ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ತೇಜಸ್ವಿಯವರಿಗೆ ನಮಸ್ಕಾರ!

ತೇಜಸ್ವಿಯವರು ಮೀನಿನ ಶಿಕಾರಿಗೆ ಎದ್ದು ಹೊರಟವರಂತೆ ದಿಢೀರನೆ ಹೊರಟು ಹೋಗಿದ್ದಾರೆ. ಆದರೆ ವಿಸ್ಮಯವಾಗಿ, ಮೂಡಿಗೆರೆಯ ತನ್ಮಯಿ ಪಥಿಕನಾಗಿ ಇಲ್ಲೇ ನಡೆದಾಡುತ್ತಿದ್ದಾರೆ. ಕನ್ನಡ ಟೈಮ್ಸ್ ಪತ್ರಿಕೆ ತೇಜಸ್ವಿ ಗಳಿಗೆಗಳನ್ನು ಹಿಡಿದಿಡಲೆಂದೇ ಪ್ರತಿ ಸಂಚಿಕೆಯ ಎರಡನೇ ಪುಟ ಮೀಸಲಿರಿಸಿದೆ. ಅಲ್ಲಿ ಒರತೆಯಂತೆ ಉಕ್ಕುತ್ತಿರುವ ನೆನಪುಗಳು ಆ...

read more
ಅಂಗ್ಡಿ ರಂಗಿಯ ಆಲಿಂಡಿಯಾ ರೇಡಿಯೋ

ವಿಜಿ ಅಂಗ್ಡಿ ರಂಗಿಯೆಂದೊಡನೆ ಮೊದಲು ನೆನಪಾಗುವುದು ಅವಳ ಅಂಗಡಿ. ಅನಂತರ ನೆನಪಾಗುವುದು ಅವಳ ಬಾಯಲ್ಲಿನ ಕವಳದ ರಂಗು. ಅಂಗ್ಡಿ ರಂಗಿಯೆನ್ನುವಾಗ ಕಡೆಯಲ್ಲಿ ನೆನಪಾಗುವುದು ಮೌನ. ಕಿವಿನಿಮಿರಿಸುವಂತೆ ಮಾಡುವ ಮೌನ. ಅವಳಿಗೂ ಈ ಮೌನ ನೆನಪಾಗುವುದು ಕಡೆಯಲ್ಲೇ. ಎಲ್ಲಾ ಕಥೆ ಮಾತಾಡಿ ಮುಗಿಸಿದ ನಂತರ, "ಕಂಡೋರ ಸುದ್ದಿ ನಮಗ್ಯಾಕೇ ಅವ್ವ"...

read more
ತನ್ನ ಬಿಚ್ಚಿಟ್ಟ ರಾತ್ರಿಯ ಎದುರು

ಅನ್ವಯ ನಗರದೊಳಗಿಂದ ಹಾದು ಹೋಗುವ ಟ್ರಕ್ಕುಗಳ ಸದ್ದಿನಲ್ಲಿ ನೆತ್ತರ ನಡೆ ಕದಡದಿರುವಂತೆ ನೋಡಿಕೊಳ್ಳುವುದು ಎಷ್ಟೊಂದು ಕಷ್ಟ! ಬಂಡಿಯನ್ನೆಳೆವ ಜಾನುವಾರುಗಳು ವಿಚಲಿತಗೊಳ್ಳದಂತೆ ಮಾಡುವುದು ಎಷ್ಟೊಂದು ಕಷ್ಟ! ಯಾವ ಪ್ರೇರಣೆ, ಯಾವ ಭರವಸೆ, ಯಾವ ರುಷುವತ್ತು, ಯಾವ ಬೆದರಿಕೆ ಶಾಂತವಾಗಿರಿಸೀತು ಅವನ್ನು? ಆದರೆ ಅವು ಶಾಂತವಾಗಿವೆ. ಕಮಾನು...

read more
ಅಪಾರ ಎಂಬ ಗಂಭೀರ ತುಂಟ

"ಅಪಾರ" ಎಂಬುದು ಅಪಾರ ಅವರ ಪೆನ್ ನೇಮ್.  ಹತ್ತಿರದ ಮಿತ್ರರಿಗೂ "ರಘು" ಎಂದರೆ ಗೊತ್ತಾಗದಷ್ಟು ರಘುವಿನ ಪೆನ್ ನೇಮ್ ಫೇಮಸ್ಸು. ಗೆಳೆಯರಿಗೆಲ್ಲ ಅಪಾರ ಇಷ್ಟವಾಗುವುದು ಮಹಾ ತುಂಟತನದಿಂದ. ಹೊಟ್ಟೆ ಹುಣ್ಣಾಗಿಸಬಲ್ಲಷ್ಟು ನಗಿಸುವಂಥ ಜೋಕು ಹೇಳಿಯೂ, ಏನೂ ತಿಳಿಯದ ಪರಮ ಮುಗ್ಧನಂತೆ ನಗುವವರನ್ನು ನೋಡುತ್ತ ಗಲ್ಲಕ್ಕೆ ಕೈ ಹಚ್ಚಿ...

read more
ಅಸಾಧಾರಣ ಕಥೆಗಳ ದಂಡೆಯಲ್ಲಿ ನಿಂತಿದ್ದೇವೆ

ಸರಯೂ ಚೈತನ್ಯ ಕೇಳು ಜನಮೇಜಯ... ಕಥನ ಸಂಸ್ಕೃತಿಯ ಅನನ್ಯ ರೂಪಕದಂತಿದೆ ಈ ಸೊಲ್ಲು. ಪ್ರಭುತ್ವವನ್ನು ಮಣಿಸುವ, ಮೀರುವ, ತಿದ್ದುವ, ನಿರ್ದೇಶಿಸುವ ಮತ್ತು ಲೋಕಜ್ಞಾನವನ್ನು ಅದಕ್ಕೆ ಕೊಡುವ ಧ್ಯಾನ ಹಾಗೂ ಧ್ಯಾಸದಲ್ಲಿ ಕಥನದ ಪರಂಪರೆಯಿರುವುದು. ಅದಕ್ಕಿಂತಲೂ ಮಿಗಿಲಾಗಿ, ಅಬಾಧಿತ ನಿಕಟತೆಯೆಂಬಂತೆ ಸಂಸ್ಕೃತಿಯೇ ಒಂದು ಕಥನವೂ, ಕಥನವೇ...

read more
ನಾವೆಲ್ಲ ಗಮನಿಸಬೇಕಾದ ಒಂದು ಪತ್ರಿಕೆ ಬಗ್ಗೆ

ಕನ್ನಡ ಪತ್ರಿಕೋದ್ಯಮದಲ್ಲಿ ಶ್ರದ್ಧೆ ತುಂಬಿಕೊಂಡ ದುಡಿಮೆಗೆ ಬರವಿಲ್ಲ. ಆ ದಾರಿಯಲ್ಲಿ ಹೊಸ ಹೊಣೆಗಾರಿಕೆಯ ನೊಗ ಹೊತ್ತು ಸಾಹಸಿ ತಂಡವೊಂದು ಹೊರಟಿದೆ. ಕನ್ನಡ ಟೈಮ್ಸ್ ಎಂಬ ಹೆಸರಿನಲ್ಲಿ ಬೆಂಗಳೂರಿನಿಂದ ವಾರಪತ್ರಿಕೆಯೊಂದು ಕಳೆದ ಫೆಬ್ರವರಿಯಿಂದ ಬರುತ್ತಿದೆ. ಕವಿ, ಕಥೆಗಾರ ಡಾ. ನಟರಾಜ್ ಹುಳಿಯಾರ್ ಈ ಸಾಹಸಿ ಸೇನೆಯ ನಾಯಕತ್ವ...

read more
ಇದು ಪುಟ್ಟ ಹಣತೆಯ ರೂಪಕ

ಮೂಲತಃ ಕವಿಯಾಗಿರುವ ಪತ್ರಕರ್ತ ಜಿ ಎನ್ ಮೋಹನ್ ಅವರ ಕ್ಯೂಬಾ ಪ್ರವಾಸ ಕಥನ, ನನ್ನೊಳಗಿನ ಹಾಡು ಕ್ಯೂಬಾ. ಅಮೆರಿಕಾಕ್ಕೆ ಸೆಡ್ದು ಹೊಡೆದು ನಿಂತಿರುವ ಸ್ವಾಭಿಮಾನಿ ಚೈತನ್ಯದ ದೇಶ ಕ್ಯೂಬಾ ಬಗೆಗಿನ ಅವರ ತನ್ಮಯೀ ಧ್ಯಾನ, ಅಂತಃಕರಣದ ಪ್ರೀತಿಯೇ ಕಥನವಾಗಿ ಅವತರಿಸಿದೆ. ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಮಂಗಳೂರು ಮತ್ತು ಕುವೆಂಪು...

