Eminent writer and social activist Mahasweta Devi died on Thursday. She had suffered a major heart attack on July 23. The 90-year-old was a recipient of the Sahitya Akademi Award, Padma Vibhushan, Jnanpith and Magsaysay Award, among several others.
Devi had been undergoing treatment at Kolkata’s Belle Vue Clinic for the past two months. Doctors said she had been admitted with illnesses related to old age. Her condition had deteriorated as a result of blood infection and kidney failure, PTI reported.
Her notable works include Hajar Chaurashir Maa, Breast Stories, and Tin Korir Sadh, among many others. Several of her works have been adapted in films over the years. The leading Bengali fiction writer was known for her contribution towards the welfare of tribal people.
India has lost a great writer. Bengal has lost a glorious mother. I have lost a personal guide. Mahashweta Di rest in peace






ಮಹಾ ಮಾನವತಾವಾದಿ ಲೇಖಕಿ, ಸಾಹಿತ್ಯಲೋಕದ ಹಿರಿಯಕ್ಕನ ಆತ್ಮಕ್ಕೆ ಶಾಂತಿಯಿರಲಿ. ಅವರ ಆ ಲೇಖನಿಯ ನಿಷ್ಠುರ ಸತ್ಯದ ಪ್ರತಿಪಾದನಾ ಕಸುವಿನ ಒಂದಂಶ ಆದರೂ ನಮ್ಮ ಲೇಖನಿಗೆ ಬರಲಿ.
ಮಾತೃಹೃದಯಿ ಮಹಾಶ್ವೇತಾದಾಯಿಯವರ ವಿದಾಯ , ಸಂವೇದನಾಶೀಲ ಬರಹಗಾರರು ಮತ್ತು ಹೋರಾಟಗಾರರ ಸ್ಪೂರ್ತಿಯಾಗಿಸಿಕೊಂಡಿದ್ದ ಎಲ್ಲ ಹೃದಯವಂತರಿಗೆ
ದು: ಖಕರ ಸಂಗತಿ.
ನನ್ನ ಮಟ್ಟಿಗೆ ಇವರು ಈ ದೇಶದ ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬರು. ಸಾಮಾಜಿಕ ಹೋರಾಟ ಮತ್ತು ಸಾಹಿತ್ಯಕ ಸೃಜನಶೀಲತೆಗಳ ಸಮತೋಲನದ ತಂತಿನಡಿಗೆಯನ್ನು ಇವರಷ್ಟು ಸಮರ್ಥವಾಗಿ ನಿರ್ವಹಿಸಿದವರು ಇನ್ನೊಬ್ಬರಿಲ್ಲ. ಮಹಾಶ್ವೇತಾದೇವಿಯವರ ಬರವಣಿಗೆಯ ಕೇಂದ್ರಬಿಂದುಗಳಾದ ಗಿರಿಜನರು ಮತ್ತು ಹೆಣ್ಣಿನ ಯಾತನೆಗಳು ಯಾವುದೇ ವಾದದ ಹಂಗಿಲ್ಲದೆ ಮೂಡಿಬಂದ ಪರಿ ಅಸಮಾನವಾದುದು. ಇವರ ಕತೆ, ಕಾದಂಬರಿ ಮತ್ತು ನಾಟಕಗಳು ನನ್ನ ಅಂತರಂಗದ ಭಾಗಗಳಾಗಿವೆ. ‘ಸ್ತನದಾಯಿನಿ’ ಮತ್ತು ‘ದೋಪ್ದಿ’ಯರು ನಮ್ಮ ಕಾಲದ ಶೋಷಣೆಯ ಅಸಮಾನ ರೂಪಕಗಳು.
ಈ ತಾಯಿಗೆ ನೂರು ನಮಸ್ಕಾರ.