’ನನ್ನನ್ನು ಸದಾ ಕಾಡುವ ಒಂದು ನೋವಿದೆ…’ – ಮಂಜುಳಾ ಹುಲಿಕುಂಟೆ

ನೆರಳ ನೆನಪು….

ಮಂಜುಳಾ ಹುಲಿಕುಂಟೆ

ಪ್ರತಿಯೋಬ್ಬರಿಗೂ ತಮ್ಮ ಬದುಕಲ್ಲಿ ಇರೋದಕ್ಕಿಂತ ಕಳೆದುಕೊಂಡದ್ದೇ ನೆನಪಾಗೊದು ಜಾಸ್ತಿ. ಅಂತ ನೆನಪುಗಳು ಸದಾ ಕಾಡೋ ಹಸಿಗಾಯಗಳಾಗಿರುತ್ತೆ, ಹಾಗೆ ಎಲ್ಲಕ್ಕಿಂತ ಹೆಚ್ಚಾಗಿ, ನೆನಪಿನ ಪಟದಲ್ಲಿ ಉಳಿಯೋದು, ವ್ಯಕ್ತಿಯ ಬಾಲ್ಯದಲ್ಲಿ ಕಳೆದ ಸಂತಸಗಳು, ನೋವು, ಅಥವಾ ಜೊತೆಯಿದ್ದು ದೊರಾದವರು.
ನನ್ನ ಸದಾ ಕಾಡೋ ಇಂತಹದೊಂದು ನೋವಿದೆ, ನಾನು ಚಿಕ್ಕವಳಿಂದ ತುಂಬಾ ಭಾವನಾತ್ಮಕವಾಗಿ ಬೆಳೆದೆ, ಎಲ್ಲರೂ ನನ್ನ ‘ಸೆಂಟಿಮೆಂಟ್ ಫೂಲ್” ಅನ್ನೋವಷ್ಟು, ಅದು ಮನುಷ್ಯರ ಸಂಬಂದದಲ್ಲೇ ಅಲ್ಲ. ವಸ್ತುಗಳು, ಪ್ರಾಣಿ, ಪಕ್ಷಿ, ಮರಗಳ ಜೊತೆನೂ. ಹಾಗ್ ನೋಡಿದ್ರೆ ನಾನು ಮನುಷ್ಯರತ್ರ ಮಾತಾಡಿದ್ದಕ್ಕಿಂತ ಮರ-ಗಿಡ, ಪ್ರಾಣೀ ಪಕ್ಷಿಗಳ ಜೊತೆ ಮಾತಾಡಿದ್ದೆ ಹೆಚ್ಚು. ಕಾರಣ ನಮ್ಮ ನೋವನ್ನು ಮನುಷ್ಯರತ್ರ ಹೇಳಿದ್ರೆ ಯಾವತ್ತೋ ಒಂದಿನ ಅವ್ರು ನಮ್ಮನ್ನ ಅವಮಾನಿಸೋದಿಕ್ಕೋ ಆಡಿಕೊಳ್ಳೂದಿಕ್ಕೋ ದಾರಿಮಾಡಿಕೊಡುತ್ತೆ ಅದೇ ಮರ-ಗಿಡ, ಪ್ರಾಣಿ-ಪಕ್ಷಿಗಳಿಗೆ ಈ ವಿಶ್ವಾಸಘಾತುಕ ತನ ಇರೋಲ್ಲ.
ನಾನು ನನ್ನ ಬದ್ಕಿನ ಸಂತೋಷದ ಕ್ಷಣಗಳನ್ನು ಕೂಡಿಟ್ಟದಕ್ಕಿಂತ, ನನ್ನ ನೋವನ್ನ ಕೂಡಿಡೋದೆ ಹೆಚ್ಚು. ಆ ನೆನಪಿನ ನೆಪದಲ್ಲಿ ಕಾಡೋ ಆ ಕಳೆದುಕೊಂಡ ನೆನಪು…’ಆ..ಹೊಂಗೇಮರ’, ಚಿಕ್ಕಂದಿನಿಂದ ನಾನು ದೇವ್ರು ಅಂತ ಪೂಜಿಸ್ತಿದ್ದ ಸದಾ ಆಟಹಾಡ್ತಿದ್ದ ನಮ್ಮ ದೋಡ್ಡ ಹೋಂಗೇಮರದ ನೆನಪು, ತಂಪು ನೆರಳಿನ ನೆನಪು. ನಮ್ಮನೆ ಯಿಂದ ಸ್ವಲ್ಪ ಮುಂದೆ ನಮ್ಮ ಹೊಲ ಇತ್ತು, ಹುಟ್ಟಿದಾಗಿನಿಂದ ನನ್ನಮ್ಮನ ಸೆರಗಿನ ನೆರಳಿಗಿಂತ ಆ ಮರದ ನೆರಳಲ್ಲಿ ಆಡಿ ಬೆಳೆದವಳು ನಾನು.

ನಾನು ಮಗುಯಿದ್ದಾಗ ಅಮ್ಮ ಹೋಲದಕೆಲ್ಸ ಮಾಡ್ಬೇಕಂದ್ರೆ ನನ್ನ ಆ ಮರದ ಕೆಳಗೆ ಮಲಗಿಸಿ ತನ್ನ ಪಾಡಿಗೆ ತಾನು ಕೆಲ್ಸ ಮಾಡ್ತಿದ್ರಂತೆ. ಆಗ್ಲಿಂದ ಆ ಮರ ನನ್ನ ಒಡನಾಡಿ ಆಗಿತ್ತು ನಾನು ಬುದ್ದಿಕಂಡಾಗಿಂದ ಅದನ್ನ ದೇವ್ರಾಗಿ, ನನ್ನ ಸ್ನೇಹಿತೆಯಾಗಿ ಆ ನೆರಳಲ್ಲೆ ದಿನ ಕಳಿತ್ತಿದ್ದೆ, ನನ್ನ ಬದ್ಕಿನ 16 ವರ್ಷಗಳನನ್ನ ಹಾಗೆ ಅಲ್ಲಿ ಆಡ್ತಾ ಅದರೋಂದಿಗೆ ನನ್ನ ಒಡನಾಟ, ಮಾತು -ಕಥೆ ಎಲ್ಲಾ ಸ್ಕೂಲಿಗೋಕೆ ಮುಂಚೆ ಬೆಳಿಗ್ಗೆಯಿಂದ ಸಂಜೆವರೆಗೂ ನನ್ನೆಲ್ಲಾ ಸ್ನೇಹಿತರೋಂದಿಗೆ ಆ ಮರದರೆಂಬೆ ಕೊಂಬೆಗಳಿಗೆ ಜೋಕಾಲಿ ಹಾಕಿ, ಅದರ ಕೆಳಗೆ ಮುನಿಯಪ್ಪ, ಚೌಡಮ್ಮನ ಪೂಜೆ ಮಾಡ್ತಿದ್ದಿದ್ರಿಂದ ಅಲ್ಲಿ ದೇವರಿದೆ ಅಂತಾ ಅದಕ್ಕೆ ಕೈಮುಗಿದೇ ಆಡ್ಕೋಂತಿದ್ವಿ. ಅದ್ರು ಬಗ್ಗೆ ಎಲ್ಲರಿಗೂ ಕಥೆ ಹೇಳ್ತಾ ಇರ್ತಿದ್ದೆ, ಬೆಳಿತಾ-ಬೆಳಿತಾ ಆ ಮರನೇ ನನ್ನೆಲ್ಲಾ ಸುಖ-ದುಃಖಗಳ ಸಂಗಾತಿಯಾಯ್ತು, ಒಂದೇ ಒಂದು ದಿನ ಆ ಮರನಾ ನೋಡ್ದೆ, ಅಲ್ಲಿ ಆಡ್ದೆ ಇರೋಕಾಗ್ತಿರ್ಲಿಲ್ಲ. ಇನ್ನು ಹೇಳ್ಬೇಕಂದ್ರೆ ಮನೇಲಿ ಅಮ್ಮ ಬೈದಾಗ, ಅಪ್ಪ ಹೋಡೆದಾಗ, ಅಣ್ಣನ ಜೊತೆ ಮುನಿಸಿಕೊಂಡಾಗಲೆಲ್ಲಾ ಆ ಮರದ ಅತ್ರ ಹೇಳ್ತಾ ಅಳ್ತಾ ಇದ್ದೆ. ಅದು ನನ್ನ ನೋವಿಗೆ ಸ್ಪಂದಿಸುತ್ತೆ ಅನ್ನೋ ನಂಭಿಕೆ ನಂದು. ಮೂರು ತಿಂಗಳಿಗೆ ಒಂದ್ ಸರ್ತಿ ಆ ಮರದ ಕೆಳಗೆ ದೇವ್ರು ಮಾಡ್ತಿದ್ರು, ಚಿಕ್ಕ ಚಪ್ಪರ ಹಾಕಿ ಕಲ್ಲಿನ ಮೂರ್ತಿಗಳನ್ನ ಇಟ್ಟು ಪೂಜೆಮಾಡಿ ಕೋಳಿಕೂಯ್ದು ಅಲ್ಲೆ ಅಡಿಗೆ ಮಾಡಿ ಎಲ್ರುಗೂ ಊಟ ಹಾಕಿ, ನಾವುತಿಂದು ಸಂಭ್ರಮಿಸುತ್ತಿದ್ದೋ..ಅಲ್ಲಿ ಪೂಜಿಸುತ್ತಿದ್ದ ದೇವ್ರಂದ್ರೆ ಮುನಿಯಪ್ಪ, ಮುನಿಯಮ್ಮ, ಚೌಡಪ್ಪ, ಚೌಡಮ್ಮ ಅಂತ ಅವ್ರು ನಮ್ಮ ಹೋಲನಾ, ಬೆಳೆನಾ ಕಾಯೋ ದೇವ್ರು ಎಲ್ಲಾರ ದೇವ್ರುತರ, ಮಡಿ-ಮೈಲಿಗೆ ಅನ್ನೋ ದೇವ್ರಲ್ಲ. ನಮ್ಮ ಬದ್ಕಿನ ಒಂದ್ಬಾಗ ಅನ್ನೋತರ ಇದ್ದವರು.
ಆ ಮರದ ಕೆಳಗೆ ದೊಡ್ಡ ಹುತ್ತ ಇತ್ತು, ಅಲ್ಲಿ ನಾಗರಹಾವಿತ್ತು, ಅದು ನಮ್ಮ ಕಣ್ಣಿಗೆ ಕಂಡ್ರೆ ಅಮ್ಮ ಏನಪ್ಪ ಮುನಿಯಪ್ಪ ಎದ್ರುಸ್ಸೂದಿಕ್ಕೆ ಬಂದ್ಯಾ ಅನ್ನೂಳು ಆ ಹಾವು ಹಾಗೆ ಹುತ್ತದೊಳಗೆ ಹೋಗ್ಬಿಡೋದು. ಅಮ್ಮ ಯಾವತ್ತೂ ಆ ಹಾವಿಗೆ ಎದರ್ತಿರ್ಲಿಲ್ಲ ಅದೇಲ್ಲಾದ್ರು ಕಂಡ್ರೆ ಪ್ರೀತಿಯಿಂದ ಅತ್ರ ನಿಂತ್ಕೊಂಡು ಮಾತಾಡ್ಸೋದನ್ನ ನಾನು ಕಣ್ಣಾರೆ ಕಂಡಿದ್ದೆ . ಆ ಮರ, ಆ ಹುತ್ತ, ಆ ಜಾಗದ ಬಗ್ಗೆ ನನ್ನಜ್ಜಿ ಹೇಳ್ತಿದ್ದ ಕಥೆಗಳನ್ನು ಅಮ್ಮ ನಮ್ಮೆಲ್ಲರಿಗೂ ಹೇಳ್ತಿದ್ಲು. ಅದ್ರಿಂದ ಆ ಮರ, ಆ ಹೊಲ ಅಂದ್ರೆ ಅದೇನೋ ಪ್ರೀತಿನಂಗೆ, ಆ ಮರದ ಕೆಳಗೆ ಚಾಪೆ ಹಾಸಿ ಮಲಗಿದ್ರೆ ತಂಪುನಿದ್ದೆ. ಆ ಮರದ ಕೆಳಗೆ ದೇವ್ರಿಗೆ ಪೂಜೆ ಮಾಡೋವಾಗ ಆಕ್ತಿದ್ದ ತಾಳೀ, ಒಡವೆ,ದೇವರ ಕಲ್ಲು ಎಲ್ಲಾನೂ ಚಿಕ್ಕ-ಚಿಕ್ಕ ಮಣ್ಣಿನ ಮಡಿಕೇಲಿ ಆಕಿ ಹೂಳ್ತಿದ್ರು, ಒಂದ್ ಸರ್ತಿ ನನ್ನ ಸ್ನೇಹಿತೆಯ ಅಮ್ಮ ಒಬ್ರು ಒಂದ್ ಸರ್ತಿ ಅದನ್ನ ಕದ್ದು, ಅದರಿಂದ ಅವರಿಗೆ ಕಾಯಿಲೆಬಂದು, ತಪ್ಪಾಯ್ತು ಅಂತ ಆ ಮರಕ್ಕೆ ಅರಿಕೆ ಕಟ್ಟಿದ್ರು, ಅದುನ್ನ ಅಮ್ಮ ತುಂಬಾ ಹೆಮ್ಮೆಯಿಂದ ಹೇಳ್ಕೂಳು. ಹೀಗೆ ನಮ್ಮ ಬದ್ಕಿನ ಭಾಗ ಆಗಿದ್ದ ಆ ಮರ ಇದ್ದ ಆ ಹೊಲಾನ ನನ್ನಪ್ಪ ಯಾವ್ದೋ ಸಾಲ ತೀರಿಸೊಕಂತ ಮಾರಾಟಮಾಡ್ಬಿಟ್ರು, ಯಾರು ಬೇಡ ಅಅಮದ್ರು ಕೇಳ್ಲಿಲ್ಲ. ನಮ್ಮ ಹೊಲದ ಅಕ್ಕ-ಪಕ್ಕದಲ್ಲಿದ್ದ ನಮ್ಮ ದೊಡ್ಡಪ್ಪನ ಹೊಲಾನ ಕಮ್ಮಿ ದುಡ್ಡಿಗೆ ಯಾರೋ ರಿಯಲ್ ಎಸ್ಟೇಟ್ ಉಧ್ಯಮಿಗೆ ಮಾರಿದ್ರು ಆ ಜಮೀನಿನ ಮಧ್ಯೆಯಿದ್ದ ನಮ್ಮ ಹೊಲ ಅವ್ರಿಗೆ ಅವಶ್ಯಕವಾಗಿತ್ತು. ಅದೇ ಕಾರಣಕ್ಕೆ ನಮ್ಮನ್ನ ಒಪ್ಪಿಸಿ ಆ ಹೊಲಾನ ಕಡಿಮೆ ಬೆಲೆಗೆ ಮಾರ್ಸಿದ್ದು ನಮ್ಮಾರಿನ ದಲ್ಲಾಳಿಗಳೇ, ಆತ ಅಲ್ಲಿ ಸೈಟ್ ಮಾಡ್ದ. ನಮ್ಮ ಹೊಂಗೆ ಮರನಾ ನಮ್ಮೂರಿನ ಯಾರೂ ಕಡಿಯೋಕೆ ಮುಂದಾಗ್ಲಿಲ್ಲ. ಮನೇಲ್ಲಿ ದಿನಾ ಜಗಳ, ನಂಗತೂ ನನ್ನ ದೇಹದ ಯಾವ್ದೋ ಅಂಗಾನ ಕಡೀತಿದರೇ ಅನ್ನೋವಷ್ಟು ನೋವು ಅತ್ತು ಸುರಿದು ಸಾಕಾಯ್ತು. ಆ ಬೇರೆಕಡೆಯಿಂದ ಜನನಾ ಕರೆಸಿ, ಮರಕಡ್ಸೇ ಬಿಟ್ಟ.
