ಆಳ್ವಾಸ್ ನುಡಿಸಿರಿಗೆ ಹೋಗಬೇಕು ಹೋಗಬಾರದು ಎನ್ನುವ ಹಕ್ಕೊತ್ತಾಯದ ಮಧ್ಯೆ ಹಿರಿಯ ಸಾಹಿತಿ ಕುಂ ವೀರಭದ್ರಪ್ಪ ಅವರು ನುಡಿಸಿರಿಯಲ್ಲಿ ಭಾಗವಹಿಸಿದ್ದಾರೆ. ಆದರೆ ಅಲ್ಲಿ ತಾವು ಹೇಳಬೇಕಾದದ್ದನ್ನು ನೇರವಾಗಿ ಹೇಳಿದ್ದಾರೆ.
ದೇಶದಲ್ಲಿ ಹೆಚ್ಚುತ್ತಿರುವ ಅಸಹನೆ, ಹತ್ಯೆ ಬಗ್ಗೆ ಗಮನ ಸೆಳೆಯಲು, ಕಲಬುರ್ಗಿ ಅವರ ಹತ್ಯೆ ಬಗ್ಗೆ ಎಲ್ಲರೂ ಮಾತನಾಡುವಂತಾಗಬೇಕೆಂದು ಆಶಿಸಿ ಇಡೀ ಕಾರ್ಯಕ್ರಮದ ಉದ್ದಕ್ಕೂ ತಮ್ಮ ಕೊರಳಿಗೆ ಕಪ್ಪು ಬಟ್ಟೆ ಹೊದ್ದಿದ್ದರು.
ಕುಂ ವೀ ಅವರ ವಿಶೇಷ ಉಪನ್ಯಾಸದ ವಿಷಯ ಸಹಾ “ಸಾಮರಸ್ಯ: ಹೊಸತನದ ಹುಡುಕಾಟ”ವೇ ಆಗಿತ್ತು.
ನುಡಿಸಿರಿಯ ಮುಖ್ಯಸ್ಥರಾದ ಡಾ ಮೋಹನ್ ಆಳ್ವ, ಸಲಹಾ ಮಂಡಳಿಯ ನಾ ದಾಮೋದರ ಶೆಟ್ಟಿ ಈ ಪ್ರತಿಭಟನೆಯನ್ನು ಮೌನವಾಗಿಯೇ ಬರಮಾಡಿಕೊಂಡರು








0 Comments