ಖ್ಯಾತ ನಾಟಕಕಾರರೂ ನಿರ್ದೇಶಕರೂ ಆದ ಎಸ್ ಮಾಲತಿ ಇನ್ನಿಲ್ಲ.
ಇಂದು ಬೆಳಗ್ಗೆ ೨ ೩೦ಕ್ಕೆಅವರು ಅಲ್ಪ ಕಾಲದ ಅನಾರೋಗ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟರು.
ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರಾದ ಎಸ್ ಮಾಲತಿ ಸಮುದಾಯ ರಂಗ ಚಳವಳಿಗೆ ಸಾಕಷ್ಟು ಶಕ್ತಿ ತುಂಬಿದ್ದರು.
‘ಜನಮ್’ ತಂಡದ ಸಫ್ದರ್ ಹಷ್ಮಿ ರಚಿಸಿದ ನಾಟಕಗಳನ್ನು ಕನ್ನಡ ಬೀದಿ ರಂಗಭೂಮಿಗೆ ಒಗ್ಗಿಸಿದ ಹಿರಿಮೆ ಅವರದ್ದು. ಅನೇಕ ಸ್ವತಂತ್ರ ನಾಟಕಗಳನ್ನು ರಚಿಸಿ ಅದನ್ನು ವೇದಿಕೆಗೆ ತಂದಿದ್ದರು.

ಖ್ಯಾತ ರಂಗಕರ್ಮಿ ಸಿ ಕೆ ಗುಂಡಣ್ಣ ಅವರು ನೀಡಿರುವ ಮಾಹಿತಿ ಇಲ್ಲಿದೆ-
ಇಂದು, 01.04.2019 ಬೆಳಗಿನ ಜಾವ ಸುಮಾರು 02.30 ರ ವೇಳೆಗೆ ಮಾಲತಿ ಅವರು ನಿಧನ ಹೊಂದಿರುತ್ತಾರೆ.
ಮಾಲತಿ ಅವರ ಅಂತಿಮ ಸಂಸ್ಕಾರ ಸಾಗರದಲ್ಲಿ ನಡೆಯಲಿದ್ದು, ಇಂದು ಸಂಜೆಯ ಸುಮಾರಿಗೆ ನಡೆಯಲಿದೆ.
ಬಹಳ ನೋವಿನ ಜೀವನ ನಡೆಸಿದ್ದ ಮಾಲತಿಗೆ, ಸಾವೂ ಕೂಡ ನೋವಿನ ಪಯಣವೇ ಆಗಿತ್ತು.
ನಮ್ಮೆಲ್ಲರ ಪ್ರೀತಿಯ ಹುಡುಗಿಯಾಗಿದ್ದಳು ಮಾಲತಿ.
ಮಾಲತಿಯ ಸಾವಿನ ಸುದ್ದಿ ನಾನು ಹಾಕುತ್ತಿರುವುದು ವಿಪರ್ಯಾಸವೇ ಸರಿ.
ಆರ್ಥಿಕವಾಗಿ ಸಹಾಯ ನೀಡಿದ ಎಲ್ಲರಿಗೂ ಅತ್ಯಂತ ಧನ್ಯವಾದಗಳನ್ನು ಪುರುಷೋತ್ತಮ ತಲವಾಟ ಅವರು ತಿಳಿಸುತ್ತಿದ್ದಾರೆ….
ಮಾಲತಿ, ನಿಮಗೆ ನಮನ
-ಗುಂಡಣ್ಣ ಚಿಕ್ಕಮಗಳೂರು






0 Comments