read more
ಕನಸುಗಳ ಮಧ್ಯೆಯೇ ನಿಟ್ಟುಸಿರು ಹೆಣೆದವಗೆ

ಹಿರಿಯ ಪತ್ರಕರ್ತ ಜಿ ಎನ್ ಮೋಹನ್ ಅವರ ಎರಡನೇ ಕವನ ಸಂಕಲನ ಅಚ್ಚಿನಲ್ಲಿದೆ. ಮೊದಲ ಸಂಕಲನ ಸೋನೆ ಮಳೆಯ ಸಂಜೆ ಪ್ರಕಟವಾದ ೧೫ ವರ್ಶಗಳ ಬಳಿಕ ಪ್ರಕಟವಾಗುತ್ತಿರುವ ಈ ಸಂಕಲನದ ಹೆಸರು ಪ್ರಶ್ನೆಗಳಿರುವುದು ಶೇಕ್ ಸ್ಪಿಯರನಿಗೆ. ಹೆಸರಲ್ಲೇ ಸುಳಿವು ಸಿಗುವ ಹಾಗೆ, ಇಲ್ಲಿನ ಬಹುಪಾಲು ಕವಿತೆಗಳ ಅಂತರಂಗದಲ್ಲಿರುವುದು ರಂಗಪ್ರತಿಮೆಗಳು. ಕವಿ,...

read more
ಹಿಟ್ಲರ್ ಬಿಡಿಸಿದ ಚಿತ್ರ

ಗಿರಿಕಾ ಕತ್ತರಿಸಬೇಕು ಚೌಕಟ್ಟು ಮೊಳೆ ತೆಗೆದು ಗೋಂದು ಬಿಡಿಸಿ ಬಗೆದಿಡಬೇಕು ಗಾಜು ಬಂದರೆ ಸರಿ ಇಲ್ಲವಾದರೆ ಚೂರು ಸಿಗುತ್ತಲ್ಲ ಆಗ ಅದಕ್ಕಾಗೇ ಕಾದದ್ದು ಹಲ್ಲು ಕಚ್ಚಿ ಹೊಂಚಿದ್ದು ಸೋತದ್ದು ಮೀನು ಮಂಜುಗಡ್ಡೆ ಚೆರ್ರಿ ಚೂಪೆಲೆಯ ಮರ ಹೆಣೆದ ತುಟಿಗಳು ಗೋಡೆಯನ್ನೂ ಹಾಯುವ ಜನ ಇಲ್ಲವಲ್ಲಾ ಇಲ್ಲಿ ಕಾಣೆಯಾದವರು ಕತ್ತಿಲ್ಲದವರು ಸೀದವರು...

read more
ನಾಳೆಯ ವಿಶ್ವಾಸ ಕಾಯುವ ಬುಡ್ಡಿ ದೀಪ

ವಿಜಿ "ಹೊತ್ತಿನಲ್ಲಿದ್ದಾಳೆ" ಅನ್ನುವ ಶಬ್ದ ಉತ್ತರ ಕನ್ನಡದ ಒಕ್ಕಲ ಕೇರಿಗಳಲ್ಲಿನ ಕಿರುದಾರಿಗಳಲ್ಲಿ ನಡೆವವರ ಕಿವಿಯ ತುಂಬುವುದುಂಟು. ಹೆಣ್ಣುಮಗಳೊಬ್ಬಳು ಬಸುರಿ ಎಂಬ ಒಸಗೆಯನ್ನು ಮನದಿಂದ ಮನಕ್ಕೆ ನುಡಿವ ಶಬ್ದ ಅದು. ಹೀಗೆ, ತಾಯಾಗುವವಳ ಚೈತನ್ಯವನ್ನು "ಹೊತ್ತು" ಎಂದು ಪರಿಭಾವಿಸುವ ಘನವಂತಿಕೆಯನ್ನು ಬೆರಗಿನಿಂದ ಧ್ಯಾನಿಸುತ್ತ...

read more

Pin It on Pinterest

Share This