ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬ್ಲಾಗ್ ಪಿಕ್ : ’ಫೇಸ್ಬುಕ್ಕಲ್ಲಿ ಅಷ್ಟೆಲ್ಲ ಮಾತನಾಡಿಕೊಂಡವರು…’
ಬಿ ಎಂ ಬಶೀರ್ ಗುಜರಿ ಅಂಗಡಿ ಯುದ್ಧ ಖ್ಯಾತ ರಂಗನಟನೊಬ್ಬ ಪ್ರಾಥಮಿಕ ಶಾಲೆಯೊಂದಕ್ಕೆ ನಾಟಕ ತರಬೇತಿ ನೀಡಲು ಬಂದಿದ್ದ. ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಎಷ್ಟಿದೆ ಎಂದು ಗುರುತಿಸಲು ‘‘ಮಕ್ಕಳೇ...ನೀವು ಯುದ್ಧದ ದೃಶ್ಯವನ್ನು ಅಭಿನಯಿಸಿ ತೋರಿಸಿ’’ ಎಂದು ಹೇಳಿದ. ಮಕ್ಕಳೆಲ್ಲರೂ ಬಯಲಲ್ಲಿ ಹೆಣಗಳಂತೆ ಸುಮ್ಮಗೆ ಮಲಗಿ ಬಿಟ್ಟರು. ಮೈದಾನ...
ಕಥೆ – 'ಸವೆದುಹೋದ ಯಂತ್ರ'
-ಟಿ.ತಿಮ್ಮಪ್ಪ ಮೊಬೈಲಿನಲ್ಲಿ ಅಲಾರಾಂ ಒಂದೇ ಸಮ ಕಿರುಚತೊಡಗಿದಾಗ ಇನ್ನೂ ನನ್ನ ನಿದ್ರೆ ಆರಿರಲಿಲ್ಲ. ಈ ಬೆಳಿಗ್ಗೆ ಅನ್ನೋದು ಎಷ್ಟು ಬೇಗ ಬಂದುಬಿಡುತ್ತಪ್ಪ ಥತ್ ಎಂದು ಮನದಲ್ಲಿಯೇ ಗೊಣಗಿಕೊಂಡು ಎದ್ದು ಟವೆಲ್ ಹಿಡಿದು ಬಾತ್ ರೂಮಿಗೆ ಹೋದೆ. ಗಡ್ಡ ಕೆರೆದುಕೊಂಡು ಬ್ರಷ್ ಮಾಡಿ ಮೈಮೇಲೆ ಷವರ್ನಿಂದ ನೀರು ಎರೆದುಕೊಂಡು ಹೊರಗೆ ಬರುವ...
’ಬಿಕ್ಕುತಿಹೆ ಬೇಡುತಿಹೆ ಪ್ರೀತಿಯಲಿ ಬೈಯುತಿಹೆ…’ – ರೇಖಾ ಹೆಗಡೆ ಕವನ
ಮೌನದ ಮನವಿ ರೇಖಾ ಹೆಗಡೆ ಬಾಳೇಸರ ಎಲ್ಲಿ ಅಡಗಿರುವೆ ಸ್ವರ ಮೆಲ್ಲಗೆ ಮರೆಯಾಗಿ ಕಲ್ಲಾಗಿದೆ ಕೊರಳು ಸೊಲ್ಲೆತ್ತಲೂ ಬರದೆ ಮನ್ನಿಸು ಅಸಡ್ಡೆಯನು ಬಿನ್ನಹದ ಉಪೇಕ್ಷೆಯನು ನಿನ್ನಿರುವ ಮರೆತು ಬೆನ್ನು ತೋರಿದ ತಪ್ಪನು ಮತ್ತಿನ ಮಬ್ಬಿನಲಿದ್ದೆ ಕತ್ತಲೆಯ ಹೊದ್ದಿದ್ದೆ ಚಿತ್ತದ ನುಡಿ ಲೆಕ್ಕಿಸದೆ ಮೆತ್ತಗೆ ಮುಸುಕೆಳೆದಿದ್ದೆ...
ನೀವೂ ಬನ್ನಿ…
ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಕಾಲರ್ ಮೇಲಿನ ಕೂರೆಯೂ ಮತ್ತು ಇಂಗ್ಲೀಷ್ ವ್ಯಾಮೋಹವೂ
(ಇಲ್ಲಿಯವರೆಗೆ...) ಚೀಲದ ಅಡಿಯಿಂದ ಪುಸ್ತಕ ಹೊರಗೆ ಬರುತ್ತಿದ್ದರೂ ಅದನ್ನು ಗಮನಿಸದೆ ಹೆಗಲಿಗೆ ಹಾಕಿಕೊಂಡ ಚಿಟ್ಟಿಗೆ ಅಜ್ಜಿ ಅಡುಗೆ ಮನೆಯಲ್ಲಿ ಒಂದೇಸಮನೆ ವಟಾ ವಟಾ ಅಂತಿದ್ದದ್ದ್ದು ಕೇಳುತ್ತಿತ್ತು. ಅಜ್ಜಿ ಬೆಳಗಿನಿಂದ ಚಿಟ್ಟಿಯನ್ನು ಮಾತೂ ಆಡಿಸಿರಲಿಲ್ಲ. ಅವಳ ಮಾತನ್ನ ಕೇಳಿದರೆ ಯಾಕೋ ತುಂಬಾ ನೋವಲ್ಲಿದ್ದಾಲೆ ಅನ್ನಿಸುತ್ತಿತ್ತು...
ನನ್ನನ್ನು ಕಾಡಿದ ’ನಿಮಿತ್ತ’ ….
ರಮೇಶ್ ಗುರುರಾಜ ರಾವ್ ಬದುಕನ್ನು ಯಾವ ಉದ್ದೇಶಕ್ಕೆ ಬದುಕುತ್ತೇವೋ (ಅದು ಸರಿಯೋ ತಪ್ಪೋ, ನಿಜವೋ ಸುಳ್ಳೋ ಅದು ಬೇರೆ ವಿಚಾರ) ಅದನ್ನು ಸಣ್ಣ ಸಣ್ಣ ಎಳೆಗಳಾಗಿ ಕಂಡಾಗ ನಮಗಾಗುವ ಅನುಭವ ಊಹೆಗೂ ನಿಲುಕದ್ದು. ಹೌದಾ ? ಹೀಗೂ ಉಂಟಾ ? ಅರೆ ಈ ಸಂಧರ್ಭ ನನ್ನ ಬದುಕಲ್ಲೇ ಆಗಿದ್ದಲ್ಲವಾ ? ಇದೆಲ್ಲಾ ಪ್ರಶ್ನೆಗಳು ಹುಟ್ಟುವುದು ಸುಳ್ಳಲ್ಲ........
ದೇವನೂರರ ‘ಕುಸುಮಬಾಲೆ’
ಸುರೇಶ್ ನಾಗಲಮಡಿಕೆ ದೇವನೂರು ಮಹಾದೇವ ಅವರ ಕುಸುಮ ಬಾಲೆ ಪ್ರಕಟಗೊಂಡಿದ್ದು 1984 ರಲ್ಲಿ ಆ ವೇಳೆಗೆ ದಲಿತ - ಬಂಡಾಯ ಚಳುವಳಿಗಳು ತನ್ನ ಉನ್ನತಿಯನ್ನು ಹಾಗೆಯೇ ಕ್ವಚಿತ್ತಾಗಿ ಮುಖಹೀನತೆಯನ್ನು ಅನುಭವಿಸಿದ್ದವು. ಈ ಕಾದಂಬರಿಯನ್ನು ಓದುವಾಗ ನಾವು ಯಾವುದೇ ಒಂದು ಸಿದ್ಧಾಂತವನ್ನಾಗಲೀ ಅದರ ಪ್ರಣಾಳಿಕೆಯನ್ನಾಗಲೀ...
ಈಗೀಗ ಹಗಲು ರಾತ್ರಿಗಳು ಒಂದಾಗಿವೆ…
ಸಾಫ್ಟ ವೇರ್ ಸ್ವಗತ ನಾಗರಾಜ್ ಹರಪನಹಳ್ಳಿ ನಾಜೂಕು ದೇಹಕ್ಕೆ ತೊಡಿಸಿದ ಬಟ್ಟೆ ಹರಿದು ಹೋಗಿದೆ ಕೋಣೆಯ ಟೇಬಲ್ ಮೇಲಿನ ಪೋಟೋ ಅಣಕಿಸುತ್ತಿದೆ ಅಡುಗೆ ಮನೆಯಿಂದ ಹೊರಬಿದ್ದು ಬಂದೆ ಕಾಂಕ್ರೀಟ್ ಕಾಡಿನ ನಗರ ಗರ ಬಡಿದಂತಿದೆ ಯಾರ ಅಳುವು ಯಾರ ಕರುಳನ್ನು ಕರಗಿಸುವುದಿಲ್ಲ ಸಾಫ್ಟ್ ವೇರ್ ಮುಂದೆ ಕುಳಿತು...
'ಅಲೆಮಾರಿಯ ಅಂತರಂಗ…’ – ಜಿ ಪಿ ಬಸವರಾಜು ಬರೀತಾರೆ
ನೆಲೆಯಿಲ್ಲದ ಅಲೆಮಾರಿಗಳು ಜಿ.ಪಿ.ಬಸವರಾಜು 'ಇಷ್ಟು ವಿಶಾಲವಾದ ಈ ಭೂಮಿಯ ಮೇಲೆ ನನ್ನ ಅಪ್ಪನಿಗೆ ಎಲ್ಲಿಯೂ ಒಂದು ಅಂಗೈ ಅಗಲ ಜಾಗ ಇರಲಿಲ್ಲ.' ಇಡೀ ಭೂಮಂಡಲವನ್ನೇ ನುಂಗಲು ಹೊರಟಿರುವ ಭೂಗಳ್ಳರನ್ನು ನಿತ್ಯವೂ ನೋಡುತ್ತಿರುವ ನಮ್ಮಂಥವರಿಗೆ ಈ ಒಂದು ಮಾತು ಹೇಗೆ ಅರ್ಥವಾಗುತ್ತದೋ ಹೇಳುವುದು ಕಷ್ಟ. ನನಗಂತೂ ಈ ಮಾತಿನಲ್ಲಿ...
ಮತ್ತೊಂದು ಜ಼ೆನ್ ಕಥೆ : ಸಾವು ತಪ್ಪುವುದಿಲ್ಲ …
ರವಿವರ್ಮ, ಹೊಸಪೇಟೆ ಮಾಸ್ಟರ್ ಇಕ಼್ಯು ಬಾಲ್ಯದಿಂದಲೇ ಬಲು ಚುರುಕು..ಎಲ್ಲ ಸಮಯದಲ್ಲೂ ತನ್ನ ಚಾಣಾಕ್ಷ್ಯತನವನ್ನು ಪ್ರದರ್ಶಿಸುತ್ತಿದ್ದ. ಒಮ್ಮೆ ಗುರುಗಳ ಟೀ ಕಪ್ಪನ್ನು ಕೆಳಗೆ ಬೀಳಿಸಿದ ..ಅದು ಚೂರುಚೂರಾಗಿತ್ತು ..ಆ ಚೂರುಗಳನ್ನು ತಗೆದು ಮುಚ್ಚಿಟ್ಟ. ಸ್ವಲ್ಪ ಸಮಯದ ನಂತರ ಗುರುಗಳು ಬಂದರು .. ಇಕ಼್ಯು ಗುರುಗಳನ್ನು ನೋಡುತ್ತಾ .......
ಜುಗಾರಿ ಕ್ರಾಸ್: ಮಾನ್ಯ ಜಿ ಎನ್ ನಾಗರಾಜ್‌ರವರೆ..
ವಚನ ಚಳುವಳಿಯ ಬಗ್ಗೆ, ಜಾತಿ ಪದ್ಧತಿಯನ್ನು ಅವು ವಿರೋಧಿಸಿದ್ದರ ಬಗ್ಗೆ ಜಿ ಎನ್ ನಾಗರಾಜ್‌ರವರ ಲೇಖನ ಸರಣಿ ಅವಧಿಯಲ್ಲಿ ಪ್ರಕಟವಾಗಿತ್ತು. ಅದರ ಒಂದು ಕೊಂಡಿ ಇಲ್ಲಿದೆ. ಆ ಲೇಖನಕ್ಕೆ ಕಿರಣ್ ಅವರು ಬರೆದಿರುವ ಪ್ರತಿಕ್ರಿಯೆ ಇದು. ಹೇಳಿ ಕೇಳಿ ಇದು ಜುಗಾರಿ ಕ್ರಾಸ್, ಚರ್ಚಾ ಚಾವಡಿ. ಪ್ರಶ್ನೆ-ಉತ್ತರ ಇಲ್ಲಿ ಇದ್ದದ್ದೇ. ಜಿ ಎನ್...
ಮಂಡ್ಯ ರಮೇಶ್ ಕಾಲಂ : ಭೂಮಿಗೀತವನ್ನು ರಂಗಕ್ಕೇರಿಸಿದ್ದು…
ಬಣ್ಣದ ಬೇರು (ಇಲ್ಲಿಯವರೆಗೆ...) ಬೇರೆ ಬೇರೆ ಬಗೆಯ ನಟರಿರ್ತಾರೆ. ಪ್ರತೀ ನಟರಿಗೂ ಅವರದ್ದೇ ಆದ ವಿಶೇಷ ಗುಣಗಳು ಇರ್ತಾವೆ. ಆ ವಿಶೇಷತೆಗೆ ನಾವು ಹೋಲಿಕೆ ಗುಣಗಳನ್ನು ಕಂಡುಕೊಳ್ಳುವುದು ಸಾಧ್ಯವಾದರೆ., ಅದು ಪಾತ್ರ ಬೆಳವಣಿಗೆಗೆ ಸಹಾಯವಾಗುತ್ತದೆ. ಉದಾಹರಣೆಗೆ, ಬೆಂಕಿಯ ಹಾಗೆ, ನೀರಿನ ಗುಣ, ಗಾಳಿಯಷ್ಟು ಹಗುರ, ಭೂಮಿಯಂತೆ ಭಾರ,......
'ಅವಳೆದೆಯೊಳಗಿನ ಗುಟ್ಟು…’ – ಚಿತ್ರಾ ಸಂತೋಷ್ ಬರೀತಾರೆ
ಚಿತ್ರಾ ಸಂತೋಷ್ "ನೀನು ಮೊದಲ ತರ ಇಲ್ಲ' ಅವನು ಮುಖ ಗಂಟಿಕ್ಕಿದ. "ನೀನೂ ಸಹ'' ಅವಳಂದಳು. ಮಂಚದ ಮೇಲೆ ಎದುರು-ಬದುರು ಕುಳಿತು ಮಾತಾಡುತ್ತಿದ್ದ ಅವರ ಮಾತುಗಳಿಗೆ ಎದುರುಗಡೆ ಇದ್ದ ಕನ್ನಡಿ ಸಾಕ್ಷಿಯಾಗಿತ್ತು. "ನೀನು ದಿನ ಹೋದಂಗೆ ದಪ್ಪ ಆಗುತ್ತಿದ್ದಿ. ಸಣ್ಣ ಆಗು' ಅವನ ಸಲಹೆ "ನೀನು ಮೊದಲೆಲ್ಲಾ ಹೀಗೆ ಹೇಳುತ್ತಿರಲಿಲ್ಲ. ನಾನು...
'ಕಾವ್ಯ ಗ೦ಧದ ಹುಡುಗಿ ಉರಿದುರಿದು…'
ಮಿಡಿದು ನಡೆದವಳು ಮೇಗರವಳ್ಳಿ ರಮೇಶ್ ( ಕಾವ್ಯವಾಗಿ ಕಾಲದಲ್ಲಿ ಕರಗಿ ಹೋದ ಕವಯತ್ರಿ ವಿಭಾ ರವರ ಕವಿತೆಗಳನ್ನು ಓದಿ ಬರೆದದ್ದು) ಜೀವ ಮಿಡಿತದ ಸದ್ದು ಕೇಳಿಸಿಕೊ೦ಡಿರಲಿಲ್ಲ ನಾನು ಇದುವರೆಗೆ ಆ ಸದ್ದು ನಿ೦ತದ್ದು ತಿಳಿಯಲೇ ಇಲ್ಲ ಜಗದ ಜ೦ಜಡದೊಳಗೆ ಮುಳುಗಿದ್ದ ನನಗೆ! ನೋಡಿಲ್ಲ ಅವಳನ್ನ, ಆ ಹುಡುಗಿಯನ್ನ ಕಾವ್ಯ ಜಲ ತು೦ಬಿ...
’ಇವಾಳಜ್ಜಿಯೂ ಆದಮಜ್ಜನೂ….’ ನಾಟಕ ಪ್ರದರ್ಶಿಸುತ್ತೇವೆ
ಜರ್ನಿ ಥೇಟರ್ ಗ್ರೂಪ್, ಮಂಗಳೂರು ...................ನಿಲ್ಲದ ಪಯಣ ನಮಸ್ತೆ, ನಾವು ಜರ್ನಿ ಥೇಟರ್ ಕಲಾವಿದರು. ರಂಗಪ್ರೀತಿಯ ಗೆಳೆಯರ ಬಳಗ. ರಂಗಸಾಧ್ಯತೆಗಳನ್ನು ಬಳಸಿಕೊಂಡು ರಂಗಪ್ರಯೋಗಗಳನ್ನು ಕಟ್ಟುವ ಪ್ರಯತ್ನಗಳನ್ನು ಮಾಡುತ್ತಾ ಬಂದಿದ್ದೇವೆ. ಅದರ ಪ್ರತಿಫಲವೇ ಇವಾಳಜ್ಜಿಯೂ ಆದಮಜ್ಜನೂ ಎಂಬ ನಾಟಕದ ಹುಟ್ಟು. ನಾಟಕ: ಮನುಕುಲದ...
ಸಿಂಧೂರ ಲಕ್ಷ್ಮಣನೆಂದರೆ ಸಾಕು…
ಮರೆಯಲಾಗದ ಮಹಾನ್ ಹೋರಾಟಗಾರ ಸಿಂಧೂರ ಲಕ್ಷ್ಮಣ (ಇಂದು, ಜುಲೈ 22 ರಂದು ಸಿಂಧೂರ ಲಕ್ಷ್ಮಣನ ಹುತಾತ್ಮದಿನ) ಡಾ ಪ್ರಕಾಶ ಗ ಖಾಡೆ ‘ಸ್ವಾತಂತ್ರ್ಯ’ ಎನ್ನುವುದು ಪ್ರತಿ ಜೀವಿತ ಪ್ರಾಣಿಯ ಸಾಮಾಜಿಕ ಹಕ್ಕು ಅದನ್ನು ಯಾರೂ ಯಾವ ಕಾಲಕ್ಕೂ ಕಸಿದುಕೊಳ್ಳಲಾರರು. ಇದರ ರಕ್ಷಣೆಗಾಗಿ ಮನುಷ್ಯ ತನ್ನದೇಯಾದ ರಕ್ಷಣಾತ್ಮಕ ನಿಲುವು ಮತ್ತು ನೆಲೆ...
ಕಲಬುರ್ಗಿಯಲ್ಲಿ ’ಹೇಳತೇನ ಕೇಳಾ’
ರೂಪ ಹಾಸನ್ ಕವಿತೆ: ಸಹಜ ಧ್ಯಾನ
ರೂಪ ಹಾಸನ ಹೂಕೋಸಿನ ರೂಪ ಬಣ್ಣದಲಿ ಮನ ಲೀನ. ಮಲಿನ. ಹೆಚ್ಚುತ್ತಾ ಮೆಚ್ಚುತ್ತಾ ಅದರ ಬುಡದಲ್ಲೇ ಹರಿವ ಪಿತಿಪಿತಿ ಹುಳು ಕಂಡರೂ ಕಾಣದಂತೆ ಚೆಲುವಿನಾರಾಧನಾ ಧ್ಯಾನ ಪೀಠಸ್ಥ ಆದೇಶಕ್ಕೆ ಮಹಾಮೌನ. ದಂಟು ಬೇಳೆ ಬೇಯಿಸಿ ಬಸಿದು ಮೆಣಸು ಮಸಾಲೆ ಖಾರ ಹದ ಬೆರೆಸಿ ಕುದಿಸಿ ಒಗ್ಗರಿಸಿ ಬಸ್ಸಾರಿನ ರಸಗಂಧವ ಆಘ್ರಾಣಿಸಿ ಹೀರಿ ಕರುಳಿನಾಳದ...
ತೇಜಸ್ವಿಯನ್ನು ಹುಡುಕುತ್ತಾ: ದತ್ತಣ್ಣನಿಂದ ಸಿಕ್ಕ ಮಾಹಿತಿ
ಭಾಗ- ೫ ಇಲ್ಲಿಯವರೆಗೆ ’ನಿರುತ್ತರ’ದಿಂದ ಹಿಂದಿರುಗಿದವರೇ ಸಂಜೆಯವರೆಗೂ ಸಂತೆ ಮೈದಾನ, ಪ್ರವಾಸಿ ಮಂದಿರ, ಹ್ಯಾಂಡ್ ಪೋಸ್ಟ್, ದೇವಸ್ಥಾನದ ರಸ್ತೆ, ಹಳೆ ಮೂಡಿಗೆರೆ ಇಲ್ಲೆಲ್ಲಾ ಸುತ್ತಾಡಿ ಮೂಡಿಗೆರೆಯ ಪರಿಚಯ ಮಾಡಿಕೊಳ್ಳಲು ಪ್ರಯತ್ನಿಸಿದೆವು. ಸಂಜೆ 5 ಗಂಟೆಗೆ ಮೂಡಿಗೆರೆಯ ಮಸೀದಿ ರಸ್ತೆಯಲ್ಲಿ ನಡೆದು ಮನೆಯೊಂದರ ಗೇಟು ತೆಗೆದು ಅಂಗಳ...
ಜಿ ಎನ್ ನಾಗರಾಜ್ ಕೇಳ್ತಾರೆ: ಬೇರೆ ಧರ್ಮದ ಮೇಲೆ ಹಗೆ ಸಾಧಿಸುವುದೇಕೆ?
ಭಾಗ ೬ ಭಾಗ ೫ ಓದಲು ಇಲ್ಲಿ ಕ್ಲಿಕ್ಕಿಸಿ ಇನ್ನು ಮನುಷ್ಯ ಸಮಾಜದ ಜಾತಿವ್ಯವಸ್ಥೆಯ ಬಗ್ಗೆ, ಜಾತಿ ಬೇಧಗಳ ಬಗ್ಗೆ ಶಂಕರರು ಏನು ಹೇಳುತ್ತಾರೆ ನೋಡೋಣ ಬ್ರಹ್ಮ ಸೂತ್ರದಲ್ಲಿ ಅಪ ಶೂದ್ರಾಧಿಕರಣವೆಂದು ಕರೆಯಲ್ಪಡುವ ಭಾಗದಲ್ಲಿ 1-3- 34 ರಿಂದ 1-3-38 ರವರೆಗಿನ ಸೂತ್ರಗಳ ಬಗ್ಗೆ ಶಂಕರರು ನೀಡಿದ ವಿವರಣೆಗಳಲ್ಲಿ ಶೂದ್ರರಿಗೆ ಜ್ಞಾನದ...
ಅರುಣ ಜೋಳದಕೂಡ್ಲಿಗಿ ಕಾಲಂ: ಇವರು ಮಕಾಳಿ..
ಜನಪದವನ್ನು ಒಂದು ಸಂವೇದನೆಯನ್ನಾಗಿ ಸಾಹಿತಿಗಳು, ಸಂಗೀತಗಾರರು, ಕಲಾವಿದರು ತಮ್ಮ ತಮ್ಮ ಮಾದ್ಯಮಗಳಲ್ಲಿ ದಾಟಿಸುತ್ತಿದ್ದಾರೆ. ಹೀಗೆ ಜನಪದ ಸಂವೇದನೆ ಬಹುಮುಖಿಯಾಗಿ ಅಭಿವ್ಯಕ್ತಗೊಳ್ಳುತ್ತಲೇ ಬಂದಿದೆ. ಇಂತಹ ಅಭಿವ್ಯಕ್ತಿಗಳಲ್ಲಿ ಜನಪದದ ಸೃಜನಶೀಲ ಜಗತ್ತು ವಿಸ್ತರಿಸುತ್ತದೆ. ಬೇಂದ್ರೆ ಕಂಬಾರರು ಜನಪದ ಕಾವ್ಯವನ್ನು ದುಡಿಸಿಕೊಂಡರೆ,...
