ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ಗಾಢ ನಿದ್ದೆ, ಮತ್ತೊಂದು ಚೀತ್ಕಾರ ಕೇಳುವವರೆಗೆ..’ – ಅನಿತಾ ನರೇಶ್ ಮಂಚಿ

  ಅನಿತಾ ನರೇಶ್ ಮಂಚಿ ಹೌದಂತೇ.. ಅಲ್ಲೆಲ್ಲೋ ಅತ್ಯಾಚಾರವಾಯಿತಂತೇ .. ಹೌದೇ.. ಕೇಳಿದವು ಕೊರಳುಗಳು ಸೇರಿದ ಸ್ವರಗಳಲ್ಲೂ ಏರಿಳಿತ ಸುತ್ತ ಗಾಭರಿಯ ಕಣ್ಣೋಟ ಬಿತ್ತರಿಸಿದವು ಹಸಿ ಬಿಸಿ ವಾರ್ತೆಗಳಂತೆ ನೋಡು ಟಿವಿಯಲ್ಲೂ ಅದೇ ಸುದ್ಧಿ ಹೇಳಲಿಲ್ಲವೇ ನಾನಾಗಲೇ .. ಕೈ ಸೆರಗಿಗೆ ಒರೆಸುತ್ತಾ ಕೂತ ತಾಯ ಎದೆಯೊಳಗೆ ಭೂಕಂಪ ನಡುಗು ಕಾಲಿನ...

read more
’ತುಪ್ಪದ ದೀಪ ಹಚ್ಚಿಟ್ಟ ದೇವರೂ ಅವಳನ್ನು ಕಾಯಲಿಲ್ಲ’ – ಅನುಪಮಾ ಪ್ರಸಾದ್

ಅಂತರ್ ಪಿಶಾಚಿ ಅನುಪಮಾ ಪ್ರಸಾದ್ ರಾಜೀವನನ್ನು ಆಫೀಸ್ನತ್ತ ಮಗನನ್ನು ಶಾಲೆಯತ್ತ ದಬ್ಬಿ ಮುಂಬಾಗಿಲು ಹಾಕಿಕೊಳ್ಳುವ ಹೊತ್ತಿಗೆ ಗಡಿಯಾರದ ಮುಳ್ಳು ಬೆಳಗಿನ ಒಂಭತ್ತು ಗಂಟೆ ತೋರಿಸಿತು. ಒಂದೈದು ನಿಮಿಷ ಕುಳಿತು ಪತ್ರಿಕೆ ತಿರುವಿ ಹಾಕೋಣ ಅಂದುಕೊಂಡು ಸೋಫಾದಲ್ಲಿ ಕುಳಿತುಕೊಳ್ಳುವಷ್ಟರಲ್ಲಿ ಗೇಟಿನಾಚೆ `ರದ್ದೀ ಪೇಪರ್...ರದ್ದೀ...

read more
‘ಬೆಟ್ಟದಾ ಮೇಲೊಂದು ಮನೆಯ ಮಾಡಿ..’ – ಶಾಂತಿ ಅಪ್ಪಣ್ಣ

ಶಾಂತಿ ಕೆ ಅಪ್ಪಣ್ಣ. ಹೇಳಿಕೇಳಿ ಇದು ಮಾಘಿ.  ಮದರಾಸಿನ ಮಹಾ ಬಿಸಿಲು ಸ್ವಲ್ಪ ಅಹಂಕಾರ ಬಿಟ್ಟುಕೊಟ್ಟು ತಗ್ಗಿಬಗ್ಗಿ ನಡೆಯುವ ಕಾಲ.ಇಂಥ ಸಮಯದಲ್ಲಿ..ಬೆಳಗಿನ ಸುಂದರ ಚಳಿಯಲ್ಲಿ ಹೊದಿಕೆಯೊಳಗೆ ತೂರಿ ಕಾಲು ಮುದುರಿಕೊಂಡು ಬೆಳಕಾಗಿದ್ದರೂ ಮರೆತು ಇನ್ನಷ್ಟು ಹೊತ್ತು ಮಲಗಿರುವ ಸುಖವೇ ಬೇರೆ.ಅದರಲ್ಲೂ ನನ್ನ ಕಥೆ...

read more
‘ನಮ್ಮಮ್ಮನ ಮೂರು ಬೆರಳಿಗೆ ಗೊತ್ತು….’

ನಮ್ಮಮ್ಮನ ಸಣ್ಣ ಸಣ್ಣ ಅನುಭವಗಳು ಮೋಹನ್ ವಿ ಕೊಳ್ಳೇಗಾಲ ನಮ್ಮಮ್ಮನ ಮೂರು ಬೆರಳಿಗೆ ಗೊತ್ತು ಉಪ್ಪಿನಳತೆ ಕಾಂಪಾಸ್ಸಿಲ್ಲದೆ ದೋಸೆ ಉಯ್ಯುವ ಅವಳದಗಣಿತ ಬುದ್ಧಿ ಚಂದ್ರನನ್ನು ಮೊದಲು ತಟ್ಟೆಯಲ್ಲಿ ಹಿಡಿದಿಟ್ಟು ಕೊಟ್ಟವಳು . ಬೇಲಿ ಮೇಲಿನ ಸೊಪ್ಪು ಜಜ್ಜಿ ಜಜ್ಜಿ ಉಗುರು ಬಣ್ಣ ಹಚ್ಚಿದವಳು ಉಗುರ ಗಾಯ ಒಣಗಿಸಿ ನೋವ ನುಂಗಿದವಳು...

read more
ಕುವೆಂಪು ಅವರು ಕೋಕಿಲೋದಯ ಚೈತ್ರನಿಗೆ ಹೆಸರಿಟ್ಟದ್ದು…

ಬಿ ಆರ್ ಸತ್ಯನಾರಾಯಣ ಅವರು ಬರೆದಿರುವ ಕುವೆಂಪು ಕಾವ್ಯಯಾನ ಪುಸ್ತಕ 29ರಂದು ಕುಪ್ಪಳಿಯಲ್ಲಿ ಬಿಡುಗಡೆಯಾಗುತ್ತಿದೆ. ಆ ಪುಸ್ತಕದ ಒಂದು ಲೇಖನ ಇಲ್ಲಿದೆ :   ಹೆಸರಿಟ್ಟು ಹರಸುವೆನು ಚೈತ್ರನಂ ೧೯೪೧ನೆಯ ಇಸವಿ. ಜಗತ್ತನ್ನು ಎರಡನೆಯ ಮಹಾಯುದ್ಧದ ಕಾರ್ಮೋಡಗಳು ಆವರಿಸಿದ್ದ ದಿನಗಳು. ಇತ್ತ ಮೈಸೂರು ವಿಶ್ವವಿದ್ಯಾಲಯ ಮಾತ್ರ ತನ್ನ...

read more
ಝೆನ್ ಕಥೆಗಳು : ನದಿಯಲ್ಲಿನ ನೀರು

ನದಿಯಲ್ಲಿನ ನೀರು ರವಿ ವರ್ಮ ಹೊಸಪೇಟೆ ಬೆಳಗಿನ ಉಪಹಾರ ಮುಗಿದ ಮೇಲೆ ಗುರುವು ಶಿಷ್ಯರನ್ನೆಲ್ಲಾ ಒಂದೆಡೆ ಸೇರಿಸಿ, ಹೇಳಿದರು, "ನಾನು ಮಾಡುತ್ತಿರುವುದೆಲ್ಲಾ ನದೀ ತೀರದಲ್ಲಿ ಕುಳಿತು , ನದಿಯ ನೀರನ್ನು ಮಾರುವ ಕೆಲಸ..... ಬುದ್ಧಿಯಿಲ್ಲದ ನೀವೆಲ್ಲ ಸಾಲಾಗಿ ನಿಂತು, ನೀರು ಕೊಳ್ಳುತ್ತಿರುವಿರಿ .. ಸ್ವಲ್ಪ ಆಲೋಚನೆ ಮಾಡಿ ........

read more
‘ರೇಪ್ ಪ್ರಕರಣಗಳಲ್ಲಿ ಶಿಕ್ಷೆಯಾಗಿರುವುದು ಶೇ26 ಮಾತ್ರ’ – ಜಿ ಎನ್ ನಾಗರಾಜ್

ಲೈಂಗಿಕ ಬಲಾತ್ಕಾರ-ಮುಕ್ಕಾಲು ಮೂರು ವೀಸೆ ಪಾಲು ರೇಪಿಸ್ಟರಿಗೆ ಖುಲಾಸೆ ಜಿ.ಎನ್.ನಾಗರಾಜ್ ದೆಹಲಿಯ ಗ್ಯಾಂಗ್ ರೇಪ್ ಬಗ್ಗೆ ದೆಹಲಿಯಲ್ಲಿ ಹಾಗೂ ದೇಶಾದ್ಯಂತ ಬೃಹತ್ಬ ಪ್ರತಿಭಟನೆಯ ಅಲೆ ಎದ್ದಿದೆ. ರೇಪಿಸ್ಟರಿಗೆ ಮರಣ ದಂಡನೆಯಾಗಬೇಕು, ಹೆಚ್ಚು ತ್ವರಿತ ಗತಿಯ ನ್ಯಾಯಾಲಯಗಳು ಸ್ಥಾಪನೆಯಾಗಬೇಕು, ದಿನಂಪ್ರತಿ ವಿಚಾರಣೆಯಾಗಬೇಕು, ರಕ್ಷಣೆ...

read more
’ಹೆಣ್ಣು ಶಬ್ದ ಮಾಡದೆ ಉರಿಯಬೇಕೆಂಬುದು….’ – ಜ ನಾ ತೇಜಶ್ರೀ

ಹೀಗೊಂದು ಕವಿತೆ   ಜ ನಾ ತೇಜಶ್ರೀ ಕುರುಡು ಮೆತ್ತಿಕೊಂಡ ಕಣ್ಣು ಗಂಟೆಯನ್ನು ಹೆಣ್ಣು ಮುಟ್ಟಬಾರದು ದೀಪ ಧೂಪ ಬೆಳಗಿ ಆರತಿ ಎತ್ತುವುದಷ್ಟೆ ಅವಳ ಕೆಲಸ: ಹೆಣ್ಣು ಶಬ್ದ ಮಾಡದೆ ಉರಿಯಬೇಕೆಂಬುದು ಶತಮಾನಗಳ ಹಳೆಯ ಅಲಿಖಿತ ಕಾನೂನು . ಬಿಟ್ಟಬಿಟ್ಟಂತೆ ಕುರುಡು ಮೆತ್ತಿಕೊಳ್ಳುವ ಈ ಕಣ್ಣುಗಳನ್ನು ಕತ್ತಲಿನಿಂದ ತಿಕ್ಕಿ ತೊಳೆಯದ ಹೊರತು...

read more
ಒಬ್ಬ ಅಜ್ಞಾತ ಮಹಾಪುರುಷ

  ಗೌರವ ಸಂಪಾದಕರ ಮಾತು ವಿ.ಎಂ. ಕುಮಾರಸ್ವಾಮಿ ಅಜ್ಞಾತ ಮಹಾಪುರುಷ. ಒಂದು ವ್ಯಕ್ತಿತ್ವವನ್ನು ಹೀಗೆಪ್ರಶಂಸಿದವರು ಮಹಾಕವಿ ಕುವೆಂಪು. ಕುವೆಂಪು ಅಂತಹ ಪ್ರಜ್ಞಾವಂತರ ಲೇಖನಿಯಲ್ಲಿಹಳ್ಳಿಗಾಡಿನ ರೈತಾಪಿಯೊಬ್ಬ ಇಂಥಾ ಪ್ರಶಂಸಾ ನುಡಿ ಪಡೆಯುವುದು ಸಾಮಾನ್ಯ ಸಂಗತಿಯಲ್ಲ. ಒಳಹೊಕ್ಕು ಅರಿತಾಗಲೇ ಗೊತ್ತಾಗುವುದು. ಹೌದು, ಅವರು...

read more
ರಹಮತ್ ಕೃತಿ ಕುರಿತು ಅರುಣ ಜೋಳದಕೂಡ್ಲಿಗಿ

ವಾಗ್ವಾದಗಳ ಕನ್ನಡ ಸಾಹಿತ್ಯ ಚರಿತ್ರೆ ಡಾ.ಅರುಣ್ ಜೋಳದಕೂಡ್ಲಿಗಿ   ಕನ್ನಡ ಸಾಹಿತ್ಯ ವಾಗ್ವಾದಗಳು ಡಾ.ರಹಮತ್ ತರೀಕೆರೆ ಪುಟ:230, ರೂ: 120, 2012 ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಭಿನ್ನವಾಗಿ ಕಟ್ಟುವ ಪ್ರಯತ್ನಗಳು ನಿರಂತರವಾಗಿ ನಡೆದಿವೆ. ಅದು ಈಗಲೂ ನಿಂತಿಲ್ಲ. ಇಂತಹ...

read more
ಬೇಲೂರು ‘ವಿಷಯ- ವಿಶೇಷ’ ಆಲ್ಬಂ

ಭೂಮಿ ಬಳಗ ಬೇಲೂರು ತಾಲೂಕಿನ ಅರೆಹಳ್ಳಿಯಲ್ಲಿ ಸಮಕಾಲೀನ ವಿಷಯಗಳ ಮಂಥನವನ್ನು ಹಮ್ಮಿಕೊಂಡಿತ್ತು. ಕಾಫಿ ಬೆಳೆಗಾರರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜರುಗಿದಈ ' ವಿಷಯ- ವಿಶೇಷ' ಕಾರ್ಯಕ್ರಮವನ್ನು ಸಾಹಿತಿ ಎಸ್ ಜಿ ಸಿದ್ಧರಾಮಯ್ಯ ಉದ್ಘಾಟಿಸಿದರು. ಜಾನಪದ ತಜ್ಞ ಹಿ ಶಿ ರಾಮಚಂದ್ರೇ ಗೌಡ ಅವರು ಚರ್ಚೆಗೆ...

read more
ತಾಳಮದ್ದಲೆ ಮತ್ತು ಮಮತಾ

ಅಭಿನವ ಪ್ರಕಾಶನ ತಾಳಮದ್ದಲೆಯ ಬಗ್ಗೆ ಅಪರೂಪದ ಕೃತಿಯನ್ನು ಹೊರತಂದಿದೆ. ಇದರ ಸಂಪಾದಕರು ಮಮತಾ ಜಿ. ತಾಳಮದ್ದಲೆಯ ದನಿ ಕೇಳುತ್ತಲೇ ಬೆಳೆದ ಮಮತಾ ಕಟ್ಟಿಕೊಂಡದ್ದು ಆ ಲೋಕದ ಸಂಭ್ರಮವನ್ನು ಇಲ್ಲಿ ಅವರು ಯಕ್ಷಗಾನದ ಲೋಕ ತಮಗೆ ಕೊಟ್ಟ ಬಳುವಲಿಯನ್ನು ಬಣ್ಣಿಸಿದ್ದಾರೆ ಮಮತಾ ಜಿ ನಾನು ಹುಟ್ಟಿದ್ದು, ಬೆಳೆದದ್ದು ಎಲ್ಲ ರೀತಿಯಲ್ಲಿಯೂ...

read more
ಕೆ ಟಿ ಶಿವಪ್ರಸಾದ್ ಹೀಗಂತಾರೆ…

ಕೆ ಟಿ ಶಿವಪ್ರಸಾದ್ ಅವರ ಒಂದು ಅಪರೂಪದ ಸಂದರ್ಶನ. ಸಂದರ್ಶನ ಮಾಡಿದವರು ನಾಗರಾಜ್ ಹೆತ್ತೂರು, ಹಾಸನ ಹೌದು ಕೆ.ಟಿ. ಮಾತನಾಡುವುದು ಕಡಿಮೆ. ತಂದೆ ದೊಡ್ಡ ಉದ್ಯಮಿಯಾಗಿ , ರಾಜಕಾರಣ, ಕೋಟ್ಯಾಂತರ ರೂ. ಆಸ್ತಿ ಏನೆಲ್ಲಾ ಇದ್ದರೂ ಬುದ್ದನ ತತ್ವಗಳಿಂದ ಪ್ರಭಾವಿತರಾಗಿ ಇಂದಿಗೂ ಎಲ್ಲವನ್ನೂ ಬಿಟ್ಟು ಹಾಸನದ ಉದಯಗಿರಿಯ ಬಾಡಿಗೆ...

read more
ಅನಂತಮೂರ್ತಿ ಇಲ್ಲಿದ್ದಾರೆ..

ಯು ಆರ್ ಅನಂತಮೂರ್ತಿ ಅವರಿಗೆ ೮೦ ವಸಂತ ತುಂಬಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹರಡಿಕೊಂಡ ಸಂಭ್ರಮ ಇಲ್ಲಿದೆ. ಅಭಿನವ ಪ್ರಕಾಶನ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅನಂತಮೂರ್ತಿ ಅವರ 'ನಿಜದ ಬೆಳಕಿನೆಡೆಗೆ ಒಂದು ಧ್ಯಾನ' ಕೃತಿ ಬಿಡುಗಡೆ ಮಾಡಲಾಯಿತು. ಆ ಸಂಭ್ರಮದ ನೋಟ ನಿಮಗಾಗಿ.. ಚಿತ್ರಗಳನ್ನು ದೊಡ್ಡ ಸೈಜ್ ನಲ್ಲಿ ವೀಕ್ಷಿಸಲು...

read more
‘ಎಲ್ಲವೂ ಒಂದೊಂದು ರೀತಿಯ ನೋವಿನ ಕಥೆ..’ – ಉಷಾ ರೈ

ನೋವಿನ ಮೂಟೆ ಹೊತ್ತು ಬಂದ ಅವಧಿಯ ಲೇಖನಗಳನ್ನು ಓದಿ ಹೊಟ್ಟೆಯೆಲ್ಲಾ ತೊಳಸಿದ ಅನುಭವ! ಉಷಾ ರೈ ಸುಮಾರು ಹತ್ತು ವರ್ಷದ ಹಿಂದೆ ಮಹಿಳಾ ದಕ್ಷತಾ ಸಮಿತಿಯಲ್ಲಿ ನಾನು ಬಹಳ ಆಕ್ಟಿವ್ ಆಗಿದ್ದೆ. ಆಗ ನಾವು ಲೈಂಗಿಕ ದೌರ್ಜನ್ಯದ ಬಗ್ಗೆ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆವು. ದೌರ್ಜನ್ಯ ನಡೆಸಿದವನಿಗೆ ಕೂಡಲೇ ಶಿಕ್ಷೆ ಆಗಬೇಕು, ಇನ್...

read more
‘….ಇಲ್ಲಿ, ಅವಳು ಅಂದರೆ, ಅರುಣಾ ಶ್ಯಾನಭಾಗ್..’

ಒಂದು ಚೈನಿನ ಮೊರೆ ಸುಮಂಗಲಾ ನಾನು ನಿಂತಲ್ಲಿಂದ ಕೆಲವೊಮ್ಮೆ ಅವರೆಲ್ಲ ಮಾತನಾಡುವುದು ಕೇಳುತ್ತದೆ. ಹರೆಯದ ಕುಲುಕುಲು, ನಡುವಯಸ್ಸಿನ ಭಾರ, ಕೆಲಸ ಮುಗಿಸಿ ಹೋಗುವಾಗಿನ ಆ ಗಡಿಬಿಡಿ, ದಣಿವು, ಬೆಳಗ್ಗೆ ಬಂದಾಗ ರೋಗಿಗಳಲ್ಲಿಗೆ ಓಡುವ ಧಾವಂತ ಎಲ್ಲವನ್ನೂ ನಾನು ಆಲಿಸಬಲ್ಲೆ. ಎಷ್ಟೆಲ್ಲ ಧ್ವನಿಗಳ ಮಧ್ಯೆ ಒಂದು ಧ್ವನಿಯನ್ನು ನಾನು...

read more
ಕನ್ನಡ ದೇಸಿ ಸಾಹಿತ್ಯಕ್ಕೆ ಕ್ರೈಸ್ತ ಕಾವ್ಯದ ಕೊಡುಗೆ

- ಡಾ.ಪ್ರಕಾಶ ಗ.ಖಾಡೆ ಹೊಸಗನ್ನಡ ಅರುಣೋದಯ ಕಾಲದಲ್ಲಿ ಕ್ರೈಸ್ತ ಮಿಷನರಿಗಳು ರಚಿಸಿದ ಗೀತ ಸಾಹಿತ್ಯವು ಕನ್ನಡ ಭಾವಗೀತ ಪರಂಪರೆಯ ಬೆಳವಣಿಗೆಗೆ ಪ್ರಮುಖ ಹಾದಿ ಹಾಕಿಕೊಟ್ಟವು. ಕರ್ನಾಟಕದಲ್ಲಿ ಗೀತಗಳ ಮೂಲಕ ಧರ್ಮ ಪ್ರಸಾರ ಮಾಡುತ್ತಲಿದ್ದ ಮಿಷನರಿಗಳಿಗೆ ವಿದೇಸೀ ರಾಗಗಳು ಕನ್ನಡಿಗರನ್ನು ಪ್ರಭಾವಿಸಲಾರವು ಎಂದು ತಿಳಿಯಲು ಬಹಳ ದಿನ...

read more
ಬಿ ಸುರೇಶ್ ಹೇಳ್ತಾರೆ

ನಮ್ಮ ಅನನ್ಯ ಕಾಸರವಳ್ಳಿ ನಿರ್ದೇಶಿಸಿರುವ ಕಿರುಚಿತ್ರ... ಒಂದೇ ಚಿತ್ರಿಕೆ (single shot) ಯಲ್ಲಿ ಅದ್ಭುತವೊಂದನ್ನು ಮಾಡಿದ್ದಾರೆ... ಇಲ್ಲಿ ಕ್ಲಿಕ್ಕಿಸಿ...

read more
ನಟರಾಜ ಹೊನ್ನವಳ್ಳಿ Recommends

ಪ್ರಿಯ ಗೆಳೆಯ, ಗೆಳತಿಯರೇ, ರಂಗಭೂಮಿಯ ಹಿರಿಯ ನಾಟಕಕಾರರು, ನಟರು ಮತ್ತು ನಿರ್ದೇಶಕರಾದ ನ. ರತ್ನ ಅವರ ಒಂದು ಅಪರೂಪದ ಪುಸ್ತಕ ಬಂದಿದೆ, ಅದು ''ನಟ ಮತ್ತು ಮಾತು' . ಅದನ್ನು ಓದುತ್ತಿದ್ದೇನೆ. ನಟ-ನಟಿಯರ ಜೊತೆ ಇರಬೇಕಾದ ಸಂಗಾತಿ ಅದು. ಅದನ್ನು ಪ್ರಸನ್ನ ಅವರು ಪಬ್ಲಿಷ್ ಮಾಡಿದ್ದಾರೆ. ಸಾಧ್ಯವಾದರೆ ಓದಿ. ನಟರಾಜ...

read more

Pin It on Pinterest

Share This