್ಗೆ...

read more
ಹೀಗೂ ಆಗಿತ್ತು..

ಜಲಪಾತದ ದಾರಿ ತೋರಿಸಿದ ಪ್ಲಾಸ್ಟಿಕ್ ಕವರುಗಳು ರಾಕೇಶ್ ಕೊಣಾಜೆ  ಇದು ಸುಮಾರು ಐದು ವರ್ಷಗಳ ಹಿಂದಿನ ಘಟನೆ. ಈ ವಿಷಯವನ್ನು ಈ ವರೆಗೆ ಕೆಲವೇ ಕೆಲವು ಸ್ನೇಹಿತರಲ್ಲಿ ಹಂಚಿಕೊಂಡಿದ್ದು ಬಿಟ್ಟರೆ ಮತ್ಯಾರಲ್ಲೂ ಹೇಳಿರಲಿಲ್ಲ. ಮನೆಯವರಲ್ಲಂತೂ ಅಪ್ಪಿತಪ್ಪಿಯೂ ಹೇಳದಂತೆ ಎಚ್ಚರಿಕೆ ವಹಿಸಿದ್ದೆ. ಒಂದು ವೇಳೆ ಮನೆಯವರಲ್ಲಿ ಹೇಳಿದ್ದರೆ ನನ್ನ...

read more
ಪುಸ್ತಕ ಮತ್ತು ಚೂರಿ

ಹಿಂದಿ ಮೂಲ : ನರೇಶ ಜೈನ್ ಗಿರೀಶ ಜಕಾಪುರೆ ಹೇಗೆ ಪುಸ್ತಕವೊಂದು ಚೂರಿಯಾಗುತ್ತದೆ ಹಾಗೂ ಇಳಿಯುತ್ತದೆ ಕರುಳ ಬಳ್ಳಿಯೊಳಗೆ ಹೇಗೆ ಚೂರಿಯೊಂದು ಪುಸ್ತಕವಾಗುತ್ತದೆ ಹಾಗೂ ಇಳಿಯುತ್ತದೆ ಮೆದುಳ ತಳಗಳಲಿ ಯಾವ ಪುಸ್ತಕ ಚೂರಿಯ ವಿರುದ್ಧವಾಗಿ ತನ್ನ ಪುಟಗಳನ್ನು ಬಡಿದೆಬ್ಬಿಸುತ್ತದೆ ಯಾವ ಚೂರಿಯು ಪುಸ್ತಕದ ಪುಟಗಳ ಕತ್ತರಿಸಲು ಹೊಂಚು...

read more
 ಮತ್ತೆ ಮತ್ತೆ..

ರಾಜೀವ ನಾರಾಯಣ ನಾಯಕ ಮತ್ತೆ ತುದಿಯಲ್ಲಿ ಕೈಬೀಸಿ ಕರೆದಳು ಕಾಳಿ ಕಣಿವೆಯಲ್ಲಿದ್ದೆ ನಾನು, ಕರೆದೊಯ್ಯಿತು ಮಾಯದ ಗಾಳಿ ತಿಳಿದಿತ್ತು ನನಗೆ ಅದು ಗಿರಿಕಂದರಗಳ ಕಾಲಾತೀತ ದಾರಿ. ಪಾಪ ಸವರಿದಷ್ಟೂ ನಿಗುರುವ ಕನಸಿಗೆ ನಿರಸನದ ನೆನಪೆಲ್ಲಿರುತ್ತೆ ಹೇಳಿ!   ನೀಲಿ ನಾಲಿಗೆ ತುದಿಗೆ ಕರ್ಪೂರ ಧಗಧಗ ಗಂಧ ತೇದು ದೀಪ ಹಚ್ಚಿ ವರವ ಕೋರಿದೆ...

read more
ಸಿರಿಯ ಮುಡಿ ಉದ್ದ ಜಡೆಯ..

ಗಣಪತಿ ದಿವಾಣ ನಿನ್ನೆ ದಿನ ನನ್ನ ಹುಡುಗಿ ಗೊಂಬೆಯಂತೆ ಕಂಡಳು ಕೋಪಗೊಂಡ ಕೆಂಪು ಮುಖ ಹೊಳೆಯುತಿರುವ ಕಂಗಳು. ಹೂವ ಹೊತ್ತು ಬಳುಕಿ ನಿಂತ ಬಳ್ಳಿಯಂತೆ ಕಂಡಳು ಸಿರಿಯ ಮುಡಿ ಉದ್ದ ಜಡೆಯ ನನಗೆ ತೋರಿ ನಿಂತಳು.   ಮುಷ್ಟಿ ಬಿಗಿದು ಕೈಯ ಕೊಡವಿ ನಡೆದಳವಳು ಜಂಭದಿ ತಿರುಗು, ಹೋಗು ಎಲ್ಲಿ ಹೋಪೆ ಎಂದೆ ನಾನು ಮೌನದಿ.  ...

read more
ನಿಜದ ತಲೆಯ ಮೇಲೆ ಹೊಡೆದಂತೆ..

ಆಪಾದನೆ ಕೃಷ್ಣ ಶ್ರೀಕಾಂತ ದೇವಾಂಗಮಠ ಕೊಲೆ ಆಪಾದನೆ ಹೊತ್ತು ಕಟಕಟೆ ಏರಿದ ಬಾಲಕ ಮುಖದಲ್ಲಿ ಮುಗ್ಧ ಮಂದಹಾಸ ಬೀರುತ್ತಾ ಕಿಕ್ಕಿರಿದ ಜನರತ್ತ ಕುತೂಹಲದ ಕಣ್ಣರಳಿಸಿ ಕಪ್ಪು ಕೋಟಿನವರ ಮಾತು ಆಲಿಸುತ್ತ ಆಕಳಿಸಿ ನಿದ್ದೆಗೆ ಜಾರುತ್ತಿದ್ದ. ಪಕ್ಕದಲ್ಲಿ ಕಾವಲಿಗೆಂದು ನಿಂತಿದ್ದ ಸ್ಟಾರ್ ಗಳಿಲ್ಲದ ಖಾಕಿಯವ ಕೋಲಿನಿಂದ ನಿದ್ದೆಹೋಗದಿರಲೆಂದು...

read more
ಕುರಿ ಮಿತ್ರ ಹಾಗೂ ಒಬ್ಬ 'ಆಡು'ಸಂತ..

ಮಂಜುನಾಥ್ ಲತಾ ಆತ್ಮೀಯರೇ, ಹದಿನಾಲ್ಕು ವರ್ಷಗಳಿಂದ ಪತ್ರಿಕೋದ್ಯಮದ ವಿವಿಧ ಮಜಲುಗಳಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿರುವ ನಾನು 'ವಿಜಯವಾಣಿ' ದಿನಪತ್ರಿಕೆಯಲ್ಲಿ ನಾಲ್ಕು ವರ್ಷಗಳಿಂದ ಹಿರಿಯ ಉಪಸಂಪಾದಕನಾಗಿ ಕೆಲಸ ಮಾಡಿ, ಕಾರಣಾಂತರಗಳಿಂದ ಅಲ್ಲಿಗೆ ರಾಜಿನಾಮೆ ನೀಡಿ ಕಳೆದ ಮೂರು ತಿಂಗಳಿನಿಂದಲೂ ಬಿಡುವಾಗಿದ್ದೇನೆ. ನನ್ನ ಎಂದಿನ...

read more
ನಿಮ್ ಗರ್ಲ್ ಫ್ರೆಂಡ್ ನಿಮ್ ತಲೇಲಿ ಬಿಟ್ಟ ಹುಳ

ಪ್ರೇಮ ಗೀಮಾ ಜಾನೇ ದೋ ಮೃತುಂಜಯ ಕೌಟಿ ನಿಮ್ಮ ಒಂದು ಅಡಿಕ್ಷನ್, ಅದೂ ನಿಮ್ಗೆ ಇಷ್ಟ ಆಗಿರೋ ಒಂದು ಸಿನಿಮಾ ನೋಡೋ ಅಡಿಕ್ಷನ್ ! ಅದನ್ನೇ ಇಡ್ಕೊಂಡು, ನಿಮ್ ಗರ್ಲ್ ಫ್ರೆಂಡ್ ನಿಮ್ ತಲೇಲಿ ಹುಳ ಬಿಟ್ಟು, ನಿಮ್ಮನ್ನ ಹುಚ್ಚಾ ಅಂತ ಪ್ರೂವ್ ಮಾಡ್ಸಿ, ಹೊಗೆ ಹಾಕ್ಸೋ ಲೆವಲ್ಗೆ ನಿಮ್ಮನ್ನ ಎಳ್ಕೊಂಡ್ ಹೋಗ್ಬೌದು ! ಊರು ಬಿಡ್ಸ್ ಬೌದು.....

read more
ಕಲಾಕ್ಷೇತ್ರದಿಂದ – ಕೆಆರ್‍ಎಸ್‍ವರೆಗೆ ನೀರ ಹಕ್ಕಿಗಾಗಿ ಬೀದಿ ರಂಗ

 ಹಶ್ಮಿ ಥಿಯೇಟರ್ ಫೋರಂ ಹಾಗೂ ನಾಡಿನ ಜನಪರ ಸಂಘಟನೆಗಳು ಕಲಾಕ್ಷೇತ್ರದಿಂದ - ಕೆಆರ್‍ಎಸ್‍ವರೆಗೆ  ನೀರು ಮತ್ತು ನೆಲದ ಹಕ್ಕಿಗಾಗಿ ಬೀದಿ ರಂಗ ಚಳುವಳಿ ದಿನಾಂಕ-09/09/2016 ರಂದು ಬೆಳಿಗ್ಗೆ ರವೀಂದ್ರ ಕಲಾಕ್ಷೇತ್ರದ ಆವರಣದಿಂದ ಚಾಲನೆ ನೀರು ಹಂಚಿಕೆ ವಿವಾದಗಳು ಮೇಲ್ನೋಟಕ್ಕೆ ಕಾಣುವಷ್ಟು ಸರಳವಲ್ಲ .ಈ ವಿವಾದಗಳು ಜನರ ನಡುವೆ ಭಾಷಿಕ...

read more
ಮೌನ ಮುರಿಯೋಣ ಬನ್ನಿ: ನನಗಾಗ ಹತ್ತು ವರ್ಷವಿದ್ದಿರಬೇಕು..

ಇದು ಖೋ ಸರಣಿ. ಇದನ್ನು ಓದಿದ ನಂತರ ದಯವಿಟ್ಟು ಶೇರ್ ಮಾಡಿ ನಿಮ್ಮ ಸ್ನೇಹಿತರಿಗೆ ಕಳಿಸಿ, ಅವರ ಅನುಭವಗಳನ್ನೂ ಸೇರಿಸಲು ಉತ್ತೇಜಿಸಿ. ನನಗಾಗ ಹತ್ತು ವರ್ಷವಿದ್ದಿರಬೇಕು. ಸ್ಕೂಲಿಗೆ ಹೋಗುತ್ತಿದ್ದ ಕೆಂಪು ಬಸ್ಸಿನಲ್ಲಿ ಕಂಡಕ್ಟರ್ ಒಬ್ಬ ಹೇಮಯ್ಯ ಅಂತ. ಅವನ ನಡವಳಿಕೆ ಸರಿ ಇರುತ್ತಿರಲಿಲ್ಲ. ಸ್ಕೂಲಿಗೆ ಹೋಗುತ್ತಿದ್ದ ನಮ್ಮನ್ನ ಮುದ್ದು...

read more
ನ್ಯಾಯಾಂಗ: ಜ್ವರ ಯಾರದ್ದು? ಬರೆ ಯಾರದ್ದು?

ರಾಜಾರಾಂ ತಲ್ಲೂರು ಎಪ್ರಿಲ್ ತಿಂಗಳಲ್ಲಿ ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿಗಳು ಸಾರ್ವಜನಿಕವಾಗಿ ಕಣ್ಣೀರು ಹರಿಸಿದ ಬಳಿಕ, ನ್ಯಾಯಾಂಗ ಮತ್ತು ಶಾಸಕಾಂಗಗಳ ನಡುವೆ ಮುಸುಕಿನ ಅಡಿ ಏನೋ ನಡೆದಿದೆ ಎಂಬುದು ದಿನೇ ದಿನೇ ಸ್ಪಷ್ಟಗೊಳ್ಳುತ್ತಾ ಬಂದಿದೆ. ದೇಶದ ಎಲ್ಲ ಮೂಲಭೂತ ವ್ಯವಸ್ಥೆಗಳ ತಳಕಟ್ಟಿನ ಕಲ್ಲು ಅಲ್ಲಾಡಿಸುವ ತಂತ್ರದ...

read more
ಒಂದು ಬಸ್ಸು ಹಿಡಿದು..

ಮೊನ್ನೆ ಒಂದು ದಿನ ಆಫೀಸಿಗೆ ಹೋದವಳು ತೀರಾ ಕಿರಿಕಿರಿಯೆನಿಸಿ ಇರಲಾಗದೆ, ರಜೆಹಾಕಿ ಬಂದು ಬಿಟ್ಟೆ. ಸದ್ಯ ಯಾರೂ, ಏನು ಎತ್ತ ಎಂದು ವಿಚಾರಿಸಲಿಲ್ಲ. ಏನೂ ಮಾಡಲು ತೋಚದೆ, ಒಂದು ವೋಲ್ವೋ ಬಸ್ಸನ್ನು ಹತ್ತಿ ದಿನದ ಪಾಸು ಕೊಂಡು ಸಿಕ್ಕಸಿಕ್ಕಲ್ಲಿ ಇಳಿದು ಸಿಕ್ಕಸಿಕ್ಕ ಬಸ್ಸನ್ನು ಹತ್ತಿ ಬೆಂಗಳೂರಿನ ಟ್ರಾಫಿಕ್ಕನ್ನು ಆರಾಮವಾಗಿ ಬಸ್ಸಿನ...

read more
ಹೇ ನಿತಂಬಿನಿ..

ಸಿ. ಎನ್.ರಾಮಚಂದ್ರನ್ ಹೇ ನಿತಂಬಿನಿ ಕಲ್ಲಾಗಿಯೇ ಇರು ನೀ ಹೇ ನಿತಂಬಿನಿ, ಜೀವ ತಳೆದರೆ ನೀ ನಡೆದಾಡುವುದಾದರೂ ಹೇಗೆ? ಕುಂಭಸ್ತನಿಯಾಗಿ, ನಿತಂಬಿನಿಯಾಗಿ, ಬಡ ಒಡಲಿನ, ಪುಸಿ ನಡುವಿನ, ಓ ಸಾಲಂಕೃತ ಕಾಳಾಹಿವೇಣಿ, ಜೀವ ತಳೆದರೆ ನೀ ಬಸಿರುಬೇನೆಯನು ತಾಳುವುದಾದರೂ ಹೇಗೆ? ಬಿಸಿಲು ಮಳೆ ಗಾಳಿಯಲಿ, ಹಗಲು ರಾತ್ರಿಯಲಿ ನಿನ್ನ ರೂಪಿಸಿದ...

read more
ನಾನೂ ವಿಮಾನ ಏರಿದೆ..

ಗೋಪಾಲ ವಾಜಪೇಯಿ  ನಿಮ್ಮ ‘ಶಿಲ್ಲಾಂಗ್ ನಲ್ಲಿ’… ಮೊದಲ ಕಂತು ಓದಿದೆ. ನನ್ನ ಶಿಲ್ಲಾಂಗ್ ಪ್ರವಾಸ ನೆನಪಿಗೆ ಬಂತು. ಅದು 1997. ಪಿ. ವಿ. ನರಸಿಂಹ ರಾವ್ ಪ್ರಧಾನಿಯಾಗಿದ್ದ ಕಾಲ. PIBಯವರು ಕರ್ನಾಟಕದ ಒಂದಿಪ್ಪತ್ತು ಜನ ಪತ್ರಕರ್ತರನ್ನು ಪಶ್ಚಿಮ ಬಂಗಾಳ, ಅಸ್ಸಾಮ್, ಮತ್ತು ಮೇಘಾಲಯಗಳ ಪ್ರವಾಸಕ್ಕೆ ಕರೆದೊಯ್ದಿತು. ನಮಗೆಲ್ಲ...

read more
ಸ್ಯಾಂಡಲ್ ವುಡ್ ನ ಡಿಫರೆಂಟ್ ಡೈರೆಕ್ಟರ್ ಸುಮಂತ್

ನಾನಿ ವೀಕ್ಷಿಸಿದವರೆಲ್ಲ ನಿರ್ದೇಶಕ ಸುಮಂತ್ ರ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.  ಚಿತ್ರದಲ್ಲಿ ನಿರ್ದೇಶಕನ ಜಾಣ್ಮೆ, ಕಲಾವಂತಿಕೆ, ಚುರುಕುತನ ಹೊಂದಿದ್ದಾರೆ ಎಂದು ಗಾಂಧಿನಗರದಲ್ಲಿ ಕೇಳಿ ಬರುತ್ತಿರುವ ಮಾತು. ಮೂಲತಃ ಬೆಂಗಳೂರಿಗೆ ಹೊಂದಿಕೊಂಡಿರುವ ಹಳ್ಳಿಯೊಂದರ ಸುಮಂತ್ ನಿಂತರೂ ಕುಂತರೂ ಸಿನಿಮಾವನ್ನೇ ಕನವರಿಸಿ...

read more

Pin It on Pinterest

Share This