Had breakfast?

ಹೋಟೆಲ್ ಗೆ ಬ್ರೇಕ್ ಫಾಸ್ಟ್ ಗೆ ಹೋಗಿ ತಿಂಡಿ ಏನಿದೆ ಎಂದು ಕೇಳಿದರೆ , ‘ ದಶೋತ್ತರ  ನಾಮ ಪಠಣ ‘ ಆಗುತ್ತದೆ. ಕೊನೆಗೆ ಕೇಳಿಸಿದ ಒಂದೋ ಎರಡನ್ನೋ ಆಹ್ವಾನಿಸಿ, ಫಾಸ್ಟಾಗಿ  ಒಂದು ರಾತ್ರಿಯ ಉಪವಾಸವನ್ನು ತಂದ ತಿಂಡಿಗಳನ್ನು ಒಡೆಯುವುದರ ಮೂಲಕ ಮುರಿದು, ‘ಬ್ರೇಕ್ ಫಾಸ್ಟ್ ‘ ಆಚರಣೆ ಮುಗಿಸುತ್ತೇವೆ. ನಾವೇ ದುಡ್ಡು ಕೊಡುವುದಾದರೆ, ಕಡಮೆ ಕಬಳಿಕೆ ; ಬಿಲ್  ಬೇರೆಯವರು ಕೊಡುವುದಾದರೆ, ಕೆಲವೊಮ್ಮೆ ಹೊಟ್ಟೆ ‘ ಬ್ರೇಕ್ ‘ ಆಗುವಷ್ಟು . ವಸತಿಗಾಗಿ ಲಕ್ಸುರಿ ಹೋಟೆಲ್ ವಾಸ. ಆದರೆ , ಅದರಲ್ಲಿ ‘ಕಾಂಪ್ಲಿಮೆಂಟರಿ ಬ್ರೇಕ್ ಫಾಸ್ಟ್’ ಸೇರಿರುತ್ತದೆ.

ಹೋಟೆಲ್ ಗಳ ಅಂತಸ್ತುಗಳಿಗೆ ಅನುಸಾರವಾಗಿ  ತಿಂಡಿ ತಿನಿಸುಗಳ ಸೂಪರ್ ಮಾರ್ಕೆಟ್ ನ್ನು ಬೆಳಗ್ಗೆ ತೆರೆದಿರುತ್ತಾರೆ. ಅತಿ ಲಕ್ಸುರಿ ಹೋಟೆಲ್ ಆಗಿದ್ದರಂತೂ ಕಾಂಟಿನೆಂಟಲ್ -ಇಂಟರ್ ಕಾಂಟಿನೆಂಟಲ್  ತಿನಿಸುಗಳ ಬ್ರಹತ್ ಪ್ರದರ್ಶನವೊಂದು ನಮ್ಮನ್ನು ಕಕ್ಕಾಬಿಕ್ಕಿ ಮಾಡುತ್ತದೆ. ಯಾವುದನ್ನು ತೆಗೆದುಕೊಳ್ಳುವುದು, ಯಾವುದನ್ನು ಬಿಡುವುದು ಎಂದು ನಿರ್ಧರಿಸುವುದು ಅಸಾಧ್ಯ ಆಗುತ್ತದೆ. ಎಲ್ಲವನ್ನೂ ಸ್ವಲ್ಪ ಸ್ವಲ್ಪ ತೆಗೆದುಕೊಂಡರೂ  ಹೋಟೆಲ್  ಬಿಟ್ಟು ಹಾಸ್ಪಿಟಲ್  ಸೇರಬೇಕಾಗುತ್ತದೆ. ಬ್ರೆಡ್ ಗಳ ಚೀಸ್ ಗಳ ದಶರೂಪಕದಿಂದ ತೊಡಗಿ  ಜ್ಯೂಸ್ ಕಾಫಿ ಟೀಗಳವರೆಗೆ ಬಂದಾಗ ಶತಕ ಬಾರಿಸುವ ಅವಕಾಶ ಇರುತ್ತದೆ. ಇಂತಹ ಬ್ರೇಕ್ ಫಾಸ್ಟ್ ತೆಗೆದುಕೊಂಡರೆ, ಮತ್ತೆ ಲಂಚ್ ಡಿನ್ನರ್ ಗಳ ಗೊಡವೆಗೆ ಹೋಗಬೇಕಾಗಿಲ್ಲ. ಹೀಗಾಗಿಯೋ ಏನೋ  ಅನೇಕ ದೇಶಗಳಲ್ಲಿ ಈಗ ‘ ಬ್ರಂಚ್ ‘ ( ಬ್ರೇಕ್ ಫಾಸ್ಟ್ + ಲಂಚ್ ) ರೆಸ್ಟೋರೆಂಟ್  ಗಳು ತಲೆ ಎತ್ತಿವೆ. ಮಧ್ಯಾಹ್ನ ಹನ್ನೆರಡು ವರೆಗೆ ಇಲ್ಲಿ ‘ ಬ್ರಂಚ್ ‘ ಸಿಗುತ್ತದೆ. ಮತ್ತೆ ‘ ಲಂಚ್ ‘ ಬೇಕಾಗಿಲ್ಲ

ಪೂರ್ಣ ಓದಿಗೆ ಭೇಟಿ ಕೊಡಿ: ಬಿ ಎ ವಿವೇಕ ರೈ

‍ಲೇಖಕರು avadhi

April 26, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: