ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕುಸುಮಬಾಲೆ ಕಾಲಂ : ಮಾದೇವಮ್ಮ ಮತ್ತು ಗುರುಶಾಂತಪ್ಪನ ಲಿವ್ ಇನ್ ಸಂಸಾರ
ನಿಜಕ್ಕೂ ಆಶ್ಚರ್ಯವಾಗುತ್ತೆ. ದೂರದೂರುಗಳ ನಡುವೆ ಸಂಸ್ಕೃತಿಯಲ್ಲಿ ವ್ಯತ್ಯಾಸ ಕಾಣುವುದು ಸಹಜ. ಆದ್ರೆ ಪ್ರತಿ ಅರ್ಧಗಂಟೆಯ ಹಾದಿಗೆ ಭಾಷೆ , ರೀತಿ-ನೀತಿಗಳು ವ್ಯತ್ಯಾಸವಾಗುವುದಿದೆಯಲ್ಲ , ಅದು ನಮ್ಮ ದೇಶದಲ್ಲಿ ಮಾತ್ರ ಸಾಧ್ಯವೇನೋ. ಇಲ್ಲೇ ನಾನು ಕಂಡ ಅಕ್ಕಪಕ್ಕದ ಜಿಲ್ಲೆಗಳ (ಮೈಸೂರು- ಚಾಮರಾಜನಗರ) ನಡುವೆಯೇ ಅದೆಷ್ಟು ವ್ಯತ್ಯಾಸ!...
2500 ರನ್ ಭಾರಿಸಿದ ’ಥಟ್ ಅಂತ ಹೇಳಿ ’ – ಶಿವು ಕಳಿಸಿದ ಫೋಟೋ ಆಲ್ಬಂ
ದೂರದರ್ಶನದ ಜನಪ್ರಿಯ ಕಾರ್ಯಕ್ರಮ ’ಥಟ್ ಅಂತ ಹೇಳಿ’ ೨೫೦೦ ಸಂಚಿಕೆಗಳನ್ನು ಪೂರೈಸಿದ ಸಂಭ್ರಮದಲ್ಲಿ ನಡೆದ ಕಾರ್ಯಕ್ರಮದ ಝಲಕ್ ನಿಮಗಾಗಿ : ಚಿತ್ರಕೃಪೆ : ಶಿವು ಪಿ ಕಾಳಯ್ಯ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery columns="4"...
'ಆಡು ಕಾಯುವ ಹುಡುಗನ ಕತೆ….'ಯ ಕಥೆ – ಶ್ರೀದೇವಿ ಕೆರೆಮನೆ
ಶ್ರೀದೇವಿ ಕೆರೆಮನೆ ಏನೋ ಕೆಲಸದ ಮೇಲೆ ಮೈಸೂರಿಗೆ ಹೋಗಿದ್ದೆ. ದಿನ ಅಲ್ಲೇ ಇರಬೇಕಾಯ್ತು. ಪ್ರಜಾವಾಣಿಯ ಉಪಸಂಪಾದಕ ಗಣೇಶ ಅಮಿನಗಡ ಮನೆಯಲ್ಲಿ ಉಳಿದಿದ್ದೆವು. ಇಡೀ ಮನೆ ತುಂಬಾ ಹರಡಿಕೊಂಡಿದ್ದ ಪುಸ್ತಕಗಳನ್ನು ಸರಿಪಡಿಸಲೆಂದು ಹೊರಟಾಗ, ಹಾಗೇ ಇರಲಿ ಬಿಡು.ಅದು ಸರಿಯಾಗೊ ಕಥೆ ಅಲ್ಲ. ನಿನಗೆ ಬೇಕಾದ ಪುಸ್ತಕ ತೆಗೆದುಕೊ ಎಂದು...
'ಅಲ್ಪ ಸ್ವಲ್ಪ ಪಿ ಜಿ ವುಡ್ ಹೌಸ್'
ಪಾಲಹಳ್ಳಿ ವಿಶ್ವನಾಥ್ (ನಾವು ಕಾಲೆಜಿನಲ್ಲಿದಾಗ ಪಿ.ಜಿ.ವುಡ್ ಹೌಸ್ ( P.G.Wodehouse) ಪುಸ್ತಕಗಳನ್ನು ಓದುವುದೆ೦ದರೆ ಮಹಾ ಖುಷಿ. ಪಠ್ಯಪುಸ್ತಕದ ಭಾಷೆಗಿ೦ತ ಅವರದ್ದು ಬಹಳ ಬೇರೆ ಭಾಷೆಯಾಗಿದ್ದು ಇ೦ಗ್ಲಿಷಿನ ಸೊಗಡನ್ನು ಸ್ವಲ್ಪವಾದರೂ ಅರ್ಥಮಾಡಿಸಿತು . ಅದಲ್ಲದೆ ವುಡ್ ಹೌಸ್ ತಿಳಿಹಾಸ್ಯದ ಚಕ್ರವರ್ತಿಗಳು ! ಅವರ ಬರ್ಟಿ,, ಜೀವ್ಸ್,...
'ಹಗೆಯ ಸಂತೆಯಲ್ಲಿ ಹುಡುಕಿ, ಒಲುಮೆ ತಂದೆನು…'
- ಮಾರುತಿ ದಾಸಣ್ಣವರ ಕೌಶಾಂಬಿ (ಉ ಪ್ರ ) ಯಾರೋ ಬಂದು ಕದವ ತಟ್ಟಿ ನನ್ನ ಎದುರು ನಿಂದರು ನಿಮ್ಮ ಮೊಗದ ನಗೆಯ ಹೂವ ಗುಟ್ಟ ಹೇಳಿರೆಂದರು. ಬದುಕು ಕೊಟ್ಟ ಕಲ್ಲು ಮುಳ್ಳು ಒಟ್ಟಿ ಮನೆಯ ಕಟ್ಟಿದೆ ನಗುವುದೆನಗೆ ಒಗ್ಗಿ ಹೋಯ್ತು ಅಳುವ ಮೆಟ್ಟಿದೆ. ಒಲುಮೆಯನ್ನೆ ಹಂಚುತಿಹಿರಿ ದ್ವೇಷವಿಲ್ಲವೇ ಹಂಚಿ ಹಂಚಿ ಪ್ರೀತಿ ಸರಕು ತೀರಲಿಲ್ಲವೇ...
ಫೇಸ್‌ಬುಕ್ ಇಲ್ಲದ ಆ ಗಳಿಗೆಗಳು..
ಡಾ ಎಸ್ ಬಿ ಜೋಗುರ ಒಂದೊತ್ತು ಊಟ ಇಲ್ಲದಿದ್ದರೂ ಓ.ಕೆ. ಕುಡಿಯಲು ನೀರಿಲ್ಲದಿದ್ದರೂ ಹೇಗೋ ಸ್ವಲ್ಪ ಹೊತ್ತು ಮ್ಯಾನೇಜ್ ಮಾಡಬಹುದು ಆದರೆ ಫೇಸ್‌ಬುಕ್ ಇಲ್ಲದೇ ಇದ್ದರೆ ಇಡೀ ಜಗತ್ತಿನ ಜನ ಕಂಗಾಲಾಗಿ ಬಿಡುವ ಪ್ರಸಂಗಗಳು ಮೊನ್ನೆ ತಾನೇ ಎದುರಾದವು. 2010 ರ ಸಂದರ್ಭದಲ್ಲಿ ಹಾಗೆ ಫೇಸ್‌ಬುಕ್ ಬುಕ್ ವ್ಯವಹಾರಗಳು ಏನೋ ಒಂದು ತಾಂತ್ರಿಕ...
ಬುಡುಬುಡಿಕೆ ಕಸುಬು ಮುಗಿತಾ…?
ಗೋಮಾರದಹಳ್ಳಿ ಮಂಜುನಾಥ್ ಸಿರಾ ಕಳೆದ ಮಂಗಳವಾರ ಶಿರಾ ಸಂತೆಯಲ್ಲಿ ಶಕುನ ಹೇಳಿ ‘ಬಂದಷ್ಟೇ ಶಿವ’ ಅಂದ್ಕೊಂಡು ಮಧ್ಯಾಹ್ನಕ್ಕೆ ಜೋಳಿಗೆ ಮುಚ್ಚಿಟ್ಟು ಕುಂತಿದ್ದರು ಬುಡುಬುಡಿಕೆ ಗಂಗರಾಜು. ಐದು ಕೆಜಿ ಅಕ್ಕಿ, ಐದು ಕೆಜಿ ರಾಗಿ ಹಿಟ್ಟಿನಷ್ಟು ಗಂಟು ಜೋಳಿಗೆಯಲ್ಲಿತ್ತು. ಐವತ್ತು ರೂಪಾಯಿ ಕಾಸು ಆಗಿದೆ ಅಂದರು. ‘ನಮ್ಮವರು ಯಾರೂ ಈಗ...
ಶಿಲ್ಪ ಉದ್ಯಾನವನದಲ್ಲಿ ಈ ಭಾನುವಾರ
Art Park Bengaluru a cultural initiative launched by Bangalore-based contemporary artists. The main activity will be a monthly event on the first Sunday of every month at the Sculpture Garden (Shilpavana) in the Ravindra Kalakshetra complex located on...
’ಅವಧಿ’ ಕ್ವಿಜ಼್ : ಯಾರು ಹೇಳಿ ಇವರು?
ಕನ್ನಡಿಗರ ಮನಗೆದ್ದ ಇವರ್ಯಾರು?
ಬೋದಿಲೇರ್ ನ ಕನ್ನಡಕ್ಕೆ ತರ್ತಾ ಇದಾರೆ ರಾಜೇಂದ್ರ ಪ್ರಸಾದ್
ರಾಜೇಂದ್ರ ಪ್ರಸಾದ್ ಸ್ವಲ್ಪ ಸಂಕೋಚ ಮತ್ತು ಹೆಮ್ಮೆಯಿಂದಲೇ ನಿಮ್ಮ ಮುಂದಿಡುತ್ತಿದ್ದೇನೆ... ನವ್ಯಕವಿ ಚಾರ್ಲ್ಸ್ ಬೋದಿಲೇರ್ನ ಆತ್ಮವೃತ್ತಾಂತಕ ಕಾವ್ಯಶೈಲಿಯ ಪುಟ್ಟ ಕಾದಂಬರಿ La Farfarlo ಕೃತಿಯ ಕನ್ನಡಾನುವಾದ '' ಬೋದಿಲೇರ್ ನ ನರ್ತಕಿ''. ಇವತ್ತು ಕೊನೆಯ ಹಂತಕ್ಕೆ ಬಂದು ನಿಂತಿದೆ.. ಬರಹಗಾರನ ತಾಯ್ತನದ ಖುಷಿ & ದುಗುಡ...
'ಮಳೆಯೆಂಬ ಮಂತ್ರದಂಡ' – ಜಿ ಪಿ ಬಸವರಾಜು ಬರೀತಾರೆ
ಜಿ ಪಿ ಬಸವರಾಜು ಮಳೆಯೆಂಬುದು ನಿಜಕ್ಕೂ ಒಂದು ಮಂತ್ರದಂಡವೇ. ಬಾನತುಂಬ ಮೋಡಗಳು ಸಂತೆನೆರೆದು ನಾಲ್ಕು ಹನಿ ನೆಲಕ್ಕೆ ಬಿದ್ದರೆ ಎಂಥ ಪವಾಡ ನಡೆದುಹೋಗುತ್ತದೆ. ಕಾದ ನೆಲ ತಂಪಾಗಿ, ಬೀಸುವ ಗಾಳಿ ಹಿತವಾಗಿ ಜೀವ ಸಂಕುಲವೇ ಸಂಭ್ರಮಿಸುತ್ತದೆ. ಸಹಿಸಲಾಗದ ಬೇಸಿಗೆ ಎಂಬುದು ಮಾಯವಾಗಿ ಗುಡುಗು, ಮಿಂಚು, ಸಿಡಿಲು, ಧಾರೆಧಾರೆ ಮಳೆ; ಹೊಸ ಲೋಕವೇ...
'ರೇವತಿ ಅಮ್ಮನ 'ಬದುಕು ಬಯಲು' ಒಂದು ಆಪ್ತ ಮಾತುಕತೆ…'
ನಾಗರಾಜ್ ಹೆತ್ತೂರ್ ``ನಮಗೆ ಈ ಬದುಕು ಸಾಕಾಗಿದೆ. ನಾವೂ ಕೂಡ ದೊಡ್ಡ ದೊಡ್ಡ ದೊಡ್ಡ ಆಫಿಸರ್ ಗಳಾಗಬೇಕಿದೆ. ಐಎಎಸ್ , ಐಪಿಸ್ ಗಳಾಗಬೇಕಿದೆ. ಸರಕಾರಿ ಕೆಲಸ ಬೇಕಿದೆ. ನಾವೂ ನಿಮ್ಮಂತೆ ಮನುಷ್ಯರು ನಮ್ಮನ್ನೂ ಮನುಷ್ಯರಂತೆ ನೋಡಿ'' ಹೀಗೆಂದು ಕೆಲ ಕ್ಷಣ ಮೌನವಾದರು. ಆ ತಾಯಿಯ ಕಣ್ಣಲ್ಲಿ ನೀರು ತುಂಬಿತ್ತು, ಬದುಕನ್ನು...
’ಎಲ್ಲವನ್ನೂ ಬಿಚ್ಚಿಟ್ಟು…’ – ಪಾರು
ಅನಾವರ್ಣನ ಪಾರು ಎಲ್ಲವನ್ನೂ ಬಿಚ್ಚಿಟ್ಟು ಬತ್ತಲಾಗಿ ಮತ್ತೊಮ್ಮೆ ಇನ್ನೂ ಏನನ್ನೋ ಹುಡುಕುವಾಗ, ನನ್ನೊಳಗೆ ನಾನೇ ಬಚ್ಚಿಟ್ಟುಕೊಂಡಂತೆ, ನನ್ನನ್ನು ನಾನೇ ಹುಡುಕುವಂತೆ ಕಣ್ಣಾಮುಚ್ಚಾಲೆ ಆಟ ಆಡುವ, ಆಡುತ್ತಲೇ ಇರುವ.. ನನ್ನ ರೀತಿಯನ್ನು ಕಂಡು ಬೆಚ್ಚಿ ಬೀಳುತ್ತೇನೆ!...
ಇಗೋ ಇಲ್ಲಿ ಶಿಲೆ ಶಾಯರಿ ಹೇಳುತ್ತಿದೆ
ಕಲಾವಿದ ಭಗವಾನ್ ರಾಮ್ಪುರೆ ಅವರ ಬೆರಳುಗಳು ಕವಿತೆಯನ್ನಲ್ಲ, ಕವಿಯನ್ನು ಸೃಷ್ಟಿಸುತ್ತಿವೆ
’ಬುದ್ಧನನ್ನು ತಮ್ಮೊಳಗೆ ತುಂಬಿಕೊಂಡ ಕೆ ಎಂ ಶಂಕರಪ್ಪನವರು..’
ನನ್ನ ಗುರು ಡಾ ಜಿ ವಿ ಆನಂದಮೂರ್ತಿ ಕಾರಮರಡಿ ಮುದ್ದಲಿಂಗೇಗೌಡ ಶಂಕರಪ್ಪ ಕನ್ನಡ ಚಲನ ಚಿತ್ರರಂಗದ ಸಂವೇದನಾಶೀಲ ನಿರ್ದೇಶಕ ಮತ್ತು ಹಿರಿಯ ಸಮಾಜವಾದಿ. ಈ ಹೆಸರು ಈವೊತ್ತಿನ ಹೊಸ ತಲೆಮಾರಿನ ಚಲನ ಚಿತ್ರರಂಗದ 'ಪ್ರತಿಭೆ'ಗಳಿಗೆ ಹಾಗೂ ಬರಹಗಾರರಿಗೆ ಎಷ್ಟು ತಿಳಿದಿದೆಯೋ ನಾ ಕಾಣೆ! ಲೇಖಕರಾದ ಲಂಕೇಶ್, ತೇಜಸ್ವಿ, ಚಂಪಾ, ಕಂಬಾರ, ದೇವನೂರ...
’ಅವಧಿ’ Recommends – ’ಕತ್ತಲೆ ದಾರಿ ದೂರ’
ರಂಗಶಂಕರದಲ್ಲಿ ನಾಳೆ, ಜುಲೈ ೧ರಂದು ’ಸಮುದಾಯ’ ತಂಡದಿಂದ ಕತ್ತಲೆ ದಾರಿ ದೂರ ಸಂಜೆ 7.30 ಕ್ಕೆ
"ಮನುಷ್ಯರೆನ್ನುವುದು ಕೂಡ ಒಂದು ಮೂಢನಂಬಿಕೆ.."
ಗೊಬ್ಬರ ಮತ್ತು ಇತರ ಕತೆಗಳು ಬಿ ಎಂ ಬಶೀರ್ ಗುಜರಿ ಅಂಗಡಿ ಅಂತರ್ಜಲ ಮಗುವೊಂದು ಪಾಳು ಬಿದ್ದ ಕೊಳವೆ ಬಾವಿಗೆ ಬಿತ್ತು. ಅಂತರ್ಜಲ ಭೂಮಿಯದ್ದಷ್ಟೇ ಅಲ್ಲ, ಮನುಷ್ಯರದ್ದೂ ಬತ್ತಿ ಹೋಗಿರುವುದು ಸಾಬೀತಾಯಿತು. ಲೆಕ್ಕ ಅವನು ಆ ಮರದ ಬುಡಕ್ಕೆ ಹೋಗಿದ್ದು ನೆರಳನ್ನು ಅರಸಿ. ಒಂದಿಷ್ಟು ಹೊತ್ತು ವಿಶ್ರಾಂತಿ ಪಡೆದ. ಬಿಸಿಲು ಇಳಿದದ್ದೇ, ಇಡೀ...
ನೀವೂ ಬನ್ನಿ..
ಅನ್ನ-ಅಭಿಮಾನದ ನಡುವೆ ಸೊರಗಿದ ಕನ್ನಡ
ಗೊರೂರು ಶಿವೇಶ್ ಸುಪ್ರೀಂ ಕೋಟ್ರ್ ನ ತೀರ್ಪು ಹೊರಬಿದ್ದಿದೆ. ಪೋಷಕರ ಆಯ್ಕೆಯ ಮಾಧ್ಯಮದ ಕಲಿಕೆಗೆ ಅವಕಾಶ ನೀಡಿದೆ. ಈ ಕುರಿತು ಎಲ್ಲೆಡೆ ಪರ-ವಿರೋಧ ಚರ್ಚೆ ಪ್ರಾರಂಭವಾಗಿದೆ. ತೀರ್ಪಿನ ಮರುಪರಿಶೀಲನೆಗಾಗಿ ಮನವಿ ಸಲ್ಲಿಸುವಂತೆ, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಸೇರಿಸಿ ಪ್ರಾಥಮಿಕ ಹಂತದಲ್ಲಿ ಮಾತೃಭಾಷಾ ಶಿಕ್ಷಣ ಉಳಿಸಿಕೊಳ್ಳಲು...
'ಹಾತೊರೆಯುವ ಮನಕೆ ಹಾರುವ ಹರುಷವೇ ಅನುದಿನ…'
ಅಂ'ತ'ರಂಗ ಕೃಷ್ಣ ಎಲ್ಲಿಂದೆಲ್ಲಿಗೋ ಪಯಣ... ಹುಟ್ಟು-ಸಾವಿನ ಗುಟ್ಟನರಿಯದ ನೆಟ್ಟನೇರ ನಡೆ-ದೂರತೀರದೆಡೆ... ಹುಟ್ಟೆಂಬ ಗುಟ್ಟಿನ ಗೂಡಿಂದ ರೆಕ್ಕೆ-ಪುಕ್ಕ ಮೂಡಿಸಿಕೊಂಡು ಜೀವನದ ವಿಶಾಲ ದಿಗಂತದೆಡೆಗೆ ದಿಕ್ಕನ್ನರಸಿ ಹಾರುತ್ತ ಸಾಗುತ್ತಾ... ಹಾತೊರೆಯುವ ಮನಕೆ ಹಾರುವ ಹರುಷವೇ ಅನುದಿನ... ಕ್ಷಣಕ್ಷಣವು ಹೊಸ ಹುಟ್ಟು...
'ಮುಷ್ಟಿಯೊಳಗಣ ಮಾತು…' ಭಾನುವಾರದ ಸಣ್ಣ ಕಥೆ
ಡಾ ಎಸ್ ಬಿ ಜೋಗುರ ಪ್ರಕಾಶನ ಪಾಲಿಗೆ ಮನೆ ಎನ್ನುವುದು ಮಂತ್ರಾಲಯವಾಗಿರಲಿಲ್ಲ. ಓಣಿಯ ಹುಡುಗರೊಂದಿಗೆ ಆಟವಾಡುವಾಗಲೂ ಹಿಂದಿನ ದಿನದ ರಾತ್ರಿ ಅವನನ್ನು ಪೀಡಿಸುತ್ತಿತ್ತು. ಅವನಪ್ಪ ಅವ್ವಳನ್ನ ಕುಡಿದು ಬಂದು ಹಿಗ್ಗಾ ಮುಗ್ಗ ಹೊಡೆದದ್ದು ನೆನಪಾಗಿ ಮನಸು ಕಹಿಯಾಗಿ, ಆಟದಲ್ಲೂ ಮಜವಿರಲಿಲ್ಲ.. ಅಪ್ಪನ ಆ ಬೈಗುಳ, ಹೊಡೆತ,...
