ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Breaking News: ಉಷಾ ಕಟ್ಟೆಮನೆ, ನಮನ ಸೇರಿದಂತೆ ನಾಲ್ವರಿಗೆ ನಾಟಕ ಅಕಾಡೆಮಿ ಬಹುಮಾನ

ಕರ್ನಾಟಕ ನಾಟಕ ಅಕಾಡೆಮಿಯ ಈ ಬಾರಿಯ ನಾಟಕ ಸ್ಪರ್ಧೆಯ ಫಲಿತಾಂಶವನ್ನು ಪ್ರಕಟಿಸಿದ್ದು ಸಾರ್ವಜನಿಕ ವಿಭಾಗದಲ್ಲಿ ಮೂವರು ಸಮಾನವಾಗಿ ಹಾಗೂ ವಿದ್ಯಾರ್ಥಿ ವಿಭಾಗದಲ್ಲಿ ಒಬ್ಬರಿಗೆ ಬಹುಮಾನವನ್ನು ಘೋಷಿಸಲಾಗಿದೆ..

ಉಷಾ ಕಟ್ಟೆಮನೆ ಅವರ ‘ಕೋಡ್ದಬ್ಬ ತನ್ನಿಮಾನಿಗ’,  ಎನ್. ಸಿ. ಮಹೇಶ್ ಅವರ ‘ಸಾಕುತಂದೆ ರೂಮಿ’ ಹಾಗೂ  ಡಾ. ನಟರಾಜ್ ತಲಘಟ್ಟಪುರ ಅವರ ‘ಬಯಲರೂಪ’ ಪ್ರಶಸ್ತಿ ಪಡೆದ ಹಸ್ತಪ್ರತಿಗಳು.

ತಲಾ 20 ಸಾವಿರ ರೂ ಬಹುಮಾನವನ್ನು ಇದುಒಳಗೊಂಡಿದೆ.

ವಿದ್ಯಾರ್ಥಿ ವಿಭಾಗದಲ್ಲಿ ಕುಪ್ಪಳ್ಳಿಯ ನಮನ ಬಿ.ಎನ್. ಅವರ ‘ನಡುವೆ ಸುಳಿವಾತ್ಮ’ ಕೃತಿ ಬಹುಮಾನಕ್ಕೆ ಪಾತ್ರವಾಗಿದೆ. 

27-3-2019 ವಿಶ್ವ ರಂಗಭೂಮಿ ದಿನದಂದು ರಂದು ಸಂಜೆ 6 ಕ್ಕೆ ಬೆಂಗಳೂರಿನ ನಯನ ಸಭಾಂಗಣದಲ್ಲಿ,  ಬಹುಮಾನ ಪ್ರದಾನ ಮಾಡಲಾಗುವುದು.

‍ಲೇಖಕರು avadhi

24 March, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading