ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಶ್ರೀ ವಿದ್ಯಾ ಸಿಂಗಾಪುರ್ ಡೈರಿ- ಬಾಂಬ್ ಶೆಲ್ಟರ್
ಶ್ರೀ ವಿದ್ಯಾ ಇದರ ಹೆಸರು ಬಾಂಬ್ ಶೆಲ್ಟರ್ ( Bomb Shelter ). ಇಡೀ ಮನೆಯಲ್ಲಿ ಒಂದು ಕೋಣೆ ಮಾತ್ರ ಈ ಹೆಸರಿನಿಂದ ಕರೆಯಲ್ಪಡುತ್ತದೆ. ಬಲವರ್ಧಿತ ಗೋಡೆಗಳು, ಛಾವಣಿಗಳು ಮತ್ತು ಭಾರವಾದ ಉಕ್ಕಿನ ಬಾಗಿಲುಗಳು ಈ ರೂಮಿನ ವೈಶಿಷ್ಟ್ಯ. ಇದು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರಕ್ಷಣೆ ಪಡೆಯಲೆಂದೇ ನಿರ್ಮಿತ. ವಿಶೇಷವಾಗಿ ಬಾಂಬ್...
ವಿಧಾನ ಸೌಧದಲ್ಲಿ ಮಕ್ಕಳಿದ್ದಾರೆ…
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
ಖಾಲಿ ಫ್ರೇಮಿನಲ್ಲಿ ಕಂಡ ಬಣ್ಣ
‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....
ಮೈ ಮನಸ್ಸೆಲ್ಲಾ ಇದೀಗ ಬೊಬ್ಬೆಗಳು!
ಸೌಮ್ಯಶ್ರೀ ಎ ಎಸ್ ಮನದಲಿ ಕಟ್ಟಿಗೆ ತುಂಬಿಕೊಂಡಿತುಕಡ್ಡಿ ಗೀರಿ ಬೆಂಕಿ ತಗುಲಿಸಿ ಗಾಳಿ ಊದಿದೆಇದೀಗ ನಂದಿಸಿದರೂ ತಣಿಯದೇಧಗಧಗನೆ ಉರಿಯುತ್ತಲೇ ಇದೆ ನೀನು ನನ್ನತ್ತಲೇ ಸುಳಿದಾಡಿರಬಹುದೆಂಬಸಂಶಯ!ನಿನ್ನ ಉಸಿರಿನ ಗಾಳಿ ತಾಗಿನನ್ನದೆಯಲ್ಲಿ ಒಲವೆಂಬದೀಪ ಹೊತ್ತಿ ಉರಿಯುತಿದೆ! ಅದೇನೋ ಅದೆಷ್ಟು ಮರೆವಿನನೀರು ಸುರಿದರೂ, ತಣಿದಂತೆ...
ಎಚ್ ಎಸ್ ಶಿವಪ್ರಕಾಶರ ‘ಯಾವ ಶಹರು ಯಾವ ಬೆಳಕು’
ಸದ್ಯದ ಉರಿಯಲ್ಲಿ ಬೆಳಗುವ ಕವಿತೆಗಳು ಎಚ್ ಆರ್ ರಮೇಶ ಹಿಂದೆಂದಿಗಿಂತಲೂ ಕವಿತೆ ಇಂದು ಅತಿ ಅವಶ್ಯಕವೆನ್ನುವುದು ಯಾವತ್ತಿಗೂ ಸಲ್ಲುವ ಹೇಳಿಕೆ. ಈ ಹೇಳಿಕೆಯಲ್ಲಿಯೇ ಸದ್ಯದ ಪ್ರಖರತೆ, ಪ್ರಸ್ತುತತೆ, ಮತ್ತು ಪ್ರಾಮುಖ್ಯತೆ ಇದೆ. ಸದ್ಯವನ್ನು ಕಾಣುವುದು ಎಂದರೆ ಇಡೀ ಬದುಕನ್ನೇ ಕಾಣುವುದು. ಈ ಬಗೆಯ ಕಾಣುವಿಕೆಯನ್ನು ಎಚ್. ಎಸ್....
ಕಲಬುರ್ಗಿ ರಂಗಾಯಣದಲ್ಲಿ…
ಜೀವ ಹೋಗುವ ಹಾದಿ
ಚಂದ್ರು ಎಂ ಹುಣಸೂರು ನೆನ್ನೆ ಕೊಲ್ಲಲ್ಪಟ್ಟ ನಾನುಯಾರಿಂದ ಕೊಲ್ಲಲ್ಪಟ್ಟೆ ಎಂಬತನಿಖೆಯಾಗಬೇಕೆಂದು ಒತ್ತಾಯದಲ್ಲಿದ್ದೇನೆಜೀವಂತ ಇರುವಾಗನಿನ್ನಿಂದ ಎಷ್ಟೊಂದು ಸುಖವನ್ನು ಅನುಭವಿಸಿದೆಪ್ರತೀ ಕ್ಷಣ ಮತ್ತು ಈಗಆದರೆ ಕೊಲ್ಲಲ್ಪಟ್ಟು ದೂರ ದೂರ ನಿಲ್ಲುತ್ತಿದ್ದೇನೆಮತ್ತೊಂದು ಹುಟ್ಟಿಗೆಮತ್ತೊಂದು ಕೊಲೆಗೆ ಹೇಗೆ ಕೊಲ್ಲುತ್ತಾರೆಮತ್ತು ಜೀವ...
ಇಂದು ಕೆ ಎಸ್ ನ ಟ್ರಸ್ಟ್ ಕೃತಿ ಬಿಡುಗಡೆ
‘ಮಹಾಕಾವ್ಯ’ಗಳ ಬಗ್ಗೆ ಚರ್ಚೆಯಾಗಲಿ ..
ಸುಬ್ರಾಯ ಚೊಕ್ಕಾಡಿ ವೀರಪ್ಪ ಮೊಯ್ಲಿಯವರ ಬಾಹುಬಲಿ ಕುರಿತಾದ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಈ ಸಲದ ಪುರಸ್ಕಾರ ಲಭಿಸಿದೆ. ಇದರೊಂದಿಗೆ ಮಹಾಕಾವ್ಯಗಳ ಕುರಿತಾದ ಮರು ಚರ್ಚೆಯೊಂದು ನಡೆಯಬಹುದೆಂಬ ಅಥವಾ ನಡೆಯಬೇಕೆಂಬ ನಿರೀಕ್ಷೆಯಲ್ಲಿ ನಾನಿದ್ದೇನೆ. ಹಿಂದೆ ನಮ್ಮಲ್ಲಿ ಭಾವಗೀತೆಗಳ ಯುಗ ಆರಂಭವಾದಾಗ ಮತ್ತು ಮುಂದುವರಿದು...
Pic by Mahat Hasan
ಅಕ್ಷಯ ಪಂಡಿತ್ ಗೆ ‘ಈ ಹೊತ್ತಿಗೆ’ ಕಥಾ ಪ್ರಶಸ್ತಿ
ಈ ಹೊತ್ತಿಗೆ ಕಥಾ ಸ್ಪರ್ಧೆಗಳ ಫಲಿತಾಂಶವನ್ನು ಘೋಷಿಸಲಾಗಿದ್ದು ಸಾಗರದವರಾದ ಅಕ್ಷಯ ಪಂಡಿತ್ ಅವರ ಅಪ್ರಕಟಿತ ಕಥಾಸಂಕಲನ, ‘ಬಯಲಲಿ ತೇಲುತ ತಾನು’, ೨೦೨೧ರ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ಯನ್ನು ಪಡೆದುಕೊಂಡಿದೆ. ಪ್ರಶಸ್ತಿಯು ೧೦ ಸಾವಿರ ನಗದು ಹಾಗು ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಅಕ್ಷಯ ಪಂಡಿತ್ ಪ್ರಸ್ತುತ ಬೆಂಗಳೂರಿನ...
ನಾಟಕಮನೆಯಲ್ಲಿ ವಿಶ್ವರಂಗಭೂಮಿ ದಿನಾಚರಣೆ…
ಕೋಡಂಗಿಗೆ ಇನ್ನು ಕೆಲಸವಿಲ್ಲ…
ಜಿ ಎನ್ ಮೋಹನ್ 'ಕೋಡಂಗಿಗೆ ಇನ್ನು ಕೆಲಸವಿಲ್ಲ'- ನಾನು ಬರೆದ ಕವಿತೆ ಇದು. ಜಗತ್ತೇ ಕೋಡಂಗಿಗಳಂತೆ ಕುಣಿಯುವವರಿಂದ ತುಂಬಿ ಹೋದಾಗ ನಿಜವಾದ ಕೋಡಂಗಿಗೇನು ಕೆಲಸ?. ಈ ಪ್ರಶ್ನೆ ನನ್ನ ಮುಂದೆ ಮತ್ತೆ ಬಂದದ್ದು ಬಿ ಎನ್ ಮಲ್ಲೇಶ್ ಬರೆದ 'ತೆಪರೇಸಿ ರಿಟರ್ನ್ಸ್' ಪುಸ್ತಕವನ್ನು ಹಿಡಿದು ಕೂತಾಗ. 'ಕಗ್ಗತ್ತಲ ಕಾಲದಲ್ಲೂ...
ಡಿ ಆರ್ ನಾಗರಾಜ್ 67…
ಸರೋಜಿನಿ ಪಡಸಲಗಿ ಹೊಸ ಕವಿತೆ- ‘ರೆ’…….
ಸರೋಜಿನಿ ಪಡಸಲಗಿ ಬೆಳ್ಳಿ ಬೊಟ್ಟು ಕೋದ ನಿಶೆಯ ಸೆರಗು ಹಾಸಿಬಳುಕೋ ಬಳ್ಳಿ ಮಡಿಲು ಮೊಗ್ಗು ತುಂಬಿ ಸೂಸಿಸ್ವಚ್ಛ ಮುಗಿಲ ಬಯಲ ಪೂರ್ಣಚಂದ್ರ ಬೆಳಗಿಚಂದಿರನ ಹಾಲಬೆಳಕಿನ ಬೆಳದಿಂಗಳು ನಾನಾದ'ರೆ'…… ಕೊಳದೊಡಲ ನೀಲ ಸಲಿಲ ಮೊಗದ ಮೇಲೆಅರಳಿ ನಿಂದ ತಾವರೆಯ ಮೃದುಲ ಸೊಬಗಿನ್ಹಾಸುದಡದಂಚಿನುದ್ದಕೂ ಹಚ್ಚನೆ ಹಸಿರು ಮೆತ್ತೆ ಬೀಸಿಹಸಿರು ಮೆತ್ತೆ...
Pic by Chandan Singh Chauhan
ಅರಿವು
ಎಚ್ ಆರ್ ರಮೇಶ ಆಗುತ್ತಿರುವಾಗ ಇರುವುದೇ ಅದೃಷ್ಟ(ನಿಜ, ಅದೃಷ್ಟವೆನ್ನುವುದು ಲೋಕದ ಭ್ರಮೆ);ಆಗುತ್ತಿರುವಾಗ ಪ್ರಕಟವಾಗುವುದರೊಳಗೆ ಸೇರಿಕೊಳ್ಳುವುದುಸತ್ಯ ಮತ್ತು ಸೌಂದರ್ಯಗಳಲಿ ಮೀಯುವುದೇ ಆಗಿದೆ,ಆಗುವಾಗ ಆತಂಕವಿಲ್ಲ, ಏಕೆಂದರೆ ಅಲ್ಲಿ ಉದ್ದೇಶವೇ ಇಲ್ಲ,ಮತ್ತು ಗುರಿಯೆನ್ನುವುದೇ ಇಲ್ಲ;ಕಾರಣ ಕೇಳಿದರೆ ಆಗುತ್ತಿರುವುದು ಆಗಿಯೇ...
BREAKING NEWS: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ – ‘ಅಕ್ಷಿ’ಗೆ ಪ್ರಶಸ್ತಿ ಗರಿ
ಕನ್ನಡದ 'ಅಕ್ಷಿ' ಸಿನಿಮಾ ಹಾಗೂ ತುಳುವಿನ 'ಪಿಂಗಾರ' ಸಿನಿಮಾ 67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ಪಿ ಆರ್ ರಾಮದಾಸ ನಾಯ್ಡು ಅವರು ಬರೆದ 'ಕನ್ನಡ ಸಿನಿಮಾ ಜಾಗತಿಕ ಸಿನಿಮಾ. ವಿಕಾಸ, ಪ್ರೇರಣೆ, ಪ್ರಭಾವ' ಕೃತಿಗೆ 67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಅಮೋಘವರ್ಷ ಜೆ ಎಸ್ ನಿರ್ಮಿಸಿರುವ...
