ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

JNU ಮತ್ತು ದೇಶಪ್ರೇಮ

OPEN FOR DEBATE

ಕ್ಯಾಂಪಸ್ ಗಳಲ್ಲಿ ಸಂವಾದ ನಡೆಯಲಿ, ದಬ್ಬಾಳಿಕೆ ನಿಲ್ಲಲಿ

harsha kugve

ಹರ್ಷಕುಮಾರ್ ಕುಗ್ವೆ

1857ರಿಂದ 1947ರ ವರೆಗಿನ 90 ವರ್ಷಗಳ ಸುದೀರ್ಘ ಸ್ವಾತಂತ್ರ್ಯ ಹೋರಾಟದ ಮೂಲಕ ನಮ್ಮ ದೇಶ ಸ್ವಾತಂತ್ರ್ಯ ಪಡೆದಿದ್ದುಮಾತ್ರವಲ್ಲ ಅದಕ್ಕೂ ಮೊದಲಿನ ಮೂರು ಸಾವಿರ ವರ್ಷಗಳ ಇತಿಹಾಸದಲ್ಲಿ ಯಾವ ಮೇಲು ವರ್ಗಗಳಿಂದ ಈ ದೇಶವನ್ನುರಾಜಕೀಯವಾಗಿ, ಭಾವನಾತ್ಮಕವಾಗಿ ಒಂದು ಮಾಡಲು ಆಗಿರಲಿಲ್ಲವೋ ಆ ಕೆಲಸವನ್ನೂ ಭಾರತದ ರಾಷ್ಟ್ರೀಯ ಚಳವಳಿ ಮಾಡಿತ್ತು.

jnu1ಈ ಮಹಾನ್ ರಾಷ್ಟ್ರೀಯ ಚಳವಳಿಯ ನೇತೃತ್ವ ವಹಿಸಿದ್ದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಈ ಚಳವಳಿಯ ಧಾರೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದು ಭಾರತ ಕಮ್ಯುನಿಷ್ಟ್ ಪಕ್ಷ ಹಾಗೂ ತೀವ್ರ ಕ್ರಾಂತಿಕಾರಿಗಳ ನೇತೃತ್ವದ ಸಾವಿರಾರು ಹೋರಾಟಗಳು. ಯಾವ ಕಾಂಗ್ರೆಸ್ ಮತ್ತು ಕಮ್ಯುನಿಷ್ಟ್ ಪಕ್ಷಗಳ ಧಾರೆಗಳು ಈ ನೆಲದಲ್ಲಿ ಒಂದು ಐಕ್ಯ ರಾಷ್ಟ್ರವನ್ನೂ,ರಾಷ್ಟ್ರಪ್ರೇಮವನ್ನೂ ನೀಡಿದ್ದವೋ ಅವುಗಳಿಗೇ ಇಂದು ‘ದೇಶದ್ರೋಹಿ’ ಪಟ್ಟ ನೀಡಿ ಕಟಕಟೆಯಲ್ಲಿ ನಿಲ್ಲಿಸಲಾಗಿದೆ.

ಅಂದಹಾಗೆ ಅದೇ ಸುದೀರ್ಘ 90 ವರ್ಷಗಳ ಹೋರಾಟದಿಂದ ಪ್ರಜ್ಞಾಪೂರ್ವಕವಾಗಿ ದೂರ ಉಳಿದಿದ್ದ ಹಿಂದೂ ಮಹಾಸಭಾ,  ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘಗಳು (ಆರೆಸ್ಸೆಸ್) ಸ್ವಾತಂತ್ರ್ಯ ಹೋರಾಟವನ್ನು ‘ಕ್ಷುಲ್ಲಕ’ ಎಂದು ಪರಿಗಣಿಸಿದ್ದು ಮಾತ್ರವಲ್ಲ ಬ್ರಿಟಿಷರೊಂದಿಗೆ ಶಾಮೀಲಾಗಿ ಭಾರತೀಯರನ್ನು ದಮನ ಮಾಡಿದ್ದಕ್ಕೆ ದಾಖಲೆಗಳಿವೆ. ಅಂದರೆ ಈ ದೇಶವನ್ನು ಕಟ್ಟಿದ ಒಂದು ಚಳವಳಿಗೆ ದ್ರೋಹಬಗೆಯುವ ಕೆಲಸ ಮಾಡಿದ್ದು ಇಂದು ಸಂಘಪರಿವಾರದ ಹೆಸರಿನಲ್ಲಿ ಕರೆದುಕೊಳ್ಳುವ ಆ ಸಂಘಟನೆಗಳು. ಮೇಲೆ ಹೇಳಿದ ಶಕ್ತಿಗಳನ್ನುಇಂದು ಕಟಕಟೆಯಲ್ಲಿ ನಿಲ್ಲಿಸಿ ತಾವು ಹೇಳುವುದೇ ‘ದೇಶಭಕ್ತಿ’ ಎಂದು ಬಿಂಬಿಸುತ್ತಿರುವುದೂ ಇದೇ ಸಂಘಪರಿವಾರ. ಇದೆಂತಹವಿಪರ್ಯಾಸ ಎನಿಸುವುದಿಲ್ಲವೇ?

ಸ್ವಾತಂತ್ರ್ಯ ಹೋರಾಟದಲ್ಲಿ ನೇರವಾಗಿ ಭಾಗವಹಿಸದಿದ್ದರೂ ಸ್ವತಂತ್ರಗೊಳ್ಳಲಿದ್ದ ಭಾರತದ ರಾಜಕೀಯ ಸ್ವರೂಪ ಮತ್ತುಪ್ರಜಾಪ್ರಭುತ್ವದ ತತ್ವಗಳಿಗೆ ಅಗತ್ಯವಾಗಿ ಬೇಕಿದ್ದ ಅಡಿಪಾಯವನ್ನು ಸಿದ್ಧಪಡಿಸಿದ್ದು ಡಾ.ಬಿ.ಆರ್.ಅಂಬೇಡ್ಕರ್. ಈ ದೇಶಸ್ವತಂತ್ರಗೊಂಡರೂ ಸಹ ಇಲ್ಲಿನ ಸಾಮಾಜಿಕ ಸಂರಚನೆ ಬದಲಾಗದೇ, ಇಲ್ಲಿನ ಪ್ರಜೆಗೆ ಮೌಲ್ಯ ಸಿಗಲಾರದು, ಮತ್ತು ಅಂತಹ ಮೌಲ್ಯವ್ಯಕ್ತಿಗೆ ಪ್ರಾಪ್ತಿಯಾಗದೇ, ಪ್ರತಿ ವ್ಯಕ್ತಿ ಬಲಗೊಳ್ಳದೇ ದೇಶ ನಿಜವಾದ ಅರ್ಥದಲ್ಲಿ ಬಲಿಷ್ಟಗೊಳ್ಳದು ಎಂಬ ಖಚಿತ ತಿಳುವಳಿಕೆಅವರದಾಗಿತ್ತು.

ಜಾತಿಗಳಾಗಿ ಛಿದ್ರವಾಗಿರುವ ಈ ಸಮಾಜ ನಿಜವಾದ ಅರ್ಥದಲ್ಲಿ ರಾಷ್ಟ್ರವಾಗುವುದು ಇಲ್ಲಿ ಜಾತೀಯತೆ ಅಳಿದಾಗಮಾತ್ರ ಎಂಬುದು ಬಾಬಾಸಾಹೇಬರ ಖಚಿತ ಅಭಿಪ್ರಾಯವಾಗಿತ್ತು. ಹೀಗಾಗಿ ಅವರು ಇಲ್ಲಿ ಕಟ್ಟಲಾಗುತ್ತಿದ್ದ ದೇಶಪ್ರೇಮ ಮತ್ತುರಾಷ್ಟ್ರೀಯವಾದಗಳ ಬಗ್ಗೆ ಗುಮಾನಿ, ತಕರಾರು ಹೊಂದಿದ್ದರು.

jnu protestವಾಸ್ತವದಲ್ಲಿ ಇಂದು ದೇಶದಲ್ಲಿ ಬೌದ್ಧಿಕ ಚಿಂತನೆಗಳನ್ನು ಹರಿತಗೊಳಿಸುವ ವಿಶ್ವವಿದ್ಯಾಲಯಗಳಲ್ಲಿ ದೇಶವನ್ನು ಒಂದುಸಮಾಜವಾಗಿ ಮೇಲಿನ ಭಿನ್ನ ಚಿಂತನೆಗಳ ಹಿನ್ನೆಲೆಯಲ್ಲಿ ಅರಿಯುವ ಪ್ರಯತ್ನಗಳು ಸಾಗಿವೆ. ಇವುಗಳಲ್ಲಿ ಸಾಕಷ್ಟು ಅಭಿಪ್ರಾಯ,ಭಿನ್ನಾಭಿಪ್ರಾಯಗಳಿರುವುದರಿಂದ ವಿಶ್ವವಿದ್ಯಾಲಯಗಳು ಸಹಜವಾಗಿ ಭಿನ್ನ ಚಿಂತನೆಗಳ ವೈಚಾರಿಕ ಮಂಥನದ ಕೇಂದ್ರಗಳಾಗಿವೆ.ವಿಶ್ವವಿದ್ಯಾಲಯಗಳು ಹೀಗೇ ಇದ್ದಾಗಲೇ ಪ್ರಜಾತಂತ್ರ ಬಲಗೊಳ್ಳಲು ಅಲ್ಲಿನ ವಿದ್ಯಾರ್ಥಿಗಳು ಮತ್ತು ಬೌದ್ಧಿಕ ವಲಯಗಳು ಕೊಡುಗೆನೀಡಲು ಸಾದ್ಯ.

ಈ ಕಾರಣದಿಂದ ಪ್ರತಿ ವಿಶ್ವವಿದ್ಯಾಲಯ ತನಗೊಂದು ಡೆಮಾಕ್ರಟಿಕ್ ಸ್ಪೇಸ್‍ನ್ನು ಖಾತ್ರಿಪಡಿಸಿಕೊಂಡಿರಲೇಬೇಕು. ಆದರೆ ಎಫ್‍ಟಿಐಐಗೆ ಗಜೇಂದ್ರ ಚೌಹಾಣ್ ನೇಮಕದಿಂದ ಹಿಡಿದು ರೋಹಿತ್ ವೇಮುಲ ಆತ್ಮಹತ್ಯೆಯ ಪ್ರಕರಣ ತದನಂತರ ಈಗ ನಡೆಯುತ್ತಿರುವ ಜೆಎನ್‍ಯು ‘ದೇಶದ್ರೋಹ’ದ ಪ್ರಕರಣಗಳನ್ನು ಗಮನಿಸಿಕೊಂಡು ಬಂದರೆ ಈ ದೇಶದಲ್ಲಿನಡೆಯುತ್ತಿರುವ ಬೆಳವಣಿಗೆ ಒಂದು ಸ್ಪಷ್ಟ ಸಂದೇಶವನ್ನು ನೀಡುತ್ತಿದೆ.

ಮೇಲೆ ಉಲ್ಲೇಖಿಸಿದ, ರಾಷ್ಟ್ರೀಯ ಚಳುವಳಿಗೆ ಕೈಕೊಟ್ಟು ರಾಷ್ಟ್ರವನ್ನು ಕಲ್ಪಿತ ಧರ್ಮವೊಂದರ ಆಧಾರದಲ್ಲಿ ಕಟ್ಟಲುಹೊರಟಿರುವ ಬಲಪಂಥೀಯ ಶಕ್ತಿಗಳು ವಿಶ್ವವಿದ್ಯಾಲಯಗಳನ್ನು ತಮ್ಮ ಕೇಂದ್ರಗಳಾಗಿ ಮಾಡಿಕೊಳ್ಳಲು ಹವಣಿಸಿವೆ.  ಆದರೆಸಹಜವಾಗಿ ವಿಶ್ವವಿದ್ಯಾಲಯಗಳಲ್ಲಿ ಈ ದೇಶವನ್ನು ಕಟ್ಟಿರುವ ಚಿಂತನೆಗಳು ಪ್ರಬಲವಾಗಿರುವುದರಿಂದ, ಮೊದಲು ಆ ಚಿಂತನೆಗಳನ್ನುಮತ್ತು ಆ ಚಿಂತನೆಗಳ ವಾಹಕರಾದ ವಿದ್ಯಾರ್ಥಿ-ಪ್ರಾದ್ಯಾಪಕ-ವಿದ್ಯಾರ್ಥಿ ಸಂಘಟನೆಗಳನ್ನು ತುರ್ತಾಗಿ ರಾಕ್ಷಸೀಕರಿಸುವ ಅಗತ್ಯತೆಬಲಪಂಥೀಯರಿಗೆ ಬಂದಿದೆ.

ಹೀಗಾಗಿಯೇ ಮುಖ್ಯ ವಿಷಯಗಳನ್ನು ಉದ್ದೇಶಪೂರ್ವಕವಾಗಿ ಬದಿಗೆ ಸರಿಸಿ ಭಾವನಾತ್ಮಕವಿಷಯಗಳನ್ನು ಮುನ್ನೆಲೆಗೆ ತರಲಾಗುತ್ತಿದೆ. ದೇಶದ್ರೋಹದ ಮಾತುಗಳಿರುವ ಕಸಿಮಾಡಿದ ವಿಡಿಯೋಗಳನ್ನು, ಫೊಟೋಶಾಪ್ಚಿತ್ರಗಳನ್ನು ದೇಶದ ಜನರ ಮುಂದೆ ತೋರಿಸಿ ‘ನೋಡಿ ಇವರು ದೇಶದ್ರೋಹಿಗಳು, ಭಯೋತ್ಪಾದಕರ ಬೆಂಬಲಿಗರು’ ಮುಂತಾಗಿಚೀರಾಡಿಕೊಂಡು ಹೇಳಿ ಅಮಾನುಷ ಹಲ್ಲೆಗಳನ್ನೂ ನಡೆಸಲಾಗುತ್ತಿದೆ. ಸತ್ಯ ಹೇಳಬಾರದೆಂದು ಪತ್ರಕರ್ತರನ್ನೂ ದಾಳಿಗಳಿಗೆ ಗುರಿಪಡಿಸಲಾಗಿದೆ.

ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿರುವ ಪಿಡಿಪಿಯನ್ನೂ ಸೇರಿದಂತೆ ಕಾಶ್ಮೀರಿಗಳು ಭಾರತ ಪ್ರಭುತ್ವದ ಬಗ್ಗೆ ತೋರುವಅಸಹನೆ, ಅಫ್ಜಲ್ ಗುರು ಬಗ್ಗೆ ತೋರುವ ಅಭಿಮಾನ, ಈಶಾನ್ಯ ಭಾರತದಲ್ಲಿ ನಡೆಯುವ ಭಾರತ ವಿರೋಧಿ ಕೃತ್ಯಗಳು, ರಾಷ್ಟ್ರೀಯತೆ-ಒಕ್ಕೂಟಗಳ ಸಂಬಂಧಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಇತ್ಯಾದಿಗಳು ಜೆಎನ್‍ಯು ಮಾತ್ರವಲ್ಲ ದೇಶದ ಪ್ರತಿಯೊಂದು ಕಾಲೇಜುಗಳಲ್ಲಿ ಚರ್ಚೆ ನಡೆಸಬೇಕು.

ಅಲ್ಲಿ ಎಬಿವಿಪಿಯೂ ಇರಲಿ, ಎಸ್ ಎಫ್ ಐ, ಐಸಾ, ಎಐಎಸ್‍ಎಫ್, ಡಿಎಸ್‍ಯೂ, ಎನ್ ಎಸ್ ಯೂ ಐ, ಆಸಾ,ಹೀಗೇ ಎಲ್ಲಾ ರಾಜಕೀಯ ಧಾರೆಗಳ ವಿದ್ಯಾರ್ಥಿ ಸಂಘಟನೆಗಳೂ ಭಾಗವಹಿಸಲಿ ಇದು ಸಮಸ್ಯೆಯಲ್ಲ. ಆದರೆ  ಸಮಸ್ಯೆಯಿರುವುದುಇಲ್ಲಿ ಅಧಿಕಾರದಲ್ಲಿರುವವರು ನಡೆಸುತ್ತಿರು ನಡೆಸುವವರ ದಬ್ಬಾಳಿಕೆಯಲ್ಲಿ. ನೇರವಾಗಿ ಕೇಂದ್ರ ಸಚಿವರುಗಳು ಮಾಡುತ್ತಿರುವ ಮಧ್ಯಪ್ರವೇಶ ಎಲ್ಲವನ್ನೂ ಹದಗೆಡಿಸುತ್ತಿದೆ. ಇದು ನಿಲ್ಲಬೇಕು. ಅಷ್ಟೆ.

‍ಲೇಖಕರು Admin

27 February, 2016

2 Comments

  1. asha

    The same congress and communist parties that allegedly fought for the freedom of the country were also responsible for the vivisection of the country. Please read some history before making tall claims about these 2 parties.

  2. NA DIVAKAR

    ಜಡ್ಡು ಹಿಡಿದ ಅಯೋಧ್ಯೆಯ ಇಟ್ಟಿಗೆಗಳಲ್ಲಿ
    ರೋಹಿತ್ ವೇಮುಲನ ಚಹರೆ :
    ಸೋಮನಾಥ ರಥಚಕ್ರದಡಿ
    ಕನ್ನಯ್ಯನ ಆಕ್ರಂದನ :
    ಗೋದ್ರಾದ ಜ್ವಾಲೆಯಲ್ಲಿ
    ಕಲಬುರ್ಗಿ-ಪನ್ಸಾರೆಯ ಚಿಂತನೆ
    ಕಾಣುತ್ತಿದೆ :
    ಬೆಳ್ಳಿ ಬುಟ್ಟಿಯಲ್ಲಿರುವ
    ಹಣ್ಣುಗಳು ಕೊಳೆತು ನಾರುತ್ತಿವೆ
    ರಚ್ಚೆ ಹಿಡಿದಿದೆ ಜಡ್ಡು ಹಿಡಿದಿದೆ
    ಆದರೂ ಬುಟ್ಟಿಯ ಸೌಂದರ್ಯಕ್ಕೆ
    ತಲೆಬಾಗಿ ಆತ್ಮರತಿಯಲ್ಲಿ
    ಝೇಂಕರಿಸುತ್ತಿದ್ದೇವೆ :
    ಹುತಾತ್ಮರನು ಹುದುಗಿಸಿ
    ಪಾಪಾತ್ಮರನು ಪೋಷಿಸುವ
    ಕ್ರೂರ ಶರಪಂಜರದಲಿ
    ಮಾನವತೆಯ ಅಳಲು ಅನಾಥವಾಗಿದೆ.!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading