ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅಲ್ಲಿ ಹೆಕ್ಕಿದ ಮಾವಿನ ಹಣ್ಣು..
ಉಕ್ಕಿನ ಮಹಿಳೆಯ ಮನೆಯಲ್ಲಿ ಹೆಕ್ಕಿದ ಸಿಹಿ ಮಾವಿನ ಹಣ್ಣು..!! ಗಿರಿಧರ ಕಾರ್ಕಳ ಭಾರತದ ರಾಜಕೀಯ ಪರ್ವದಲ್ಲಿ ದಿ.ಇಂದಿರಾ ಗಾಂಧಿ ಯವರದೇ ಒಂದು ವಿಶಿಷ್ಟ ಅಧ್ಯಾಯ. ಸುದೀರ್ಘ ಕಾಲ ಈ ದೇಶದ ಪ್ರಧಾನಿಯಾಗಿ ಅನೇಕ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದವರು. ಜೊತೆಗೇ ಅಭಿವ್ಯಕ್ತಿ ಸ್ವಾತಂತ್ರ್ಯ ದಮನಿಸುವ ತುರ್ತು...
ಎಲೆಯಾಗುವೆ ಮತ್ತೆ..
ಸದ್ಯಕ್ಕೆ ನಾನಿರುವ ಇಂಗ್ಲೆಂಡಿನಲ್ಲಿ ಈಗ ಎಲೆ ಬೀಳುವ ಶರತ್ಕಾಲ ಋತು ವಿನತೆ ಶರ್ಮ ಕಳಚಿಕೊಂಡೆ ಕೊಂಬೆ ಕೈ ಬಿಟ್ಟಿತು ಎಂಬ ದೂಷಣೆಯಿಲ್ಲ, ತಾಯಿಂದ ಬೇರ್ಪಟ್ಟೆ, ದುಃಖವಿಲ್ಲ ಕಳಚಿಕೊಂಡೇಬಿಟ್ಟೆ, ಭಯವಿಲ್ಲ ಬೀಳುತ್ತಿದ್ದೀನಿ ಹಗುರವಾಗಿ, ತೇಲುತ್ತಾ ಹೊಸ ಗಾಳಿಯಲ್ಲಿ ಸ್ವತಂತ್ರವಾಗಿ, ಗೂಡ ತೊರೆದು ಹಾರಿಹೋದ ಹಕ್ಕಿಯಂತೆ,...
ಇವರು.. ರಾಮೇಶ್ವರಿ ವರ್ಮಾ
ಹಿರಿಯರಾದ ರಾಮೇಶ್ವರಿ ವರ್ಮಾ ಅವರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ. 'ಅವಧಿ'ಯ ಆತ್ಮೀಯರೂ, ರಂಗಭೂಮಿ ಚಳವಳಿಗೆ ಒಂದು ಘನತೆ ತಂದುಕೊಟ್ಟ ಅವರ ಬದುಕಿನ ಕಥನ ಇಲ್ಲಿದೆ. ಎನ್ ಸಂಧ್ಯಾರಾಣಿ ಅವರು ಮಾಡಿರುವ ಅನುವಾದದ ಈ ಆಯ್ದ ಪುಟಗಳನ್ನು ಅಹರ್ನಿಶಿ ಪ್ರಕಾಶನದ 'ಹುದುಗಲಾರದ ದುಃಖ' (ಸಂ : ಎಂ ಎಸ್ ಆಶಾದೇವಿ ) ದಿಂದ...
ಕ್ಯಾಮೆರಾಮನ್ ಮಾದೇವ
ಸ್ಮೈಲ್ ಪ್ಲೀಸ್ : ದೇವನೂರ ಮಹಾದೇವ ವಡ್ಡಗೆರೆ ಚಿನ್ನಸ್ವಾಮಿ ಮೊದಲೇ ಹೇಳಿ ಬಿಡುತ್ತೇನೆ ನಾನೊಬ್ಬ ಅಲೆಮಾರಿ. ನನ್ನ ಬದುಕೆ ಒಂದು ವಿಸ್ಮಯಗಳ ಸರಮಾಲೆ. ಸಧ್ಯದಲ್ಲೇ 'ಪಾಪಣ್ಣ ವಿಜಯ' ಎಂಬ ನನ್ನದೊಂದು ಪುಟ್ಟ ಪುಸ್ತಕ ಪ್ರಕಟವಾಗಲಿದೆ. ಆ ಪುಸ್ತಕದಲ್ಲಿ ಬಳಸುವ ನನ್ನ ಭಾವಚಿತ್ರವನ್ನು ನನ್ನ ಮೆಚ್ಚಿನ ಲೇಖಕ ದೇವನೂರ ಮಹಾದೇವ ತಾವೇ...
ಕ್ಲಿಕ್ ಆಯ್ತು ಕವಿತೆ: ಎದೆಯ ಕಿಚ್ಚು ದೀಪವಾಗಲಿ..
ಬಿದಲೋಟಿ ರಂಗನಾಥ್ ತಣ್ಣನೆಯ ಸಮುದ್ರ ಕತ್ತಲೆಯಲೂ ಶಾಂತವಾಗಿ ಹರಿದು ನೆಮ್ಮದಿಯಲಿ ಉಸಿರಾಡುತ್ತಿರಬೇಕಾದರೆ ಅದಾವುದು ಹಡಗಿನಲಿ ಧೀಢಿರ್ ಕಿಚ್ಚು.! ಕತ್ತಲೆಯಲಿ ಮುಳಗಿಹ ಮೌಢ್ಯವ ಬಿಟ್ಟು ಸಮುದ್ರದ ಮೇಲೆ ನಿರಾಳವಾಗಿ ಚಲಿಸುತ್ತಿರುವ ಹಡಗಿನ ಮೇಲೇಕೆ ಕಿಚ್ಚಿನ ಕಣ್ಣು ಒಂದು ದೀಪದ ಬೆಳಕಾಗಿ ಬದಲಾಗಲಿ ಹಡಗಿನ ಕೂತು ಆ ದೀಪದ ಬೆಳಕಿನಲಿ...
ಕ್ಲಿಕ್ ಆಯ್ತು ಕವಿತೆ: ಬಾಲ್ಯಕೆ ಬೆಂಕಿ ಬಿದ್ದಿದೆ!
ಶಿವದಾಸ್ ವರ್ಷ ಹರುಷದಿ ಸುರಿ ಸುರಿದಂತೆ ಹೊಳೆ ಹರಿ ಹರಿದು ನಗುವಾಗ ದೋಣಿಯಾಟಕೆ ಕೈ ಬೀಸಿ ಕರೆದಂತೆ ಹಾಳೆ ಹಿಡಿದು ಓಡ್ತಿದ್ದೆ ಅಕ್ಕನ ಜೊತೆಯಾಗ. ಮಳೆಯಿಲ್ಲ ನೀರಿಲ್ಲ ಸಂಜೆ ಸೂರ್ಯ ಸುಡುವಾಗ ಕೆಂಬಣ್ಣವೇ ಬೆಂಕಿಯಾಯಿತೆ!? ತಪ್ಪಿಯೊಮ್ಮೆ ಸುರಿದರೆ ಜಲಧಾರೆ ಒಳಗಿಂದಷ್ಟೇ ಕೇಕೆ! ಬಾಗಿಲಿಗೆ ಬೀಗ! ಹರಿದು ಮುರಿದು ಮೇಲೆ ಕೆಳಗೆ ಮಡಚಿ...
ಕ್ಲಿಕ್ ಆಯ್ತು ಕವಿತೆ: ನಾವೆ ಮುಳುಗುವುದು ಖಚಿತ
ಕಮಲ ಬೆಲಗೂರ್ ಮನದ ತುಂಬ ಕತ್ತಲು ಮುಸುಕಿದೆ ಯಾವುದೋ ಮಾಯಾ ರಾಗದ ಜಾಲದಿ ಬಂದಿತ ಏಕಾಕಿ ಮನ ಹೊರಟಿದೆ ಸಾಗರದಲೆಗಳ ನಡುವೆ ನಾವಿಕನಿಲ್ಲದ ನಾವೆಯಲ್ಲಿ ದೂರ ದಡದ ಗೂಡನರಸಿ. ಸುತ್ತಾ ನೀರು ಮೇಲೆ ನೀಲ ನಭದ ವಿಸ್ತಾರ ಬೀಸುವ ಗಾಳಿಗೆ ದೀಪದ ಕೆನ್ನಾಲಿಗೆ ನಾವೆಯ ಆವರಿಸಿ ಏಳುತ್ತಾ ಬೀಳುತ್ತಾ ಸಾಗುತ್ತಿರಲು ದೂರದಿಂದ ಅಲೆಯಲೆಯಾಗಿ ತೇಲಿ...
ಅವರು ನಮ್ಮ ಪ್ರೀತಿಯ ಅಜ್ಜ..
ಎನ್ ಆರ್ ವಿಶುಕುಮಾರ್ ಅಜ್ಜ.. ಅವರು ನಮ್ಮ ಪ್ರೀತಿಯ ಅಜ್ಜ. ಕೇವಲ ಇಂಗ್ಲಿಷ್ ಮಕ್ಕಳ ಮನೋಲೋಕದಲ್ಲಿ ಮಾತ್ರ ಅಡ್ಡಾಡುತ್ತಿದ್ದ ಮಾಂಡ್ರೇಕ್, ಬಾಂಡ್ ಲೇಡಿ ಮಾಡೆಸ್ಟಿ ಬ್ಲೆಸ್ , ಫ್ಯಾಂಟಮ್, ಡಾಬು ಇತ್ಯಾದಿ ಕಾಮಿಕ್ ಪಾತ್ರಗಳನ್ನು ಕನ್ನಡದ ಮಕ್ಕಳ ಮನೋಲೋಕಕ್ಕೂ ಕರೆ ತಂದು ಪರಿಚಯ ಮಾಡಿಸಿ ಕೊಟ್ಟ ಮಾಂತ್ರಿಕ. ಬ್ಲಿಟ್ಜ್,...
ಉಂದಾಂಡ ರಗಲೆ ಇಜ್ಜಿ…!
ರಾಜಾರಾಂ ತಲ್ಲೂರು ಆಧುನಿಕ ಮ್ಯಾನೇಜ್ ಮೆಂಟ್ ತಂತ್ರದ ಬಲುದೊಡ್ಡ ಅಸ್ತ್ರ ಎಂದರೆ ಕೈಗೆ ಬಂದ ಜವಾಬ್ದಾರಿಯನ್ನು ಇನ್ನೊಬ್ಬರ ಕೈಗೆ ದಾಟಿಸಿ ಕುಳಿತುಬಿಡುವುದು. ನಮ್ಮ ಸರ್ಕಾರಗಳ ಅಚ್ಚು-ಗಾಲಿ-ಕೀಲುಗಳಾಗಿರುವ ಐ ಎ ಎಸ್ ಅಧಿಕಾರಿಗಳು ತಮ್ಮ ತಲೆನೋವು ತಣಿಸಿಕೊಳ್ಳುವ ದಾರಿಯಲ್ಲಿ ಕಂಡುಕೊಂಡಿರುವ ಬಹಳ ಸುಲಭ ವಿಧಾನ ಎಂದರೆ ‘ಖಾಸಗೀಕರಣ’....
ಬರದ ನಾಡಲ್ಲಿ ಪಯಣ..
ಬಿಸಿಲಿನ ಝಳ ಹೆಚ್ಚುತ್ತಿದೆ. ಮತ್ತೊಮ್ಮೆ ಬರಗಾಲ ಬದುಕನ್ನು ದುಸ್ತರಗೊಳಿಸಿದೆ. ಸಾವಿರಾರು ಕೋಟಿ ಮೌಲ್ಯದ ಬೆಳೆನಷ್ಟವಾಗಿದೆ. ಕುಡಿವ ನೀರಿಗು ಪರದಾಟ ಪಡುವ ಸ್ಥಿತಿ ನಿರ್ಮಾಣವಾಗಿದೆ. ಎರಡು ಜಿಲ್ಲೆಗಳನ್ನು ಹೊರತುಪಡಿಸಿದ್ರೆ ಮತ್ತೆಲ್ಲ ಜಿಲ್ಲೆಗಳು ಬರಪೀಡಿತ. ಬಿಸಿಲ ಝಳ ಮೈಸವರಿ ಬರಗಾಲದ ಜಿಲ್ಲೆಗಳ ಪಯಣದ ನೆನಪಾಯಿತು. ಬರಗಾಲದಲ್ಲಿ...
BIG BREAKING NEWS ರಾಜ್ಯೋತ್ಸವ ಪ್ರಶಸ್ತಿ ಪ್ರಕಟ : ಕಂಪ್ಲೀಟ್ ಲಿಸ್ಟ್ ಇಲ್ಲಿದೆ
ಕ್ಲಿಕ್ ಆಯ್ತು ಕವಿತೆ: ಬೂದಿಯಾಗುವ ಮೊದಲು
ರೇಣುಕಾ ರಮಾನಂದ ಬೂದಿಯಾಗುವ ಮೊದಲು ಒಂದಷ್ಟು ಬೆಳಕಾಗು ಎನ್ನುತ್ತ ಮೊನ್ನೆಯ ಬೆಳದಿಂಗಳ ಬಗ್ಗೆ ಈ ಮೊದಲು ಬಣ್ಣಿಸಿದವರೆಲ್ಲ ಬೆಂಕಿ ಇಟ್ಟಿದ್ದಾರೆ ಒಡಲಿಗೆ ತೇಲುತ್ತಲಿದ್ದೇನೆ ಮುಳುಗುವ ಅನಿವಾಯ೯ತೆಯೊಂದಿಗೆ ಜೊತೆಗೆ ಉರಿಯುತ್ತಲೂ. ಅಗಣಿತ ನೀರ ನೀಲಿಯನ್ನೂ ಬೆಳ್ಳನೆಯ ಮುಗಿಲಂಚನ್ನೂ ಕೆಂಪಾಗಿಸಲು ಇಷ್ಟೇ ಇಷ್ಟು ಜ್ಜಾಲೆ ಸಾಕು...
ಕ್ಲಿಕ್ ಆಯ್ತು ಕವಿತೆ: ದೋಣಿಯ ಕಿಚ್ಚು ಈ ಬಾಳು
ಸರೋಜಿನಿ ಪಡಸಲಗಿ ಕಡಲ ಮೇಲೆ ತೇಲುತಿಹ ಕಾಗದದ ದೋಣಿಯಲಿ ಹಚ್ಚಿಟ್ಟ ಕಿಚ್ಚಂತೆ ಈ ಬಾಳು ಅಲ್ಲವೇ. ದೋಣಿಯ ಕಾಗದಕೆ ನೀರು ತಾಗದಂತೆ ಹಚ್ಚಿಟ್ಟ ಕಿಚ್ಚು ದೋಣಿಯ ಕಾಗದವ ಸುಡದಂತೆ ಮಾಡುವ ದೊಂಬರಾಟ ಹುಚ್ಚು ಹೋರಾಟ ಹೊಯ್ದಾಡೋ ಈ ಬಾಳು ತಾನಲ್ಲವೇ. ತೇಲುವ ದೋಣಿಯ ಕಾಗದಕೆ ನೀರು ತಾಗಿದರೆ ಅದರಾಕಾರ ಕೆಟ್ಟು ಮುಳುಗೀತು ಜೋಕೆ...
ಕ್ಲಿಕ್ ಆಯ್ತು ಕವಿತೆ:: ನೆತ್ತಿಮ್ಯಾಲ ಬೆಂಕಿ..
ಬಸವಣ್ಣೆಪ್ಪ ಕಂಬಾರ ಕಾಗದದ ದೋಣಿಯೆ ಯಾಕಿಂತಾ ಮೌನ...? ಬೆಂಕಿ ನೆತ್ತಿಮ್ಯಾಲ ಇಟಗೊಂಡ ಇದೆಂತಾ ಪಯಣಾ...? ನಿನ್ನ ಹಾದಿಗೆ ಬೆಳಕು ಬೇಕು ಖರೇ ಆದರ ಹಕೀಕತ್ತ ಇರೋದ ಬ್ಯಾರೇ ನಾನು ಘನ ಮೌನ, ಹಾಗು ಕತ್ತಲು ನಿನ್ನ ಎರಿದವ ಬೆಂಕಿಯೊ.... ಬೆಳಕೊ..... ಊರು ಬಿಟ್ಟು ಹೊರಟವನಿಗೆ ನೀ ಹೆಗಲಾಗಿರುವೆ ಕೆಂಪು ಹಗಲಾಗಿರುವೆ ಅಲೆಯೊಳು ಕೆಂಪು...
ಕ್ಲಿಕ್ ಆಯ್ತು ಕವಿತೆ: ತಣ್ಣನೆಯ ಕವಿತೆ ಹೆಜ್ಜೆ ಸೋಕಿದರೆ..
ಸಮುದ್ರದ ಎದೆಯಲ್ಲಿನ ಕಿಚ್ಚು ದೀಪವಾಗಲಿ.. ಬಿದಲೋಟಿ ರಂಗನಾಥ್ ತಣ್ಣನೆಯ ಸಮುದ್ರ ಕತ್ತಲೆಯಲೂ ಶಾಂತವಾಗಿ ಹರಿದು ನೆಮ್ಮದಿಯಲಿ ಉಸಿರಾಡುತ್ತಿರಬೇಕಾದರೆ ಅದಾವುದು ಹಡಗಿನಲಿ ಧೀಢಿರ್ ಕಿಚ್ಚು.! ಕತ್ತಲೆಯಲಿ ಮುಳಗಿಹ ಮೌಢ್ಯವ ಬಿಟ್ಟು ಸಮುದ್ರದ ಮೇಲೆ ನಿರಾಳವಾಗಿ ಚಲಿಸುತ್ತಿರುವ ಹಡಗಿನ ಮೇಲೇಕೆ ಕಿಚ್ಚಿನ ಕಣ್ಣು ಒಂದು ದೀಪದ ಬೆಳಕಾಗಿ...
ಕರುಳುಬ್ಬರದ ಹೊಂಬೆಳಕು..
ಹೆಚ್ ಆರ್ ಸುಜಾತಾ ಮಾರಮ್ಮನ ಸಣ್ಣ ಗುಡಿ. ಮುಂದೆ ದಪ್ಪನೆ ಸೌದೆ ಕೊರಡಿನ ಬೆಂಕಿ ಸಣ್ಣಗೆ ಮಂಗಳಾರತಿಯಂಗೆ ಉರಿಯುತ್ತಾ, ಸೌದೆ ತುದೀಲಿ ಹೊಗೆ ಆಡೋ ಹೊಗೆ ಅನ್ನದು ವಣಗಿದ ಹೊಟ್ಟೆಲಿ ಇಷ್ಟು ದಿನ ಮುಚ್ಚಿಟ್ಟಿದ್ದ ಮರದ ಸುವಾಸನೆ ಜತಿಗೆ ಧೂಪಾರತಿಯಂಗೆ ಮೇಲೇಳ್ತಾ ಇತ್ತು. ಗುಡಿ ಮುಂದಿನ ಸಂಪಿಗೆ ಮರ, ಜತೆಲಿದ್ದ ಗೋಣಿಮರ ಎರಡೂವೆ...
ಸಂತೆಯ ಸರಕಾಗದೇ ಉಳಿದ ಗಟ್ಟಿ ಕಾಳುಗಳು
ಡಿ.ಎಸ್.ರಾಮಸ್ವಾಮಿ ನೆಪಕ್ಕೆ ಮಾತ್ರ ಮುಗುಳ್ನಗುವುದಿಲ್ಲ ನಾವು ನಗುತ್ತಲೇ ಇರುತ್ತೇವೆ, ಬೆದರುತ್ತದೆ ಸಾವೂ ತಡಕಾಡುತ್ತೇವೆ ನಿಮ್ಮಲ್ಲಿ ಅಂತರ್ಜಲದ ತಾವು ತಡಬಡಾಯಿಸಬೇಕು ನೋಡಿಕೊಂಡು ನಿಮ್ಮನ್ನೇ ನೀವು ಇವು ಮಮತಾ ಅರಸೀಕೆರೆ ಅವರ 'ಸಂತೆ ಸರಕು' ಸಂಕಲನದ ' ಕೊಲ್ಲದಿರಲಿ ಹಗೆ' ಕವಿತೆಯ ಸಾಲುಗಳು. ಮೇಲ್ನೋಟಕ್ಕೆ...
ನನ್ನ ನ್ಯಾನೋ..
ಕೃಷ್ಣ ದೇವಾಂಗಮಠ ಬಡತನ ಈತ ತನ್ನ ಬಕಾಸುರ ಉದರ ತುಂಬಿಸಿಕೊಳ್ಳಲು ಅವನ ಪೀಚಲು ಹೊಟ್ಟೆ ಮೇಲೆ ಹೊಡೆದ ಆತ ಹೆಂಡತಿ ಮಕ್ಕಳ ಮುಖವನ್ನೊಮ್ಮೆ ನೋಡಿ ಆಕಾಶವೇ ತಲೆಯ ಮೇಲೆ ಬಿದ್ದಂತೆ ಕೈ ಹೊತ್ತು ಕುಳಿತ ನಿಜದ ಸಾವು ಜನರೆಲ್ಲಾ ಅವಳು ಎಷ್ಟೇ ಹೇಳಿದರೂ ಕೇಳದೆ ಅವಳಿಗೆ ಸೂಳೆ ಪಟ್ಟ ಕಟ್ಟಿದರು ಆದರೀಗ ಅವಳು ನಿಜಕ್ಕೂ ಸೂಳೆಗಾರಿಕೆ ಹೆಂಗಸು...
ಕಣ್ಣಿಗೆ ಮಣ್ಣೆರಚುವ ಸಂಪಾದಕರು ಬೇಕಾಗಿದ್ದಾರೆ..
ಟಿ.ಕೆ.ತ್ಯಾಗರಾಜ್ ಕನ್ನಡ ಸುದ್ದಿ ವಾಹಿನಿಯೊಂದಕ್ಕೆ ಪ್ರಧಾನ ಸಂಪಾದಕರು ಬೇಕಾಗಿದ್ದಾರೆ ಮಾರ್ಕೆಟಿಂಗ್ ನಲ್ಲಿ ಅನುಭವ ಇರುವವರಿಗೆ ಆದ್ಯತೆ. ಕನ್ನಡ,ಇಂಗ್ಲಿಷ್ ಭಾಷೆ ಅರ್ಧಂಬರ್ಧ ಅಂದರೆ ಕಂಗ್ಲಿಷ್ ಬಂದರೆ ಸಾಕು. ಪತ್ರಿಕೋದ್ಯಮ ಅನುಭವ ಇರುವವರು ಅರ್ಜಿ ಸಲ್ಲಿಸುವಂತಿಲ್ಲ. ವೃತ್ತಿ ನಿಷ್ಠೆ, ಆದರ್ಶ, ಪುರೋಗಾಮಿ ಚಿಂತನೆ, ಸಾಮಾಜಿಕ...
ಅಂತೂ ಇಂತೂ ದೀಪ ಹಚ್ಚಿ..
ಕತ್ತಲೆ-ಬೆತ್ತಲೆ (ದೀಪಾವಳಿ-ನರಕಾಸುರ ಬಲಿ) ಅನಿಲ್ ತಾಳಿಕೋಟೆ/ ನಾರ್ಥ್ ಕ್ಯಾರೊಲಿನ, USA ಕತ್ತಲೆ ಬೆತ್ತಲೆ ಇರುವದೇ ಬೈ ಡಿಸೈನು ಬೆಳಕೇಕೆ ಬೇಕು? ಕತ್ತಲೊದ್ದೋಡಿಸಲು ಬಟ್ಟೆ ಏಕೆ ಬೇಕು -ಬೆತ್ತಲು ಮುಚ್ಚಿಡಲು ಈಗೆಲ್ಲಾ ಉಲ್ಟಾ-ಪಲ್ಟಾ ಬೆಳಕು ಬೇಕು - ಹೊನಲು-ನೆರಳಿನಾಟಕ್ಕೆ, ಷಟರ್ರು, ಬ್ಲೈಂಡು, ಕರ್ಟನ್, ಮೆಶ್ ಗಳಿಂದ ಮುಚ್ಚಿದ...
ದೀಪಾವಳಿ ಎಂಬುದು..
ಜಿ ಎನ್ ನಾಗರಾಜ್ ದೀಪಾವಳಿ- ದೀಪಗಳ, ಪಟಾಕಿಯ, ಲಕ್ಷ್ಮಿ ಪೂಜೆಯ, ನರಕಾಸುರ ವಧೆಯ, ಬಲಿ ಚಕ್ರವರ್ತಿಯ, ಗೋಪೂಜೆಯ ಹಬ್ಬ ಆದದ್ದು ಹೇಗೆ? ದೇಶದ ಹಲವು ಭಾಗಗಳ ಆಚರಣೆಗಳ ಮೊತ್ತ -ಅನೇಕ ರೀತಿಯಲ್ಲಿ ವಿಶಿಷ್ಠ ಹಬ್ಬ. ಒಂದು ಸಂಕೀರ್ಣ - ಕಾಂಪ್ಲೆಕ್ಸ್ ಆದ ಹಬ್ಬ. ವಿವಿಧ ಪ್ರದೇಶದ ಹಲವು ಹಬ್ಬಗಳು, ಆಚರಣೆಗಳು ಕೂಡಿ ಹೆಣೆದುಕೊಂಡ ಬೆಳೆದ,...
