ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

BREAKING NEWS: ಗೋಪಾಲ ವಾಜಪೇಯಿ ಇನ್ನಿಲ್ಲ

ಗೋಪಾಲ ವಾಜಪೇಯಿ ಕಾಕಾ ಇನ್ನಿಲ್ಲ.

‘ಅವಧಿ’ಯ ಆತ್ಮೀಯ ಗೋಪಾಲ ವಾಜಪೇಯಿ ಅವರು ತೀವ್ರ ಅನಾರೋಗ್ಯದಿಂದ ಈಗ ಅರ್ಧ ಗಂಟೆಯ ಹಿಂದೆ ಬೆಂಗಳೂರಿನಲ್ಲಿ ಕೊನೆಯುಸಿರೆಳೆದರು

ಉಸಿರಾಟದ ತೊಂದರೆಯಿಂದ ಹಲವು ವರ್ಷಗಳ ಕಾಲ ಬಳಲಿದ ಅವರು ಬೆಂಗಳೂರಿನ ಕುಸುಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು

ಬಸವನಗುಡಿಯ ಬಿ ಎಂ ಎಸ್ ಕಾಲೇಜಿನ ಸನಿಹದಲ್ಲಿರುವ ಆಸ್ಪತ್ರೆಯಲ್ಲಿ ಮೃತರ ದೇಹವನ್ನು ಇರಿಸಲಾಗಿದೆ

‍ಲೇಖಕರು Admin

20 September, 2016

12 Comments

  1. Anonymous

    ಯಾವಾಗ?

  2. Anantha Ramesh

    ಆಘಾತಕಾರಿ ಮತ್ತು ಬಹಳ ದು:ಖಕದ ಸುದ್ದಿ. ಸಾರಸ್ವತ ಲೋಕದ ಎಲೆಮರೆಯ ನಕ್ಷತ್ರವೊಂದು
    ಕಣ್ಮರೆಯಾಗಿದೆ.

  3. ಲಿಂಗರಾಜು ಬಿ.ಎಸ್.

    ಗೋವಾರವರ ನಿಧನಕ್ಕೆ ಸಂತಾಪಗಳು. ಶಂಕರ್ನಾಗ್ ನಿದರ್ೇಶನದ ನಾಗಮಂಡಲ ನಾಟಕಕ್ಕಾಗಿ ಬರೆದ ‘ಹಿಂಗಿದ್ದಳೊಬ್ಬಳು ಹುಡುಗಿ’ ಎಂಬ ಹಾಡನ್ನು ಮರೆಯಲಾಗದು. ಅಂದಿನ ಕಬೀರನನ್ನು ಇಂದಿನ ವರ್ತಮಾನದೊಂದಿಗೆ ಬೆಸೆದು ಶಿವರಾಜ್ಕುಮಾರ್ ಅಭಿನಯದ ಸಂತೆಯಲ್ಲಿ ನಿಂತ ಕಬೀರ ಸಿನಿಮಾಕ್ಕೆ ಬರೆದ ಸಂಭಾಷಣೆ ಗೋವಾರವರ ಸೃಜನಶೀಲತೆಗೆ ಸಾಕ್ಷಿ.

  4. lakshmikanth itnal

    ಸುದ್ದಿ ಸುಳ್ಳ ಆಗಲ್ಯೋ ಎಪ್ಪಾ!, …..ಸುದ್ದಿ ಸುಳ್ಳ ಆಗಲಿ. ..ಅಣ್ಣ ಗೋಪಾಲ ವಾಜಪೇಯಿ ಅವರ ಧಾರವಾಡದವರ ಕುರಿತ ಮೊದಲನೆ ಕಂತನ್ನು ಓದಿ ಈಗಷ್ಟೆ ಕಮೆಂಟ್ ಹಾಕಲು ಬಯಸಿದ್ದವಗೆ ಬರಸಿಡಿಲಿನಂತೆ ಈ ಸುದ್ದಿ ಓದಬೇಕಾಗಿ ಬಂದದ್ದು ನಾಡಿನ ದುರದೃಷ್ಟ. ಅವರೊಬ್ಬ ಸಂತನಂತಹ ವ್ಯಕ್ತಿತ್ವದ, ಎಲ್ಲರೊಂದಿಗೂ ಬೆರೆಯುವ ಹಸನ್ಮುಖಿ ವ್ಯಕ್ತಿ. ಹಿರಿಯ ಲೇಖಕ, ಕವಿ. ನಾಟಕಕಾರ, ಪತ್ರಕರ್ತ, ….ಒಬ್ಬ ಅತ್ಯುತ್ತಮ ಶ್ರೇಷ್ಠವೆನ್ನಬಹುದಾದ ಸಹೃದಯ ನಾಗರೀಕ. ಅವರು ಕನ್ನಡ ಸಾರಸ್ವತ ಲೋಕದಿಂದ ಕಂಬದ ಮ್ಯಾಲಿನ ಗೊಂಬೆಯಂತೆ ಅಲ್ಲಿಂದಲೇ ಕಣ್ಮರೆಯಾಗಿದ್ದು, ದು:ಖ ಸಹಿಸದಾಗಿದೆ. ಹಳೆಯ ಧಾರವಾಡದ ಜಿಲ್ಲೆಯ ಲಕ್ಷ್ಮೇಶ್ವರದವರಾದ ಶ್ರೀಯುತರ ಆತ್ಮಕ್ಕೆ ಈ ಮೂಲಕ ಆದರಪೂರ್ವಕ ಶೃದ್ಧಾಂಜಲಿಗಳು. ಅವರ ಆತ್ಮಕ್ಕೆ ಚಿರಶಾಂತಿ ನೆಲೆಸಲಿ. ಗೋಪಾಲ ಜಿ ರವರ ಕುಟುಂಬ ವರ್ಗಕ್ಕೆ ಈ ದು:ಖವನ್ನು ಸಹಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಪ್ರಾರ್ಥಿಸುವೆ.

  5. Sarojini Padasalagi

    ಅನಿರೀಕ್ಷೀತ ,ದುಃಖದ ಸುದ್ದಿ . ಮೊನ್ನೆ ಓದಿದ ಅವರ ಅಂಕಣವನ್ನು ಇನ್ನೂ ಮೆಲುಕು ಹಾಕುತ್ತಿರುವಾಗಲೇ ಇಂಥ ಆಘಾತಕಾರಿ ದುಃಖದ ಸುದ್ದಿ ,ಕಾಲನ ಆಧೀನ ಈ ಜೀವನ ಎಷ್ಟು ಎನಿಸುವಂತೆ ಮಾಡುತ್ತೀದೆ .ನನ್ನ ಆಶ್ರುತರ್ಪಣ ಆ ಜೀವಕ್ಕೆ ಅವರ ಆತ್ಮಕ್ಕೆ ಶಾಂತಿ ಸಿಗಲಿ.

  6. ಹ ವೆಂ ಕಾಖಂಡಿಕಿ

    ಆಘಾತದ ಸುದ್ದಿ.
    ಅಂತಃಕರಣದ ಜೀವ.
    ಸೃಜನಶೀಲ ಬರಹಗಾರರೊಬ್ಬರನ್ನು ಕಳೆದುಕೊಂಡೆವು.

  7. S.p.vijaya Lakshmi

    ನಂಬಲೇ ಕಷ್ಟವಾಯ್ತು..ನಿಜಕ್ಕೂ ಶಾಕಿಂಗ್ ಸುದ್ದಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ…

  8. ರುದ್ರಾರಾಧ್ಯ.ಎಸ್

    ಬಹಳ ಆಘಾತದ ಸುದ್ದಿ.ಇಂತಹ ಪ್ರಾತಃಸ್ಮರಣಿಯರನ್ನು ನೆನೆಯುವ ಸಮಯದಲ್ಲಿ ಇಂತಹ ಸುದ್ದಿ.

  9. kvtirumalesh

    ಸುದ್ದಿ ತಿಳಿದು ತುಂಬಾ ದುಃಖವಾಯಿತು. ನಾನವರನ್ನು ಕಂಡವನಲ್ಲ, ಆದರೂ ಅವರೊಬ್ಬ ಉತ್ತಮ ಬರಹಗಾರ ಎಂದು ಒಂದು ತರದ ಆತ್ಮೀಯತೆ ಬೆಳೆದಿತ್ತು. ಈ ಮೂಲಕ ಅವರಿಗೆ ನನ್ನ ಶ್ರದ್ಧಾಂಜಲಿಗಳು.
    ಕೆ.ವಿ.ತಿರುಮಲೇಶ್

  10. Anonymous

    ಗೋವಾ ಗೆಳೆತನ ನಾಲ್ಕು ದಶಕಗಳ ಹಿಂದಿನದ್ದು, ನಾಟಕದಷ್ಟೆ ಹಿರಿ ಕಿರಿಯ ಗೆಳೆಯರನ್ನು ತೀವ್ರವಾಗಿ ಹಚ್ಚಿಕೊಂಡು ಹೃದಯದಿಂದ ಸ್ಪಂದಿಸುತ್ತಿದ್ದ ಅಪರೂಪದ ಅನುಗಾಲದ ಆತ್ಮೀಯ, ಹುಬ್ಬಳ್ಳಿ ಜವಾರಿತನವನ್ನು ಜೋಪಾನ ಜತನದಿಂದ ಕಾಯ್ದುಕೊಂಡಿದ್ದ , ಫೆಸ್ ಬುಕ್ ಪ್ರಪಂಚವನ್ನು ತನ್ನ ಅಗಾಧ ವಿಸ್ತೀರ್ಣದ ಕರುಳುಬಳ್ಳಿಯಿಂದ ಆವರಿಸಿದ್ದ, ಚಿಕ್ಕ ಬರಹಗಳನ್ನು ಮಹಾಕಾವ್ಯವೆಂಬಂತೆ ಬರೆದವರ ಬೆನ್ನು ಚಪ್ಪರಿಸುತ್ತಿದ್ದ, ಜುಬ್ಬ ದೊಗಳೆ ಪೈಜಾಮ ಧರಿಸಿ ತಾನು ಪ್ರಾಚೀನನೆಂಬಂತೆ ಭ್ರಮೆ ಹುಟ್ಟಿಸುತ್ತಿದ್ದ. ಈ ದಶಕಗಳ ”ದೊಡ್ಡಪ್ಪ’ ನಿರ್ಗಮಿಸಿ ಗೋಲ್ಡ್ ಮೆಡಲ್ ಪಡೆಯಬಹುದೆಂದು ನಾವ್ಯಾರು ನಿರೀಕ್ಷಿರಲಿಲ್ಲ, ಉಸಿರಾಟದ ತೊಂದರೆ ಇದ್ದರೂ ಜಟ್ಟಿಗ ನಮ್ಮ ಗೋಪಾಲ ವಾಜಪೇಯಿ, ಈತನ ಆತ್ಮವಾದರೂ ನಮ್ಮ ಜೊತೆಯಲ್ಲಿರಲಿ,
    ಕುಂವೀ

  11. Anonymous

    che

  12. ಭಾರತಿ ಬಿ ವಿ

    🙁

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading