ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Breaking News: ಚಿಕ್ಕ ಸುರೇಶ ಇನ್ನಿಲ್ಲ

ಚಿಕ್ಕ ಸುರೇಶ ಎಂದೇ ಎಲ್ಲರಿಂದ ಕರೆಯಲ್ಪಡುತ್ತಿದ್ದ ಸುರೇಶ್ ಇನ್ನಿಲ್ಲ. ಕೆಲ ದಿನಗಳ ಹಿಂದೆ ಕುಟುಂಬ ಸಮೇತ ಗೋವಾ ಪ್ರವಾಸಕ್ಕೆ ತೆರಳಿದ್ದ ಸುರೇಶ್ ಅಲ್ಲಿಗೆ ತಲುಪಿದ ದಿನವೇ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದರು. ಪ್ರಜ್ಞೆ ಕಳೆದುಕೊಂಡಿದ್ದ ಸುರೇಶ ಎರಡು ದಿನಗಳಿಂದ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಬೆಂಗಳೂರಿನ ಆಸ್ಪತ್ರೆಗೆ ಕರೆತರುವ ಮಾರ್ಗದಲ್ಲಿ ನಿಧನ ಹೊಂದಿದರು.

ಎ ಎಸ್ ಮೂರ್ತಿ ಅವರ ಗರಡಿಯಲ್ಲಿ ಪಳಗಿದ ಸುರೇಶ್ ಕಲಾಮಂದಿರದ ಅವಿಭಾಜ್ಯ ಅಂಗವಾಗಿದ್ದರು.

ರಂಗಭೂಮಿ, ಸಾಕ್ಷ್ಯಚಿತ್ರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿವಿಧ ಅಕಾಡೆಮಿಗಳು, ಕರ್ನಾಟಕ ಲೇಖಕಿಯರ ಸಂಘಕ್ಕೆ ಸಾಕಷ್ಟು ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದರು.

‍ಲೇಖಕರು avadhi

11 February, 2018

2 Comments

  1. Lalitha siddabasavayya

    ದೇವರೇ !ಎಂಥ ಲವಲವಿಕೆಯ ವ್ಯಕ್ತಿ. ಸದಾ ಕ್ರಿಯಾಶೀಲ, ಸಜ್ಜನಿಕೆ , ನಗುಮೊಗದ ವ್ಯಕ್ತಿತ್ವ ಸುರೇಶ ಅವರದು. ಮನಸ್ಸು ಭಾರವಾಯ್ತು. ಅವರಿಗೆ ಸದ್ಗತಿ ಪ್ರಾಪ್ತವಾಗಲಿ , ಕುಟುಂಬದವರಿಗೆ ನೋವು ಭರಿಸುವ ಶಕ್ತಿ ನೀಡಲಿ ಭಗವಂತ.

  2. S. Baali

    ಸುರೇಶ ಇನ್ನಿಲ್ಲ ಎಂಬ ಸುದ್ದಿ ಕೇಳಿ ಅತ್ಯಂತ ದುಃಖವಾಯಿತು .. ಸರಳ ವ್ಯಕ್ತಿ ; ಸ್ನೇಹಜೀವಿ ; ಭಗವಂತ ಅವನ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ; ಭರಿಸಲಾಗದ ನಷ್ಟವನ್ನು, ಕಷ್ಟವನ್ನು ಎದುರಿಸುವ ಶಕ್ತಿಯನ್ನು ಕುಟುಂಬದವರಿಗೆ ನೀಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ .. ಓಂ ಶಾಂತಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading