ಬಾ ಕವಿತಾ ಲೇಖನಗಳು
ರಾಜು ಹೆಗಡೆ ಕವಿತೆ-‘ನಡು ವಯಸ್ಸು’
– -ರಾಜು ಹೆಗಡೆ.. ಕನಸು ಕಾಣುತ್ತಿದ್ದ ಹುಡುಗನಿಗೆ ಕೂದಲು ಹಣ್ಣಾಗಿದೆ ಹೊತ್ತು ಗೊತ್ತಿಲ್ಲದೆ ಹೊಗುತ್ತಿದ್ದ ಹುಡುಗಿಯರು ಅಂಕಲ್ ಎಂದು ಆಚೆ ನಡೆಯುತ್ತಾರೆ ಏಜಾದವರು ಮಾತ್ರ ಪ್ರೀತಿಯೊ ವಿಶ್ವಾಸವೊ ಮುಗುಳು ನಗುತ್ತಾರೆ ಮರಗಿಡಗಳು ಪ್ರತಿ ವಸಂತದಲ್ಲೂ ಹೂ ಅಗಲಿಸಿ ದುಂಬಿಯ ಜತೆ ಗುಣಗುಡುತ್ತವೆ […]
ಇರುಳ -ಬೆಳಕಿನ ಸೊಲ್ಲು – ೨
-ಲಡಾಯಿ ಬಸು ೧ ಬೆಳಕಿದ್ದಾಗ ಲೋಕ ನನ್ನನ್ನಷ್ಟೇಯಲ್ಲ ನನ್ನ ನೆರಳನ್ನೂ ಗುರುತಿಸಿತು ಕತ್ತಲಾಯಿತು ನೋಡಿ ಲೋಕದ ಕಣ್ಣಿಗೆ ನನ್ನ ನೆರಳಲ್ಲ ನಾನೂ ಕಾಣದಾದೆನು ೨ ಹಗಲಿನಲಿ ದಾಟಲಾಗದ ಗಡಿಗಳನು ಇರುಳು ದಾಟಿದೆ ಏನು ಮಾಡಲಿ ಪ್ರೀತಿ ಇರುವುದು ಬದನಾಮ ರಸ್ತೆಯಲ್ಲೇ ..! […]
ಚಂದ್ರಶೇಖರ ಕಂಬಾರರ ಕವಿತೆ: ಕಾಂತನಿಲ್ಲದ ಮ್ಯಾಲೆ ಏಕಾಂತವ್ಯಾತಕೆ?
-ಚಂದ್ರಶೇಖರ ಕಂಬಾರ ಕಾಂತನಿಲ್ಲದ ಮ್ಯಾಲೆ ಏಕಾಂತವ್ಯಾತಕೆ? ಗಂಧ ಲೇಪನವ್ಯಾತಕೆ? -ಈ ದೇಹಕೆ.. ಮಂದ ಮಾರುತ ಮೈಗೆ ಬಿಸಿಯಾದವೇ ತಾಯಿ? ಬೆಳುದಿಂಗಳು ಉರಿವ ಬಿಸಿಲಾಯಿತೆ ನನಗೆ? ಹೂಜಾಜಿ ಸೂಜಿಯ ಹಾಗೆ -ಚುಚ್ಚುತಲಿವೆ.. ಉರಿಗಳು ಮೂಡ್ಯಾವು ನಿಡುಸುಯ್ಲಿನೊಳಗೆ ಉಸಿರಿನ ಬಿಸಿ ಅವಗೆ ತಾಗದೇ […]
ದ್ವಿಪದಿಗಳು..
-ಲಡಾಯಿ ಬಸು ೧ ಕತ್ತಲಲ್ಲಿ ಹಣತೆ ಹಚ್ಚುವ ದಡ್ದತನವಷ್ಟೇ ಜತೆಯಲ್ಲಿತ್ತು ಬೆಳಕಿನ ಬಗ್ಗೆ ಉದ್ದುದ್ದ ವ್ಯಾಖ್ಯಾನ ಮಾಡುವುದು ನನಗೊಲಿಯಲಿಲ್ಲ ೨ ಅನಾಮಿಕ ಹಗಲಿನ ಸಮಯ ಮುಗಿದು ಹೇಗೋ ಸಂಜೆಯಾಗಿದೆ ಆದ ಗಾಯವೇ ಮಾಯ್ದಿಲ್ಲ ಇನ್ನೊಂದಕ್ಕೆ ತಯಾರಾಗು ಅಂದರೆ ಹೇಗೆ ..? ೩ […]
ಇಂದು ಬಹುಭಾಷಾ ಕವಿಗೋಷ್ಠಿ ಮತ್ತು ವಿಚಾರಸಂಕಿರಣ..
‘ಕವಿ ಸತ್ಕಾರ’ ದಲ್ಲಿ ಬಿ.ಆರ್.ಲಕ್ಷ್ಮಣರಾವ್..
ಎರಡು ಸದ್ದುಗಳು, ನಡುವೆ ಒಂದು ಮೌನ…
-ವಿಜಯರಾಘವನ್ ರಾಮ್ ಕುಮಾರ್ ಶಿಷ್ಯ ಹ್ಸಿಯಾಂಗ್- ಯೆನ್ ಚಿ-ಸಿಯೆನ್ ಕಸಬಳಿಯುತ್ತಿದ್ದ ರಾಜಗುರು ನಾನ್ ಯಾಂಗ್ ನ ಸಮಾಧಿಯನ್ನು ಶುಚಿಮಾಡಲು ಅವನ ಪೊರಕೆ ಸೆಳೆದ ಕಲ್ಲೊಂದು ಹಾರಿ ಬಿದಿರು ಬೊಂಬಿನ ಆಸರೆಗಂಬಕ್ಕೆ ಬಡಿದು ಮಾಡಿಯೇ ಬಿಟ್ಟಿತು ಸದ್ದು ಟೊಕ್ ನಿಜ ಟೊಕ್ ಸದ್ದು […]
ಇರುಳ – ಬೆಳಕಿನ ಹನಿಗಳು..
ಇರುಳ – ಬೆಳಕಿನ ಸೊಲ್ಲು -ಲಡಾಯಿ ಬಸು ೧ ಹಗಲೆಂದರೆ ಬೆಳಕು ಇರುಳೆಂದರೆ ಕತ್ತಲು ಹೆಚ್ಚೇನಿಲ್ಲ ಕುರುಡರ ಪಾಠಕ್ಕೆ ಒಂದೇ ಸಾಲು ….! ೨ ಲೋಕದ ಪಟ್ಯದಲಿ ಇನ್ನೂ ನೋವು , ಬಡತನ ಜಾತಿ -ಮತದ ಪದಗಳು ಹೇರಳವಾಗಿ ಕಾಣುತ್ತಿವೆ ; ಈ […]
ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರಧಾನ-ಬೆಳ್ಳಿ ಹಬ್ಬ..
ಸಂಭ್ರಮ…
-ವಿಜಯರಾಘವನ್ ರಾಮ್ ಕುಮಾರ್ ಸಂಭ್ರಮ ರಾಲಿ ಮರದಲ್ಲಿ ಹಳದಿ ಹೂ ಗೊಂಚಲನ್ನ ತನ್ನ ಎಲೆತೊಟ್ಟಿನ ಇರುಕಿನಲ್ಲಿ ಹೊತ್ತ ಒಂದೆಲೆಗೆ ವಯಸ್ಸಾಗಿ ಹಳದಿಯಾಗಿ ತೊಟ್ಟು ಕಳಚಿ ಸುಳಿಗಾಳಿಗೆ ಅದು ನೆಲಕ್ಕೆ ಬೀಳುತ್ತಿರುವಾಗ ಬೀಳುವ ಭಯಕ್ಕೆ ತರತರಗುಟ್ಟುತ್ತ ನೆಲಕ್ಕೆ ಬಿದ್ದದ್ದೆ ಆ ಅಲ್ಲಿದ್ದ […]
ಒಂಟಿತನ..
– ಎಂ. ಎಸ್. ರುದ್ರೇಶ್ವರಸ್ವಾಮಿ. ಒಂಟಿತನ ಅವಳೀಗ ಬೆಳಕಿಗೆ ಮುಖ- ಮಾಡುವುದನ್ನು ನಿಲ್ಲಿಸಿಬಿಟ್ಟಿದ್ದಾಳೆ. ಬೆಳಕೆಂದರೆ ಅವಳಿಗೆ ಭಯ ಸಾಕೆನಿಸಿದೆ ಅವಳಿಗೆ ಬೆಳಕಿನ ಸದ್ದು ಸಂಭ್ರಮ ಹೊಸಹುಟ್ಟು ಅವಳ ಪಾಡು ಅವಳಿಗೆ. ಯಾರಿಗೂ ಬೇಕಿಲ್ಲದ ನಡುಪ್ರಾಯದ ಅವಳಿಗೆ ನಡುಕ, ಕದ್ದುಮುಚ್ಚಿ ಬೆಳಕು ಒಳಗೆ […]
ಹನಿಗಳು.. ಹನಿಗಳು ..
-ಲಡಾಯಿ ಬಸು ೧ ಬೆಳಗಾಯಿತೆಂಬ ಸಂಭ್ರಮ ಕತ್ತಲಲ್ಲಿ ಬೆಳಕಾದ ಹಣತೆಗಳ ಆರಿಸುವುದು ..! ೨ ಹೂ ಗಿಡದಿಂದ ಉದುರಿಬಿದ್ದರೇನಾಯ್ತು …/ ಗಾಳಿ ಹೊತ್ತೊಯ್ದ ಗಂಧದಲಿ ಬದುಕುವುದು ..! ೩ ಕಣ್ಣೆದುರಿನ ಕತ್ತಲನು ಇಂಚಿಂಚಾಗಿ ನುಂಗದೆ ಬೆಳಕಾಗಲು ಬರದು … ಆ ಸೂರ್ಯ […]
ನಾನು ನಿನ್ನನ್ನು ಮತ್ತೆ ಬಂದು ಸೇರುತ್ತೇನೆ……..
ಅಮೃತಾ ಪ್ರೀತಂ ಮೂಲ ಪಂಜಾಬಿ; ಇಂಗ್ಲೀಷಿಗೆ: ನಿರುಪಮಾ ದತ್ತ ಕನ್ನಡಕ್ಕೆ: ಉದಯ್ ಇಟಗಿ (ಕವಯತ್ರಿ ಅಮೃತಾ ಪ್ರೀತಂ ಕಾಯಿಲೆಯಿಂದ ಹಾಸಿಗೆ ಹಿಡಿದಾಗ ತನ್ನ ಪತಿ ಇಮ್ರೋಜ್ ಗೋಸ್ಕರ ಈ ಕವನ ಬರೆದಿದ್ದು. ಇಮ್ರೋಜ್ ಒಬ್ಬ ಚಿತ್ರಕಲಾವಿದನಾಗಿದ್ದ.) – ನಾನು ನಿನ್ನನ್ನು ಮತ್ತೆ […]
ಜಿ.ಎಸ್.ಅವಧಾನಿ ನೆನಪಿಗೆ..
–ಜಿ.ಎಸ್.ಅವಧಾನಿ ತೆರೆ ತೆರೆ ತೆರೆ ತೆರೆ ತೆರೆಯಾದಳು ಹುಡುಗಿ ಅಲೆ ಅಲೆ ಅಲೆ ಬಲೆಯಾದಳು ತುಡುಗಿ ತೊರೆ ತೊರೆ ತೊರೆ ಹೊನಲಾದಳು ಬೆಡಗಿ ಬೆಳೆ ಬೆಳೆ ಬೆಳೆ ತೊನೆಯದಳು ಬಳುಕಿ ನೆರೆ ನೆರೆ ನರೆ ನೊರೆಯಾದಳು ನಲುಗಿ ಹದಲಾದಳು, ಇರುಯಾದಳು […]
ರಾಜು ಹೆಗಡೆ ಕವಿತೆ-‘ ಶೆಲ್ಪಿನ ಪುಸ್ತಕಗಳು..’
– ರಾಜು ಹೆಗಡೆ. ಪುಸ್ತಕಗಳು ಶೆಲ್ಪಿನಲ್ಲಿ ಮೌನವಾಗಿ ಕೂತಿವೆ ಒಂದಕ್ಕೊಂದು ಸಾಚಿ ಹೊತ್ತ ಬರಹ ಭಾರವಾಯಿತೆ! ಮರ ಗಿಡಗಳಂತೆ ಪ್ರತಿಯೊಂದೂ ಬೇರೆಬೇರೆಯಾದರೂ ಬೇಸರಮಾಡಿಕೊಂಡಂತ್ತಿಲ್ಲ. ಆದರೆ ಜನ ತಿಂದರೆ ಕೊಬ್ಬುತ್ತದೆ! ಬೀಜದಂತೆ ಬಿತ್ತಿಕೊಂಡರೆ ಚಿಗುರುತ್ತವೆಹೂ ಕಾಯಿ ಹಣ್ಣು ಅಥವ ತುರುರುರು ಗುಡುತ್ತದೆ ಒಮ್ಮೊಮ್ಮೆ […]
ಕಡಲೆಂಬ ಒಗಟು
ಕೆ ಎಸ್ ವೇಣುವಿನೋದ್ ಕಡಲೆಂಬೋ ಕಡಲಿಗೆ ಎಲ್ಲೆಂದಲೆಲ್ಲಿಂದಲೋ ನೀರು ಬಂದು ಸೇರುತ್ತದೆ.. ನಾವು ಯಾವುದಕ್ಕಾಗಿ ಬಡಿದಾಡಿದ್ದೇವೋ ಆ ಮಣ್ಣನ್ನೇ ನೀರು ಕೊಚ್ಚಿ ತಂದು ಸಮುದ ಗರ್ಭಕ್ಕೆ ಸುರಿಸುತ್ತದೆ ಪ್ರವಾಹಕ್ಕೆ ಸಿಲುಕಿ ಸತ್ತ ದನ ನಾಯಿ ಕೋಳಿ ಗಳ ಅಂತಿಮ ಯಾತ್ರೆಯೂ ಬಂದು […]
ಕುಮಾರವ್ಯಾಸ ಭಾರತ ಬೇಕೇ..?
ಕುಮಾರವ್ಯಾಸ ಭಾರತ ಅಡಕ ಮುದ್ರಿಕೆ ನಿಮಗಾಗಿ ಸಿದ್ಧವಿದೆ! ಮಾನ್ಯರೆ, ನಮಸ್ಕಾರ. ಕುಮಾರವ್ಯಾಸ ಭಾರತ ಅಡಕ ಮುದ್ರಿಕೆ ನಿಮಗಾಗಿ ಸಿದ್ಧವಿದೆ. ಇದರ ಬೆಲೆ ರೂ 800. ಕೋರಿಯರ್ ವೆಚ್ಚ ರೂ 50 (ಒಟ್ಟು ರೂ 850) ಈ ಮೊಬಲಗನ್ನು ಕನ್ನಡ ಗಣಕ ಪರಿಷತ್ತಿಗೆ […]
ಮೇಲೆ ಕೆಳಗೆ
ರಾಜು ಹೆಗಡೆ ಮನೆ ಮಾಳಿಗೆಯ ಮೇಲೆ ಎರಡು ರೂಮಿದೆ ಒಂದರಲ್ಲಿ ನಾನು ಓದುವ,ಒದಿದ,ಓದದ ಪುಸ್ತಕಗಳಿವೆ ಪೆನ್ನು,ಕಾಗದಗಳಿವೆ ಮತ್ತ್ತೊಂದರಲ್ಲಿ ಕಂಪ್ಯೂಟರ ಅಂತರಜಾಲದಲ್ಲಿ ಎಲ್ಲಿಗೆ ಬೇಕಾದರೂ ಹೋಗಬಹುದು ಕೆಳಗೆ ಅಡಿಗೆ ಮನೆ,ಮಲಗುವ ಕೋಣೆ,ಬಚ್ಚಲು,ಟಿ,ವಿ. ಹಿತ್ತಲಲಿ ಬಸಲೆ, ಬಾಳೆ ಇತ್ಯಾದಿ ಹಸಿವಾದಾಗ ಕೆಳಗೆ ಹೋಗುತ್ತೇನೆ […]
ಮನಸು ಪ್ರೈವೇಟ್ ಬಸ್ಸು
-ಸುಖೇಶ್ ಅರೆ ನಿದ್ರೆ ಅರೆ ಎಚ್ಚರ ನೇರಳೆ ಹಣ್ಣು ತಿಂದ ಕನಸು ಧಡ್ ಎಂದು ಕಂಬಿಗೆ ತಲೆ ತಾಗಿದರೆ ಗೊತ್ತಿಲ್ಲದೂರಲ್ಲಿ ಪಲಾಯನವಾದಿ ಪ್ರೈವೇಟ್ ಬಸ್ಸು. ಬೀದಿ ಬದಿ ಮನೆಯಲ್ಲಿ ಮಗು ಅಳುತ್ತಲೇ ಇರಬೇಕಂತಿಲ್ಲ. ನದಿಗುಂಟ ನಡೆವಾಗ ಕೆಂಪುಕಲ್ಲುಗಳನ್ನೇ ಏಕೆ ಆಯುತ್ತೀಯ? ಹತ್ತಿ […]
‘ಕವಿಮನ’ದಲ್ಲಿ ಚಿಂತಾಮಣಿ ಕೂಡ್ಲಕೆರೆ
























