ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಇಂದು ಭಗತ್ ಸಿಂಗ್ ನೆನಪಾಗುತ್ತಿದ್ದಾನೆ..ಅವನ ಗೆಳೆಯರೂ..
ಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನು ಮೂರು ತುಂಬಿದ ಕೊಡಗಳು ಎಂದು ಕರೆದಿದ್ದರು ಸು ರಂ ಎಕ್ಕುಂಡಿ. ಎಲ್ಲರ ಬದುಕು ಹಸನಾಗಬೇಕೆಂದು ನೀರು ಉಣಿಸಿದ ಆ ಮೂವರನ್ನು ಗಲ್ಲಿಗೇರಿಸಿದ ದಿನ ಇಂದು. ಭಗತ್ ಸಿಂಗ್ ನ ಊರು, ಮನೆ ಹೀಗಿದೆ. ಅಂದಿನ ಸುದ್ದಿಯನ್ನೂ ಟ್ರಿಬ್ಯೂನ್ ಪ್ರಕಟಿಸಿತ್ತು. ಆ ದಿನದ ಪತ್ರಿಕೆ ಹೀಗಿತ್ತು. ಭೇಟಿ ಕೊಡಿ-...
ಜೋಗಿ ಬರೆದಿದ್ದಾರೆ: ಆಲನಹಳ್ಳಿಯ ಪರಸಂಗ
ಕಾಡಿನಲ್ಲೊಂದು ಶಕುನ ಪಕ್ಷಿ. ಆಳುಕೂಗಿನ ಹಕ್ಕಿ ಎಂದೇ ಅದಕ್ಕೆ ಹೆಸರು. ಆ ಕಾಡಿಗೆ ಯಾರು ಕಾಲಿಟ್ಟರೂ ಅವರ ಹೆಸರು ಹಿಡಿದು ಕೂಗುತ್ತದೆ ಅದು. ತಮ್ಮ ಹೆಸರನ್ನೇ ಕರೆಯಿತೇನೋ ಎಂದು ಓಗೊಟ್ಟವರು ನೆತ್ತರು ಕಾರಿ ಸಾಯುತ್ತಾರೆ. ಕಾಡಿಗೆ ಹೋದ ಅಪ್ಪ ಹಾಗೇ ಸತ್ತಿರಬೇಕು ಎಂದು ಆ ಹುಡುಗನಿಗೆ ಗುಮಾನಿ. ಹೀಗಾಗಿ ಕಾಡಿಗೆ ಹೋದಾಗೆಲ್ಲ ಭಯ....
ಜಯಂತ್ ಕಾಯ್ಕಿಣಿಗೆ 'ಕುಸುಮಾಗ್ರಜ' ಪ್ರಶಸ್ತಿ ಪ್ರದಾನ
ಜಯಂತ ಕಾಯ್ಕಿಣಿ ಅವರಿಗೆ ಪ್ರತಿಷ್ಟಿತ ಕುಸುಮಾಗ್ರಜ ಪ್ರಶಸ್ತಿ ನೀಡಿ ಗೌರವಿಸಲಾಯಿತು. 'ಅಪಾರ' ಕೃಪೆಯಿಂದ ಆ ಸಮಾರಂಭದ ಎರಡು ಫೋಟೋಗಳು...
