ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನಾಗರಾಜರಾವ್ ಮತ್ತು ಓಂಕಾರ್ನಾಥ್ ಹವಾಲ್ದಾರ್ ಸಂಗೀತ
ಈಡಿಪಸ್ ಬರ್ತಾ ಇದಾನೆ ’ಅಭಿನಯ ತರಂಗಕ್ಕೆ’
ಸಂಧ್ಯಾರಾಣಿ ಕಾಲಂ : ಹೇಳಬೇಕು ಅನಿಸಿದರೆ ಹೇಳಿಬಿಡಿ…
ಬದುಕಿನ ಒಂದು ದೊಡ್ಡ ವಿಪರ್ಯಾಸವೆಂದರೆ ಬದುಕಿಗೆ Ctrl+Alt+Del ಕೀಗಳು ಇರುವುದಿಲ್ಲ. ’ನಾಳೆಯಿಂದ ಹೊಸ ಮನುಷ್ಯ ನೀನು, ಹೊಸದಾಗಿ ಬದುಕು ಶುರು ಮಾಡು’ ಅನ್ನುವುದೆಲ್ಲಾ ಹುಸಿ ಹುಸಿ ಮಾತುಗಳು. ಬೇಕೆಂದರೂ, ಬೇಡೆಂದರೂ ನಮ್ಮ ನೆನ್ನೆಗಳು ನಮ್ಮ ಬೆನ್ನು ಬಿಡುವುದೇ ಇಲ್ಲ. ’ನಿನ್ನ ಬೆನ್ನಿನ ಮೇಲೆ ನಿನ್ನ ನಿನ್ನೆಗಳ ಭಾರ, ನನ್ನ...
ಜಿ ಎಸ್ ಸದಾಶಿವ, ಉಮಾರಾವ್ ಮತ್ತು ಸುಮಿತ್ರಾ ಬಾಯಿಯವರ ಪುಸ್ತಕಗಳು
ನಾಳೆ ಶನಿವಾರ ಪುಸ್ತಕಗಳ ಬಿಡುಗಡೆ. ಆಹ್ವಾನ ಪತ್ರಿಕೆಯ ಜೊತೆ ಉಮಾರಾವ್ ಅವರ ಪುಸ್ತಕದ ಮುಖಪುಟ ಮತ್ತು ಅವರ ಪುಸ್ತಕದ ಒಂದು ಅಧ್ಯಾಯ ನಿಮಗಾಗಿ : 1 ಹಿಂದೊಮ್ಮೆ ತುಂಬಾ ಚೆನ್ನಾಗಿದ್ದ ಆ ಊರಿಗೆ ಚಂದದೂರು ಎಂಬ ಹೆಸರಿತ್ತೆಂದೂ, ಜನರ ಬಾಯಲ್ಲಿ ಅದು ಚೆಂದೂರು ಆಯಿತೆಂದೂ ಪ್ರತೀತಿ.ಐವತ್ತರ ದಶಕದಲ್ಲಿ ಆ ರೀತಿಯ ಊರುಗಳು ಸಾಕಷ್ಟಿದ್ದವು....
'… ದಿಟ್ಟ, ಧೀಮಂತ ಮಹಿಳೆಯರೆಲ್ಲ ಏನಾದರು?' – ರಾಧಿಕಾ ಗಂಗಣ್ಣ ಕಳವಳ
ಕಾಣೆಯಾಗಿದ್ದಾರೆ ರಾಧಿಕ ಗಂಗಣ್ಣ 80-90ರ ದಶಕದ ದಿಟ್ಟ, ಧೀಮಂತ ಮಹಿಳೆಯರೆಲ್ಲ ಏನಾದರು? ಹಳ್ಳಿಗಾಡಿನಲ್ಲಿದ್ದೂ ಪೋಲಿಸ್ ಅಧಿಕಾರಿಯಾಗುವ ಕನಸು ಹೊತ್ತ ’ಉಡಾನ್’ನ ಬಾಲಕಿ, ಮದ್ಯಮ ವರ್ಗದ ಅನೇಕಾನೇಕ ಕೋಟಲೆಗಳ ನಡುವೆಯೂ ಮಗಳನ್ನು ಓದಿಸಲು, ಸ್ವಾವಲಂಬಿಯನ್ನಾಗಿಸಲು ಕಷ್ಟ ಪಡುವ ತಾಯಿ, ಮಗಳಿಗೆ ಬಾಲ್ಯ ವಿವಾಹ ಮಾಡಲು ಸನ್ನದ್ಧರಾಗಿರುವ...
ಸಹಯಾನ ಸಾಹಿತ್ಯೋತ್ಸವದ ಫೋಟೋ ಆಲ್ಬಂ
'ಸಹಯಾನ ಸಾಹಿತ್ಯೋತ್ಸವದಲ್ಲಿ ಒಂದು ಸಂವೇದನಾಶೀಲ ಚಿಂತನೆ' ಯುವಜನಾಂಗವನ್ನು ಹೊಸ ಓದಿನತ್ತ ಸೆಳೆಯುವ ಬಗೆ ಹೇಗೆ ? ಕರ್ನಾಟಕದ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯಂತ ನೇರ, ನಿಷ್ಟುರ ಹಾಗೂ ಕೊನೆಯವರೆಗೂ ಬದ್ದತೆಯನ್ನು ಉಳಿಸಿಕೊಂಡು ಜನರಿಗಾಗಿ ಸಾಹಿತ್ಯ ಕೃಷಿ ನಡೆಸಿದವರು ಡಾ: ಆರ್.ವಿ. ಭಂಡಾರಿಯವರು. ಕರ್ನಾಟಕದಲ್ಲಿ ಬಂಡಾಯ, ದಲಿತ ಹಾಗೂ...
ಕಿಟಕಿಯ ಅಂಚಿಗಂಟಿ ಒಂದೆರೆಡು ಹನಿ ಜೋಳಿಗೆ ಸೇರಿದಾಗ..
ಅನಾಥ ವಿಜಯ್ ಹೂಗಾರ್ ರೈಲಿನ ತೆಕ್ಕೆಯಲಿ ತೂಗುವ ಅರ್ದಂಬರ್ದ ನಿದ್ದೆ ಕೆಟ್ಟದಾಗಿ ಕೂಗಿತು, ಸಂಭೋಗದರ್ದಲ್ಲೇ ಶ್ವಾನಕ್ಕೆ ಕಲ್ಲುತೂರಿ ಬಂದಂಗೆ. ಇನ್ನೇನು ಸ್ವಲ್ಪದರಲ್ಲೇ ಕಚ್ಚಿ ಪಾರಾದ ನಿದ್ದೆಯ ಮುಂದೆ ನಿನ್ನೆನಾಳೆಗಳ ಭರ್ಪೂರ್ಕನಸುಗಳ ರಾಶಿ ಕಣ್ಣೆದುರು ಎದ್ದು ಕೂತಿದ್ದವು. ಪೂರ್ತಿಯಾಗಿ ದಕ್ಕಿಸಿ ಕೊಂಡವರ ಹಸಿಕಣ್ಣಿನ ಪಿಚ್ಚು,...
'ಆಧುನಿಕ ಮಹಿಳೆಯರು ಶಿಲುಬೆಗೇರುವ ಪರಿ' – ಶ್ರೀದೇವಿ ಕೆರೆಮನೆ
ಶ್ರೀದೇವಿ ಕೆರೆಮನೆ ನಾನು ಸೀತೆಯಷ್ಟು ಸಹಿಷ್ಣು, ಸರ್ವ ಸಹನೆಯವಳಲ್ಲ. ಅವಶ್ಯಕತೆ ಉಂಟಾದಲ್ಲಿ ನಾನು ವಿಪ್ಲವ ಮಾಡ ಬಲ್ಲೆ... ಪ್ರತಿ ಹಿಂಸೆಯನ್ನೂ ಮಾಡಬಲ್ಲೆ. ಕಳೆದ ಎರಡು ತಿಂಗಳಿಂದ ಡಾ. ಪ್ರತಿಭಾ ದೇವಿಯವರು ಬರೆದ, ಮೂತಿದೇವಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ 'ಯಾಜ್ಞಸೇನಿ' ಕೃತಿಯನ್ನು ಗೌತಮ ಗಾಂವಕರರು ನನ್ನ ಕೈಗಿಟ್ಟಾಗಿನಿಂದ...
ಡೈಲಿ ಬುಕ್ : ’ನಾನು ನಾನಲ್ಲ…’
ಈ ಪುಸ್ತಕ ಓದುವಾಗ ನೀವು ನೀವೇ ಆಗಿರುತ್ತೀರೆನ್ದು ಖಚಿತತೆ ನನಗಿಲ್ಲ. ನನ್ನ ಈ ತರಹದ ಮಾತು ಧಿಮಾಕಿನಂತೆ ಕಂಡರೆ ಆಶ್ಚರ್ಯವಿಲ್ಲ . ಎಲ್ಲ ಅಧ್ಯಾಯದ ಪ್ರತಿಯೊಂದು ಘಟನೆಯಲ್ಲಿ ಪರಕಾಯ ಪ್ರವೇಶ ಮಾಡಿ ಅಲ್ಲಿ ನನ್ನ ಪಾತ್ರ ಯಾವುದು ಎಂಬ ಯೋಚನೆಯೊಂದಿಗೆ ಪುಸ್ತಕ ಮುಗುಚಿತ್ತಾಗ ನನ್ನೊಳಗೆ ಇನ್ನೊಬ್ಬನಿದ್ದಾನೆಯೇ ಎಂಬ ಸಂದೇಹ ಮೂಡದೆ...
ಪುಸ್ತಕ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ
’ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ…’ – ಕುಮಾರ ರೈತ
ನೋವಿನ ಕುಲುಮೆಯಲಿ ಅರಳಿದ ಹೂವುಗಳು ಕುಮಾರ ರೈತ ವರದಿಗಾರ ಕವಿ ಸುಬ್ಬು ಹೊಲೆಯಾರ್ ನನಗೆ ಪರಿಚಿತರು. ಎದುರಿಗೆ ಕಂಡಾಗ ಇಬ್ಬರ ಮುಖದಲ್ಲೂ ಮುಗುಳ್ನಗೆ. ಹೇಗಿದ್ದೀರಿ, ಚೆನ್ನಾಗಿದ್ದೇನೆ. ನೀವು.. ಇಷ್ಟೆ. ಇವರ ಕವನಗಳನ್ನು ಆಗಾಗ ಓದಿದ್ದೆ. ಇತ್ತೀಚೆಗೆ ಗೆಳೆಯ ಮಂಜುನಾಥ್ ಅವರಿಂದ ಮಿಂಚಂಚೆ. ಸುಬ್ಬಣ್ಣ ಅವರ ಕವನ ಸಂಕಲನ...
'ನಿನ್ನೆ ಅವ್ವ ಸತ್ತಿದ್ದಾಳೆ….' – ಉದಯ್ ಇಟಗಿ
’ಅವಧಿ’ ಬಳಗದವರಲ್ಲೊಬ್ಬರಾದ ಉದಯ್ ಇಟಗಿ ಅವರ ತಾಯಿ ಇನ್ನಿಲ್ಲ. ಕಡೆಯ ಸಲ ಅವರನ್ನು ನೋಡಲಾಗಲಿಲ್ಲ ಎನ್ನುವ ನೋವಿನಲ್ಲಿ ಉದಯ್ ಬರೆದ ಸಾಲುಗಳು ಇವು. ಈ ನೋವಿನಲ್ಲಿ ನಾವು ಉದಯ್ ಅವರ ಜೊತೆಗಿದ್ದೇವೆ, ಅಮ್ಮನಿಗೆ ನಮ್ಮದೂ ಕಂಬನಿ. *** ನಿನ್ನೆ ಅವ್ವ ಸತ್ತಿದ್ದಾಳೆ. ನನಗೆ ಲಿಬಿಯಾದಿಂದ ಅವಳ ಅಂತ್ಯ ಸಂಸ್ಕಾರಕ್ಕೆ ಹೋಗಲಾಗಲಿಲ್ಲ. ಇದು...
’ಎಲ್ಲೋ ಜೋಗಪ್ಪ ನಿನ್ನರಮನೆ…’ – ’ಅವಿರತ’ದ ಜೋಗಿ ಸಂಭ್ರಮ
- ರವಿ ಕುಲಕರ್ಣಿ ’ಎಲ್ಲೋ ಜೋಗಪ್ಪ ನಿನ್ನರಮನೆ...’ ನಿನ್ನ ಮನದಲ್ಲೇ ನನ್ನರಮನೆ ಎಂದು ಸಾರಿ ಹೋದ ಜೋಗಿ...!! ಹೌದು..ಮೊನ್ನೆ ನಡೆದ ಜೋಗಿ ಆಟ ಪ್ರೇಕ್ಷಕರ ಮನಸೂರೆಗೊಂಡಿತು! ಮಲೆನಾಡಿನ ಈ ವಿಶಿಷ್ಟ ಕಲೆ ಬೆಂಗಳೂರಿಗರನ್ನು ಆಕರ್ಷಿಸಿತು. ಶ್ರೀ ಕಾಲಭೈರವ ಜೋಗಿ ಕಲಾ ಸ೦ಘ, ಹೊಸೂರು, ಸಾಗರ ತಾ, ಶಿವಮೊಗ್ಗ ಜಿಲ್ಲೆಯ ಕೆ....
ಸುಳ್ಳು ಎಂಬ ನೆತ್ತರಲ್ಲಿ ಸೋತ ಮಣ್ಣು ಉಳಿದಿದೆ
ಪದ್ಯಗಳು -ಶಿವಪ್ರಸಾದ ಪಟ್ಟಣಗೆರೆ ಎಲ್ಲವನ್ನು ಹೊದ್ದು(ಒದ್ದು) ಮಲಗುವವನಿಗೆ ಸದ್ದು ಕೂಡ ಸಾವೇ.. ನಗು ತೆಗಳು ಮಗುಳು ಎಂಬೆಲ್ಲಾ ನಗ್ನಗಳಾಚೆ ಬದುಕಬೇಕೆಂದಿದ್ದೆ,.. ಕ್ಷಮಿಸಿ ನಾನು ಮನುಷ್ಯ,.. ಒಮ್ಮೆಯಾದರೂ ಕಣ್ಣುಬಿಡು ನನ್ನೆದೆಯ ಭಾವಗಳಿಗೆ ಬೆಂಕಿಕೊಡುತ್ತೇನೆ,.. ಕಾವಿ ಎಂಬ ಕೋಡಿಯಲ್ಲಿ ಜಾತಿ ಕೂಡ...
ಡೈಲಿ ಬುಕ್: ಎನ್ ಎ ಎಂ ಇಸ್ಮಾಯಿಲ್ ಅವರ ’ಜೆರೊನಿಮೊ’
ಎನ್ ಎ ಎಂ ಇಸ್ಮಾಯಿಲ್ ನಾವು ಯಾವತ್ತೂ ನಮ್ಮ ವಿರೋಧಿಗಳನ್ನು ಶಿಕ್ಷಿಸು ಎಂದು ಉಸೇನ್ ನನ್ನು ಬೇಡಿಕೊಂಡಿಲ್ಲ . ನಮಗೆ ಯಾರ ಮೇಲಾದರೂ ಸೇಡಿದ್ದರೆ ಅದನ್ನು ನಾವೇ ತೀರಿಸಿಕೊಳ್ಳುತ್ತಿದ್ದೆವು. ಉಸೆನ್ ಮನುಷ್ಯರ ಕ್ಷುಲ್ಲಕ ಜಗಳವನ್ನು ಲಕ್ಷಿಸುವುದಿಲ್ಲ ಎಂದು ನಮಗೆ ಕಲಿಸಿಕೊಡಲಾಗಿತ್ತು. ಮಗೆ ದೈವದತ್ತ ಹಕ್ಕಾಗಿ ದೊರೆತ ಭೂಮಿಗೆ...
ಎಸ್ ದಿವಾಕರ್ ಮತ್ತು ಜಯಶ್ರೀ ಕಾಸರವಳ್ಳಿಯವರ ಪುಸ್ತಕಗಳ ಬಿಡುಗಡೆ
ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಆರು ವರ್ಣಗಳ ವರ್ಣಜಾಲ
ಮಾಯಾ ಏಂಜೆಲೋ ಇನ್ನಿಲ್ಲ..
ಅಮೇರಿಕಾದ ಲೇಖಕಿ, ಕವಯತ್ರಿ, ಬರಹಗಾರ್ತಿ, ನೂರಾರು ಕೊರಳುಗಳಿಗೆ ದನಿಯಾಗಿದ್ದ ಮಾಯಾ ಏಂಜೆಲೋ ಇನ್ನಿಲ್ಲ. ಅವರು ಸುಮಾರು ೩೦ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ೧೯೨೮ ಏಪ್ರಿಲ್ ೪ ರಂದು ಜನಿಸಿದ್ದ ಅವರಿಗೆ ೮೬ ವರ್ಷ ವಯಸ್ಸಾಗಿತ್ತು. ಕನ್ನಡಿಗರಿಗೆ ಮಾಯಾ ಏಂಜೆಲೋರವರನ್ನು ಮತ್ತಷ್ಟು ಹತ್ತಿರವಾಗಿಸಿದ್ದು ನಮ್ಮಲ್ಲಿನ...
’ಹೆಣ್ಣಿನ ಈ ಸ್ಫೋಟ ದಿಢೀರ್ ಅಂತು ಅಲ್ಲವೇ ಅಲ್ಲ’ – ಸೂರಿ ಬರೀತಾರೆ
ಸೂರಿ ಎಲ್ಲೀವರೆಗೂ ತಡೆದು ಹಿಡಿಯಬಹುದು ಶಕ್ತಿಯನ್ನು. ನನ್ನ ಗುಜರಾತೀ ಗೆಳೆಯ ಹೇಳಿದ ಒಂದು ಕತೆಯಿಂದ ಶುರುಮಾಡುತ್ತೇನೆ. ಇಂಥವನ್ನು ನಾನು ನಗರ ಜಾನಪದ ಕತೆಗಳೆಂದು ಕರೆಯುತ್ತೇನೆ. ಒಬ್ಬ ಮಾರ್ವಾಡಿ. ದಿನಾ ಬೆಳಿಗ್ಗೆ ಕರಾರುವಕ್ಕಾಗಿ ಹತ್ತು ಗಂಟೆಗೆ, ತನ್ನ ಮನೆಯಿಂದ ಮೂರು ಒಂದೂವರೆ ಮೈಲು ದೂರವಿರುವ ತನ್ನ ಅಂಗಡಿಗೆ ಹೋಗುತ್ತಾನೆ....
’ವಾಸ್ತವ ಮತ್ತು ಕಥನ : ಮಹಾನ್ ಬರಹಗಾರರಿಬ್ಬರ ನೋಟಗಳು’ – ಬಿ ಆರ್ ಸತ್ಯನಾರಾಯಣ
ಬಿ ಆರ್ ಸತ್ಯನಾರಾಯಣ ೧೯೨೦ರ ಸುಮಾರು. ಮಹಾತ್ಮ ಗಾಂಧಿಜಿಯವರು ಕರೆಕೊಟ್ಟಿದ್ದ ಅಸಹಕಾರ ಚಳುವಳಿ ದೇಶದ ಉದ್ದಗಲಕ್ಕೂ ವ್ಯಾಪಿಸಿಕೊಳ್ಳುತ್ತಿತ್ತು. ಅದರ ಬಿಸಿ ಮೈಸೂರಿಗೂ ತಗುಲಿ, ಅದರ ಪ್ರಚಾರಕ್ಕಾಗಿ ಗೌರೀಶಂಕರ ಮಿಶ್ರ ಎಂಬುವವರು ಮೈಸೂರಿಗೆ ಬಂದಿದ್ದರು. ಆ ಸಂದರ್ಭದಲ್ಲಿ ನಡೆದ ವಿದೇಶಿ ವಸ್ತ್ರದಹನ ಘಟನೆಗೆ, ಮೈಸೂರು...
’ಣವಿಣ’ ಫೇಸ್ಬುಕ್ ಸ್ಟೇಟಸ್ಗಳ ಪುಸ್ತಕ ಬಿಡುಗಡೆ ಆಗ್ತಿದೆ
ಪುಸ್ತಕದ ಮುಖಪುಟ ಹೀಗಿದೆ :