ಮತ್ತೆ ರಂಗಾಗಿದೆ ಗುಲ್ಮೊಹರ್..
ಸರೋಜ ಪ್ರಶಾಂತಸ್ವಾಮಿ ಮತ್ತೆ ರಂಗಾಗಿದೆ ಗುಲ್ಮೊಹರ್ ನಿನ್ನ ನೆನಪಾಗಲುಕತ್ತೆತ್ತಿ ಸುತ್ತಲೂ ಹುಡುಕಾಡಿದೆ ನಿನ್ನ ನೆನಪಾಗಲು ಬತ್ತಿದ ಹೊಳೆಯ ಒರತೆಯಲೆಲ್ಲೋ ಜಲ ಒಸರುತಿದೆಎದೆಹುತ್ತದಲಿ ಭಾವ ಮಿಸುಕಾಡಿದೆ ನಿನ್ನ ನೆನಪಾಗಲು ಬೋಳಾದ ಹೃದಿವೃಕ್ಷ ಮರಳಿ ಮುಗುಳೊಡೆದು ಚಿಗುರುತಿದೆಹಾಯಾಗಿ ಹಸುರಾಗಿ ಪಸರಿಸುತಿದೆ ನಿನ್ನ ನೆನಪಾಗಲು ಬಯಲು...
ಬಕ ಧ್ಯಾನಿಗಳು
ಬೆಂ ಶ್ರೀ ರವೀಂದ್ರ ನಿಮಗಾಗಿ ಯಾರೂ ಅಳುವುದಿಲ್ಲಅವರು ಅವರಿಗಾಗಿಯೇ ಅಳುತ್ತಾರೆನಿಮಗಾಗಿ ಯಾರೂ ಆಡುವುದಿಲ್ಲಅವರು ಅವರಿಗಾಗಿಯೇ ಆಡುತ್ತಾರೆ ನಿಮಗಾಗಿ ಯಾರೂ ಬಾಯಾರುವುದಿಲ್ಲಅವರು ಅವರಿಗಾಗಿಯೇ ಬಾಯಾರುತ್ತಾರೆನಿಮಗಾಗಿ ಯಾರೂ ಕೃಷಿಕರಾಗುವುದಿಲ್ಲಅವರು ಅವರಿಗಾಗಿಯೆ ಕೃಷಿಕರಾಗುತ್ತಾರೆ ಕನಸು ಕಂಡ ಕಂಗಳು ನಿಮ್ಮದಾದರೆಆಡುವ ನುಡಿ...
ಶ್ರೀ ವಿದ್ಯಾ ಸಿಂಗಾಪುರ ಡೈರಿ- ಟೆಕ್ – ಕೊ
ಶ್ರೀ ವಿದ್ಯಾ ಇದರ ಹೆಸರು ಟೆಕ್ - ಕೊ ( Tek - Ko). ಅಂದರೆ ಬಿದಿರಿನ ಕಂಬ. ಸಿಂಗಾಪುರದಲ್ಲಿ ಇದು ಬಟ್ಟೆ ಒಣಗಿಸಲು ಇರುವ ವ್ಯವಸ್ಥೆ. ಇದಕ್ಕಾಗಿ ಅಡುಗೆ ಮನೆಯ ಕಿಟಕಿಯ ಹೊರಭಾಗದ ಗೋಡೆಯಲ್ಲಿ ರಂಧ್ರಗಳನ್ನು ಮಾಡಲಾಗಿರುತ್ತದೆ. ನಿಯಮದ ಪ್ರಕಾರ ಇದು ಕನಿಷ್ಟ ೨.೧m ಉದ್ದ ಹಾಗೂ ೨೮ mm ಡಯಾಮೀಟರ್ ಹೊಂದಿರಬೇಕು. ಈ ತೂತುಗಳಲ್ಲಿ ೯ ಅಡಿ...





















