ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ರಂಗಶಂಕರದಲ್ಲಿ ನಾಳೆ ’ದ ಲೇಡಿ ಆಫ್ ಬರ್ಮ’
ಮತ್ತೊಮ್ಮೆ ’ಇಲ್ಲಾ… ಅಂದ್ರೆ…ಇದೆ’
ಸುಚಿತ್ರಾದಲ್ಲಿ ಇಂದು ಸಂಜೆ
ಸಂಧ್ಯಾರಾಣಿ ಕಾಲಂ : ನನಗೆ ಮುತ್ತೆಂದರೆ ಪ್ರೀತಿ, ಪ್ರತಿಭಟನೆಯಲ್ಲ
ನಾವು ಕಾಲೇಜಿನಲ್ಲಿದ್ದಾಗ ಯಂಡಮೂರಿ ವೀರೇಂದ್ರನಾಥ್ ಬರೆದ ಒಂದು ಪುಸ್ತಕ ಓದಿದ್ದೆ, ಅದರಲ್ಲಿ ಒಂದು ಕೊಟೇಶನ್ ಇತ್ತು, A kiss is an agreement between two hearts signed by four lips ಅಂತ. ಮುತ್ತಿನ ಹೆಸರು ಕೇಳಿದರೂ ರೋಮಾಂಚನ ಆಗುತ್ತಿದ್ದ ವಯಸ್ಸಿನಲ್ಲಿ, ಈ ಕೋಟ್ ಓದಿ ಮಹಾನ್ ಥ್ರಿಲ್ ಆಗಿಬಿಟ್ಟಿತ್ತು, ಮರೆಯೋಕೆ...
’ಕವಿತಾ ಎಂಬ ಗೆಳತಿ..’ಯ ಜೊತೆ ಸ್ಮಿತಾ
ಸ್ಮಿತಾ ಅಮೃತರಾಜ್ ಕಾಲೇಜಿನ ಕೊನೇಯ ವರ್ಷ ಡಿಗ್ರಿಯೊಂದನ್ನ ಹೆಸರಿನ ಮುಂದೆ ಅಂಟಿಸಿಕೊಳ್ಳುತ್ತೇವೆಂಬ ಹಮ್ಮನ್ನು ಎದೆಯಲ್ಲಿ ತುಂಬ್ಕೊಳ್ಳುವುದರ ಜೊತೆಗೆ ವರುಷಗಳು ಹೇಗೆ ಸದ್ದಿಲ್ಲದೆ ಸರಿದು ಹೋದವಲ್ಲಾ ಅನ್ನೋ ಹತಾಶೆ ಬೇರೆ.ಈ ನಗು, ಈ ಸಂತಸ, ಉಲ್ಲಾಸ, ಹುರುಪು ಎಲ್ಲವೂ ಕೂಡ ಈ ಕ್ಯಾಂಪಸ್ಸಿನೊಳಗಷ್ಟೇ ಸೀಮಿತ.ಕಾಲೇಜು ಗೇಟು ದಾಟಿದ...
ನೀವು ಹಕ್ಕಿ ರೆಕ್ಕೆಬಿಚ್ಚಿ ಹಾರುವುದನು ನೋಡಿದ್ದೀರಾ..
ನಾನೊಮ್ಮೆ ಕೇಳಬೇಕಿದೆ... - ರಮೇಶ್ ನೆಲ್ಲಿಸರ ಜಗತ್ತಿನ ಭಾರವನ್ನೆಲ್ಲ ಹೊತ್ತಂತಿರುವ ಜನರಿಗೆ ನಾನೊಮ್ಮೆ ಕೇಳಬೇಕಿದೆ ನೀವು ಹಕ್ಜಿ ರೆಕ್ಕೆಬಿಚ್ಚಿ ಹಾರುವುದನು ನೋಡಿದ್ದೀರಾ ಎಂದು ನೂರು ಸಮಸ್ಯೆಗಳಿಗೆ ತಾವೇ ಸಿಕ್ಕಿಕೊಂಡು ಒದ್ದಾಡುತಿರುವ ಸ್ನೇಹಿತರಿಗೆ ನಾನೊಮ್ಮೆ ಕೇಳಬೇಕಿದೆ ಕೈಕಾಲು ಇರದವರೂ ಬದುಕಿದ್ದಾರೆ,ನೋಡಿದ್ದೀರಾ...
ಆಸೆಗೆ ಎನಿತು ಕೊನೆ?
- ಅಕ್ಷಯ ಕಾಂತಬೈಲು ಒಮ್ಮೆ ನೆನಪಿಸಿಕೊಳ್ಳಿ. ನಾವೆಲ್ಲರೂ ಬಾಲ್ಯದಲ್ಲಿ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ ಅಪ್ಪನ ಕೈಬೆರಳೊತ್ತುತ್ತಾ, ಅಮ್ಮನ ಸೆರಗ ಜಗ್ಗುತ್ತಾ 'ನಂಗೆ ಅದು ತೆಗೆದುಕೊಡು... ಇದು ತೆಗೆದುಕೊಡು...' ಎಂದು ಮಿಠಾಯಿ, ಆಟಿಕೆ ಅಥವಾ ಇನ್ನಾವುದೋ ಆಸೆಯಲ್ಲಿ ರಂಪ ಮಾಡಿ ಕೇಳಿರುತ್ತೇವೆ. ಆಸೆ ಬೇಡ ಎಂದವರಾರು? ಬೇಕು...
ಆನಂದ ಬೋವಿ ಬರೆದ ಸಣ್ಣ ಕಥೆ ’ಒಲೆ ಹತ್ತಿ ಉರಿದೊಡೆ…’
- ಆನಂದ ಬೋವಿ ತುರುಸುತ್ತಿದ್ದ ಮೈ ಕೈ ಗಳನೆಲ್ಲಾ ಕೆರ ಕೆರ ಕೆಬರಿದ ಬಸಲಿಂಗ ಮಾಸ್ತರ ಸುಮ್ಮನ ಕುಂಡ್ರಲೇ ಮಕ್ಕಳಿಗೆಲ್ಲಾ ಬೈದು, ಒಮ್ಮಿಂದೊಮ್ಮಲೆ. ನಲಿ-ಕಲಿ ಹಾಡು ಶುರು ಮಾಡಿದ. ಇಂವ ನಿಮಿಷಕೊಮ್ಮೆ ಕೆಬರುವ ಶೈಲಿಗೂ ಮಕ್ಕಳು ಜಿಗಿದು, ಜಿಗಿದು ಚೀರುತ್ತ ಹಾಡುವ ಪ್ರಾಸಕ್ಕೂ, ಹೊಂದಾಣಿಕೆ ಆಗಿ, ಸಾಲಿ ತುಂಬ ಇಂವನ ಪಾಠನ ಜೋರಾಗಿ...
ಕುಂದಾಪ್ರ ಕಾರ್ಟೂನ್ ಹಬ್ಬ
ಬೇಂದ್ರೆ ಜೊತೆಯಲ್ಲಿ ಒಂದು ಸಂಜೆ
ಡಾ ಶಿವಾನಂದ ಕುಬಸದ ’ನೆನಪಿನ ಪೆಟ್ಟಿಗೆಯಿಂದ’ : ಅವನನ್ನು ಉಳಿಸಿಕೊಳ್ಳಲಾಗಲೇ ಇಲ್ಲ
ವ್ಯರ್ಥಗೊಂಡ ಒಂದು ಯತ್ನ.. ಒಂದು ಬೆಳಗಿನ ಜಾವ, ವಾಕಿಂಗ್ ಡ್ರೆಸ್ ಹಾಕಿಕೊಂಡು ಇನ್ನೇನು ಮನೆಯಿಂದ ಹೊರಡಬೇಕು, ಆಗ ನಮ್ಮ ಆಸ್ಪತ್ರೆಯಿಂದ ಕರೆ ಬಂದಿತು. ಒಬ್ಬ ವಿಷ ಸೇವಿಸಿದವ ಬಂದಿದ್ದಾನೆಂದೂ, ಸೀರಿಯಸ್ ಇದ್ದಾನೆಂದೂ, ಬದುಕುವ ಲಕ್ಷಣಗಳು ಕಡಿಮೆ ಇವೆಯೆಂದೂ ಒಂದೇ ಉಸಿರಿನಲ್ಲಿ ನಮ್ಮ ಸಹಾಯಕ ಹೇಳಿದ. ಅಂದಿನ ವಾಕಿಂಗ್ ಗೆ...
ಯೋಗರಾಜ್ ಭಟ್, ದಯಾನಂದ್ ಜುಗಲ್‌ಬಂದಿ ಕಥೆ
ವಾಸ್ನೆ ಕಥೆ : ಯೋಗರಾಜ ಭಟ್ ನಿರೂಪಣೆ : ಟಿ ಕೆ ದಯಾನಂದ್ ಇದಕ್ಕೆ ಸರಿಯಾಗಿ ಎರಡು ದಿನಗಳ ಹಿಂದಷ್ಟೇ ಪತ್ತೇಕಾನಿನ ಬಂದೂಕು ರಿಪೇರಿ ಕೆಲಸದ ಪಟ್ಟೆಸಾಬರ ಮಗ ಇಬ್ರಾಹಿಮನು ಕಣ್ಣಿರುವ ಯಾರಿಗೂ ಕಾಣಿಸದಂತೆ ಹೇಳ ಹೆಸರಿಲ್ಲದಂತೆ ಮಟಾಮಾಯವಾಗಿ ಹೋಗಿದ್ದ ಸಮಯದೊಳಗೆ, ಪಕ್ಕದ ಅಂಬಾಡಿಯ ಕುಲುಮೆನಾಗಪ್ಪನ ಮಗಳು ಕುಮುದೆಯೂಇಬ್ರಾಹಿಮನದೇ...
'ಕಲಿತಷ್ಟು ಸಾಲದೆನೋ…' ಪ್ರತೀಭಾ ಕಾಗೆ ಕವನ
ಡಾ ಪ್ರತೀಭಾ ಕಾಗೆ ಕಲಿತಷ್ಟು ಕಡಿಮೆಯೆನೋ? ನಾನೆಂದುಕೊಂಡದ್ದೆಲ್ಲವೂ ಆಯಿತಿಂದು ಆಗಲಿನ್ನೆನು ಉಳಿಯಲಿಲ್ಲ ಹಾಗೆಂದರೆ ಬೇರೆನೊ ತಿಳಿದಿತು ಸುತ್ತಲೂ ನಡೆವದೆಲ್ಲವೂ ಕಲ್ಪನೆಯಲ್ಲ ವಾಸ್ತವದ ಹತ್ತಿರವಾದ ಎಳೆಯೋಂದು ನೊಡುತ್ತಲೆ ಮಾಯವಾದಂತೆ ಗೊಚರಿಸುತ್ತದ್ದರು ಸತ್ಯಕ್ಕೆ ಎಂದು ಸಾವಿಲ್ಲ ಕಲ್ಪನೆಗೂ ಜೀವ ಬಂದಿಹುದು ಅರಗಿಸಿಕೊಳ್ಳಲು ಆಗದೆ...
ಉರ್ದುವಿನಲ್ಲಿ ಕನಕದಾಸ ಸಾಹಿತ್ಯ
ನಳಿನ ದಾಸಸಾಹಿತ್ಯ ಪಿತಾಮಹರಲ್ಲಿ ಒಬ್ಬರಾದ ಕನಕದಾಸರ ಕೀರ್ತನೆಗಳನ್ನು ‘ಬೆತಾಬ್ ಲಮ್ ಹೆ’ ಹೆಸರಿನಲ್ಲಿ ಉರ್ದು ಅಕಾಡೆಮಿ ಪ್ರಕಟಿಸಿರುವುದು ಹೆಮ್ಮೆಯ ವಿಷಯ. ಕನಕದಾಸರ ಅನುಭಾವ್ಯದ ನೂರೈದು ಕೀರ್ತನೆಗಳನ್ನು ಇದು ಒಳಗೊಂಡಿದೆ. ಬೆತಾಬ್ ಸಾಗರ್ ಕರ್ನಾಟಕಿ ಕಾವ್ಯನಾಮದ ಕವಿ ಸೈಯದ್ ಷಬೀರ್ ಅಹ್ಮದ್ ಅವರು ಉರ್ದು ಒಳಗೊಂಡಂತೆ ಪಂಚ ಭಾಷಾ...
ಕರ್ನಾಟಕ ವೈಜ್ಞಾನಿಕ ಮನೋವೃತ್ತಿ ಆಂದೋಲನಕ್ಕೆ ಸ್ವಾಗತ
ಬ್ರೇಕಿಂಗ್ ನ್ಯೂಸ್ : ಜಿ ಎನ್ ಮೋಹನ್ ಅವರಿಗೆ ನಾಟಕ ಅಕಾಡಮಿ ಪ್ರಶಸ್ತಿ
ಜಿ ಎನ್ ಮೋಹನ್ ಅವರ ರಂಗಭೂಮಿಯನ್ನು ಕುರಿತ ಎರಡು ಕೃತಿಗಳಿಗೆ ನಾಟಕ ಅಕಾಡಮಿ ಪ್ರಶಸ್ತಿ ’ರಂಗ ಕಿನ್ನರಿ’ ಪುಸ್ತಕಕ್ಕೆ ೨೦೧೨ರ ಪ್ರಶಸ್ತಿ ಮತ್ತು ’ಥರ್ಡ್ ಬೆಲ್’ ಪುಸ್ತಕಕ್ಕೆ ೨೦೧೩ ರ ಪ್ರಶಸ್ತಿ. ’ಅವಧಿ’ಯ...
ಪ್ರಶಾಂತ್ ಆಡೂರ್ ಬರೆದ ’ಸಿಂಧೂ ಗಂಡನ ಕಥೆ’
ಪ್ರಶಾಂತ್ ಆಡೂರ್ ಕೃಷ್ಣಮೂರ್ತಿಗೆ ಈಗ ೭೫ ವರ್ಷ ಆಗಲಿಕ್ಕೆ ಬಂತ. ಅವನ ಹೆಂಡ್ತಿ ಸಿಂಧೂಗ ೬೭ ದಾಟಿದ್ವು. ಇಬ್ಬರದು ೪೩-೪೪ ವರ್ಷದ ಸಂಸಾರ, ಎರಡ ಮಕ್ಕಳು, ಎರಡು ಮೊಮ್ಮಕ್ಕಳು ಅಗದಿ ಫ್ಯಾಮಿಲಿ ಪ್ಲ್ಯಾನಿಂಗ ಫ್ಯಾಮಿಲಿ. ಹಂಗ ಕೃಷ್ಣಮೂರ್ತಿದ ಆರೋಗ್ಯ ಈಗ ಒಂದ ಸ್ವಲ್ಪ ಡಗಮಾಯಿಸಿದುರು ತನ್ನ ಕಾಲ ಮ್ಯಾಲೆ ತಾ ನಿಲ್ತಾನ, ಸಿಂಧು ಭಾಂಡಿ...
'ಯುವಕನೋರ್ವ ಕಂಡ ಆಳ್ವಾಸ್ ನುಡಿಸಿರಿ…..' – ಚೇತನ್ ಸೊಲಗಿ
- ಚೇತನ್ ಸೊಲಗಿ ಕರ್ನಾಟಕ ಮಾತ್ರವೇ ಅಲ್ಲ ಇಡೀ ಪ್ರಪಂಚದಲ್ಲಿಯೇ ಧಾವಂತ, ತಲ್ಲಣ, ಆತಂಕಗಳು ಮನೆ ಮಾಡಿವೆ. ಕರ್ನಾಟಕದ ತಲ್ಲಣಗಳಿಗೂ ಪ್ರಪಂಚದ ತಲ್ಲಣಗಳಿಗೂ ಹೆಚ್ಚಿನ ವ್ಯತ್ಯಾಸಗಳಿಲ್ಲ, ಪ್ರೀತಿ ವಿಶ್ವಾಸ ನಂಬಿಕೆಗಳೆಲ್ಲವೂ ಕಣ್ಮರೆಯಾಗಿ, ದ್ವೇಷ ಅಸೂಹೆಗಳೇ ವಿಜೃಂಭಿಸುತಿರುವ ಈ ಸಂದರ್ಭದಲ್ಲಿ ತಲ್ಲಣದ ಪ್ರವಾಹದೊಂದಿಗೆ ಕೊಚ್ಚಿಕೊಂಡು...
ಲಕ್ಷ್ಮೀಕಾಂತ ಇಟ್ನಾಳ ಅನುವಾದಿಸಿದ ಗುಲ್ಜಾರ್ ಕವಿತೆ
ಕಟ್ಟಿಗೆ ಪಟ್ಟಿ, ಪಟ್ಟಿ ಮೇಲ್ ಕುದುರೆ ಲಕ್ಷ್ಮೀಕಾಂತ ಇಟ್ನಾಳ ಕಟ್ಟಿಗೆ ಪಟ್ಟಿ, ಪಟ್ಟಿ ಮೇಲ್ ಕುದುರೆ ಕುದುರೆಯ ಬಾಲಕೆ, ಬೀಸಿತು ಚಾಟಿ ನಾಗಾಲೋಟದಿ ಓಡಿತು ಕುದುರೆ, ಬಾಲವನೆತ್ತಿ ಕುದುರೆ, ಕುದುರೆ ಹೊಕ್ಕಿತು ಸಂತೆಯನು, ಸಂತೆಯಲಿದ್ದನು ಕ್ಷೌರಿಕನು ಕುದುರೆಪ್ಪನ ಕ್ಷೌರವ ಮಾಡಿದ ಕೂಡಲೇ ಛಗ್-ಬಗ್ ಛಗ್ -ಬಗ್ ಛಗ್- ಬಗ್...
’ದೂರು ದಾಖಲಿಸಲು Police stationವರೆಗೂ ಹೋಗಬೇಕಿಲ್ಲ’ – ಅಂಜಲಿ ರಾಮಣ್ಣ
ಅಂಜಲಿ ರಾಮಣ್ಣ ದೂರು ದಾಖಲಿಸಲು Police stationವರೆಗೂ ಹೋಗಬೇಕಿಲ್ಲ...You know it! For your kind attention ; ದೂರು ನೀಡಲು ಪೋಲಿಸ್ ಠಾಣೆಯವರೆಗೂ ಹೋಗಬೇಕಿಲ್ಲ ಎಷ್ಟೇ ವಿದ್ಯಾವಂತ ಮಹಿಳೆಯರೂ ಪೋಲಿಸ್ ಠಾಣೆಗೆ ಹೋಗಲು ಹಿಂಜರೆಯುವ ಕಾಲದಲ್ಲೇ ಇನ್ನೂ ಇದ್ದೇವೆ. Come on let's not deny it. ಹೆಣ್ಣು ಮಕ್ಕಳಿಗೆ...
ಸಮುದಾಯ ರೇಡಿಯೋ ಕುರಿತು ಒಂದು ಪುಸ್ತಕ
