ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಎರಡು ಕವಿತೆಗಳು
ಕು ಸ ಮಧುಸೂದನ್ ನಾಯರ್ ವ್ಯತ್ಯಾಸ ಇವತ್ತಿನ ಸಂಜೆ ನಿನ್ನೆಯಂತಿಲ್ಲ ನಿಜ ನಾಳೆಯ ಸಂಜೆ ಇವತ್ತಿನಂತಿರುವುದಿಲ್ಲ ಸಹಜ! ಹಾಗೇನೆ ಯಾವುದೂ ಒಂದೇ ತೆರನಾಗಿರುವುದಿಲ್ಲ ಅನ್ನುವುದು ನಿಸರ್ಗದ ನಿಯಮ; ಆದರೆ ಕವಿತೆ ಹಾಗಲ್ಲ ಇವತ್ತಿನ ಕವಿತೆಗೆ ನಿನ್ನೆಯ ನೆನಪಿರುತ್ತದೆ ನಾಳೆಯ ಕನಸಿರುತ್ತದೆ ಮತ್ತೂ ಈಕ್ಷಣದ ಅರಿವಿರುತ್ತದೆ! ***...
ನನಗೆ ಕಂಡ 'ಅಕ್ಕು' – ರಮೇಶ್ ಗುರುರಾಜರಾವ್
ರಮೇಶ್ ಗುರುರಾಜರಾವ್ ಇತ್ತೀಚಿಗೆ ನಾಟಕಗಳಿಗೆ ಹೋಗುವುದು ತುಂಬಾ ಕಡಿಮೆಯಾಗಿ ಹೋಗಿತ್ತು.... ಕೆಲಸದ ಒತ್ತಡ, ನನ್ನ ಮನೆಗೂ ರಂಗಶಂಕರ, ಕೆ ಎಚ್ ಕಲಾಸೌಧದಂತಹ ಜಾಗಗಳಿಗೂ ದೂರ ಹೆಚ್ಚಾದ್ದರಿಂದ ನಾಟಕ ನೋಡುವುದು ತುಂಬಾ ಅಪರೂಪ.... ಅದ್ಯಾಕೋ ಇವತ್ತು ಗೆಳೆಯರು ಮಾಡಿದ ನಾಟಕ "ಅಕ್ಕು" ನೋಡಲೇಬೇಕು ಎನಿಸಿತ್ತು... ನಾಟಕ ಮುಗಿದ ಮೇಲೆ...
ಬಿ ಸುರೇಶ್‌ಗೆ ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಯಲ್ಲಿ ಸಿಕ್ಕ ಪುಸ್ತಕ
ಬಿ ಸುರೇಶ್ ಸೆಕೆಂಡ್ ಹ್ಯಾಂಡ್ ಪುಸ್ತಕದ ಅಂಗಡಿಗಳು ಅದ್ಭುತ ಕಣ್ರೀ...! ಮೊನ್ನೆ ಭಾನುವಾರ ಜಯನಗರದ ಕಾಲುದಾರಿಯಲ್ಲಿ ಇಂತಹ ಪುಸ್ತಕದ ಅಂಗಡಿಯಲ್ಲಿ ಕಣ್ಣಾಡಿಸಿದೆ. ನಾನು ಅತಿಯಾಗಿ ಮೆಚ್ಚುವ ಕತೆಗಾರ ಸಾಮರ್ಸೆಟ್ ಮಾಮ್ ಅವರ ನಾಟಕಗಳ ಸಂಕಲನ ಸಿಕ್ಕಿತು. ಆತನ ಕತೆ ಕಾದಂಬರಿ ಓದಿದ್ದವನಿಗೆ ಈಗ ನಾಟಕಗಳ ಓದಿನ ಪಯಣ. ಆ ಪುಸ್ತಕದ ಮೊದಲ...
ಸುಚಿತ್ರಾದಲ್ಲಿ Film Appreciation Course
ಮತ್ತೆ ಸ್ಮಿತ್ – ಪಾಲಹಳ್ಳಿ ವಿಶ್ವನಾಥ್
ಸ್ಮಿತ್ ಮತ್ತು ಎಮ್ಸ್ವರ್ತ್ ಸಾಹೇಬರು (ಪಿ)ಸ್ಮಿತ್ ಕಥೆಗಳು (೬) ಪಾಲಹಳ್ಳಿ ವಿಶ್ವನಾಥ್ ರೈಲು ಹಿಡಿಯಲು ಧಾವಿಸಿದ ಆಗು೦ತಕನನ್ನು ಬೀಳ್ಕೊಟ್ಟು ಸ್ಮಿತ್ ಮಧ್ಯಾಹ್ನದ ಭೋಜನಕ್ಕೆ ಎಲ್ಲಿ ಹೋಗಲಿ ಎ೦ದು ಯೋಚಿಸುತ್ತಿದ್ದನು. ಸ್ಮಿತ್ ನ ಜೀವನದಲ್ಲಿ ಯಾವಾಗಲೂ ಏನಾದರೂ ನಡೆಯುತ್ತಲೇ ಇರುತ್ತಿತ್ತು. ಆದರೆ ಅ೦ದು ಇನ್ನೂ ಹೆಚ್ಚು...
’ಫೇಸ್ ಬುಕ್‌ನ ಮುಖಪುಟ ಶೇರ್ ಮಾರ್ಕೆಟ್ ಏಜೆಂಟ್ ಗಳಂತೆ..’
ಹೀಗೊಂದು ಆಯಾಮ.... ಶೇಷಗಿರಿ ಜೋಡಿದಾರ್ ಅತ್ಯತ್ತಮ ಮಟ್ಟದ ಆದರೆ ಅಗ್ಗವಾಗಿರುವ, ಮೆದುಳಿಗೆ ಗ್ರಾಸವಾಗ ಬಲ್ಲ ಆದರೆ ತ್ರಾಸವಾಗದ ತಾಜಾ,ತಾಜ ಹಣ್ಣು....ತರಕಾರಿ,ತಿನಿಸು, ದಿನಸಿಯನ್ನು ಆಯಲು ಹೊರಟಿರುವ ಮಹಾ ಸೂಕ್ಷಮತಿ ಓದುಗ..... ಎಗ್ಗು ಮುಗ್ಗಿಲ್ಲದ ಓಂಟಿ ಸಲಗ.... ಕಣ್ಣಿಗೆ ಹಬ್ಬ ಮಾತ್ರ ಬಣ್ಣದ ಜಾತ್ರೆ ತಟಸ್ಥ ಮಿದುಳು...
ದ್ರಾಕ್ಷಿ ಕೊಟ್ಟ ದ್ರಾಕ್ಷಾಯಣಿಯ ನೆನಪು..
ನಾಗರಾಜ್ ಕಾಂಬ್ಳೆ ನನಗೆ ನೆನಪಿರುವಂತೆ ನಾನಾಗ ಆರನೆಯ ತರಗತಿ ಓದುತ್ತಿರಬಹುದು. ನಮ್ಮ ಓಡಾಟ, ಚೆಲ್ಲಾಟ, ತುಂಟಾಟಗಳ ಭರಾಟೆಗೆ ನಿಲುಗಡೆಯೇ ಇರಲಿಲ್ಲ. ಮುಂಜಾನೆ ಬೇಗನೇ ಊಟ ಮುಗಿಸಿ ಮನೆಯಿಂದ ಹೊರಬೀಳುತ್ತಿದ್ದೇವು. ಶಾಲೆಯ ಬಾಗಿಲಿಗೆ ನಮ್ಮ ಪಾಠಿಚೀಲವನ್ನು ಒರಗಿಸಿ ಆಟಕ್ಕೆ ಅಣಿಯಾಗಿ ಮೈದಾನದಲ್ಲಿ ಅಡಿ ಇಡುತ್ತಿದ್ದೇವು. 'ಉಸ್ ಉಸ್'...
ಟೈಮ್‌ಪಾಸ್ ಕಡ್ಲೆ ಕಾಯ್ : ಸಿಸಿ ಕಣ್ಣುಗಳ ಜೊತೆ ಒಂದು ಸಮಾಲೋಚನೆ!
"ಸಿಸಿ" ಕಣ್ಣುಗಳ ಅದ್ಬುತ ಸುನಿಲ್ ಕುಮಾರ್ ಎ೦ ಎಸ್ ಅ೦ತೂ ಪರೀಕ್ಷೆ ಮುಗೀತು. ಮು೦ದಿನದು ದೀರ್ಘ ವಿರಾಮ.ಕ್ರಿಕೆಟ್,ಐಪಿಎಲ್, ಟಿ.ವಿ, ಸಿನೆಮಾ, ಪೆಸ್ಬಕ್ ಎನ್ನುತ್ತ .ಪರೀಕ್ಷೆ ಉತ್ತಮವಾಗಿ ಬರೆದ ಉತ್ಸಾಹದಲ್ಲಿ ಪರೀಕ್ಷಾ ಕೊಠಡಿಯಿ೦ದ ಹೊರ ಬ೦ದೆ. ತೆ೦ಗಿನ ಮರಗಳು ಬಹಳ ಕ೦ಡೆ. ನೆರಳಿನಲ್ಲಿರಲು ಒ೦ದು ತೆ೦ಗಿನ ಮರದಡಿ ಕುಳಿತೆ. ಅಚ್ಚರಿ!...
ಥಿಯೇಟರ್ ಸಮುರಾಯ್ ನಾಟಕ ’ಹಸಿದ ಕಲ್ಲುಗಳು’
'ರಾಷ್ಟ್ರಕವಿ' ಎಂಬ ಸ್ಥಾನಮಾನದ ಸುತ್ತ – ಜಿ ಪಿ ಬಸವರಾಜು
ಜಿ ಪಿ ಬಸವರಾಜು ಕೋ.ಚೆನ್ನಬಸಪ್ಪ ಅವರ ಅಧ್ಯಕ್ಷತೆಯ ಸಮಿತಿ 'ರಾಷ್ಟ್ರಕವಿ'ಯ ಸ್ಥಾನವೇ ಅಪ್ರಸ್ತುತ ಎಂದು ಅಭಿಪ್ರಾಯಪಟ್ಟಿದೆ. ಡಾ.ಜಿ.ಎಸ್.ಶಿವರುದ್ರಪ್ಪನವರ ನಂತರ ಈ ಗೌರವವನ್ನು ಯಾರಿಗೆ ಕೊಡುವುದು ಎಂಬ ಚಿಂತನೆಯಲ್ಲಿದ್ದ ಸರ್ಕಾರ ಅದಕ್ಕಾಗಿ ಕೋಚೆ ಸಮಿತಿಯನ್ನು ನೇಮಿಸಿತ್ತು. ಸಮಿತಿ ಈ ವಿಷಯನ್ನು ಕೂಲಂಕಷವಾಗಿ ಚಚರ್ಿಸಿ, 'ಈ...
ಮರುಳು ಮಾಡಾಕ ಹೋಗಿ ಮರುಳ ಸಿದ್ಧನ ನಾರಿ..
ಕೇಳಿದಷ್ಟೂ ಮರುಳು ಮಾಡುವ ಈ ಹಾಡು
'ಮಿ ಅಲಿ ಮತ್ತು ಮೂವರು ಮಿಸೆಸ್ ಅಲಿಯವರು'
ಪಂಡಿತಾರಾಧ್ಯ ಈಗ ವಿದೇಶ ಪ್ರಯಾಣ ಸಾಮಾನ್ಯ. ಪ್ರಖ್ಯಾತ ಪಕ್ಷಿ ವೀಕ್ಷಕ ಸಲೀಂ ಅಲಿ ಅವರು ತಮ್ಮ ನೆನಪುಗಳನ್ನು ಬರೆಯುವಾಗ ಹಿಂದಿನ ಸ್ಥಿತಿಯನ್ನು ಹಾಸ್ಯಮಯವಾಗಿ ಬರೆದಿದ್ದಾರೆ. ಬರ್ಮಾ, ಸಿಂಗಪುರ ಮೊದಲಾದ ವಿದೇಶಗಳಲ್ಲಿದ್ದ ತಮ್ಮ ಅಣ್ಣಂದಿರನ್ನು ಭೇಟಿಯಾಗಲು ಹೋದವರು ಭಾರತಕ್ಕೆ ಹಡಗಿನಲ್ಲಿ ಹಿಂದಿರುಗಬೇಕಿತ್ತು. ಆಗ ಹಡಗಿನ ಮೊದಲ...
ಡೈಲಿ ಬುಕ್ : ರಜನಿ ನರಹಳ್ಳಿ ಬರೆದ ’ಆತ್ಮ ವೃತ್ತಾಂತ’
ರಜನಿ ನರಹಳ್ಳಿಯವರ ‘ಆತ್ಮವೃತ್ತಾಂತ’ : ಆತ್ಮಸಂಗಾತಿಗೆ ಅಕ್ಷರಗಳ ಶ್ರದ್ಧಾಂಜಲಿ ಗುಬ್ಬಚ್ಚಿ ಸತೀಶ್ ನಾನು ಮತ್ತು ನನ್ನ ಶ್ರೀಮತಿ ತುಮಕೂರಿನ ಶ್ರೀಮತಿ ಎಂ.ಸಿ. ಲಲಿತಾರವರ ಮನೆಗೆ ನನ್ನ ನಾಲ್ಕನೇ ಪುಸ್ತಕ, ಮೊದಲ ಕಥಾಸಂಕಲನ ‘ಉಘೇ ಉಘೇ’ ಪುಸ್ತಕ ಬಿಡುಗಡೆ ಕಾಯಕ್ರಮಕ್ಕೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಬೇಕೆಂದು ಕೋರಲು...
ನಮ್ಮೂರಿಗೆ ಬಂತು ಶಾಪಿಂಗ್ ಮಾಲ್
ಮಾಲ್ ಸಂಸ್ಕೃತಿ ಸುವರ್ಣ ಸಿ ಮನೆಗೆಲಸ ಮುಗಿಸಿ ಆಫೀಸಿಗೆ ಹೋಗಬೇಕಾಗಿರುವುದರಿಂದ ಬೆಳಿಗ್ಗೆ ನ್ಯೂಸ್ ಪೇಪರ್ ಹೆಡ್ ಲೈನ್ ಮಾತ್ರ ಕಣ್ಣಾಡಿಸಿ ಆಫೀಸ್ ನಿಂದ ಸಂಜೆ ಮನೆಗೆ ಬಂದ ಮೇಲೆ ನಿಧಾನವಾಗಿ ಕಾಫಿ ಹೀರುತ್ತಾ ದಿನಾಂಕದಿಂದ ಇಡೀದು ಪಬ್ಲಿಷರ್ ವರೆಗೆ ಒಂದೂ ಚೂರು ಬಿಡದಂಗೆ ಪೇಪರ್ ಓದೋದು ನಂದು ಹವ್ಯಾಸ. ಎಂದಿನಂತೆ ಸಂಜೆ ಮನೆಗೆ...
ಬೇಲೂರು ರಘುನಂದನ್ ಕಾಲಂ : ಅಮ್ಮ ಜನ್ಮ ದಿನದ ಶುಭಾಶಯಗಳು
ಅವತ್ತು 2009 ಮೇ ಹತ್ತು. ಬೌದ್ಧ ಪೂರ್ಣಿಮೆ. ಜೆ.ಪಿ.ನಗರದ ಬಿ.ಜಿ.ಎಸ್ ಆಸ್ಪತ್ರೆಯಲ್ಲಿ ನಮ್ಮ ಮನೆಯವರಿಗೆಲ್ಲಾ ಖುಷಿ ಮೇಲೆ ಖುಷಿ. ಡಾ.ಹೇಮಾ ದಿವಾಕರ್ ಅವರು ಇನ್ನೊಬ್ಬಳು ಸಾಕವ್ವ ಹುಟ್ಟಿದಳು ಎಂದು ಮಗು ಎತ್ತಿಕೊಂಡು ಸೀದಾ ನನ್ನ ಬಳಿ ಕೊಡಲು ಬಂದ್ರು. ಆಗ ನಾನು, ನನ್ನ ಮಡದಿ ಲಕ್ಷ್ಮಿ ಮತ್ತು ನಮ್ಮ ಭಾವ ಮೂರು ಜನ ಆಸ್ಪತ್ರೆಯಲ್ಲಿ...
’ನಮ್ಮಮ್ಮ ಅಂದ್ರೆ ನಂಗಿಷ್ಟ’ – ಭಾರತಿ ಬಿ ವಿ
ಭಾರತಿ ಬಿ ವಿ ಇವತ್ತು ಅಮ್ಮಂದಿರ ದಿನವಂತೆ. ಮತ್ತೆ ಎಂದಿನಂತೆ ಶುರುವಾಗಬಹುದು ಬಿಸಿ ಬಿಸಿ ಚರ್ಚೆ- ಅಮ್ಮಂದಿರ ದಿನ ಅನ್ನುವುದೆಲ್ಲ ಹೆತ್ತವರಿಗೆ ಸಮಯ ಕೊಡಲಾಗದ ಪಾಶ್ಚಾತ್ಯರ ಸಂಸ್ಕೃತಿ, ನಮ್ಮದು ಜಗತ್ತಿನ ಸರ್ವ ಶ್ರೇಷ್ಠ ಸಂಸ್ಕೃತಿ, ನಾವು ಹಾಗೆಲ್ಲ ಅಮ್ಮನಿಗೆ ಒಂದೇ ದಿನ ಅಂತೆಲ್ಲ ಮೀಸಲಾಗಿಡುವವರಲ್ಲ ಅಂತೆಲ್ಲ. ಗೌರಿ ಹಬ್ಬದ ದಿನ...
ಸಹಯಾನ ಸಾಹಿತ್ಯೋತ್ಸವ
ಇಂದು ಸಂಜೆ ಘಜ಼ಲ್ ಹೆಸರಲ್ಲಿ..
ಹೀಗೊಂದು ಹಕ್ಕಿ ಹಾಡು
ಮನೆ ಮುರುಕ - ಅಕ್ಕಿಮಂಗಲ ಮಂಜುನಾಥ ಮಾಗಿ ಕಾಲದ ಸಂಜೆ, ಹೊತ್ತು ಇಳಿಯುವ ಮುಂಚೆ ಒಂದು ದಿನ ನಡೆದೆ ನಾ ಹೊಲದ ದಾರಿ ಅತ್ತ ಹೊಲ, ಇತ್ತ ಹೊಲ, ನಡು ಇಷ್ಟು ಚಿಕ್ಕ ಬದು ಮುಂದೆ ಸಾಗಿದೆ ಸಿಕ್ಕ ತೋಡು ಹಾರಿ ಇಕ್ಕೆಡೆಯ ಹೊಲದಲ್ಲಿ ಸ್ವಾಗತದ ಪರಿಯಲ್ಲಿ ತಲೆಯ ತೂಗಿತು ತೆನೆಯು ಹರ್ಷದಿಂದ ಉತ್ತಿದ್ದು ಬಿತ್ತಿದ್ದು ಕಳೆ ತೆಗೆದು...
ಕಲ್ಪನಾ ನೆನಪಿನ ಬೆನ್ನೇರಿ – ಎನ್‌ಎಸ್ ಶ್ರೀಧರ ಮೂರ್ತಿ
ಎನ್‌ಎಸ್ ಶ್ರೀಧರ ಮೂರ್ತಿ 1979ನೇ ಇಸವಿ ಮೇ 13ನೇ ತಾರೀಖಿನ ಮುಂಜಾವು. ಗೋಟೂರಿನ ಪ್ರವಾಸಿ ಮಂದಿರದಲ್ಲಿ ಕನ್ನಡ ಚಿತ್ರರಂಗದ `ಮಿನುಗು ತಾರೆ' ಲಕ್ಷಾಂತರ ಅಭಿಮಾನಿಗಳ ಆರಾಧ್ಯ ದೇವತೆ ಕಲ್ಪನಾ ಮೌನವಾಗಿ ಮಲಗಿದ್ದರು. ರಾಜ್ಯಾದ್ಯಂತ ಅವರ ಸಾವಿನ ಮಾಹಿತಿ ನಿಧಾನವಾಗಿ ಪಸರಿಸುತ್ತಿತ್ತು. ಅದು `ಬ್ರೇಕಿಂಗ್ ನ್ಯೂಸ್'ನ ಕಾಲವಾಗಿರಲಿಲ್ಲ....
ತಮಿಳು ನಾಡಿನಲ್ಲಿ ಕನ್ನಡ ಸಾಹಿತ್ಯದ ಕಂಪು
ಚೆನ್ನೈನಲ್ಲಿ ಕನ್ನಡ ಸಾಹಿತ್ಯದ ೩ನೇ ಸಮ್ಮೇಳನ - ನಾಗೇಶ್ ಕುಮಾರ್ ಸಿ ಎಸ್ ಚೆನ್ನೈ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ ಸಿದ್ದಲಿಂಗಯ್ಯ ತಮಿಳು ನಾಡೆಂಬ ಹೆಸರನ್ನು ಕೇಳಿದರೇ ನಮ್ಮ ನಾಡಿನ ಕನ್ನಡಿಗರು ಮನಸ್ಸನ್ನು ಹುಳ್ಳಗೆ ಮಾಡಿಕೊಂಡು ಅದು ಕನ್ನಡ ವೈರಿಯೆಂಬ ತಲೆತಲಾಂತರದಿಂದ ಬಂದಿರುವ ಅಪವಾದವನ್ನು ಇಂದಿಗೂ...
