ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಈ ’ಮೌನಕ್ಕೆ ಹತ್ತು ವರುಷ’, ಮೌನದೊಂದಿಗೆ ದನಿಯಾಗಿ
’ಕಾಡುತ್ತಿದ್ದವು ಕಣ್ಣುಗಳು…’ – ಶ್ರೀದೇವಿ ಕೆರೆಮನೆ
ಆ ಕಣ್ಣು ಶ್ರೀದೇವಿ ಕೆರೆಮನೆ ಅದೆಂತಹ ನೋಟ? ನನ್ನೊಳಗನ್ನೆಲ್ಲ ಒಮ್ಮೆಲೆ ಬಗೆದು ನೋಡಿದ ಹಾಗೆ.... ಏನೋ ಸಾವಿರ ಮಾತುಗಳು ಭಾವನೆಗಳು ಒಮ್ಮೆಲೆ ಮನದೊಳಗೆ ನುಗ್ಗಿ ಪ್ರವಾಹ ಸೃಷ್ಟಿಸಿದ ಹಾಗೆ.... ಹೇಳಬೇಕಾದುದನ್ನೆಲ್ಲ ಕಣ್ಣಂಚಿನ ಹರಿತ ನೋಟದಲ್ಲೇ ಬಿತ್ತರಿಸಿದ ಹಾಗೆ... ಹೇಳದೇ ಉಳಿದ ಸಾವಿರ ಮಾತುಗಳನ್ನು ಒಂದೇ ನೋಟದಲ್ಲಿ ಹೇಳಿದ...
'ಮಾತುಗಳೆಲ್ಲಾ ಮಾರ್ದನಿಯಾಗಿ ಮೌನಗಳಾಗಲೇ ಮಾತುಗಳಾಗಿ..' ದಿವ್ಯಾ ಆಂಜನಪ್ಪ
ಜೀವಂತ ಪುತ್ಥಳಿ ದಿವ್ಯ ಆಂಜನಪ್ಪ ಈ ದಿನವೆಲ್ಲಾ ಮಂಪರು ಮದಿರೆ ಸುರುಳಿ ಗುಂಗಲಿ ಕಳೆದೆ ನನ್ನನೇ ಸೆಳೆವ ಬೆಳಕ ಬಿಟ್ಟು ಇನ್ನೆಷ್ಟು ಓಡಲಿ ಸುತ್ತಿ ಬರುವುದು ನಿನ್ನದೇ ಛಾಯೆ! ಮಾತುಗಳೆಲ್ಲಾ ಮಾರ್ದನಿಯಾಗಿ ಮೌನಗಳಾಗಲೇ ಮಾತುಗಳಾಗಿ ದಿನ ಕಳೆದಿದೆ ಈ ಮನವೂ ಕಳೆದು ಸುತ್ತಿ ಬರುವಾಗೊಮ್ಮೆ ನೀ ತಂದು ಬಿಡು ಹೀಗೆ! ಏನೇ ಹೇಳು ಈ...
ಹೀಗೊಬ್ಬ ಬಾಲ್ಯದ ಮಾರ್ಗದರ್ಶಕನ ನೆನಪು…
- ಪ್ರದೀಪ್ ದಾನಿ ಜೀವನದಲ್ಲಿ ಉಲ್ಲಾಸ ಉತ್ಸಾಹಗಳು ತುಂಬಿರಬೇಕಂತೆ, ಅದು ಬರ್ಬೇಕಾದ್ರೆ ಕೆಲವು ಘಟನೆಗಳು ಸಾಕ್ಷಿಯಾಗ್ತವೆ ಅಲ್ವಾ ಗೆಳೆಯರೇ...? ಈ ನನ್ನ ಬರಹ ಓದಿದಾಗ ನಾ ಹೇಳಬಯಸಿರುವ ಭಾವಾರ್ಥ ನಿಮಗೆ ಸಿಗಬಹುದು... ಈ ಸಾಲುಗಳ ಜೊತೆಗೆ ನನ್ನ ಬಾಲ್ಯದ ದಿನಗಳ ನೆನಪುಗಳನ್ನ ಮೆಲಕು ಹಾಕಬೇಕೆನಿಸಿದೆ. ಆ ದಿನಗಳ ನೆನಪು, ಆ ವ್ಯಕ್ತಿಯ...
’ಸಂಚಾರಿ’ಯಿಂದ ಎರಡು ನಾಟಕಗಳು
ಕುಸುಮಬಾಲೆ ಕಾಲಂ : ಮತ್ತೆ ಮತ್ತೆ ಭ್ರಮೆಗಳು ಮುರಿಯುತ್ತವೆ…
ಈ ಬದುಕು ಹಾಗೇ, ನಾವೇನು ಮಾಡಬಾರದು ಅಂದುಕೊಳ್ಳುತ್ತೇವೋ, ಅದನ್ನೇ ನಮ್ಮಿಂದ ಮಾಡಿಸಿಬಿಡುತ್ತದೆ. ಹಾಗೇ ನಮ್ಮ ಘನವೆತ್ತ ಅಭಿಪ್ರಾಯಗಳಿಗೆ, ವಾದಗಳಿಗೆ ಕೆಲವರ್ಷಗಳ ನಂತರ ನಮ್ಮ ಎದುರು ನಮ್ಮನ್ನೇ ನಿಲ್ಲಿಸಿ, ಪಾಟೀಸವಾಲು ಮಾಡುತ್ತದೆ. ಅಲ್ಲೂ ನಾವೆ ಇಲ್ಲೂ ನಾವೇ, ಸಿನೆಮಾದ ಡಬಲ್ ಆಕ್ಟಿಂಗ್ ತರ. ಏಕಪಾತ್ರಾಭಿನಯ. ಪ್ರಶ್ನ ಉತ್ತರ,...
'ಮಲೆನಾಡಿನ ಮದುಮಗಳೇ, ನೀ ಮತ್ತೊಮ್ಮೆ ತಿರುಗಿ ಬಾರೆ…' – ಭವ್ಯ ಕೆ ಎಸ್
ಯಾರ ಹೊಗಳಲಿ .. - ಭವ್ಯ ಕೆ ಎಸ್ - ಫೋಟೋ : ರವಿ ಕುಲಕರ್ಣಿ "ಶರಣೆಂದೇವೋ" ಎಂದು ಶುರುವಾದ ಬೆಳಕಿನಾಟ, ನಾಲ್ಕುದಿಕ್ಕುಗಳನ್ನು ತನ್ನತ್ತ ಸೆಳೆಯುವ ಶಕ್ತಿಯನ್ನು ಬಿಂಬಿಸುವಂಥ ನಾಲ್ಕು ಬಯಲು. ಪ್ರತಿ ಬಯಲಿನಲ್ಲೂ ಕುವೆಂಪುರವರ ‘ಕಲ್ಪನೆಗೆ ಹಿಡಿದ ಕನ್ನಡಿಯಂತಿದ್ದ ಪಾತ್ರಗಳು, ಯೋಚನೆಗೂ ಸಿಗದಷ್ಟು ಎತ್ತರದ ವಿಚಾರವೊಂದಿದ್ದರೆ ಅದು...
'ಹರೆಯವೆಂದರೆ…' – ರಶ್ಮಿ ಕಾಸರಗೋಡು ಕವಿತೆ
ರಶ್ಮಿ ಕಾಸರಗೋಡು ಎಳೆಚಿಗುರು ಸದ್ದಿಲ್ಲದೆ ಬಿರಿದಿದೆ ಹೃದಯ ಹೂ ಪಕಳೆ ಬಿಚ್ಚಲು ಹಂಬಲಿಸುವಾಗ ಬಣ್ಣದ ಹಾತೆಗಳು ಗುಂಯಿಗುಡುವ ಸದ್ದಿನೊಂದಿಗೆ ಕನಸುಗಳ ಗೋಪುರವೇರುತಿವೆ ಕಾಲದ ಜೋಕಾಲಿಯಲಿ ಜೀಕಿದ ಪೆಂಡುಲಂ ಒಂದು ಬಿಂದುವಿನಲಿ ಸ್ತಬ್ಧ ತೊಟ್ಟ ಲಂಗದಲಿ ರಕ್ತದ ಕಲೆ ತಿಂಗಳ ಸ್ನಾನದ ಶುರುವಾತು ದೊಡ್ಡವಳಾಗಿದ್ದೀನಿ! ತುಂಬು...
'ಕಾಡು ಹಕ್ಕಿಯ ಹಾಡು ಪಾಡು!' – ಸಣ್ಣಕಥೆ
~ಎಸ್.ಜಿ.ಶಿವಶಂಕರ್ ಸಿದ್ದನಿಗೆ ಆಶ್ಚರ್ಯ!! ಜೊತೆಗೆ ಗಾಬರಿ! ತನಗೆ ಶರೀರವೇ ಇಲ್ಲ ಎಂದು ತಿಳಿದಾಗ ! ಅಷ್ಟೊಂದು ಹಗುರವಾಗಿದ್ದ ! ತಾನೂ ಗಾಳಿಯೂ ಒಂದೇ ಎನ್ನುವಂತೆ! ಗಾಳಿಯಲ್ಲೇ ಕರಗಿ ಹೋಗಿರುವೆ ಎನಿಸಿತು! ಎಲಾ..? ಇದೇನು ಇಚಿತ್ರ? ತನ್ನ ಮೈಗೇನಾಯಿತು? ಕೈಕಾಲುಗಳನ್ನು ಆಡಿಸಿ ನೋಡಿದ! ನಗು ಬಂತು! ಕೈಕಾಲುಗಳು ಇದ್ದರೆ ತಾನೆ...
ರಂಗ ಯುಗಾದಿಯಲ್ಲಿ ’ಸುರಗಿ’ ಮತ್ತು ಜಯಂತ ಕಾಯ್ಕಿಣಿ
ರಾಮನನ್ನು ಹುಡುಕುತ್ತಾ, ಕಬೀರನ ದಾರಿಯಲ್ಲಿ…
ಜಿ ಪಿ ಬಸವರಾಜು ಗೋಡ್ಸೆಯ ಗುಂಡುಗಳು ತಮ್ಮ ಎದೆಯನ್ನು ಹೊಕ್ಕಾಗ ಗಾಂಧೀಜಿ ಬಾಯಿಂದ ಹೊರಬಿದ್ದ ಶಬ್ದ: 'ಹೇ ರಾಮ್!' ರಾಮ ಗಾಂಧೀಜಿಗೆ ಒಂದು ನಂಬಿಕೆಯಾಗಿದ್ದ; ಆದರ್ಶವಾಗಿದ್ದ; ಮೌಲ್ಯವಾಗಿದ್ದ. ರಾಮ, ಅಲ್ಲಾ, ಈಶ್ವರ -ಈ ಮೂರೂ ಪದಗಳು ಗಾಂಧೀಜಿಗೆ ಅದಲುಬದಲು ಮಾಡಬಹುದಾಗಿದ್ದ ಸತ್ಯಗಳಾಗಿದ್ದವು. 'ನನ್ನ ಕಲ್ಪನೆಯ ರಾಮ ಈ ಭೂಮಿಯ ಮೇಲೆ...
ನನ್ನ ಪ್ರೀತಿಯ ’ತುಂಗಾ’
ಸಂಗೀತ ರವಿರಾಜ್ " ಯಾರು ಒಂದು ಶಾಲೆಯನ್ನು ತೆರೆಯುತ್ತಾನೋ, ಅವನು ನಿಜವಾಗಿಯು ಒಂದು ಸೆರೆಮನೆಯನ್ನು ಮುಚ್ಚುತ್ತಾನೆ''- ಖ್ಯಾತ ಇಂಗ್ಲೀಷ್ ಲೇಖಕ "ವಿಕ್ಟರ್ ಹ್ಯೂಗ್' ನ ಕನ್ನಡಕ್ಕೆ ಅನುವಾದಿತ ಈ ಮೇಲಿನ ಯುಕ್ತಿ ಶಾಲೆಗೆ ಅರ್ಥಾತ್ ಶಿಕ್ಷಣಕ್ಕೆ ಹಿಡಿದ ಕೈಗನ್ನಡಿ. ಶಿಕ್ಷಕ ಮತ್ತು ಶಿಕ್ಷಣ ಸರ್ವಶ್ರೇಷ್ಠ. ಆದರೆ ಪ್ರತಿಯೊಬ್ಬರು...
ಬೆಳ್ಳಿತೆರೆಗೆ ಬಂಗಾರದ ಲೇಪ ನೀಡಿದ ಸಿದ್ಧಲಿಂಗಯ್ಯ
ಗೊರೂರು ಶಿವೇಶ್ ಕನ್ನಡ ಚಲನಚಿತ್ರ ಕಂಡ ಮೇರು ನಿರ್ದೇಶಕ ಬಿ. ಸಿದ್ಧಲಿಂಗಯ್ಯನವರು ತಮ್ಮ 79ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಳೆದ ವಾರವಷ್ಟೇ ಅವರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟನ್ನು ಕೊಡಮಾಡಿದೆ. ಈ ಗೌರವ ಕನಿಷ್ಠ ಐದಾರು ವರ್ಷಗಳ ಹಿಂದಾದರೂ ದೊರೆತಿದ್ದರೆ ಅವರ ಕುಟುಂಬವರ್ಗ...
'ಕಾಯ್ದು ಕೆಂಡವಾಗಿದ್ದೇನೆ..’
ಆನಂದ ಭೋವಿ ಕಾಯ್ದು ಕೆಂಡವಾಗಿದ್ದೇನೆ ನೀ ಸುರಿಯುತ್ತಿದ್ದರೂ ಕಾಯ್ದು ಕೆಂಡವಾಗಿದ್ದೆನೆ ಪದರು ಪದರುನಲಿ ಆರಿಹೋದ ಲಾವಾರಸ ನಿನ್ನ ತಣ್ಣೀರು ಕುಡಿದು ಹುಚ್ಚೆದ್ದು ಕುದಿಯುತಿದೆ ತುಳಿದು ತುಳಿದು ಸವಿದ ಎದೆಯಲಿ ಹೆಪ್ಪುಗಟ್ಟಿದ ರಕ್ತ ಬಿಸಿಯಾಗಿ ಬಿರುಕು ಬಿಟ್ಟಿದೆ ಮುಚ್ಚಿಕೊಂಡ ಸೊಟ್ಟ ಮೂತಿ ಮಣ್ಣನೆಲ್ಲಾ...
ಡಿ ವಿ ಜಿಯವರ ಹುಟ್ಟುಹಬ್ಬದ ದಿನ…
ಬೇಲೂರು ರಘುನಂದನ್ ಕಾಲಂ : ಉಮಾಶ್ರೀ ಅಮ್ಮ ಶ್ವೇತಪ್ರಿಯ ಅಂದ್ರು
ಮಳೆ ಹುಯ್ಯೋ ಕಾಲಕ್ಕೆ ನೆಲ ಎಲ್ಲಾ ಒಣಗಿನಿಂತಿರುತ್ತೆ. ನೀರು ಬಿದ್ದ ಕೂಡ್ಲೇ ಘಮ್ ಅನ್ನೋ ಹಾಗೆ ಬರಡಾಗಿದ್ದ ನನ್ನ ಬದುಕಿನಲ್ಲಿ ಬಂದವಳು ಸಂಗಾತಿ ಲಕ್ಷ್ಮಿ. ಏನಪ್ಪಾ ಇದು ಮಳೆ ನೆಲ ಅಂತ ಪ್ರೀತಿ ಪ್ರೇಮ ಆಕರ್ಷಣೆಯಾ ಕಥೆ ಇವತ್ತು ಹೇಳೋಕೆ ಹೊರಟುಬಿಟ್ಟಿದ್ದೇನೆ ಅಂದುಕೊಳ್ಳಬೇಡಿ. ಯಾಕೋ ಇವತ್ತು ಇದನ್ನು ನಾ ಹೇಳಲಿಲ್ಲ ಅಂದ್ರೆ ಈ...
ರಂಗ ಯುಗಾದಿಯಲ್ಲಿ ’ಅನಂತ ಕಥಾವಾಚನ’
ಹೊಸ ಓದು : ಓಈಸಿ ಎನ್ನುವುದು ಅಪಾಯವು ಹೌದು, ಸುದೈವವೂ ಹೌದು
ಬಂದೇಸಾಬ ಮೇಗೇರಿ ರಾಮಾಪುರ ದಿನಂಪ್ರತಿ ಬೋರು ಹೊಡೆಯುವ ಕ್ಲಾಸುಗಳು. ಅದೇ ಹಳೆ ಮಾಸ್ತರರ ಓಣಗಿದ ಮುಖಗಳು. ಒಂದೆ ತೆರನಾದ ಕೊರೆಯುವ ಸ್ಟೈಲ್. ಮೊಳೆ ಹೊಡೆಯುವ ವಿಷಯಗಳನ್ನು ಕೇಳಿ ಕೇಳಿ ಕಿವಿಗಳು ತೂತು ಬಿದ್ದಿದ್ದವು. ಪಿ.ಜಿ.ಯ ಲೈಫ್ ಸಾಕೆನಿಸಿತ್ತು. ಆಗ ಬಂದಿದ್ದೇ ಓ.ಈ.ಸಿ ಎಂಬ ಆಪದ್ಭಾಂದವ. ದ್ವಿತೀಯ ಸೆಮಿಸ್ಟರ್ನಲ್ಲಿ ಧುತ್ತೆಂದು...
ಕೆ ವಿ ಸುಬ್ಬಣ್ಣ ಆಪ್ತಮಂದಿರದಲ್ಲಿ ಇಂದು
ಕನ್ನಡ ಕಿರುಚಿತ್ರ ’ಪ್ಲೇ ಗ್ರೌಂಡ್’ ನಿರ್ದೇಶನ : ಎಂ ಡಿ ಪಲ್ಲವಿ ಮತ್ತು ಶಮಿಕ್ ಸೇನ್ ಗುಪ್ತ Synopsis In a dusty suburban street, children play hide n seek in the dusk. 3 year old Murli hides somewhere no one can find him and falls asleep. When he wakes up he is in a different...
ಸಂಸ ಬಯಲು ರಂಗಮಂದಿರದಲ್ಲಿ
ಪ್ರೀತಿನೆ ಆ ದ್ವ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ…
ಹಾಡಿಗಾಗಿ ಇಲ್ಲಿ ಕ್ಲಿಕ್ಕಿಸಿ
