ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಡೈಲಿ ಬುಕ್ : ಎಂಡೋಸಲ್ಫಾನ್ ದುರಂತ ಕಟ್ಟಿಕೊಡುವ ’ಎಣ್ಮಕಜೆ’
ಅಂಬಿಕಾಸುತನ್ ಮಾಂಗಾಡ್ 'ಎಣ್ಮಕಜೆ' ಒಂದು ಗ್ರಾಮದ ಹೆಸರು. ಜೊತೆಗೆ ಎಂಟು ಸಂಸ್ಕೃತಿಗಳ ನಾಡು ಎಂದರ್ಥ. ಕಾಸರಗೋಡು ಜಿಲ್ಲೆಗೆ ಸೇರಿದ ಈ ಗ್ರಾಮದ ಇತ್ತೀಚಿನ (ಕ್ರಿ. ಶ. 2000 ನಂತರದ) ಚರಿತ್ರೆ ಮತ್ತು ಸಂಸ್ಕೃತಿ ಈ ಕಾದಂಬರಿಯ ವಿಷಯ. ಪರಿಸರದ ಮೇಲೆ ಬಹುರಾಷ್ಟ್ರೀಯ ಕಂಪನಿಗಳ ಪ್ರಾಯೋಜಿತ ಕೀಟನಾಶಕಗಳು ಬೀರುವ ದುಷ್ಪರಿಣಾಮಗಳನ್ನು ಈ...
ಬೇಲೂರು ರಾಮಮೂರ್ತಿ ಬರೆದ ಎರಡು ಪುಸ್ತಕಗಳ ಬಿಡುಗಡೆ
ಮಾರ್ಚ್ 29 ರ ಶನಿವಾರ ಬೆಳಗ್ಗೆ 10:00 ಕ್ಕೆ ಸುರಾನಾ ಕಾಲೇಜು ಸಭಾಂಗಣ ಸೌತೆಂಡ್ ವೃತ್ತ ಜಯನಗರದಲ್ಲಿ ಹಾಸ್ಯ ಸಾಹಿತಿ ಬೇಲೂರು ರಾಮಮೂರ್ತಿಯವರ 'ಹಾಸ್ಯ ರತ್ನಗಳು' ಮತ್ತು 'ನಾಲ್ಕು ನಗೆ ನಾಟಕಗಳು' ಈ ಎರಡು ಕೃತಿಗಳ ಬಿಡುಗಡೆಗೆ ನಿಮ್ಮನ್ನೆಲ್ಲಾ ಆತ್ಮೀಯವಾಗಿ...
ಜಾನಪದ ಲೋಕದಲ್ಲಿ ಮಕ್ಕಳ ಜಾತ್ರೆ
ರಾಮನಗರ ಜಾನಪದ ಲೋಕದಲ್ಲಿ ಎಪ್ರಿಲ್ 15 ರಿಂದ ಮೇ 04 ರ ವರೆಗೆ ಮಕ್ಕಳ ಜಾತ್ರೆ ನಡೆಯುತ್ತಿದೆ. ಈ ಶಿಬಿರದ ಸಂಪೂರ್ಣ ವಿವರ ಮತ್ತು ಆಹ್ವಾನ...
ಕುಂವೀಗೆ ಗಡಿನಾಡ ಸಾಹಿತ್ಯ ಪ್ರಶಸ್ತಿ
ಕರ್ನಾಟಕ ಸರ್ಕಾರವು ಗಡಿ ಭಾಗದಲ್ಲಿ ಸಾಹಿತ್ಯ/ಸಂಶೋಧನೆ ಕ್ಷೇತ್ರದಲ್ಲಿ ಸುಧೀರ್ಘ ಸೇವೆ ಹಾಗೂ ಅನನ್ಯ ಕೊಡುಗೆಯನ್ನು ನೀಡುತ್ತ ಬಂದಿರುವ ಗಣ್ಯರನ್ನು ಆಯ್ಕೆ ಮಾಡಿ ಕೊಡಲಾಗುತ್ತಿರುವ ೨೦೧೨ ನೇ ಸಾಲಿನ "ಪ್ರೊ. ಕೆ.ಜಿ. ಕುಂದಣಗಾರಗಡಿನಾಡ ಸಾಹಿತ್ಯ ಪ್ರಶಸ್ತಿ"ಗೆ ಕುಂವೀಯವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಮೂರು ಲಕ್ಷ...
ವಿಶ್ವ ರಂಗಭೂಮಿ ದಿನದ ಶುಭಾಶಯಗಳೊಂದಿಗೆ ಶ್ರೀಪತಿ ಮಂಜನಬೈಲು ಬರೀತಾರೆ
ಇಂದು ವಿಶ್ವ ರಂಗಭೂಮಿ ದಿವಸ. ಈ ಸಂದರ್ಭದಲ್ಲಿ ರಂಗಭೂಮಿಯ ಬಗ್ಗೆ, ರಂಗ ಸಂಸ್ಕೃತಿಯ ಬಗ್ಗೆ ಒಂದು ಲೇಖನ ಬರೆದುಕೊಡಿ ಎಂದು ಹಿರಿಯ ರಂಗಕರ್ಮಿ ಶ್ರೀಪತಿ ಮಂಜನಬೈಲು ಅವರನ್ನು ಕೇಳಿದಾಗ, ಕೊನೆ ಘಳಿಗೆಯಲ್ಲಿ ಕೇಳಿದ್ದರೂ ತುಂಬಾ ಪ್ರೀತಿಯಿಂದ ಅವರು ಈ ಲೇಖನವನ್ನು ಬರೆದು ಕೊಟ್ಟಿದ್ದಾರೆ. ಅವರಿಗೆ ’ಅವಧಿ’ಯ ವಂದನೆಗಳು. ರಂಗಪ್ರೀತಿ...
ಅಹವಿ ಹಾಡು : ನಾನು ದೇವರಿಗೆ ಪವರ್ ಆಫ್ ಅಟಾರ್ನಿ ಕೊಟ್ಟಿದ್ದೆ ….
ದೇವರಿಗೆ ಪವರ್ ಆಫ್ ಅಟಾರ್ನಿ ಕೊಟ್ಟ ಕಥೆ ಶುರುವಾಗುವುದು ನನ್ನ ಇಸ್ಪೀಟ್ ಆಟದ ಚಟದಿಂದ. ಮೊದಲಲ್ಲಿ ಸ್ವಲ್ಪ ಜಾಸ್ತಿಯೇ ಪೀಠಿಕೆ ಹಾಕುತ್ತೇನೆ, ಬೇಸರಿಸಬೇಡಿ ... ನಮ್ಮ ದೇಶದ ನ್ಯಾಷನಲ್ ಗೇಮ್ ಯಾವುದು ಅಂದರೆ ಥಟ್ ಅಂತ ‘ಹಾಕಿ’ (ನಿಜದ ಲೆಕ್ಕದಲ್ಲಿ ಕ್ರಿಕೆಟ್ ಅನ್ನುವುದು ಸರಿ ಉತ್ತರವಾದರೂ ...) ಅನ್ನುವ ಉತ್ತರ ಹೇಗೆ ಬರುತ್ತದೋ...
’ದಿಲ್ಲಿ ಡೈರಿಯ ಪುಟಗಳು’ ಭಾನುವಾರ ನಿಮ್ಮ ಕೈಗೆ
ಕರ್ನಾಟಕದ ರೇಣುಕಾ ನಿಡಗುಂದಿಯವರನ್ನು ಬದುಕು ಕೊಂಡೊಯ್ದದ್ದು ದೆಹಲಿಗೆ. ದೆಹಲಿಯನ್ನು ಆಮೇಲೆ ಅವರು ತಮ್ಮದಾಗಿಸಿಕೊಂಡರು, ಹನಿ ಹನಿಯಾಗಿ. ಹೀಗೆ ತಮ್ಮದಾದ ದೆಹಲಿಯ ಬಗ್ಗೆ ರೇಣುಕಾ ಅವರು ಬರೆದ ಪುಸ್ತಕ ’ದಿಲ್ಲಿ ಡೈರಿಯ ಪುಟಗಳು’. ’ಕಾಡು ಹೂವಿನ ಸೊಲ್ಲು’ ಲೇಖನಗಳ ಮೂಲಕ ’ಅವಧಿ’ ಓದುಗರಿಗೂ ರೇಣುಕಾ ಪರಿಚಿತರು. ಅವರ ಈ ಪುಸ್ತಕ...
’ರಣ್ ಉತ್ಸವ ಮತ್ತು ನಾವಿಬ್ಬರು’ : ಭುಜ್ ಬಾನಿನಲ್ಲಿ ಗಾಳಿಪಟ ಹುಡುಕುತ್ತಾ..
(ಇಲ್ಲಿಯವರೆಗೆ) ಭುಜ್ ತಲುಪಿದಾಗ ಸಮಯ ೩ ಗಂಟೆಯ ಆಸು-ಪಾಸಿನಲ್ಲಿತ್ತು. ಸುಡು-ಬಿಸಿಲಿನಲ್ಲಿ ಗುಜರಾತ್ ನ ಮೊದಲ ಭೂ-ಸ್ಪರ್ಶ ನನಗೆ. ಭುಜ್ ನಲ್ಲಿರುವುದು ಮಿಲಿಟರಿ ಏರ್ಪೋರ್ಟ್; ಚಿಕ್ಕ-ಚೊಕ್ಕ ವಿಮಾನ ನಿಲ್ದಾಣ ಅದು. ಬೆಂಗಳೂರು, ಮುಂಬೈನ ಬೃಹತ್ ವಿಮಾನ ನಿಲ್ದಾಣಗಳನ್ನು ದಾಟಿ, ಈ ಪುಟ್ಟ ವಿಮಾನ ನಿಲ್ದಾಣ ತಲುಪಿದಾಗ ಅದೇನೋ...
ರಾಜೇಂದ್ರ ಪ್ರಸಾದ್ ಕಾಲಂ : ’ಕಾಳಿ’ ಎಂಬ ನಾಯಿಯೂ ಮತ್ತು ಅದರ ಶಾಸನವೂ..
ನಾಯಿ ಬಗೆಗಿನ ಪ್ರೀತಿಯ ಮಾತು ಬಂದಾಗಲೆಲ್ಲ ಜಪಾನಿನ 'ಹಚ್ಹಿಕೊ', ಟೋಕಿಯೋದ ಸಿಬುಯ ರೈಲ್ವೇಸ್ಟೇಷನ್ ನಲ್ಲಿರುವ ಅದರ ಸ್ಮಾರಕವೂ ಇಲ್ಲವೇ ನಮ್ಮ ತೇಜಸ್ವಿ ಅವ್ರ 'ಕಿವಿ' ನೆನಪಾಗುತ್ತದೆ.. ಯಾಕಂದ್ರೆ 'ಕಿವಿ'ಯ ಚುರುಕುತನ, ಶಿಕಾರಿ ಪ್ರೀತಿ, ಆತ್ಮೀಯ ಒಡನಾಟಗಳನ್ನು ತೇಜಸ್ವಿ ಅವರ ಬಹಳಷ್ಟು ಬರಹಗಳಲ್ಲಿ ನಾವು ಕಾಣಬಹುದು.. ಹಾಗೆ ನನಗೆ...
ಡೈಲಿ ಬುಕ್ : 'ಜೋಗಜ್ಜನ ಹಾಡು ಮತ್ತು ಇತರ ಕತೆಗಳು'
ಕನ್ನಡ ಕಥಾ ಪರಂಪರೆಯಲ್ಲಿ ತನ್ನದೇ ಛಾಪು ಮೂಡಿಸುವ ಭರವಸೆಯಲ್ಲಿ ಬರೆಯುತ್ತಿರುವ ಜಡೇಕುಂಟೆ ಮಂಜುನಾಥ್ ಅವರದ್ದು ವಿಶಿಷ್ಟ ದನಿ. ಜೋಗಜ್ಜನ ಹಾಡು, ಕಣ, ದ್ಯಾಮವ್ವ, ಅಪ್ಪನ ಗುಡ್ಡೆ, ದೂರ ಸರಿದವರು.. ಮುಂತಾದ ಅಪರೂಪದ ಕತೆಗಳನ್ನು ಬರೆಯಬಲ್ಲ ಕತೆಗಾರರು ತಮ್ಮ ಅನುಭವಗಳನ್ನು ಕನ್ನಡದ ಕತಾ ಪರಂಪರೆಗಳ ನೆರಳಿನಲ್ಲಿ ನೋಡಿ ತಮ್ಮ...
’ಚಿರಂತನ್’ – ಪಂಡಿತ್ ಮಲ್ಲಿಕಾರ್ಜುನ ಮನ್ಸೂರರ ನೆನಪಿನಲ್ಲಿ..
ಅಂದಹಾಗೆ ಉಡುಪಿಯಲ್ಲಿ…
ಉಡುಪಿಯಲ್ಲೊಂದು ಯಕ್ಷಗಾನ ಕೇಂದ್ರದ 43 ನೇ ವಾರ್ಷಿಕೋತ್ಸವ ನಡೆಯುತ್ತಿದೆ. 28 ಮಾರ್ಚ್ 2014 ರ ಶುಕ್ರವಾರ ಸಂಜೆ 06:00 ಕ್ಕೆ ಸಿಂಡಿಕೇಟ್ ಬ್ಯಾಂಕ್ ರಂಗಸ್ಥಳ, ಯಕ್ಷಗಾನ ಕೇಂದ್ರ ಇಂದ್ರಾಳಿಯಲ್ಲಿ ನಡೆವ ಕಾರ್ಯಕ್ರಮದ ಸಂಪೂರ್ಣ ವಿವರದ ಜೊತೆಗೆ ಆತ್ಮೀಯ ಆಮಂತ್ರಣವಿಲ್ಲಿದೆ...
ಅಶೋಕ್ ಶೆಟ್ಟರ್ ಕಾಲಂ : ಪ್ರಜಾಪ್ರಭುತ್ವ ಚಿರಾಯುವಾಗಲಿ
ಅಂಕಣ ಬರವಣಿಗೆಯ ಎಲ್ಲಾ ಆಯಾಮಗಳನ್ನೂ ಶೋಧಿಸುತ್ತಾ, ದುಡಿಸಿಕೊಳ್ಳುತ್ತಾ ಇದ್ದವರು ಅಶೋಕ್ ಶೆಟ್ಟರ್. ಅಂಕಣ ಬರೆಯಿರಿ ಎಂದಾಗ ’ಅಯ್ಯೋ, ಪ್ರತಿ ವಾರ ಬರೆಯುವಷ್ಟು ಏನಿರುತ್ತೆ’ ಎಂದವರು, ಪ್ರತಿವಾರ ಆಸಕ್ತಿ ಕೆರಳಿಸುವ, ಯೋಚನೆಗೆ ಹಚ್ಚುವ ಬರಹಗಳನ್ನೇ ಕೊಟ್ಟರು, ಆ ಮೂಲಕ ಬದುಕಿನ, ಸಮಾಜದ ಎಲ್ಲಾ ಮಗ್ಗುಲುಗಳನ್ನೂ ತೆರೆದಿಟ್ಟರು. ೪೦...
’ರಣ್ ಉತ್ಸವ ಮತ್ತು ನಾವಿಬ್ಬರು’ – ಮಂಜುಳಾ ಬಬಲಾದಿ
ಕುಚ್ ರಾತ್ ತೋ ಗುಜಾರಿಯೆ ಗುಜರಾತ್ ಮೇ…! (ಕೆಲ ರಾತ್ರಿಗಳನ್ನಾದರೂ ಕಳೆಯಿರಿ ಗುಜರಾತಿನಲ್ಲಿ) ಹಿನ್ನೆಲೆ : ಗುಜರಾತ್ ನ ದಿ ಗ್ರೇಟ್ ರಣ್ ಆಫ್ ಕಚ್ ನ ಸಮೀಪದಲ್ಲಿ ಪ್ರತಿ ವರ್ಷ ಡಿಸೆಂಬರ್ ನಿಂದ ಫೆಬ್ರುವರಿಯ ನಡುವೆ ೨-೩ ತಿಂಗಳುಗಳ ಕಾಲ ಗುಜರಾತ್ ಟೂರಿಸಂ ಆಯೋಜಿಸುವ 'ರಣ್ ಉತ್ಸವ್' ನಡೆಯುತ್ತದೆ. ರಣ್ ಆಫ್ ಕಚ್ ಪಶ್ಚಿಮ ಗುಜರಾತ್...
'ನಂದಾ' : ಆರದ ನೆನಪಿನ ನಂದಾದೀಪ
ಗೋಪಾಲ ವಾಜಪೇಯಿ ಅರವತ್ತು ಎಪ್ಪತ್ತರ ದಶಕದ ಚಿತ್ರ ರಸಿಕರ ಮನಮೋಹಿನಿ ನಂದಾ ಮಾರ್ಚ್ 25ರಂದು ಮಂಗಳವಾರ ಬೆಳಗಿನ ಜಾವ ತನ್ನ ಇಹಲೋಕ ಯಾತ್ರೆ ಮುಗಿಸಿದ್ದಾಳೆ. ನಾವೆಲ್ಲ ನೆನಪಿನ ಪುಟಗಳನ್ನು ತಿರುವಿ ಹಾಕುವಂತೆ ಮಾಡಿದ್ದಾಳೆ. ಮರಾಠಿಯ ನಟ ಮಾಸ್ಟರ್ ವಿನಾಯಕ ಅವರ ಮಗಳು ಈ ನಂದಾ. (ಜನನ : ಜನವರಿ 8, 1939.) ವಿನಾಯಕ ದಾಮೋದರ ಕರ್ನಾಟಕಿ...
'ಈಗ ಮತ್ತದೇ ಮಾಮೂಲಿ ಕತೆ, ರೀ ಸ್ವಲ್ಪ ಬೆನ್ನು ಒತ್ತುತ್ತೀರಾ..' : ಶ್ರೀದೇವಿ ಕೆರೆಮನೆ ಕವನ
ಋತು ಚಕ್ರ ಶ್ರೀದೇವಿ ಕೆರೆಮನೆ ಮಿಲಿ ಮಿಲಿ ನೋವು ಕಿಬ್ಬೊಟ್ಟೆಯ ಸಂದಿಯಲ್ಲೋ ಹೊಕ್ಕುಳ ಶಂಕು ಸುಳಿಲ್ಲೋ..... ಸೊಂಟವಂತೂ ಸಿಕ್ಕಿಕೊಂಡೇ ಬಿಟ್ಟಿದೆ ಆ ಕಡೆ, ಈ ಕಡೆ ತಿರುಗಿಸಲೂ ಆಗದ ವೇದನೆ ಬೆನ್ನಂತೂ ಕೇಳುವುದೇ ಬೇಡ ಶಿರದಿಂದ ಬುಡದವರೆಗೂ ಬೆನ್ನುಹುರಿಯ ಮುಲುಗಾಟ ಅಮ್ಮಾ ಸ್ವಲ್ಪ ಬೆನ್ನು ಒತ್ತುತ್ತೀಯಾ? ಮದುವೆ ಆದ ಮೇಲಂತೂ ಅದು...
’ಅದ್ಭುತ ದೃಶ್ಯ ಕಾವ್ಯ ಮಂಥರೆಯ ದುರ್ಮಂತ್ರ’ – ವೈ ಕೆ ಸಂಧ್ಯಾಶರ್ಮ
ಕಥೆಯ ಅಂತ್ಯ ಮನ ಕಲಕುವಂಥದ್ದು ವೈ ಕೆ ಸಂಧ್ಯಾಶರ್ಮ ಹೊಸ ಅನುಭವ ಸ್ಪರ್ಶವನ್ನು ಮೂಡಿಸುವ ಮೂರು ಯಕ್ಷಗಾನ ಪ್ರಸಂಗಗಳನ್ನು ಸಾದರಪಡಿಸಿದವರು ಪ್ರಖ್ಯಾತ ಯಕ್ಷಗಾನ ಕಲಾವಿದ ಮಂಟಪ ಪ್ರಭಾಕರ ಉಪಾಧ್ಯ ಹಾಗೂ ಅವರ ಸಹ ಕಲಾವಿದರು. ಬೆಂಗಳೂರಿನ ಜಯನಗರದ 'ಕಲಾರಸ' ವಿನೂತನ ಆಪ್ತ ರಂಗಮಂದಿರದಲ್ಲಿ ಕಲಾರಸಿಕರ ಸಮ್ಮುಖದಲ್ಲಿ ಪ್ರದರ್ಶನಗೊಂಡ...
ಡೈಲಿ ಬುಕ್ : ಟಿ ಎಸ್ ಸತ್ಯನ್ ಅವರ ’ಕಾಲಕ್ಕೆ ಕನ್ನಡಿ’
ಫೋಟೋಗ್ರಾಫರನ ಕೆಲವು ನೆನಪುಗಳು ಟಿ ಎಸ್ ಸತ್ಯನ್ "ನಮ್ಮ ದೇಶದ ಛಾಯಾಗ್ರಾಹಕರಲ್ಲಿ ಅಗ್ರಪಂಕ್ತಿಗೆ ಸೇರಿದವರು ಸತ್ಯನ್ .... " ಕ್ಯಾಮರಾ ಯಾವ ನಿಲುವಿನಲ್ಲಿರಬೇಕು, ಷಟರ್ ಗಳ ವೇಗ ಎಷ್ಟಿರಬೇಕು, ಯಾವ ಲೆನ್ಸ್ ಬಳಸಬೇಕು ಎಂದು ಗಂಟೆಗಟ್ಟಲೆ ಯೋಚಿಸುವ ಫೋಟೋಗ್ರಾಫರ್ ಗಳ ಗುಂಪಿಗೆ ಸೇರಿದವರಲ್ಲ ಸತ್ಯನ್. ಅವರ ಬುದ್ಧಿ ಮಿಂಚಿನ...
ರಂಗಶಂಕರದಲ್ಲಿ ಎಸ್ ಎನ್ ಸೇತುರಾಮ್ ಅವರ ನಾಟಕ
ಈ ತಿಂಗಳು ಕಾವ್ಯ ಸಂಜೆಯಲ್ಲಿ…
ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಸೈಕಲ್ ಜೊತೆಯಲ್ಲೇ ಬಿಡುಗಡೆಯನ್ನೂ ತಂದಿತ್ತು
(ಇಲ್ಲಿಯವರೆಗೆ) ಕೊಟ್ಟ ಮಾತಿಗೆ ಅಪ್ಪ ತಪ್ಪಲಿಲ್ಲ, ಅವಳ ಹುಟ್ಟುಹಬ್ಬದ ಹಿಂದಿನ ದಿನ ‘ಚಿಟ್ಟಿ ನಾಳೆ ಸೈಕಲ್ ತಂದುಬಿಡೋಣ’ ಅಂತ ಹೇಳಿದಾಗ ಚಿಟ್ಟಿಗೆ ಆಕಾಶ ಅಂಗೈಲಿ. ಅಪ್ಪನ ಬಗ್ಗೆ ಪಾಪ ಅನ್ನಿಸಿ ಈಚೆಗೆ ತಾನು ಅಂಗಡಿಗೆ ಹೋಗಿ ತನಗೇನು ಬೇಕೋ ಅದನ್ನು ತೆಗೆದುಕೊಂಡು ತಿನ್ನಲಾಗದ ಕಾರಣ ಸಿಕ್ಕ ಹಣವನ್ನೆಲ್ಲಾ ಹುಂಡಿಯಲ್ಲಿ...
