ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನಮ್ಮ ಮನೆಗೆ ಬಂದ ಸುಸ್ಸೂ ರಾಜ!

ಪಪ್ಪಾ, ಸುಸ್ಸೂ ರಾಜಾ ..! ಡಾ ಎಸ್ ಬಿ ಜೋಗುರ ಕಂದು ಬಣ್ಣದ ಆ ನಾಯಿ ಕರೆಯದೇ ಬಂದಿತ್ತು. ಚು..ಚು.. ಅಂತ ಲಲ್ಲೆಗರೆದದ್ದೇ ಬಾಲ ಅಲ್ಲಾಡಿಸುತ್ತಾ ಓಡಿ ಬಂದು ನನ್ನ ಮೇಲೆ ಅಂಟರಗಾಲು ಕೊಟ್ಟಿತ್ತು. ಪ್ಯಾಂಟ್ ಕೊಳೆಯಾಗಿತ್ತು. ಅದು ರೇಮಂಡ್ ಪ್ಯಾಂಟು ಎನ್ನುವ ಖಬರೂ ಅದಕ್ಕಿರಲಿಲ್ಲ. ನನ್ನ ಮಗ ಮತ್ತು ಹೆಂಡತಿ ಇಬ್ಬರೂ ಹೀಗೆ ಕರೆಯದೇ...

read more
ತೇಜಸ್ವಿಯನ್ನು ಹುಡುಕುತ್ತಾ : ಶಿವ ಎಂಬ ತೇಜಸ್ವಿಯ ಬಲಗೈ ಭಂಟ

(ಇಲ್ಲಿಯವರೆಗೆ...) ’ಶಿವ’…ಅಕ್ಷರಶಃ ತೇಜಸ್ವಿಯವರ ಬಲಗೈ ಭಂಟ. ಸುಮಾರು ೨೫ ವರ್ಷಗಳ ಕಾಲ ತೇಜಸ್ವಿಯವರಿಗೆ ಬಹುತೇಕ ಅವರ ಎಲ್ಲಾ ಕೆಲಸಗಳಲ್ಲಿ, ಆಸಕ್ತಿಗಳಲ್ಲಿ, ಅಲೆದಾಟಗಳಲ್ಲಿ ಸಾಥಿಯಾಗಿದ್ದವನು ಈ ಶಿವ. ಅದು ’ನಿರುತ್ತರ’ ತೋಟದ ಸಂಪೂರ್ಣ ನಿರ್ವಹಣೆ ಇರಬಹುದು, ಆಳುಕಾಳುಗಳ ಮೇಲ್ವಿಚಾರಣೆ ಇರಬಹುದು, ಅಥವಾವ ತೋಟದೊಳಗೆ ನೀರು...

read more
ಅರುಣ್ ಜೋಳದಕೂಡ್ಲಿಗಿ ಕಾಲಂ : ಪಾತ್ರೆ ಪರಿಕರಗಳಲ್ಲಿ ಹೆಣ್ಣಿನ ಒಡಕಲು ಬಿಂಬಗಳು

`ಹಳೆ ಪಾತ್ರೆ, ಹಳೆ ಕಬುಣ, ಹಳೆ ಪೇಪರ್ ತರ ಹೋಯ್, ಈ ಪ್ರೀತಿ ಈ ಪ್ರೇಮ ಬಲು ಬೇಜಾರ್ ಕಣೋ ಹೋಯ್’ ಎಂಬ ಜಂಗ್ಲಿ ಚಲನಚಿತ್ರದ ಯೋಗರಾಜ ಭಟ್ಟರು ಬರೆದ ಹಾಡು ಹೆಚ್ಚು ಚರ್ಚೆಗೆ ಒಳಗಾಯಿತು. ಇದು  ಚರ್ಚೆ ಎನ್ನುವುದಕ್ಕಿಂತ ನಕಾರಾತ್ಮಕ ಭಾವನೆಯ ಅಸಹನೆಯನ್ನು ಹುಟ್ಟಿಸಿತ್ತು ಎನ್ನುವುದೇ ಸರಿ. ಲೈಂಗಿಕ ದ್ವಂದ್ವಾರ್ಥದ ನೂರಾರು ಹಾಡುಗಳ...

read more
ಫೇಸ್ ಬುಕ್ ಪಿಕ್ : ’ನನ್ನ ಹೆಸರು ಖುಷಿ…’

ಸಂತೋಷವನ್ನು ಕನಸಲ್ಲಿ ಅರಸಬೇಕಿಲ್ಲ ... ಪೂರ್ಣಿಮಾ ಗಿರೀಶ್ ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ, ಎಷ್ಟು ಜನರ ಬಾಳಲ್ಲಿ ಈ ರೀತಿಯ ಏಕಾಂತದ, ಬೇಸರದ ಸಂಜೆ ಬರುವುದಿಲ್ಲ? ನಮ್ಮ ನಾಯಕನಿಗೂ ಆ ದಿನ ಬಲು ಬೇಸರದ ದಿನ, ಮನದಲ್ಲಿ ಸಂತಸಕ್ಕೆ ನೆಲೆಯೇ ಇಲ್ಲ. ಕಾರಣ ಅರಿತವರಿಲ್ಲ. ಜಡ್ದು ಹಿಡಿದ ಮನಸ್ಸು, ದೇಹ.. ತಾರಸಿ ದಿಟ್ಟಿಸಿ...

read more
ಹೌದೂ ಕಾಲಿಗಂಟಿದ ಚುಯಿಂಗಮ್ಮೆಲ್ಲಿ….?

ಸಾವಿನ ನಡಿಗೆ ಅಜಯ ಬಣಕಾರ ಅವನ ಹಾಳಾದ್ದು ಪ್ರೀತಿ ಪಾದಕಂಟಿದ ಚೂಯಿಂಗಮ್ಮು ಕೊಡವಿದರೆ ಬಿಡದು   ಸಾಯಬೇಕೆಂದು ಹೊರಟವಳಿಗೆ ದಾರಿಯುದ್ದಕೂ ಅವನೇ ಅವನು ಎಡಬಲ ಮರಗಳಂತೆ ನೆನಪಾಗುತ್ತಾನೆ ನೆರಳಂತೆ ದಾರಿ ಬದಲಿಸಿದವನು   ಇಲ್ಲೇ ಬಿದ್ದಿವೆ ಕೊರಡು ಅವನು ಚುಂಬಿಸಿದ ತುಟಿಗಳು ಈ ನೀರು ಮಡು ನನ್ನ ಕಣ್ಣೀರು ತೆಕ್ಕೆಯಲಿ ಕಳಕಂಡ...

read more
ವಿನಯ್ ಕುಮಾರ್ ಕಾಲಂ : ನನ್ನನ್ನೊಂದು ಬೋನ್ಸಾಯ್ ಮರವಾಗಲು ಬಿಡಬೇಡ…

  ಪ್ರೀತಿ ಮಾಡೋದಲ್ಲ ; ಆಗೋದು. ನಿನ್ನನ್ನು ನೋಡಿದ ಮೊದಲ ಕ್ಷಣ ನನಗೆ ಪ್ರೀತಿಯಾಯಿತು. ನನ್ನ ಹೃದಯದಲ್ಲಿ ನಾನೊಂದು ಪ್ರೀತಿಯ ಸಸಿ ನೆಟ್ಟುಬಿಟ್ಟೆ. ನಿನ್ನ ಪ್ರತಿಯೊಂದು ನೋಟ, ಮಾತು, ಸ್ಪರ್ಶ ಆ ಸಸಿಗೆ ನೀರೆರೆಯುತ್ತಿದ್ದವು. ನಿನ್ನ ಕೈಯ ಸ್ಪರ್ಶವಂತೂ ನನ್ನ ಕನಸ್ಸನ್ನು ಭೂಮಿಯಾಚೆಗೆ ಕೊಂಡೊಯ್ದಿದೆ. ನಿನ್ನ...

read more
’ಒಂದು ಮೈಥುನ…’ – ನಳಿನಾ ಕವಿತೆ

ನಳಿನಾ   ನಿದ್ದೆಯಲ್ಲೆಲ್ಲಾ ಎದೆ ಗುಡುಗಿದಂತಾಗಿ, ಎದ್ದು ನೋಡಿದರೆ ಹೌದು ’ಅವನಿಲ್ಲ’   ಎಲ್ಲಿ ಹೋದ, ಮತ್ತು ಈ ಹೊತ್ತಿನಲ್ಲಿ ಏತಕ್ಕಾಗಿ? ಎಂಬ ಪ್ರಶ್ನೆಗಳು ಆ ಹುಡುಗಿಯ ಸರುಹೊತ್ತಿನಲ್ಲಿ ಮನಕೆಡಿಸಿದವು.   ಗ್ಯಾಸ್ ಸ್ಟೌವ್ ನ ಮೇಲೆ ತಯಾರಾದ ಅನ್ನ ಹುಡುಗನ ನಿರೀಕ್ಷೆಯಲ್ಲಿತ್ತು, ಹುಡುಗಿ ತಾನೂ ತಿನ್ನದೆ...

read more
ಒಂದು ಕಿರುಗತೆ

ನೆರಳು ಡಾ ಅಶೋಕ್ ಕೆ ಆರ್ ಉಹ್ಞೂ, ಸರಿಯಾಗಿ ಇಂಥದೇ ದಿನದಿಂದ ಈ ತೊಂದರೆ ಆರಂಭವಾಗಿತ್ತು ಎಂದ್ಹೇಳಲು ಕಷ್ಟವಾಗಿತ್ತು ರಾಜೀವನಿಗೆ. ಮೊದಲು ಅನುಭವಕ್ಕೆ ಬಂದಿದ್ದು ಇತ್ತೀಚೆಗೆ ಮೈಸೂರಿನಿಂದ ಬೆಂಗಳೂರಿಗೆ ಹೋಗುವ ಹಾದಿಯಲ್ಲಿ. ಶ್ರೀರಂಗಪಟ್ಟಣ ದಾಟಿ ಹತ್ತು ನಿಮಿಷವಾಗಿತ್ತಷ್ಟೇ. ಕಾರು ಕೆಟ್ಟು ನಿಂತಿತು. ಈ ಸಲ ಹಿಂದೆಂದೂ ನೋಡದ...

read more
ಶನಿವಾರಕ್ಕೊಂದು ಮಕ್ಕಳ ಹಾಡು : ಹುಚ್ಚೆಳ್ ಚಟ್ಣಿ ಚಿಗಣಿ ತಮ್ಟ

ಕೃಷ್ಣಮೂರ್ತಿ ಬಿಳಿಗೆರೆ ಹುಚ್ಚೆಳ್ ಚಟ್ಣಿ ಚಿಗಣಿ ತಮ್ಟ ಯಾವುದು ಹೆಚ್ಚೆ ಹೊನ್ನಮ್ಮ ರೊಟ್ಟಿಗೆ ಬೆಣ್ಣೆ ದೋಸೆಗೆ ತುಪ್ಪ ಯಾವುದು ಚಂದ ಚೆನ್ನಮ್ಮ   ಕಾಯಿ ಮಿಠಾಯಿ ಹುರುಳಿ ಹಪ್ಪಳ ಯಾವುದು ಮಜವೆ ಹೊನ್ನಮ್ಮ ಸಿಹಿ ಸಿಹಿ ಗಿಣ್ಣ ಮಾವಿನ ಬಣ್ಣ ಯಾವುದು ಬೇಕೆ ಚೆನ್ನಮ್ಮ ಬಿಸಿ ಬಿಸಿ ಮುದ್ದೆ ಹುರುಳಿಸಾರು ಯಾವುದು ಖುಷಿಯೇ...

read more
ಸಂಧ್ಯಾರಾಣಿ ಕಾಲಂ : ಯಾಕೆ ಕಾಡುತಿದೆ ಸುಮ್ಮನೆ ನನ್ನನು, ಯಾವುದು ಈ ರಾಗ…

’ಬಸ್ಸು ಹೊರಟಿತು, ನನ್ನ ಮಗನ ತುಂಟತನ ಗೊತ್ತಲ್ಲ, ಅವನನ್ನು ಸಂಭಾಳಿಸುತ್ತಾ ೮ ಗಂಟೆ ಹೇಗೆ ಕಳೆಯುವುದು ಅಂತ ಒದ್ದಾಡುತ್ತಿದ್ದೆ. ನಿಮಿಷ ನಿಮಿಷಕ್ಕೂ ಇವನ ಗಲಾಟೆ ಜಾಸ್ತಿ ಆಗ್ತಾ ಇತ್ತು. ಹಿಂದಿನ ಸೀಟಿನಲ್ಲಿ ಒಬ್ಬ ಹುಡುಗ ಕೂತಿದ್ದ. ನೋಡುವಷ್ಟು ನೋಡಿ, ಆಮೇಲೆ ಇವನನ್ನು ಕರೆದ, ಇವನಿಗೂ ನನ್ನ ಕಾಟ ಸಾಕಾಗಿತ್ತೇನೋ, ಅವನು ಕರೆದ...

read more
'ಅಳಬ್ಯಾಡ ಅಳಬ್ಯಾಡ ಪಾಪಣ್ಣಿ….' – ಪ್ರಶಾಂತ್ ಆಡೂರ್ ಲೇಖನ

ಪ್ರಶಾಂತ್ ಆಡೂರ್ "ರ್ರಿ, ನಂಗ ಖರೇನ ಸಾಕಾಗಿ ಬಿಟ್ಟದ ನಿಮ್ಮ ಮಗಳ ಸಂಬಂಧ, ಒಂದ ತಾಸ ಆತ ತೊಡಿ ಮ್ಯಾಲೆ ಹಾಕಿ ಬಡಿಲಿಕತ್ತ, ಇನ್ನು ಮಲ್ಕೊಳಿಕ್ಕೆ ತಯಾರಿಲ್ಲಾ. ನಂಗsರ ಯಾವಾಗ ಬೆನ್ನ ಹಾಸಗಿಗೆ ಹಚ್ಚೇನೋ ಅನ್ನೊ ಅಷ್ಟ ಸಾಕಾಗಿರ್ತದ, ಇದ ನೋಡಿದರ ಶನಿ ಇಷ್ಟ ಕಾಡತದಲಾ". ಇದ ನನ್ನ ಹೆಂಡತಿದ almost every day ಮಗಳನ ಮಲಗಸಬೇಕಾರ ಹಾಡೊ...

read more
ಸಂಪು ಕಾಲಂ : ಚೋಳರ ವೈಭೋಗದ ಅನುಭವ ಮೊದಲ ದಿನವೇ…

ದಕ್ಷಿಣ ಭಾರತ ಪ್ರವಾಸ - ಹತ್ತು ದಿನಗಳ ಕಾಲ! ಮನೆ ಬಿಟ್ಟು ಹತ್ತು ದಿನಗಳ ಕಾಲ ಹೊರಹೋದದ್ದು ಎಂದರೆ ನಮ್ಮ ಹಳ್ಳಿ ಪುಲಿಗಲ್ ಗೆ. ದಿನ, ವಾರ, ಸಮಯ, ಘಂಟೆ ಎಲ್ಲದರ ಭಾಷೆ, ಅರ್ಥಗಳನ್ನೂ ಬೆಂಗಳೂರಿನಲ್ಲೇ ಬಿಟ್ಟು, ಸಹಜ ಸುಖ, ನೆಮ್ಮದಿಗಳ ರುಚಿ ಸವಿಯಲು ಹೋಗುತ್ತಿದ್ದ ಆ ದಿನಗಳು ನೆನಪಾದವು. ಕಂಪ್ಯೂಟರ್, ಇಂಟರ್ನೆಟ್, ಟಿವಿ ಇರಲಿ,...

read more
'ಬಯಲೊಳಗೆ ಗಂಧಗಾಳಿಯಾಗಲಿ ಪ್ರೀತಿ..' – ಟಿ ಎಸ್ ಗೊರವರ ಕವಿತೆ

ಗಡಿಗಳಿಲ್ಲ ಪ್ರೇಮದ ನಕಾಶೆಯಲ್ಲಿ ಟಿ ಎಸ್ ಗೊರವರ 1 ಗಲ್ಲಕ್ಕೆ ಮುತ್ತಿಕ್ಕುವ ಮುಂಗುರುಳು, ತುಟಿಗೆ ತೊಂಡೆ ಹಣ್ಣಿನ ಬಣ್ಣವಿರಲಿಕ್ಕಿಲ್ಲ ಹುಣ್ಣಮಿ ಚಂದಿರನ ಬಣ್ಣವೇ ನಿನಗಿರಬೇಕೆಂದು ದೇವರಾದವನು ಷರಾ ಬರೆದಿಲ್ಲ ಕಾಲನ ತೆಕ್ಕೆ ಸೇರುತ್ತವೆ ಮಲ್ಲಿಗೆ, ಗುಲಾಬಿ ಉದುರಿ ಗೆದ್ದಲು ಹಿಡಿಯುವ ದಿನ ಕಾದಿವೆ ರೂಪ, ಲಾವಣ್ಯಕ್ಕೂ   2...

read more

Pin It on Pinterest

Share This