BREAKING NEWS: ಡಿ ಕೆ ಚೌಟ ಇನ್ನಿಲ್ಲ..

‘ಅವಧಿ’ಯ ಆಪ್ತರೂ, ಸಾಹಿತಿ, ಸಂಘಟಕ, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಮಾಜಿ ಅಧ್ಯಕ್ಷರಾದ  ಡಾ ಡಿ ಕೆ ಚೌಟ ನಿಧನ ಹೊಂದಿದ್ದಾರೆ.
ಅವರಿಗೆ ೮೨ ವರ್ಷ ವಯಸ್ಸಾಗಿತ್ತು.
ಕಾಸರಗೋಡಿನ ಮೀಯಪದವಿನವರಾದ ಚೌಟರು ಅನೇಕ ನಾಟಕಗಳನ್ನು ಬರೆದಿದ್ದಾರೆ. ತುಳು ಮತ್ತು ಕನ್ನಡ ಎರಡರಲ್ಲೂ ಸಮಾನ ಪ್ರೌಢಿಮೆ ಹೊಂದಿದ್ದ ಚೌಟರು ಬರೆದ ನಾಟಕಗಳು ಎರಡೂ ಭಾಷೆಯಲ್ಲಿ ಪ್ರಕಟವಾಗಿತ್ತು.
ಇವರ ಕಾದಂಬರಿ ಆತ್ಮ ಕಥನಾತ್ಮಕ ಪ್ರಬಂಧಗಳೂ ಸಹಾ ಜನಮನ್ನಣೆಗೆ ಪಾತ್ರವಾಗಿದ್ದವು. ಮಿತ್ತಬೈಲ್ ಯಮುನಕ್ಕೆ ಹಾಗೂ ಕರಿಯ ವಜ್ಜೆರೆನ ಕಥೆಕುಲು ಇವರ ಕಾದಂಬರಿಗಳು. 
ಪಿಲಿಪತ್ತಿ ಗಡಸ್, ಮೂಜಿ ಮುಟ್ಟು ಮೂಜಿ ಲೋಕ, ಪಾಟ್ ಪಜ್ಜೆಲು ಇವರ ಹೆಸರಾಂತ ನಾಟಕಗಳು. 
ಮಂಗಳೂರು ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ತುಳು ಸಾಹಿತ್ಯ ಅಕಾಡೆಮಿ ಪಶಸ್ತಿ ಸಹಾ ಇವರಿಗೆ ಸಂದಿತ್ತು.
 
ಕೃಷಿಕರಾದ ಡಿ ಕೆ ಚೌಟರು ತಮ್ಮ ಸಾಹಿತ್ಯ ಹಾಗೂ ರಂಗಭೂಮಿ ಸೆಳೆತದಿಂದಾಗಿ ಹಲವು ರಂಗ, ಸಾಹಿತ್ಯ ಕಾರ್ಯಕ್ರಮಗಳನ್ನು ಸಂಘಟಿಸಿದ್ದರು. ಇವರ ಬೆಂಬಲ ರಂಘ ಸಂಘಟನೆಗಳಿಗೆ ಚೈತನ್ಯದಾಯಕವಾಗಿತ್ತು. 

‍ಲೇಖಕರು avadhi

June 19, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: