ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
’ನನ್ನ ಗುರು ಲಂಕೇಶ್ ಮೇಷ್ಟ್ರು..’ – ಟಿ ಎನ್ ಸೀತಾರಾಮ್ ಬರೀತಾರೆ
ಟಿ ಎನ್ ಸೀತಾರಾಮ್ ನನ್ನ ಗುರು ಲಂಕೇಶ್ ಮೇಷ್ಟ್ರು ಪಲ್ಲವಿ ಚಿತ್ರ ತೆಗೆಯಬೇಕೆಂದು ಶಿವಮೊಗ್ಗೆಯ ಮನೆ ಮಾರಿದ್ದರು. ನಾಯಕನ ಪಾತ್ರಕ್ಕಾಗಿ ಅವರು ಹುಡುಕಾಟ ನಡೆಸಲಿಲ್ಲ. ಹಳ್ಳಿಯಲ್ಲಿ ಬೇಸಾಯ ಮಾಡಿಕೊಂಡಿದ್ದ ನನ್ನನ್ನು ಕರೆಸಿ ನಾಯಕನ ಪಾತ್ರ ವಹಿಸಲು ಹೇಳಿದರು " ನಾನು ಹೀರೋ ಪಾತ್ರಕ್ಕೆ ಸರಿ ಇಲ್ಲ ಸರ್... ನಾನು ನೋಡಲು...
’ನೀನು ಆ ದಂಡೆಯಿಂದ ತೇಲಿಬಿಟ್ಟ ಕಾಗದದ ಹಡಗು..’ ಎಂ ಎಂ ಶೇಕ್ ಕವಿತೆ
ಎಂ ಎಂ ಶೇಖ್ ಯಾದಗಿರಿ ನೀನು ಆ ದಂಡೆಯಿಂದ ತೇಲಿಬಿಟ್ಟ ಕಾಗದದ ಹಡಗು ಈ ದಂಡೆ ಮೇಲಿರುವ ನನಗೆ ತಲುಪಲೇ ಇಲ್ಲ..! ವಿಳಾಸ ತಪ್ಪಿಸಿದ ಅಲೆಗಳು ಯಾವ ದಿಕ್ಕಿಗೆ ಎಳೆದುಕೊಂಡು ಹೋದವೋ .. ಅದರ ವಿಳಾಸ ದಿನದ ಮೂಲೆಗಳಲಿ ಹುಡುಕಿದ ನನ್ನ ಕಣ್ಣುಗಳೀಗ ಆಸಕ್ತಿ ಕಳೆದುಕೊಂಡು ಕುಳಿತಿವೆ .. ಅವುಗಳನ್ನೇ ಶಪಿಸುತ್ತ , ನಿಂತ ನೀರಲ್ಲಿ...
’ನಾವು ದಿಕ್ಕುತಪ್ಪಿಸಿದ ಬುಡಕಟ್ಟುಗಳು’ – ಜಿ ಪಿ ಬಸವರಾಜು
ಜಿ.ಪಿ.ಬಸವರಾಜು ಅವರ ಮನೆಗಳ ರೀತಿಯೇ ಬೇರೆ; ಅವರ ಹಾಡಿಗಳ ವಿನ್ಯಾಸವೇ ಬೇರೆ; ಅವರ ನಂಬಿಕೆಗಳು, ಬದುಕಿನ ರೀತಿನೀತಿ, ರಿವಾಜುಗಳು, ದೇವರು ಎಲ್ಲವೂ ಬೇರೆ. ಅವರ ಕೃಷಿ, ಬೇಟೆ, ನಡೆದಾಡುವ ದಾರಿಗಳು ಎಲ್ಲವೂ ಬೇರೆ. ಅವೆಲ್ಲವೂ ನಮಗೆ ಹೊಸವೇ. ಆದರೆ ಅವರು ಸಾವಿರಾರು ವರ್ಷಗಳಿಂದ ಹಾಗೆಯೇ ಬದುಕಿದ್ದಾರೆ; ಅಲ್ಲಿಯೇ ಬದುಕಿದ್ದಾರೆ. ಕಾಡಿನ...
ಜನಪದ ರಾಮಾಯಣದ ಕೆಲವು ಕಥೆಗಳು
ಜನಪದ ರಾಮಾಯಣದ ಕೆಲವು ಕಥೆಗಳು ಬಿ ಆರ್ ಸತ್ಯನಾರಾಯಣ ಹಳ್ಳಿಯ ಕಡೆ, ಜನರು ತುಂಬಾ ಸುಸ್ತಾಗಿ ನಿಟ್ಟುಸಿರು ಬಿಡುವಾಗ, ತಮ್ಮ ಕೈಮೀರಿ ಹೋದ ಸಂಕಟದ ಸಂದರ್ಭಗಳನ್ನು ನೆನೆಪಿಸಿಕೋಳ್ಳುವಾಗ, ಯಾವುದಾದರು ಒಂದು ಬಂಧನದಿಂದ ಕಳಚಿಕೊಳ್ಳುವಾಗ “ಓ ಲಕ್ಷ್ಮಣಾ” ಎಂದು ಉದ್ಘಾರ ತೆಗೆಯುತ್ತಾರೆ. ಈ ಉದ್ಘಾರ ಮೊದಲು ಬಂದಿದ್ದು ಮರೀಚನ ಬಾಯಿಯಿಂದ;...
ನೈಲ್ ನದಿಯ ಮಡಿಲಲ್ಲಿ – ’ಸಮಾನರಾರಿಹರು ರೊಟ್ಟಿಯ ಸಮಾನರಾರಿಹರು?!’
(ಇಲ್ಲಿಯವರೆಗೆ...) ಮಣ್ಣು ಮೆತ್ತದ ದಾರಿಗಳು ಬೆಳಿಗ್ಗೆ ಸರಿಯಾಗಿ 6.00 ಗಂಟೆಗೆ ವೆಕ್-ಅಪ್-ಕಾಲ್ ಬಂತು. ಹೊರನೋಡಿದರೆ ಇನ್ನೂ ಕತ್ತಲೆ. `ನೀ ಸ್ನಾನ ಮಾಡು ನಾ ಆಮೇಲೆ ಮಾಡ್ತಿನಿ’ ಎಂದು ಹೇಳಿ ಸರೋಜ ಮುಸುಕು ಹಾಕಿದಳು. ಒಮ್ಮೆ ಎಚ್ಚರಾದ ಮೇಲೆ ನಿದ್ದೆ ಎನ್ನುವುದು ಸುಳ್ಳು. ಎದ್ದು ಸಿದ್ಧರಾಗಿ 7.10ಕ್ಕೆ ಮಧ್ಯದ ಮಹಡಿಯ ಬಲಭಾಗಕ್ಕೆ...
ಡೈಲಿ ಬುಕ್ : ರಹಮತ್ ತರೀಕೆರೆ ಅವರ ’ಅಮೀರ್ ಬಾಯಿ ಕರ್ನಾಟಕಿ’
ರಹಮತ್ ತರೀಕೆರೆ ನಲವತ್ತರ ದಶಕದ ಜನಪ್ರಿಯ ಹಾಡುನಟಿ ಅಮೀರ್ ಬಾಯಿ ಕರ್ನಾಟಕಿ (೧೯೧೨-೧೯೬೫) ಅವರ ಜೀವನ ಕಥನವಿದು . ಬಿಜಾಪುರ ಸೀಮೆಯ ಈ ಮಹಾನ್ ಗಾಯಕಿ ಹುಟ್ಟಿ ಈಗ ಶತಮಾನ ತುಂಬಿದೆ. ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ಮನ್ಸೂರ್ ಮುಂತಾದವರ ಜತೆಗೂಡಿ, 'ಕಿತ್ತೂರ ರುದ್ರಮ್ಮ' ನಾಟಕದ ಮೂಲಕ ರಂಗಭೂಮಿ ಪ್ರವೇಶಿಸಿದ ಇವರು,...
ಸಿ ಆರ್ ಸಿಂಹ ಮತ್ತು ಗೋವಾ ದತ್ತು ನೆನಪಿನಲ್ಲಿ..
ಇಂದಿನಿಂದ ನಾಟಕ ಬೆಂಗಳೂರು
ತೇಜಸ್ವಿಯನ್ನು ಹುಡುಕುತ್ತಾ : ಅಂಡಮಾನಿನಲ್ಲಿ ತೇಜಸ್ವಿ
(ಇಲ್ಲಿಯವರೆಗೆ...) “ಕೃಷಿ ವಿಜ್ಞಾನಿಗಳ ನೆನಪುಗಳಿಂದ…” (ಮುಂದುವರೆದ ಭಾಗ) ಕೃಷಿ ವಿಜ್ಞಾನಿಗಳ ಮಾತು ಮುಂದುವರೆದಿತ್ತು. ಬರಬರುತ್ತಾ ಅವರಮಾತಿನ ಸ್ವಾರಸ್ಯ ಸಹ ಹೆಚ್ಚತೊಡಗಿತ್ತು. ಪ್ರೊಫೆಸರ್ ಗಣೇಶಯ್ಯನವರು ತೇಜಸ್ವಿಯವರೊಂದಿಗೆ ಟ್ರೆಕ್ಕಿಂಗ್ ಗೆ ಹೋದ ಸಂದರ್ಭದಲ್ಲಿ ಆದ ಅನುಭವವೊಂದನ್ನು ಹಂಚಿಕೊಳ್ಳತೊಡಗಿದರು, "ಒಂದ್ಸಾರ್ತಿ...
’ಹಾಲಕ್ಕಿ ಅಜ್ಜಿ ದೇವಿಗೆ ಮಹಿಳಾವಾದ ಗೊತ್ತಿರಲಿಲ್ಲ’ – ವೈಶಾಲಿ ಹೆಗಡೆ
ಮಹಿಳೆ, ಮುಸುರೆ, ಮಹಿಳಾವಾದ ವೈಶಾಲಿ ಹೆಗಡೆ ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಹಲವೆಡೆಗಳಲ್ಲಿ ಮಹಿಳಾ ಗೋಷ್ಠಿಗಳು ನಡೆದು, ಗಂಡಸರೆಲ್ಲ ಹೆತ್ತಮ್ಮನ ಹೆಸರಲ್ಲಿ ಎರಡು ಹನಿ ಉದುರಿಸಿ, ಮಗಳಿಗೊಂದು ಮುತ್ತಿಟ್ಟು, ಹೆಂಡತಿಗೊಂದು ವಿಶ್ ಮಾಡಿಬಿಡುತ್ತಾರೆ. ಮಹಿಳೆಯರೊಂದಷ್ಟು ಜನ ಗೆಳತಿಯರಿಗೆಲ್ಲ ಶುಭಾಷಯ ಹೇಳಿ. ಎಲ್ಲೆಲ್ಲೋ ಭಾಷಣ...
ಛಂದ ಪುಸ್ತಕ ಬಹುಮಾನದ ಫಲಿತಾಂಶ ಇಲ್ಲಿದೆ
ಛಂದ ಪುಸ್ತಕ ಫಲಿತಾಂಶ ಈ ಸಾಲಿನ ಛಂದ ಪುಸ್ತಕ ಬಹುಮಾನವನ್ನು ಶ್ರೀ ಪದ್ಮನಾಭ ಭಟ್, ಶೇವ್ಕಾರ ಅವರು ತಮ್ಮ ಕಥಾಸಂಕಲನದ ಹಸ್ತಪ್ರತಿಗೆ ಪಡೆದುಕೊಂಡಿದ್ದಾರೆ. 23 ವರ್ಷದ ಪದ್ಮನಾಭ ಉತ್ತರ ಕನ್ನಡ ಜಿಲ್ಲೆಯವರು. ಸದ್ಯ ಬೆಂಗಳೂರಿನ ಪ್ರಮುಖ ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿ ತರಬೇತಿ ಪಡೆಯುತ್ತಿದ್ದಾರೆ. ಈ ಸಾಲಿನ ಬಹುಮಾನದ...
’ನೈಲ್ ನದಿಯ ಮಡಿಲಲ್ಲಿ’- ಬ್ಲೂ ಮಾಸ್ಕ್ ನೋಡುತ್ತಾ
(ಇಲ್ಲಿಯವರೆಗೆ) ಸುಲ್ತಾನ ಅಹಮಥ್ ಮಸೀದಿ (ಬ್ಲೂ ಮಾಸ್ಕ್) (Sultan Ahamet Mosque (Blue Mosque and social complex) ಈ ಮಸೀದಿ ಆಟೋಮನ್ ಸುಲ್ತಾನ್ ಪ್ರಥಮ ಅಹಮೆಥ್ ನ ಆಳ್ವಿಕೆಯ ಕಾಲದಲ್ಲಿ (1603-1617) ಪ್ರಮುಖ ಶಿಲ್ಪಿಯಾದ ಸೆದೆಪ್ಕರ್ ಮೆಹಮೆಥ್ ಆಗಾನಿಂದ ಕಟ್ಟಲ್ಪಟ್ಟಿದೆ. 1609ರಲ್ಲಿ ಕಟ್ಟಲು ಆರಂಭಿಸಿದ ಈ ಮಸೀದಿ...
ರಂಗಶಂಕರದಲ್ಲಿ ಇಂದು
'ಮಗ್ಗುಲಲ್ಲೊಂದು ತವರಿನ ಗಂಧ' – ಜಿ ಎನ್ ಮೋಹನ್ ಬರೀತಾರೆ
ಜಿ ಎನ್ ಮೋಹನ್ ಅವಳ ಮುಖದಲ್ಲಿ ಇನ್ನಿಲ್ಲದ ದುಗುಡವಿತ್ತು. ಏನಾಯಿತು ? ಎಂಬುದರ ಎಳೆ ಹುಡುಕಲು ಪ್ರತ್ನಿಸಿದೆ. ಆ ದಿನ ಆಗಿತ್ತಲ್ಲ, ಹಾಗೆ ದಿಢೀರನೆ ಹಾವೇನಾದರೂ ಮನೆಗೆ ನುಗ್ಗಿತ್ತೆ ? ಇಲ್ಲಾ ರಸ್ತೆಯಲ್ಲಿ ಕಾಟ. ತರಕಾರಿ ಅಂಗಡಿಯಲ್ಲಿ ಕಿತ್ತಾಟ. ಉಹೂಂ, ಏನೂ ಗೊತ್ತಾಗಲಿಲ್ಲ. ಇನ್ನೇನು ಕಣ್ಣಿoದ ಹನಿ ಜಾರಿಬಿಡುತ್ತದೆ...
’ಅಮ್ಮ, ನನ್ನದು ಪೂರ್ವಕ್ಕೆ ತೆರೆದ ಕಿಟಕಿ…’ – ಎಂ ಆರ್ ಕಮಲ ಕವನ
ಪೀಳಿಗೆ ಎಂ ಆರ್ ಕಮಲ ಕಲೆ : ಕೃಷ್ಣಾ ರಾಯಚೂರು ಅಜ್ಜಿಗೆ, ಕಿಟಕಿಯಿರದ ನಿನ್ನ `ಚಿಕ್ಕ ಮನೆ' ಪೆಟ್ಟಿಗೆಯಲ್ಲಿ ಸಿಕ್ಕಿದ್ದು: ಬೆರಳಿಗೇರದ ಉಂಗುರ, ಅಂಚು ಕಪ್ಪಾದ ಸೀರೆ, ಬೆಳ್ಳಿ ಕಂದಿದ ಕುಂಕುಮದ ಭರಣಿ, ಹರಳಿರದ ಒಂಟಿ ನಕ್ಷತ್ರ ಓಲೆ. ಕನಸಿತ್ತೆ ಕಬ್ಬಿಣದ ಪೆಟ್ಟಿಗೆಯಲ್ಲಿ? ಮುಚ್ಚಿಟ್ಟ ಅಡುಗೆ ಹಾಗೆ ನಿಗೂಢ ಪಕ್ವಾನ್ನದ ಪರಿಮಳ...
ಕೇಶವ ಮಳಗಿ ಅವರ 'ವೆನ್ನೆಲ ದೊರೆಸಾನಿ'
ಕೇಶವ ಮಳಗಿ ನನಗೆ ವಿಕಾಸವಾದದಲ್ಲಿ ನಂಬಿಕೆಯಿಲ್ಲವೆಂದು ಯಾರು ಹೇಳಿದ್ದು? ಆದರೆ ನನ್ನ ನಂಬಿಕೆಯನ್ನು ಮತ್ತೆ ಮತ್ತೆ ಸುಳ್ಳು ಮಾಡುವಂತೆ ಮಿಸುಕದ ಬಂಡೆಗಲ್ಲಿನಂತೆ ಬಿದ್ದುಕೊಂಡಿತ್ತು ಈ ಊರು. ಭೂಮಿಯ ಗುರುತ್ವಾಕರ್ಷಣೆಯ ಸೆಳೆತದಿಂದ ಜಾರಿ ಪಥಭ್ರಾಂತವಾಗಿ ಬಿದ್ದಿದೆಯೇನೊ ಎಂಬ ಭ್ರಮೆ ಹುಟ್ಟಿಸುವ ಸ್ಥಳವಿದು. ಅದೇ ಗುಂಡಿ ಬಿದ್ದ,...
’ಮಾಯದಂಥ ಮಾಯವ್ವ..’ – ರಾಘವೇಂದ್ರ ಜೋಶಿ ನೆನಪು
ರಾಘವೇಂದ್ರ ಜೋಶಿ ಮಾಯವ್ವ. ಒಂದು ಕಾಲದಲ್ಲಿ ನಮ್ಮ ಪಕ್ಕದ ಮನೆಯಲ್ಲಿದ್ದ ಕಪ್ಪು ಮೈಬಣ್ಣದ ಮಾಮೂಲಿ ಹೆಣ್ಣುಮಗಳು. ನಮ್ಮನೆಯಲ್ಲಿ ಕಸ,ಮುಸುರೆಯನ್ನು ಮಾಡಿಕೊಂಡಿದ್ದಳು. ಚಂದ್ರಾಮ ಅವಳ ಗಂಡ. ನರಪೇತಲ. ಇದೊಂದು ಬಡತನದ ಜೋಡಿಯಾಗಿತ್ತು. ಸಾಮಾನ್ಯವಾಗಿ ಬಡತನಕ್ಕೂ ಮತ್ತು ಮಕ್ಕಳ ಸಂಖ್ಯೆಗೂ ಇರಬಹುದಾದ ಒಂದು ಅವಿನಾಭಾವ ಸಂಬಂಧದಂತೆ...
’ಮುಂಗಾರಿನ ಮೋಡಗಳು ಮತ್ತು ವಾಚ್ ಮನ್ನಮ್ಮನ ಸಂಸಾರ’ – ಚಂದ್ರಶೇಖರ ಆಲೂರ್
ಎಷ್ಟೋ ದಿನಗಳಾಗಿತ್ತು ಮನೆಯ ಟೆರೇಸಿನ ಮೇಲೆ ಹೋಗಿ . ಮೊನ್ನೆ ಭಾನುವಾರ ನೀರಿನ ಟ್ಯಾಂಕ್ ಯಾವ ಸ್ಥಿತಿಯಲ್ಲಿದೆ ನೋಡೋಣ ಅಂದುಕೊಂಡು ಹೋದೆ. ಮೇಲೆ ಹೋಗುತ್ತಿದ್ದಂತೆ ವಿಷಯವೇ ಮರೆತು ಹೋಯಿತು . ಮೂರು ದಿನದಿಂದ ಆಕಾಶದ ನೀಲಿಯೂ ಕಾಣದಷ್ಟು ಮೋಡ ಮುಚ್ಚಿಕೊಂಡಿದ್ದರೂ ಅದು ಅಷ್ಟಾಗಿ ಅರಿವಿಗೆ ಬಂದಿರಲಿಲ್ಲ . ಈಗ ನೋಡುತ್ತೇನೆ , ಸಮಯ...
ಸಂಪು ಕಾಲಂ : ಯಾವ ಪ್ರಣಾಳಿಕೆಗಳ ಅಗತ್ಯಗಳಿಲ್ಲದೆ ಸ್ತ್ರೀಸಂವೇದನೆ ಗೆಲ್ಲುತ್ತದೆ
ಇಂದು ಒಬ್ಬ ಹೆಣ್ಣು ತನ್ನ ಕಾಲಮೇಲೆ ತಾನು ನಿಲ್ಲಬಹುದು. ಅವಳಿಗೆ ಬೇಕಾದ ವಿದ್ಯಾರ್ಹತೆ ಪಡೆಯುತ್ತಿದ್ದಾಳೆ. ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾಳೆ. ತನಗೆ ಬೇಕಾದಂತಹ ಗಂಡನನ್ನು ಪಡೆಯುವ ಸವಲತ್ತುಗಳು ಆಕೆಯದಾಗಿವೆ. ಮದುವೆಯ ನಂತರವೂ ತನಗೆ ಬೇಕಾದಂತಹ ಸ್ವತಂತ್ರ ಜೀವನವನ್ನು ತಾನು ಬಾಳಲು ಸಾಧ್ಯವಾಗುತ್ತಿದೆ. ಇಂದು...
’ಹೆಣ್ತನ’ ಎಂದರೆ ಏನೆಲ್ಲಾ, ಎಷ್ಟೆಲ್ಲಾ…. – ಸ್ವರ್ಣ
ಸ್ವರ್ಣ “ಮೊದಲ ಬಾರಿಗೆ ಹೆಣ್ಣು ಅಂತ ನಿನಗೆ ಯಾವಾಗ ಅನ್ನಿಸ್ತು?” ಈ ಪ್ರಶ್ನೆ ಮೊನ್ನೆ ಎದುರಾಯ್ತು. ಹೆಣ್ಣು ಅಂತ ಅನಿಸೋದು ಅಂದ್ರೆ ? ನಾನು ಹುಟ್ಟಿದಾಗಿನಿಂದ ಎಂದು ಉತ್ತರಿಸಬೇಕೆನಿಸಿದರೂ , ಒಂದು ಘಳಿಗೆಯ ನಂತರ ಅದು ಉತ್ತರವೆಂದೆನಿಸಲಿಲ್ಲ . ಬುಧ್ಧಿ ಬಂದಾಗಿನಿಂದ ಬಟ್ಟೆ ಬರೆಯಲ್ಲಿ ಕಾಣುವ ಸತ್ಯ ಕ್ರಮೇಣ ಬೇರೆ ಬೇರೆ...
’ಅಕೇನೂ ನಮ್ಮ ಹಾಗೇನೇ…’, ಚಿದಂಬರ ನರೇಂದ್ರ
ಚಿದಂಬರ ನರೇಂದ್ರ ಗಂಡಸು - ಹೆಂಗಸಿಗೆ Jealousy thy name is woman - Shakespeare. ನೋಡೆ, ಗಂಡಸರು ಎಷ್ಟು perfect ಆಗಿ analyse ಮಾಡ್ತಾರೆ ಎಂದೆ. ಆಕೆ ಸಿಟ್ಟಿನಿಂದ internet ON ಮಾಡಿ ಈ ಕಥೆ ಒಮ್ಮೆ ಓದಿ, ಆಮೇಲೆ ಹೆಣ್ಣಿನ ಬಗ್ಗೆ ಮಾತಾಡೊರಂತೆ ಎಂದಳು. ಅರೆ! ಇದು ಅಜ್ಜಿ ಹೇಳಿದ ಕಥೆ. ನಿಮಗೂ ಗೊತ್ತಿರಬಹುದು...

