ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ಕಣ್ಣುಗಳಲ್ಲಿ ಹುಟ್ಟಿ ಸತ್ತ ಹಾದರವ ಕ್ಷಮಿಸಿ ಬಿಡು ನೀನು…’

ಸಂಚಾರಿ ಭಾವಕ್ಕೆ ಕ್ಷಮೆ ಇರಲಿ -ನಾಗರಾಜ್ ಹರಪನಹಳ್ಳಿ. ದಂಡೆಯಲಿ ಹುಟ್ಟಿದ ಹಸಿಬಿಸಿ ವಿಚಾರ ಶಿಶುಗಳು ಹಾದರದ ಕನಸುಗಳು ದಂಡೆಯಲಿ ಪುಟ್ಟ ಹೆಜ್ಜೆಗಳ ನಿಟ್ಟು ಆಟವಾಡಿ ಸುಳಿವ ಗಾಳಿಯಲಿ ಬೆರೆತು ಸಂಜೆರಂಗಿಗೂ ರಾಗ ರತಿಯ ಬೆರೆಸಿ ಮೈಮನಗಳಿಗೆ ಅದೆಂತಹದೋ ಪುಳಕ ನೀನಿಲ್ಲದ ಕ್ಷಣ ಹುಟ್ಟಿದ ಸಂಚಾರಿ ಭಾವವನ್ನ ಕ್ಷಮಿಸಿ ಬಿಡು ನೀನು  ...

read more
ಈಗ ಕಥೆಯ ಮೇಲೂ ಗೂಂಡಾಗಿರಿ

ಎಸ್.ಸಿ. ದಿನೇಶ್ ಕುಮಾರ್ ಒಂದು ಸೃಜನಶೀಲ ಕಥೆಯನ್ನು, ಕಾದಂಬರಿಯನ್ನು, ನಾಟಕವನ್ನು ಹೇಗೆ ಓದಿಕೊಳ್ಳುವುದು ಎಂಬುದೂ ಗೊತ್ತಿಲ್ಲದಷ್ಟು ಬೌದ್ಧಿಕ ದಾರಿದ್ರ್ಯ ಮತ್ತು ಅಸಹಿಷ್ಣುತೆ ಈ ಪ್ರಮಾಣದಲ್ಲಿ ಬೆಳೆಯಬೇಕಿತ್ತೆ? ಈ ತಿಂಗಳ `ಕರವೇ ನಲ್ನುಡಿ'ಯಲ್ಲಿ ಪ್ರಕಟಗೊಂಡ `ಪಂಚಾವರಂ ಎಂಬ ದಂಡಕಾರಣ್ಯದೊಳಗೆ ಮಕ್ಕಳ ಮಾರುಕಟ್ಟೆ' ಎಂಬ ಮಹಂತೇಶ್...

read more
ಅಶೋಕ ಶೆಟ್ಟರ್ ಕಾಲಂ: ಫಾದರ್ಸ್ ಡೇ ಬೇಕೆ ಅಪ್ಪನನ್ನು ಸ್ಮರಿಸಲು?

ಕಾರ್ಮಿಕರ ದಿನ, ಅಂತರ್ರಾಷ್ಟ್ರೀಯ ಮಹಿಳಾ ದಿನಗಳೇನೋ ಗೊತ್ತಿದ್ದವು, ಇನ್ನುಳಿದ ತಂಬಾಕು ರಹಿತ ದಿನ, ಪರಿಸರ ದಿನ, ಪ್ರೇಮಿಗಳ ದಿನ ಇತ್ಯಾದಿಗಳು ಯಾವಾಗ ಪ್ರಾರಂಭವಾದವೋ ಗೊತ್ತಿಲ್ಲ . ಈಗ ಗುಬ್ಬಿಗಳಿಗಾಗಿ (ಕಾಮನ್ ಸ್ಪ್ಯಾರೊ) ಒಂದು ದಿನ, ಏಡ್ಸ್ ಇತ್ಯಾದಿ ವಿವಿಧ ಕಾಯಿಲೆಗಳಿಗೆ ಒಂದೊಂದು ದಿನಗಳು ನಿಗದಿಯಾಗಿವೆ. ಹಾಗೆ ಇಂದು...

read more
ಜೋಗಿ ಬರೆದ ಅರಣ್ಯ ಪರ್ವ

ಹಬ್ಬಿದಾ ಮಲೆ ಮಧ್ಯದೊಳಗೆ..... ಜೋಗಿ ಸಂಜೆಯಾಗುತ್ತಿತ್ತು. ಕೊಳದ ನೀರು ಕಪ್ಪಾಗುತ್ತಾ ಹೋಗುತ್ತಿತ್ತು. ನಾವು ದಡದಲ್ಲಿ ಕೂತಿದ್ದೆವು. ಕೊಳಕ್ಕೆ ಬಾಗಿಕೊಂಡಿದ್ದ ಬಿದಿರ ಮೆಳೆಗಳಲ್ಲಿ ಕುಳಿತಿದ್ದ ಕೆಂಪುಕೊಕ್ಕಿನ ಹಕ್ಕಿಗಳು ಮಾತು ನಿಲ್ಲಿಸುತ್ತಿದ್ದಂತೆ ಅವರು ಮಾತಾಡಿದರು: ನೋಯಿಸುವುದು ತುಂಬ ಸುಲಭ. ನೋಯುವುದು ಅದಕ್ಕಿಂತ ಸುಲಭ....

read more
ಪ್ರಶಾಂತ ಆಡೂರ: ನೋಡಬೇಕಿತ್ರೀ ಹುಬ್ಳಿ ಸಾಹಿತ್ಯ ಸಮ್ಮೇಳನಾ…

ಹುಬ್ಬಳ್ಳಿ ಸಾಹಿತ್ಯ ಸಮ್ಮೇಳನದ ಸಮಾರೋಪ (ಲಘು ಪ್ರಹಸನ) ಪ್ರಶಾಂತ ಆಡೂರ ಮೊನ್ನೆ ಸಂಡೇ ಹುಬ್ಬಳ್ಳಿ ಒಳಗ ತಾಲುಕ ಕನ್ನಡ ಸಾಹಿತ್ಯ ಸಮ್ಮೇಳನ ಇತ್ತ. ಹಂಗ ನಂಗ ನಮ್ಮೂರಾಗೂ ಸಾಹಿತ್ಯ ಸಮ್ಮೇಳನ ಮಾಡ್ತಾರಂತ ಗೊತ್ತಗಿದ್ದ ಒಂದ ವಾರದ ಹಿಂದ ನಮ್ಮ ದೋಸ್ತ ಒಬ್ಬಂವ ಫೊನ ಮಾಡಿ "ಏನಪಾ, ಹುಬ್ಬಳ್ಳಿ ಸಾಹಿತ್ಯ ಸಮ್ಮೇಳನಕ್ಕ ಬರಲಿಕತ್ತಿ ಇಲ್ಲ?...

read more
’ಬಾಬರಿ ಮಸೀದಿಯ ಎರಡೂವರೆ ಎಕರೆ ಬದಿಗಿಟ್ಟು…’ – ಬಿ ಎಂ ಬಷೀರ್ ಬರೀತಾರೆ

ಬಿ ಎಂ ಬಷೀರ್ ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬಂತೆ ಇಂದಿಗೂ ಇಲ್ಲಿನ ಮುಸ್ಲಿಮರನ್ನು ರಾಜಕೀಯ ನಾಯಕರು ನಂಬಿಸುತ್ತಿದ್ದಾರೆ. ವರ್ಷಗಳ ಹಿಂದೆ ಅಲಹಾಬಾದ್ ನ್ಯಾಯಾಲಯ ತನ್ನ ‘ಕಟ್ಟೆ ಪಂಚಾಯತಿ’ ತೀರ್ಪಿನಲ್ಲಿ ಈ ಜಾಗವನ್ನು ಮೂರು ಗುಂಪುಗಳಿಗೆ ಹಂಚಿಕೆ ಮಾಡಿತು. ಒಂದು ವೇಳೆ...

read more
ಸಾಹಿತ್ಯ ರಸಧಾರ ಪೋಟೋ ಆಲ್ಬಂ ಇಲ್ಲಿದೆ

ರೂಪಾರಾವ್ ಮತ್ತು ದೊಡ್ಡಮನಿ ಎಂ ಮಂಜು ಅವರು ಆಯೋಜಿಸಿದ್ದ ಆಶು ಕವಿತೆ ಮತ್ತು ಆಶು ಕಥಾ ರಚನೆಯ ಸ್ಪರ್ದೆ ಇತ್ತೀಚಿಗೆ ಎಲೆಕ್ಟ್ರಾನಿಕ್ ಸಿಟಿಯಲ್ಲಿನ ನೋಬಲ್ ಇನ್ಸಿಟ್ಯೂಟ್ ಇಲ್ಲಿ ನಡೆಯಿತು. ಗೀತರಚನೆಕಾರ ನಾಗೇಂದ್ರಪ್ರಸಾದ್ ತೀರ್ಪುಗಾರರಾಗಿದ್ದರು. ಗೀತರಚನೆಕಾರ ಹೃದಯ ಶಿವ ಬಹುಮಾನ ವಿತರಿಸಿದರು. ಈ ಕಾರ್ಯಕ್ರಮದ ಕೆಲವು ನೆನಪಿನ...

read more
ಜುಗಾರಿ ಕ್ರಾಸ್: ಬಿಟ್ಟೆನೆಂದರೂ ಬಿಡದ ಮಾಯೆ- ಜಾತಿ

ಶರಣಪ್ಪ  ಬಾಚಲಾಪುರ ಅವರು ಕೊಪ್ಪಳದ ಈ ಟಿ ವಿ ವರದಿಗಾರರು. ಜಾತಿ ಬಗ್ಗೆ ಅವರ ಅನಿಸಿಕೆಗಳನ್ನು ಇಲ್ಲಿ ಮಂಡಿಸಿದ್ದಾರೆ. 'ಸುತ್ತಲೂ ಇದೆ ಇನ್ನೂ ಜಾತಿಯತೆ' ಎನ್ನುವ ಅವರ ಈ ಬರಹಕ್ಕೆ  ಪ್ರತಿಕ್ರಿಯೆ ನೀಡಿ. ಶರಣಪ್ಪ ಬಾಚಲಾಪೂರ ಜಾತಿ ಹೀನನ ಮನೆಯ ಜ್ಯೋತಿ ತಾನು ಹೀನವೆ? ಜಾತಿ ವಿಜಾತಿ ಎನ್ನಬೇಡ ದೇವನೊಲಿದಾತನೆ ಜಾತ, ಸರ್ವಜ್ಷ. ಇದು...

read more
ಪುಸ್ತಕ ಸಿಕ್ಕಿತು…

ಸೌಮ್ಯ ಕಲ್ಯಾಣ್‌ಕರ್ ಮೊನ್ನೆ ಫೇಸ್ಬುಕ್ನಲ್ಲಿ ಜಯವಂತ ದಳವಿಯವರ ಮಾನೂ ಪುಸ್ತಕದ ಬಗ್ಗೆ ವಿಚಾರಿಸಿದ್ದೆ. ಅವಧಿಯಲ್ಲೂ ಕೂಡ ಆ ಪೋಸ್ಟ್ ಹಾಕಿದ್ದರು. ಜಗದೀಶ್ ಕೊಪ್ಪ ಅವರು ಚಂದ್ರಕಾಂತ ಪೋಕಳೆ ಅವರ ನಂಬರ್ ಕೊಟ್ಟಿದ್ದರು. ಇದರಿಂದ ಚಂದ್ರಕಾಂತ ಪೋಕಳೆ ಅವರ ಹತ್ತಿರ ಮಾತಾಡುವ ಸದವಕಾಶ ದೊರಕಿತು, ಹಾಗೂ ಪೋಕಳೆ ಅವರು ಔಟ್ ಆಫ್ ಪ್ರಿಂಟ್...

read more
ತಾಳಮದ್ದಲೆಗೆ ಫೆಲೋಷಿಪ್

ಮೂಲತಃ ಕುಮಟಾ-ಧಾರೇಶ್ವರ ಸಮೀಪದ ಗುಡಬಳ್ಳಿ ಗ್ರಾಮದ ದಿವಂಗತ ನಾರಾಯನ ಜೋಶಿ ಅವರ ನೆನಪಿಗಾಗಿ ‘ಅನೇಕ’ ಚಾರಿಟಬಲ್ ಟಸ್ಟ್‌ನ್ನು ನೋಂದಾಯಿಸಿದೆ. ಕಲೆ, ಸಾಹಿತ್ಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕೆಲಸಗಳನ್ನು ಮುಖ್ಯವಾಗಿ ಗಮನದಲ್ಲಿರಿಸಿಕೊಂಡಿದ್ದರೂ ‘ತಾಳಮದ್ದಲೆ’ಯನ್ನೇ ಕೇಂದ್ರ್ರ ಚಟುವಟಿಕೆಯ ಭಿತ್ತಿಯನ್ನಾಗಿಸಿಕೊಂಡಿರುತ್ತದೆ....

read more
ಮತ್ತೆ ಹುಟ್ಟಿದರು ಕುಂ ವೀ

'ಚಿತ್ರಮಿತ್ರ' ಮುಂಬೈನಲ್ಲಿರುತ್ತಾರೆ. ಆದರೆ ಮನಸ್ಸು ಮಾತ್ರ ಸಂಪೂರ್ಣ ಕನ್ನಡದ ನೆಲದಲ್ಲಿ. ಇದಕ್ಕೇನು ಸಾಕ್ಷಿ ಎನ್ನುತ್ತೀರಾ..? ಕನ್ನಡಸಾಹಿತ್ಯ ಲೋಕದ ಹೊಸ ಕನಸುಗಳಾದ ಅನು ಪಾವಂಜೆ, ಸಂಧ್ಯಾರಾಣಿ, ಬಿ ವಿ ಭಾರತಿ, ಸುನಿಲ್ ರಾವ್ ಹೀಗೆ.. ಇವರು ಇತ್ತೀಚೆಗೆ ರಚಿಸಿರುವ ವ್ಯಕ್ತಿಚಿತ್ರಗಳನ್ನೇ ನೋಡಿ. ಒಂದು ಬೆಳ್ಳಂಬೆಳಗ್ಗೆ ಇವರಿಗೆ...

read more
’ಬಿಗ್ ‍ಬಾಸ್ ನಂಗಿಷ್ಟ’ – ಶಾಂತಾ ನಾಗರಾಜ್ ಬರೀತಾರೆ

ಶಾಂತಾ ನಾಗರಾಜ್ ಕನ್ನಡದ ಟಿ.ವಿ.ವಾಹಿನಿಯಲ್ಲಿ ಬಿಗ್‍ಬಾಸ್ ಕಾರ್ಯಕ್ರಮ ಪ್ರಸಾರವಾಗುತ್ತಿದ್ದಂತೇ 'ಸುಧಾ'ಪತ್ರಿಕೆಯ 'ಜಾಣರಪುಟ'ದಲ್ಲಿ ಅದರ ವಿರುದ್ಧ ದ್ವನಿಗಳು ಕೇಳಿಬರತೊಡಗಿದವು. ಕನ್ನಡಿಗರಿಗೆ ಇದು ಬೇಕಾ? ಕನ್ನಡ ಸಂಸ್ಕೃತಿಗೆ ಇದು ಸಲ್ಲದು, ಇವರೆಲ್ಲ ಮಲಗುವುದು, ತಿನ್ನುವುದು, ಜಗಳವಾಡುವುದನ್ನು ನಾವ್ಯಾಕೆ ನೋಡಬೇಕು?...

read more
’ಶಂಖದೊಳಗಿನ ಮೌನ’ – ಎಚ್ ಎಸ್ ವಿ ಹೊಸ ಕವಿತೆಗಳು

ಶೂನ್ಯ ಸಿಂಹಾಸನ ಎಚ್.ಎಸ್.ವೆಂಕಟೇಶ ಮೂರ್ತಿ ಈ ಭಾನುವಾರ ಅಂದರೆ ೨೩ ಜೂನ್ ರಂದು ಬಿಡುಗಡೆಯಾಗುತ್ತಿದ್ದೆ. ಅದರ ಆಹ್ವಾನ ಪತ್ರಿಕೆ ಇಲ್ಲಿದೆ : ತಮ್ಮ ಹೊಸ ಕವಿತೆಗಳ ಸಂಗ್ರಹಕ್ಕೆ ಎಚ್ ಎಸ್ ವಿ ಬರೆದಿರುವ ಮುನ್ನುಡಿ ಅವಧಿ ಓದುಗರಿಗಾಗಿ ಅಧಿಕಾರ ಎನ್ನುವುದು ಅಹಂಕಾರದ ಪ್ರತಿಮಾಸ್ವರೂಪ. ಅಲ್ಲಿ ಸ್ಥಿತರಾದವರು ಸ್ವಸ್ಥರಾಗಿ ಉಳಿಯುವುದು...

read more
ಕೊಟ್ಟಿಗೆಯಲ್ಲಿಟ್ಟ ನೇಗಿಲು ಇಟ್ಟಲ್ಲೇ ಮಣ್ಣ ಹಿಡಿತೋ – ಹರವು ಸ್ಫೂರ್ತಿಗೌಡ ಕವಿತೆ

ಊರು.. ಊರಿನ ಕಥೆ ಹರವು ಸ್ಫೂರ್ತಿಗೌಡ ಮನೆಮಗ ಊರು ಬುಟ್ಟ ಊರ ಕಾಡು ಚಲಿಸತ್ತಾವೊ ಊರು ಮುಂದಕ್ಕೆ ಬೆಳಿತಾವೊ ದಿನಾ ತೂರಾಡ್ತಿದ್ದ ಬೀದಿ ಟಾರಾಗವೇ ಕೊಟ್ಟಿಗೆಯಲ್ಲಿಟ್ಟ ನೇಗಿಲು ಇಟ್ಟಂಗೆ ಇಟ್ಟಲೇ ಮಣ್ಣಹಿಡಿತೋ ಗದ್ದೆ ಶೀತ ಹಿಡಿಸಿದ್ದ ಕಾವೇರಿ ಹರೀತ ಉರುಳ್ತ ಕಾಣದ್ದಂಗದ್ಲು ಪಲ್ಲಗಟ್ಟಲೆ ಹಾಲುಕಟ್ಟುತ್ತಿದ ಭತ್ತ ಒಣ್ಣಗಿದ್ದ ಪೈರಾಗಿ...

read more
ಕನಸೆಂಬೋ ಕುದುರೆಯನೇರಿ…

ಅರುಣ್ ಜೋಳದ ಕೂಡ್ಲಿಗಿ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ ‘ಕನಸೆಂಬೋ ಕುದುರೆಯನೇರಿ’ ಹಲವು ಕಾರಣಗಳಿಗೆ ಮುಖ್ಯವೆನಿಸುವ ಸಿನಿಮಾ. ಇದು ಕನ್ನಡದ ಸತ್ವಯುತ ಕಥೆಗಾರ ಅಮರೇಶ ನುಗಡೋಣಿ ಅವರ ಸವಾರಿ ಕಥೆಯನ್ನಾಧರಿಸಿದ ಸಿನಿಮಾ. ಇಲ್ಲಿ ಸಾಮಾಜಿಕ ಸಂಗತಿಯೊಂದು ಕಥೆ ಮತ್ತು ಸಿನಿಮಾ ಮಾದ್ಯಮದಲ್ಲಿ ತೆರೆದುಕೊಳ್ಳುವ ಭಿನ್ನ ಆಯಾಮಗಳನ್ನು...

read more
’Facebook ಪರಿಣಯ ಪ್ರಸಂಗ!’ – ಹೇಮಾ ಹೆಬ್ಬಗೋಡಿ

ಹೇಮಾ ಹೆಬ್ಬಗೋಡಿ Fb ಯೊಂದಿಗಿನ ನನ್ನ ಒಡನಾಟ ಶುರುವಾದದ್ದು ನನ್ನ ಕಾಲೇಜಿನ ಕೊನೆಯ ದಿನಗಳಲ್ಲಿ. ಕಾಲೇಜು ಶುರುವಾಗಿ ಸ್ವಲ್ಪದಿನಗಳಿಗೆ ಮುದುಡಿಕೊಂಡಿದ್ದ ಮೈಮನಸುಗಳು ಮೆಲ್ಲಗೆ ಹರಡಿಕೊಳ್ಳಲಾರಂಭಿಸಿತು. ಕ್ರಮೇಣ ಜೊತೆಯವರೊಂದಿಗೆ ಸ್ನೇಹ, ಸಲಿಗೆ ಬೆಳೆಯಿತು. ಹಳೆಯ ಸ್ನೇಹಿತರು ಮರೆವೆಗೆ ಸರಿದಂತೆ ಹೊಸ ಸ್ನೇಹಿತರ ಬಳಗ...

read more
ಕುಲಾಂತರಿ ಬೀಜ ಸಂಪೂರ್ಣ ಸಾವಯವದ ವಿರೋಧಿ…

ಸುಂದರ ರಾಮನ್ ಸಂದರ್ಶನ   ತಮಿಳುನಾಡಿನ ಸತ್ಯಮಂಗಲದ ಹೆಸರಾಂತ ಸಾವಯವ ಕೃಷಿಕ ಎಸ್. ಆರ್. ಸುಂದರ ರಾಮನ್ ಅವರು ಇತ್ತೀಚೆಗೆ ನಂಜನಗೂಡು(ಮೈಸೂರು ಜಿ|), ಮಾಗಡಿ(ರಾಮನಗರ ಜಿ|) ಮತ್ತು ಕೊಟ್ಟೂರು(ಬಳ್ಳಾರಿ ಜಿ|)ಗಳಲ್ಲಿ 'ಸಾವಯವ ಕೃಷಿಯಲ್ಲಿ ಸಸ್ಯ ಸಂರಕ್ಷಣೆ' ಕುರಿತು ಅನೇಕ ಕಾರ್ಯಗಾರಗಳನ್ನು ನಡೆಸಿಕೊಟ್ಟರು. ಸ್ಥಳೀಯವಾಗಿ...

read more
ಬ್ರೇಕಿಂಗ್ ನ್ಯೂಸ್: ಬಿ ಎಂ ಬಷೀರ್ ಗೆ ಲಂಕೇಶ್ ಪ್ರಶಸ್ತಿ

ಶಿವಮೊಗ್ಗದ ಕರ್ನಾಟಕ ಸಂಘ ನೀಡುವ ಪಿ ಲಂಕೇಶ್ ಪ್ರಶಸ್ತಿ ಈ ಬಾರಿ ಕಥೆಗಾರ ಹಿರಿಯ ಪತ್ರಕರ್ತ ಬಿ ಎಂ ಬಷೀರ್ ಅವರಿಗೆ ಸಂದಿದೆ. ಇದೇ ಸಂಘ ನೀಡುವ ಕಥಾ ವಿಭಾಗದ ಪ್ರಶಸ್ತಿ ಬಸವಣ್ಣೆಪ್ಪ ಕುಂಬಾರ ಅವರಿಗೆ,  ಕಾವ್ಯ ವಿಭಾಗದ ಪ್ರಶಸ್ತಿ ಗಿರಿಜಾ ಶಾಸ್ತ್ರಿ ಅವರಿಗೆ ಹಾಗೂ ಡಾ ಎಚ್ ಎಸ್ ಅನುಪಮಾ ಅವರಿಗೆ ಅನುವಾದಕ್ಕಾಗಿ ಸಂದಿದೆ. ೨೦೧೨ ನೆ...

read more
ಸುಗತ ಬರೆಯುತ್ತಾರೆ: ನಮ್ಮಆಯ್ಕೆಗಳು ಮತ್ತು ಅಂತರ್ಜಾಲ ಬೇಹುಗಾರಿಕೆ

ಸುಗತ ಶ್ರೀನಿವಾಸರಾಜು ಕನ್ನಡದಲ್ಲಿ 'ಬಿಗ್ ಬಾಸ್' ಎಂಬ ಧಾರಾವಾಹಿ ಬಹಳ ಜನಪ್ರಿಯವಾಗಿದೆ. ಮುಕ್ತಾಯದ ಹಂತ ತಲುಪಿರುವ ಈ ಸರಣಿಯಲ್ಲಿ ನಾವು ಕಂಡಿದ್ದು, ಒಂದು ಗೂಡಿನಲ್ಲಿ ಕೂಡಿ ಹಾಕಿದ ಕೆಲವು ಮಂದಿಯ ಖಾಸಗಿ ಬದುಕನ್ನು-ಅವರು ನಿದ್ರಿಸುವುದು, ಊಟ ಮಾಡುವುದು, ಆಟವಾಡುವುದು, ಜಗಳವಾಡುವುದು, ಆಣೆ -ಪ್ರಮಾಣ ಮಾಡುವುದು, ಪ್ರೀತಿ ಮತ್ತು...

read more
ಮಂಡ್ಯ ರಮೇಶ್ ಕಾಲಂ: ನಾನು ಮತ್ತು ’ಆದಿಮ’
ಮಂಡ್ಯ ರಮೇಶ್ ಕಾಲಂ: ನಾನು ಮತ್ತು ’ಆದಿಮ’

'ಆದಿಮ' ನನಗೆ ಹೊಸತಲ್ಲ, ಅನೇಕ ಬಾರಿ ಹೋಗಿ ಬಂದಿದ್ದೇನೆ. ಮೊದಲ ಬಾರಿಯಂತೂ 'ಕನಸನ್ನೇ ಕದ್ಬಿಟ್ಟಿದ್ದೀರಲ್ಲಾ ಗುರುಗಳೇ!' ಅಂತಾ ಪ್ರೀತಿಯ ಕೋಟಗಾನಹಳ್ಳಿ ರಾಮಯ್ಯನವರನ್ನು ಕಾಡಿಬಿಟ್ಟಿದ್ದೆ. ವರ್ಷಕ್ಕೊಂದೆರಡು ಬಾರಿ 'ಆದಿಮ'ದ ಬಂಡೆ ಮೇಲೆ ಕೂತು ಹರಟದಿದ್ದರೇ ಎಂಥದ್ದೋ ಕಳೆದುಕೊಂಡ ಅನುಭವ! ನಟನ ತಂಡದ ಚೋರ ಚರಣದಾಸ, ನಾನು...

read more

Pin It on Pinterest

Share This