ಕ್ವಿಜ್: ಬಂತು ಸರಿ ಉತ್ತರ. ಕಂಗ್ರಾಟ್ಸ್ ಅಹಲ್ಯಾ ಬಲ್ಲಾಳ್
ಎಷ್ಟೆಲ್ಲಾ ಹೆಸರುಗಳು, ಎಷ್ಟೆಲ್ಲಾ ಊಹೆಗಳು.. ಅಂತೂ ಸರಿ ಉತ್ತರ ಬಂತು. ಅಹಲ್ಯಾ ಬಲ್ಲಾಳ್, ಶಾಂತಲಾ ಭಂಡಿ, ಸಂದೀಪ್ ಕಾಮತ್, ಪ್ರೀತಿ ಸರಿ ಉತ್ತರ ಕೊಟ್ಟಿದ್ದಾರೆ. ಈ ಪೈಕಿ ಮೊದಲು ಸರಿ ಉತ್ತರ ನೀಡಿದ ಅಹಲ್ಯಾ ಬಲ್ಲಾಳ್ ಅವರಿಗೆ ಬಹುಮಾನ ಘೋಷಿಸಲಾಗಿದೆ. ಅಹಲ್ಯಾ ಬಲ್ಲಾಳ್ ಅವರೇ, ನಿಮಗೆ ಬಹುಮಾನ ಕಳಿಸಬೇಕಾದ ವಿಳಾಸವನ್ನು...
ಹೊಸ 'ಮೀಡಿಯಾ ಮಿರ್ಚಿ' ಬಂದಿದೆ..
ಯಾರ್ ಹೇಳಿದ್ರು ನಿಮಗೆ ಆ ಚಾಕಲೇಟ್ ತಿನ್ನೋಕೆ?- ಅಂತ ಗದರಿಸಿದ್ದು ನಿಗೆಲ್ ಪ್ರಾಗ್ಬೇಡ್ . ಸಿ ಎನ್ ಎನ್ ನ ಕಾನ್ಫರೆನ್ಸ್ ರೂಮಲ್ಲಿ ಕುಳಿತಿದ್ದ ನಾನೆಂಬ ನಾನೂ, ಪಕ್ಕದಲ್ಲಿದ್ದ ದಕ್ಷಿಣ ಆಫ್ರಿಕಾದ ಶಬಲಾಲ, ಜಪಾನಿನ ಮೆಗ್, ಸ್ಲೊವೇನಿಯಾದ ಪೋಲೊಂಕಾ, ಆಸ್ಟ್ರೇಲಿಯಾದ ಗೆರ್ದಾ, ರೊಮೇನಿಯಾದ ಕ್ರಿಸ್ಟಿ, ಇರಾನಿನ ಹಮೀದ್, ಕೆನ್ಯಾದ...
ಮಣಿಕಾಂತ್ ಬರೆದಿದ್ದಾರೆ: ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ..?
ಎ ಆರ್ ಮಣಿಕಾಂತ್ ಚಿತ್ರ: ಬಭ್ರುವಾಹನ. ಗೀತೆರಚನೆ: ಹುಣಸೂರು ಕೃಷ್ಣಮೂರ್ತಿ ಸಂಗೀತ: ಟಿ.ಜಿ. ಲಿಂಗಪ್ಪ. ಗಾಯನ: ಡಾ. ರಾಜ್ ಕುಮಾರ್ -ಪಿ.ಬಿ. ಶ್ರೀನಿವಾಸ್. ಬಭ್ರುವಾಹನ: ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ ಸಮರದೋಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮಾ ಎಲ್ಲದಕು ಕಾರಣನು ಶ್ರೀ ಕೃಷ್ಣ ಪರಮಾತ್ಮ ಹಗಲಿರುಳು ನೆರಳಂತೆ...
ನಾನೊಂದು 'ಮಡಿವಾಳರ ಹಕ್ಕಿ'
'ಸಂಚಲನ' ಚಿತ್ರ ಪ್ರದರ್ಶನ
ಒಂದು ಇನ್ಸ್ಟಾಲೇಶನ್ ಮಾಡೋದು ಹೇಗೆ..?
ಇವರು ಅನಿಮಿಷ. ಎಕನಾಮಿಕ್ ಟೈಮ್ನಲ್ಲಿ ಕಲಾವಿದರು. ಇತ್ತೀಚಿಗೆ ತಾನೇ ಗಾಂಧಿಯವರ 'ಸತ್ಯದೊಂದಿಗೆ ನನ್ನ ಪ್ರಯೋಗ'ವನ್ನು ಆಧಾರವಾಗಿಟ್ಟುಕೊಂಡು ಇನ್ಸ್ಟಲೇಶನ್ ಕಲೆ ರೂಪಿಸಿದ್ದರು. ಕಾಡುವ ಕಲಾ ಪ್ರದರ್ಶನ ಅದು. ಇನ್ಸ್ಟಲೇಶನ್ ಅಂದ್ರೆ ಏನು ಅನಿಮಿಷಾ ಅವರೆ? ಅಂತ ಕೇಳುವುದರ ಬದಲು ಅವರ ರಾಶಿ ರಾಶಿ ಫೋಟೋಗಳ ಮೂಲಕ ಒಂದು ಚಿತ್ರ ಸಿಗುವಂತೆ...
ಕಾಸು ಕುಡಿಕೆ: ಬುಲ್ಸ್, ಬೇರ್ಸ್ ಮತ್ತು ವಲ್ಚರ್ಸ್…
ಕಾಸು ಕುಡಿಕೆ- 4 ಜಯದೇವ ಪ್ರಸಾದ ಮೊಳೆಯಾರ Past performance is not a guarantee of future returns. . . . .Statutory warning! ಹಿಂದಿನ ಸಾಧನೆ ಭವಿಷ್ಯದ ಪ್ರತಿಫಲದ ಗ್ಯಾರಂಟಿ ಅಲ್ಲ. . . . . . . . . . . . . ಶಾಸನ ವಿಧಿಸಿದ ಎಚ್ಚರಿಕೆ! ಶೇರು ಮಾರುಕಟ್ಟೆ ಅಂದರೆ, ಬುಲ್ಸ್ ಮತ್ತು ಬೇರ್ಸ್ ! 'ಗೂಳಿಗಳು'...
ಅನು ಬರೆದ ಗುಬ್ಬಿ ಕವಿತೆ
ಅನು ಪಾವಂಜೆ ಕಲಾವಿದೆ. ಖ್ಯಾತ ಕಲಾವಿದ ಕುಟುಂಬ ಪಾವಂಜೆ ಮನೆತನದವರು. ಇವರ ಕಲಾಕೃತಿಗಳು ಇವರ ಕೌಶಲಕ್ಕೆ ಸಾಕ್ಷಿ, ಸ್ಟಾಂಪ್, ನಾಣ್ಯ ಸಂಗ್ರಹ ಸಹಾ ಇವರ ಅಭ್ಯಾಸ. ಅಷ್ಟೇ ಅಲ್ಲ ಸದ್ದಿಲ್ಲದೇ ತನಗೆ ತಾನೇ ಕವಿತೆ ಕತ್ತುವುದರಲ್ಲೂ.. ಅಭಯ ಬರೆದ ಗುಬ್ಬಿ ಲೇಖನ ಅನು ಅವರನ್ನು ಇನ್ನೊಂದು ಗುಬ್ಬಿ ಕವಿತೆಗೆ ಪ್ರೇರೇಪಿಸಿದೆ. ಓದಿ- ಬೋಳು...
ಸುಶ್ರುತನ ಮದ್ಯಸಾರ: ಇನ್ನೊಂದು ಲಾರ್ಜ್
-ಸುಶ್ರುತ ದೊಡ್ಡೇರಿ ವಿಳಾಸವೇ ಬರೆದಿರದ ಪರಿಮಳದ ಜಾಡು ಹಿಡಿದು ಬೆಟ್ಟವನ್ನೇರುತ್ತಿರುವ ತುಂಬಿಗೆ ಹುಚ್ಚು ಭ್ರಮೆಯಿರಬೇಕು ಹೂವು ಬೆಟ್ಟದ ಮೇಲೇ ಇರಬಹುದು ಆಚೆ ತಪ್ಪಲಲ್ಲೂ ಇರಬಹುದು ಇಲ್ಲದೆಯೂ ಇರಬಹುದು, ಅಥವಾ ಅದರೊಡಲ ಮಧುಪಾತ್ರೆ ಈಗಾಗಲೇ ಬರಿದಾಗಿರಬಹುದು. ಪುಟ್ಟ ಪಾರದರ್ಶಕ ರೆಕ್ಕೆಗಳಿಗೆ ಭ್ರಾಂತಿಯ ಎಣ್ಣೆ ಸವರಿರದಿದ್ದರೆ...
'ಅಪಾರ' ಆರ್ಟ್
ಒಂದು ಗುಬ್ಬಚ್ಚಿಗಾಗಿ ಏನೆಲ್ಲಾ..
ಇಂದು ವಿಶ್ವ ಗುಬ್ಬಚ್ಚಿ ದಿನ. ಗುಬ್ಬಚ್ಚಿ ಮತ್ತು ಅಭಯ ಎರಡೂ ಒಂದಕ್ಕೊಂದು ಬೆಸೆದು ಹೋಗಿವೆ. ಸಿಂಹ ಗುಬ್ಬಚ್ಚಿಯ ಬೆನ್ನತ್ತಿದ್ದು ಎಂದಾದರೂ ಕೇಳಿದ್ದೀರಾ? ಆದರೆ ಈ ಅಭಯ 'ಸಿಂಹ' ಇಸ್ಮಾಯಿಲ್ ಸಹವಾಸದಲ್ಲಿ ಗುಬ್ಬಚ್ಚಿಗಳ ಮೋಹಕ್ಕೆ ಒಳಗಾದ. ಅದರ ಫಲ. ಕನ್ನಡಕ್ಕೊಂದು ಒಳ್ಳೆಯ ಸಿನೆಮಾ. ಹಲವು ಪ್ರಶಸ್ತಿಗಳ ಪಟ್ಟ. ಈಗ ಮಮ್ಮುಟ್ಟಿಗೆ...
ಬ್ರೆಕಿಂಗ್ ನ್ಯೂಸ್: ಬಿ ಜಯಶ್ರೀ ರಾಜ್ಯಸಭೆಗೆ
ಕನ್ನಡಪ್ರಭ ಮಾರಾಟವಾಗಲಿದೆಯೇ??
ಹಾಗೊಂದು ಸುದ್ದಿ ಇದೆ ಅದರ ಬಗ್ಗೆ ಒಂದಷ್ಟು ವಿವರಗಳು Sans Serif ಕೃಪೆಯಿಂದ ಮೀಡಿಯಾ ಮೈಂಡ್ ನಲ್ಲಿದೆ : ಇಲ್ಲಿ ಕ್ಲಿಕ್ಕಿಸಿ
ಬಿದ್ದರೋ ಯಡಿಯೂರಪ್ಪ..
ಇನ್ನೂ ಹೆಚ್ಚಿನ ಕೆ ಪಿ ಎನ್ ಫೋಟೋಗಳಿಗೆ ಭೇಟಿ ಕೊಡಿ- ಮೀಡಿಯಾ ಮೈಂಡ್
ಜೋಗಿ ಬರೆದಿದ್ದಾರೆ: ಊರುಕೇರಿಯ ನಡುವೆ ಸಿದ್ಧಸಾಧಕ
ಜೋಗಿ ಅವಮಾನವನ್ನು ಸಿಟ್ಟಿನ ಮೂಲಕ ಮೀರಲು ಹೊರಟಾಗ ಮತ್ತಷ್ಟು ಅವಮಾನ ಆಗುತ್ತದೆ ಎಂದು ಕ್ರಮೇಣ ನಂಬುತ್ತ ಬಂದವರ ಹಾಗೆ ಕಾಣಿಸುವ ಸಿದ್ದಲಿಂಗಯ್ಯ, ನಂತರದ ದಿನಗಳಲ್ಲಿ ಕಂಡುಕೊಂಡ ಹಾದಿ ಬಹುಶಃ ಅತ್ಯುತ್ತಮವಾದದ್ದೇ ಇರಬೇಕು. ಇಕ್ರಲಾ ವದೀರ್ಲಾ ಹಳೆಯದಾಗದು, ನಲವತ್ತೇಳರ ಸ್ವಾತಂತ್ರ್ಯ ಸಾಕಾಗದು’ ಎಂದು ಈಗಲೂ ನಂಬಿದವರಂತೆ...
ಟಿ ಎನ್ ಸೀತಾರಾಂ ಬರೆದ ಪತ್ರ: ‘ಮುಕ್ತ’ದ ಬೆಲೆಯನ್ನು ನೀವು ಹೆಚ್ಚಿಸಿದಿರಿ…
ಪ್ರಿಯ ನಾಗರಾಜಮೂರ್ತಿ -ಟಿ.ಎನ್.ಸೀತಾರಾಂ ನಿಮಗೆ 50 ವರ್ಷ ತುಂಬಿತೆಂದು ಗೊತ್ತಾಯಿತು ಹುಟ್ಟುಹಬ್ಬದ ಶುಭಾಷಯಗಳು. 40 ದಾಟಿದ ಯಾರಿಗೂ ನಾನು ಸಾಮಾನ್ಯವಾಗಿ ಹುಟ್ಟುಹಬ್ಬದ ಶುಭಾಷಯ ತಿಳಿಸುವುದಿಲ್ಲ. 50ರ ನಂತರವಂತೂ, ಅದೊಂದು ವಿಷಾದದ ದಿನವೆಂದು ನನ್ನ ನಂಬಿಕೆ, ಉತ್ಸಾಹ, ಶಕ್ತಿಗಳು ಕಡಿಮೆಯಾಗಿ ಹತ್ತಿದ ಹುರುಪಿನ ಬೆಟ್ಟವನ್ನು...
ಗುಬ್ಬಚ್ಚಿಗಳನ್ನು ಹುಡುಕುತ್ತಿದ್ದಾನೆ ಅಭಯ
ಗುಬ್ಬಚ್ಚಿಗಳು ಚಿತ್ರ ನಿರ್ದೇಶಿಸಿ ಮನೆ ಮಾತಾಗಿ ಹೋದವನು ಅಭಯಸಿಂಹ. ನಾಳೆ ವಿಶ್ವ ಗುಬ್ಬಚ್ಚಿ ದಿನ. ಅದರ ಅಂಗವಾಗಿ ತಾನು ಕಂಡ ಗುಬ್ಬಚ್ಚಿಗಳ ಲೋಕದಲ್ಲಿ ಮತ್ತೆ ಒಂದು ಸುತ್ತು ಹಾಕಿದ್ದಾನೆ. ನಾಳೆ ಲೇಖನ ಪ್ರಕಟವಾಗಲಿದೆ....
ಪ್ರೀತಿಯ ಕರೆಕೇಳಿ, ಆತ್ಮನ ಮೊರೆಕೇಳಿ..
ದೀಪ ಹಚ್ಚಾ! ಪ್ರೀತಿಯ ಕರೆಗೆ ಅಷ್ಟು ಶಕ್ತಿ ಇದೆಯೇನೋ ನಮಗೆ ಗೊತ್ತಿಲ್ಲ. ಎಸ್ ವಿ ಪರಮೇಶ್ವರ ಭಟ್ಟರ ಕವನ ದೀಪ ಹಚ್ಚಾ! ಇಡೀ ಕವನವನ್ನು 'ಅವಧಿ'ಯಲ್ಲಿ ಕಾಣಿಸಿ ಎಂದು ಎಲ್ಲರೂ ಕೇಳಿದ್ದಾರೆ. ಒಂದು ಕವಿತೆ ಜಗದ ಬೆಳಕಾಗಬಹುದು ಎಂದವರು ಯಾರು? ಇಲ್ಲಿದೆ ಅಂತಹ ಬೆಳಕು ಮೂಡಿಸಿದ ಕವಿತೆ. ಪ್ರೀತಿಯ ಕರೆಕೇಳಿ ಆತ್ಮನ ಮೊರೆಕೇಳಿ ನೀ ಬಂದು...



















