ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ಬದಲಾದಳಾ ನಮ್ಮವ್ವ!?’ – ರೇಣುಕಾ ಹೆಳವರ

ಪ್ರೀತಿ, ವಾತ್ಸಲ್ಯವೇ ಇಲ್ಲದ ಬಾಳ ಹಾದಿಯಲಿ... ರೇಣುಕಾ ಹೆಳವರ ಅಮ್ಮನೆಂದರೆ ನಮ್ಮನ್ನು ನವ ಮಾಸಗಳು ಹೆತ್ತು ಹೊತ್ತು ನೋವನ್ನೆಲ್ಲ ಸಹಿಸಿಕೊಂಡು ಜನ್ಮ ನೀಡುವ ಮೂರ್ತ ರೂಪ. ನಮ್ಮನ್ನು ಜೋಗುಳದಲ್ಲಿಟ್ಟು ಲಾಲಿ ಹಾಡುವ ಮೂಲಕ ಎದೆ ಹಾಲು ಕುಡಿಸಿ ಸಂತೈಸುತ್ತಾಳೆ. ಚೆಂದಿರನನ್ನು ತೋರಿಸಿ ತುತ್ತು ನೀಡುತ್ತಾಳೆ. ಚೆಂದ ಮಾಮನನ್ನು...

read more
ಅವರು ಅಲ್ಲಿ ಸಿಕ್ಕರು…

ಜಿ ಎನ್ ಮೋಹನ್ ಬಹುಷಃ ನಾವು ಭೇಟಿಯಾಗಲು ಅದಕ್ಕಿಂತ ಸರಿಯಾದ ಜಾಗ ಇನ್ನೊಂದು ಇರಲು ಸಾಧ್ಯವಿಲ್ಲವೇನೋ? ‘ಈಟಿವಿ ಚಾನಲ್’ ಗೆ ನ್ಯೂಸ್ ರೀಡರ್ ಗಳನ್ನು ಆಯ್ಕೆ ಮಾಡಲು ನಾನು ಇಡೀ ಕರ್ನಾಟಕವನ್ನು ಗರಗರನೆ ಸುತ್ತುತ್ತಿದ್ದೆ. ಹಾಗೆ ಸುತ್ತುವುದು ನನಗೆ ಒಂದು ರೀತಿಯಲ್ಲಿ ನನ್ನ ನೆಲದ ಘಮವನ್ನು ನನ್ನೊಳಗೆ ಕೂರಿಸಿಕೊಳ್ಳುವ ದಾರಿಯೂ...

read more
'ಅಭಿನಂದನೆಗಳು ಸಿದ್ದರಾಮಯ್ಯನವರೆ…' – ಅರಕಲಗೂಡು ಜಯಕುಮಾರ್

ಸಿಎಂ ಆದ್ರು ನಮ್ಮ ಅಹಿಂದ ಸಿದ್ದರಾಮಯ್ಯ ಅರಕಲಗೂಡು ಜಯಕುಮಾರ್ ಅವತ್ತು ಡಾ ರಾಜ್ಕುಮಾರ್ ಗೆ 60ರ ಸಂಭ್ರಮ,ಮೈಸೂರಿನ ಮಾನಸ ಗಂಗೋತ್ರಿಯ ಓಪನ್ ಏರ್ ಥಿಯೇಟರ್ ನಲ್ಲಿ ಕಿಕ್ಕಿರಿದ ಜನಸ್ತೋಮ, ಕೈಕಾಲು ಆಡಿಸಲಾಗದಷ್ಟು. ಭರ್ತಿ ಜನ. ಕೇಕೆ, ಉದ್ಗಾರ,  ಉತ್ಸಾಹ ಪುಟಿದೇಳುತ್ತಿತ್ತು. ಕನ್ನಡ ಕುಲಕೋಟಿಗೆ ರಾಜಣ್ಣ ಹೇಗೋ ಅದೇ ರೀತಿ ಜನ...

read more
ಕಾಡು ಹೂವಿನ ಸೊಲ್ಲು : ಹೊಂಗೆ ಹೂವ ತೊಂಗಲಲ್ಲಿ

ರೇಣುಕಾ ನಿಡಗುಂದಿ ಸುಮ್ಮನೇ ಅಡ್ದಾದಿಡ್ಡಿಯಾಗಿ ಎತ್ತಲೋ ಗೊತ್ತುಗುರಿಯಿಲ್ಲದಂತೆ ಸಾಗುತ್ತಿದ್ದವಳನ್ನು ನಟ್ಟಡವಿಯಿಂದ ಎಳೆದು ಊರೊಳಗಿನ ಹಾದಿಗೆ ತಂದವನು ಅವನೇ. ಎಸೋ ಜನ್ಮದ ಗೆಳೆಯನೆಂಬಂತೆ ಅವಳೂ ತನ್ನ ಹೊಟ್ಟೆಯಲ್ಲಿನ ಗುಟ್ಟಿನ ಮಾತೆಲ್ಲವನ್ನೂ ಹೇಳಿಕೊಂಡಿದ್ದಳು. ಒಂದು ಪ್ರೇಮದ ಕಥೆಯನ್ನು ಬಣ್ಣಿಸಿದವನೂ ಅವನೇ ನೇರಳೆಹಣ್ಣಿನಂತ...

read more
ನಮ್ಮನೆ ನಾಯಿ ಕೂಸುಗಳ ರೆಸ್ಕ್ಯೂ ಆಪರೇಷನ್!

ಡಾ. ಬಿ.ಆರ್. ಸತ್ಯನಾರಾಯಣ ನಮ್ಮ ಏರಿಯಾದಲ್ಲಿ ಬೀದಿನಾಯಿಗಳ ಕಾಟ ತುಂಬಾ ಹೆಚ್ಚು. ಅಪರಾತ್ರಿಯಲ್ಲಿ ಒಂದು ಬೊಗಳಿದರೆ ಸಾಕು, ಕನಿಷ್ಠ ನೂರು ನಾಯಿಗಳಾದರೂ ಧ್ವನಿಗೂಡಿಸಿ ಒಂದು ಒಂದೂವರೆ ಗಂಟೆಯವರೆಗೂ ಊಳಿಡುತ್ತವೆ. ಬೀದಿಯಲ್ಲಿ ಮಕ್ಕಳಿರಲಿ ದೊಡ್ಡವರು ಹೋಗುತ್ತಿದ್ದರೂ ಗುರಾಯಿಸುತ್ತವೆ. ಕಾರ್ಪುರೇಷನ್ನಿನವರು ಹಲವಾರು ಸಾರಿ...

read more
’ಎಪ್ಪತ್ತೈದರ ಗಂಡನೇ ಗುರೂಜಿಗಿಂತಾ ಯುವಕರಾಗಿ ಕಂಡರು!’ – ಶಾಂತಾ ನಾಗರಾಜ್

ಪರಧ್ಯಾನ ಶಾಂತಾ ನಾಗರಾಜ್ ಈ ಆಪ್ತ ಗೆಳತಿಯರೇ ಹೀಗೆ. ಎಷ್ಟು ಪ್ರೀತಿ ಪಡುತ್ತಾರೋ ಅಷ್ಟೇ ಹಕ್ಕಿನಿಂದ ಇಕ್ಕಟ್ಟಿಗೂ ಸಿಲುಕಿಸುತ್ತಾರೆ. ನನ್ನ ಗೆಳತಿ ಮಾಡಿದ್ದು ಹೀಗೇ. ಅವಳು ಮೊನ್ನೆ ಒಂದು ಹುಕುಂ ಹೊರಡಿಸಿದಳು. " ನಾನು ಹತ್ತು ದಿನಗಳಿಂದ ಯೋಗಕ್ಲಾಸಿಗೆ ಹೋಗುತ್ತಿದ್ದೇನೆ. ನೀನೂ ಬಾ ಎಂದರೆ ಬರಲಿಲ್ಲ. ನಾಳೆ ಕೊನೆ ದಿನ ಅವರು...

read more
ಫೇಸ್ ಬುಕ್ ಪಿಕ್ : ನನ್ನೂರು ಅರೇಶಂಕರ ಎಂಬ ಪುಟ್ಟ ಹಳ್ಳಿಗೆ ಹೊರಟು ನಿಂತಿದ್ದೇನೆ

ಛಾಯಾ ಭಗವತಿ ಅಜ್ಜನಿಂದ ಕಾಗದ ಬಂದಿರುತ್ತಿತ್ತು, 'ಶುಭಾಶೀರ್ವಾದಗಳು. ತಾಯೀ, ಈ ಕಾಗದ ಬರೆಯುವ ಕಾರಣವೇನೆಂದರೆ, ಮಕ್ಕಳಿಗೆ ಸಾಲಿ ಸೂಟಿ ಬಿಟ್ಟಿರುವುದರಿಂದ ಕರೆದುಕೊಂಡು ರಜೆಗೆ ಬರುವುದು. ಹರಿಹರಕ್ಕೆ ತಮ್ಮನನ್ನು (ಅಂದರೆ ನಮ್ಮ ಸೋದರಮಾವ) ಕಳಿಸಿಕೊಡುತ್ತೇನೆ. ಜಾಗ್ರತೆಯಿಂದ ಬನ್ನಿ. ಅಪ್ಪ...ಅಮ್ಮನ ಸಡಗರಕ್ಕೆ ಕೊನೆಯೇ...

read more
ಫೋಟೋ ಆಲ್ಬಂ : 'ಬಾರಯ್ಯಾ ಬೆಳದಿಂಗಳೇ'

ಬಿ. ವಿ . ಕಾರಂತ ರಂಗಭೂಮಿಕ ಟ್ರಸ್ಟ್ ಮಂಚಿ- ಕುಕ್ಕಾಜೆ, ಇವರ ವತಿಯಿಂದ ಬಿ. ವಿ. ಕಾರಂತ ನೆನಪಿನ ಮಕ್ಕಳ ರಂಗ ನಾಟಕ ಶಿಬಿರದ ಸಮಾರೋಪದ ದಿನದಂದು, ಮೂರ್ತಿ ದೇರಾಜೆ ಮತ್ತು ಶಂಕರ ಪ್ರಸಾದ್ ವಿನ್ಯಾಸ ನಿರ್ದೇಶನ ಮತ್ತು ಸಂಗೀತ ನೀಡಿದ ಮಕ್ಕಳ ನಾಟಕ 'ಬಾರಯ್ಯ ಬೆಳದಿಂಗಳೇ' ಪ್ರದರ್ಶನಗೊಂಡಿತು. ಇಲ್ಲಿ ಅಜ್ಜ ಕಥೆ ಹೇಳ್ತಾನೆ. ಅದನ್ನು...

read more
ಸಂಧ್ಯಾ ರಾಣಿ ಕಾಲಂ : ಕಾಯ್ಕಿಣಿ, ಮೌನೇಶ್ ಮತ್ತು ಚಂದಿರನ ಚೂರು

‘…..ಆಗ ಅಪ್ಪನ ಮುಖದಲ್ಲಿ ನೋವು, ಅಪಮಾನ ಕಂಡಿರಲೇ ಇಲ್ಲ ತಾನು. ಅಥವಾ ಅದು ತನ್ನ ಪ್ರಪಂಚಕ್ಕೆ ನಿಲುಕುತ್ತಿರಲಿಲ್ಲವೋ ಏನೋ. .... ಇದೇ ರೀತಿ ಈಗ ಪ್ರಮೋದ ಸಹ ತನಗೆ ಅವಶ್ಯವಿದ್ದಷ್ಟನ್ನೇ ಅವಶ್ಯವಿದ್ದ ರೀತಿಯಲ್ಲಷ್ಟೇ ಕಾಣುತ್ತಿರಬಹುದು. ಪಮ್ಮಿಯ ಬಾಲ್ಯದ ಹಳಿಗಳೂ, ತನ್ನ ಬಾಲ್ಯದ ಹಳಿಗಳೂ ಪ್ರಮೋದನಲ್ಲಿ ಭಿನ್ನವಾಗದೇ ಯಾಕೆ...

read more
ಸಂಪು ಕಾಲಂ : ಭಾಷೆ ನಮ್ಮ ಸ್ಟೇಟಸ್ ಸಿಂಬಲ್ ಅಲ್ಲ!

ಮತ್ತೇನಿಲ್ಲದಿದ್ದರೂ ಕೋಮು-ಖವ್ಯಾಘ್ರನ ಅಟ್ಟಹಾಸದಿಂದ ನಮ್ಮ ರಾಜ್ಯ ಸ್ವಲ್ಪ ವಿರಾಮ ಪಡೆಯಬಹುದು ಎಂಬ ಸಮಾಧಾನದಿಂದ ನಿಟ್ಟುಸಿರೆಳೆದು ನಿತ್ಯಕರ್ಮವೆಂಬಂತೆ ಫೇಸ್ಬುಕ್ ಪುಟ ತೆರೆದೆ. ಬಹುಶಃ ಜೀವನದ ಯಾವ ದೊಡ್ಡ ವಿಚಾರಗಳಲ್ಲಿ ಶಿಸ್ತಿಲ್ಲದಿದ್ದರೂ ನಮ್ಮ ಇಡೀ ತಲೆಮಾರು ಈ ಫೇಸ್ಬುಕ್ ಎಂಬ ಸ್ನೇಹಿತನೊಂದಿಗೆ ಸಮಯ ಕಳೆಯುವಲ್ಲಿ ಅತ್ಯಂತ...

read more
ಕಾಡು ಹಕ್ಕಿಯ ಹಾದಿನೋಟ : ಪಾಪದ ಸಾಬಿಯ ಪರದಾಟ..

ಇಲ್ಲಿಯವರೆಗೆ ಹೈಸ್ಕೂಲಿನಲ್ಲಿದ್ದಾಗ ಹುಟ್ಟಿಕೊಂಡ ಸೈಕಲ್ ಪಯಣದ ಆಸೆ ಹಾಗೆಯೇ ಬೂದಿ ಮುಚ್ಚಿದ ಕೆಂಡದಂತೆ ಉಳಿದುಕೊಂಡುಬಿಟ್ಟಿತು.ಸಕಲೇಶಪುರದಲ್ಲೊಮ್ಮೆ ಅಲ್ಲಿನ ಕುರೋವ್ ಫೀಲ್ಡ್ ನಲ್ಲಿ ಸೈಕಲ್ ಕಲಿಯಲು ಹೋಗಿ ನಿರಾಶನಾಗಿ ಬಂದ ನಂತರದಲ್ಲಿ ಮತ್ತೆ ಸೈಕಲನ್ನು ಮುಟ್ಟುವ ಅವಕಾಶ ದೊರೆತಿರಲಿಲ್ಲ. ಎಸ್.ಎಸ್.ಎಲ್.ಸಿ ಪಾಸಾದ ಕೂಡಲೇ ನಮ್ಮ...

read more
ಚುನಾವಣಾ ಸ್ಪೆಷಲ್: ಹೀಗೂ ಉಂಟು!

ನಾ ಕಂಡೆ ನಿಜ ನಾಡೊಂದನ್ನು ನಾಗರಾಜ್ ಹೆತ್ತೂರು `ಚುನಾವಣಾ ಪ್ರಚಾರಕ್ಕೆ ಹೋದರೆ ಜನ ಹೇಗೆ ರಿಯಾಕ್ಟ್ ಮಾಡುತ್ತಾರೆ..?' ಈ ಕುತೂಹಲ ನನಗೆ ಸಾಕಷ್ಟು ದಿನದಿಂದ ಕಾಡುತ್ತಿತ್ತು. ಎಲ್ಲೋ ಕುಳಿತು ಯಾರ ಬಗ್ಗೆಯೋ ಅಥವಾ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಬರೆಯುವ ಬದಲು ನಿಜಕ್ಕೂ ಕ್ಷೇತ್ರದ ಸ್ಥಿತಿ ಹೇಗಿದೆ, ಜನ ಹೇಗಿದ್ದಾರೆ, ಜಾನುವಾರುಗಳ...

read more
ಫೇಸ್ ಬುಕ್ ಪಿಕ್ : ರವಿ ಮೂರ್ನಾಡ್ ನೆನಪಿನಲ್ಲಿ

ರವಿಯಸ್ತಂಗತನಾದರೂ ಮೂಡಣಾಕಾದಿತ್ಯನಿರಲಿ! ಪುಷ್ಪರಾಜ್ ಚೌಟ ಕಳೆದ ಶನಿವಾರ ಮುಂಜಾನೆ ಏಳಕ್ಕೆ ಮಡಿಕೇರಿಯ ದಾರಿ ಹಿಡಿದದ್ದು ಹಸಿರ ನಡುವೆ ಒಂದಿಷ್ಟು ತಾಜಾ ಉಸಿರು ನನ್ನ ಶ್ವಾಸಕೋಶದೊಳಗೆ ಸಾಗಲಿ ಎನ್ನುವುದಕ್ಕಾಗಿ ಅಲ್ಲ. ಮಾರ್ಚ್ ೨೮ರಂದು ಆಫ್ರಿಕಾದಲ್ಲಿ ಅಸುನೀಗಿದ್ದ ಕವಿ ಮಿತ್ರ, ಬರಹಗುರು ರವಿ ಮೂರ್ನಾಡ್ ಕುಟುಂಬವನ್ನು...

read more
ಪುಟ್ಟಿಯ ವಿಶ್ವಕ್ಕೀಗ ಬಣ್ಣಗಳಿಲ್ಲ

ಕಪ್ಪು ಚಿತ್ರದೊಳಗೊಂದು ಬೆಳಕು ರಘುನಂದನ ಕೆ. ಹೆಗಡೆ 1 ಪುಟ್ಟಿಯ ಪುಟಾಣಿ ಕೈಯಲ್ಲಿ ಜಗವೊಂದು ಸೃಷ್ಠಿಯಾಗುವ ಸೋಜಿಗ ಖಾಲಿ ಹಾಳೆಯ ಮೇಲೆ ಎಳೆದ ಗೆರೆಗಳಲ್ಲೀಗ ಚರಾಚರಗಳ ಸಂಚಾರ   ವಿಶ್ವದ ಬೃಹತ್ ಗೋಳದೊಳಗೆ ರೇಖೆ ಚುಕ್ಕಿಗಳಾಗಿ ಮನುಷ್ಯರು ಪುಟ್ಟ ಬೆರಳು ಗೀಚಿದ ಹಾಳೆ ತುಂಬ ಬ್ರಹ್ಮಾಂಡ ಕನಸು ನಳನಳಿಸುವ ಪ್ರೇಮ ಸೊಗಸು  ...

read more
ಜೋಗಿ ಬರೆದ ಚುನಾವಣಾ ಫಲಿತಾಂಶ ಗೀತೆ

ಜೋಗಿ ಜಗಳ ಇಲ್ಲ, ಹಗರಣ ಇಲ್ಲ, ಆಪರೇಷನ್ ಇಲ್ಲ, ಜೈಲುವಾಸ ಇಲ್ಲ ಚುಂಬನ ಇಲ್ಲ, ಅತ್ಯಾಚಾರ ಇಲ್ಲ. ಗಣಿಯಿಲ್ಲ, ಸಗಣಿ ಎರಚುವವರಿಲ್ಲ. ಅಭದ್ರತೆಯಿಲ್ಲ, ಪಿತೂರಿಯಿಲ್ಲ. ಬಿಟ್ಟು ತೆರಳುವವರಿಲ್ಲ, ಒಳಗೆ ಬರುವವರಿಲ್ಲ.   ಸುದ್ದಿವಾಹಿನಿಗಳು ಇನ್ನೈದು ವರ್ಷ ಏನು ಮಾಡಬೇಕು? ಸರ್ಕಾರಕ್ಕೆ ಕರುಣೆಯಿಲ್ಲ....

read more
ಕುಂ ವೀ ಕಾಲಂ : ಅರ್ಜುನ ವಿಜಯ ವೃತ್ತಾಂತವು

ನಂಜು ವಿರೋಧಪಕ್ಷದ ಮುಖಂಡ ಸುಗ್ಲಪ್ಪ ಸವಾಲೆಸೆಯದಿದ್ದಲ್ಲಿ, ಗ್ರಾಮವಾಸ್ತವ್ಯ ಹೂಡುವುದರಿಂದ ತಮ್ಮ ಪಕ್ಷದ ಸಾಮಾಜಿಕ ವರ್ಚಸ್ಸು ವೃದ್ದಿಸುವುದಲ್ಲದೆ ಮುಂಬರುವ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಬಹುಮತ ಲಬಿಸುವುದು ಖಚಿತ ಎಂದು ತಮ್ಮನ್ನು ಹೈಕಮ್ಯಾಂಡು ಪುಸಲಾಯಿಸಿ ಬೀಳ್ಕೊಡದಿದ್ದಲ್ಲಿ ತಾವು ಕುಪ್ರಸಿದ್ದ ಚಪ್ಪರದಳ್ಳಿಯಲ್ಲಿ...

read more

Pin It on Pinterest

Share This