ಆ ದಿನಗಳಲ್ಲಿ ನಮ್ಮಮ್ಮ ನಮ್ಮುನ್ನ ಆ ಕಡೆ ಹೋಗೊದಿಕ್ಕೆ ಬಿಡ್ಲಿಲ್ಲ. ಆ ಮೇಲೆ ದಿನಾ ಸಂಜೆ ಹೊಲ್ದತ್ರ ಹೋಗಿ, ಆ ಮರದ ಜಾಗದಲ್ಲಿ ಕೂತು ಅಳ್ತಿದ್ದೆ. ಜೋರಾಗಿ ಮಾತಾಡ್ತಿದ್ದೆ. ಆ ಜಾಗಾನ ಕೊಂಡ್ಕೊಳ್ಳೋಕೆ ಯಾರು ಒಪ್ಪುತ್ತಿರ್ಲಿಲ್ಲ. ಆಗ ನಮ್ಮೂರಿನ ಮಾರಮ್ಮನ ಪೂಜಾರಿಯೂಬ್ರು ಆ ಜಾಗಾನ ಕೊಂಡ್ಕೊಂಡ್ರು ಒಳ್ಳೆದಾಗುತ್ತೆ ಅಂತಾ….
ಈಗ ಆ ಮರ ಉಳಿದಿಲ್ಲ ಆ ನೆರಳ ನೆನಪು ಬಿಡ್ತಿಲ್ಲ, ಆಗ್ಲಿಂದಾ ಈಗ್ಲೂ ಸಂಜೆ ಆ ಅಲ್ಲಿಗೆ ಹೋಗಿ ಸ್ವಲ್ಪಹೊತ್ತು ಕೂತಿದ್ದು ಬಂದಿಲ್ಲ ಅಂದ್ರೆ ನೆಮ್ಮದಿ ಇರಲ್ಲ. ಈಗ ಆ ಜಾಗದಲ್ಲಿ ದೊಡ್ಡ ಬಿಲ್ಡಿಂಗ್ ಇದೆ. ಆದ್ರು ಅದು ನಮ್ಮೂಲ, ಅಲ್ಲಿ ನಮ್ಮ ಹೊಂಗೆಮರ ಇತ್ತು ಅಂತಾ ಹೇಳ್ತಿರ್ತಿನಿ. ಆ ಕ್ಷಣ ಕಣ್ಣಲ್ಲಿ ನೀರಾಡುತ್ತೆ ಅದೆಷ್ಟು ಅತ್ತಿದ್ನೋ ಗೊತ್ತಲ್ಲ…. ಈಗ್ಲೂ ಆ ಮರದ ನೆನಪಾದ್ರೆ ನೋವಿನ ಜೋತೆಗೆ ನೆನಪಿನ ನೆರಳಲ್ಲಿ ತಂಪಾಗೋ ಭಾವನೆ ಮೂಡುತ್ತೆ. ಈಗ್ಲೂ ಕನಸ್ಸಲ್ಲಿ ಆ ಮರದ ರೆಂಬೆ, ಕೊಂಬೆಗಳ ಮೇಲೆ ಆಟ ಆಡೋದು, ಜೋಕಾಲಿ ಆಡೋದೆ ಮೂಡುತ್ತೆ. ಆ ನೆರಳಿನ ನೆನಪು ಸದಾ ಹಸಿರಾಗಿರುತ್ತೆ.
 

‍ಲೇಖಕರು G

April 13, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ನಾಗರಾಜ್ ಹರಪನಹಳ್ಳಿ

    ಒಂದು ಮರ ಎಷ್ಟೆಲ್ಲಾ ನೆನಪುಗಳನ್ನು ನಮ್ಮಲ್ಲಿ ಉಳಿಸಿರುತ್ತೆ. ಇದೇ ಮಾದರಿಯ ಅನುಭವ, ನೆನಪು ನನ್ನನ್ನು ಕಾಡುತ್ತಲೇ ಇರುತ್ತದೆ. ತುಂಬಾ ಸೂಕ್ಷ್ಮ ಬರಹ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: